Home District “ಅಲ್ಲೊಬ್ಬ ಮೇಲಿದ್ದಾನೆ, ಅವನೇನು ಮಾಡ್ಬೇಕು ಮಾಡುತ್ತಾನೆ”..! ಸರ್ಕಾರದ ಉಳಿವಿನ ಪ್ರಶ್ನೆ ಬಗ್ಗೆ HDK ಮಾರ್ಮಿಕವಾಗಿ ತಿರುಗೇಟು..!

“ಅಲ್ಲೊಬ್ಬ ಮೇಲಿದ್ದಾನೆ, ಅವನೇನು ಮಾಡ್ಬೇಕು ಮಾಡುತ್ತಾನೆ”..! ಸರ್ಕಾರದ ಉಳಿವಿನ ಪ್ರಶ್ನೆ ಬಗ್ಗೆ HDK ಮಾರ್ಮಿಕವಾಗಿ ತಿರುಗೇಟು..!

429
0
SHARE

ಸಚಿವ ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್‌ನಲ್ಲಿ ಅಸಮಾಧಾನ ಉಂಟಾಗಿದೆ. ಪಕ್ಷದಲ್ಲಿ ಉಂಟಾಗಿರುವ ಅಸಮಾಧಾನ ಮೈತ್ರಿ ಸರ್ಕಾರಕ್ಕೆ ಕಂಟಕವಾಗಲಿದೆಯೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ನಲ್ಲಿರೋ ಬೇಗುದಿಗೆ ಪ್ರಮುಖ ಕಾರಣ ಮಾಜಿ ಸಿಎಂ ಸಿದ್ದರಾಮಯ್ಯ ಎಂಬ ಆರೋಪವೂ ಬಲವಾಗಿ ಕೇಳಿಬರುತ್ತಿದೆ…

ಮಗುವನ್ನ ಚಿವುಟಿ ಆನಂತರ ಸಮಾಧಾನ ಪಡಿಸುವ ಕೆಲಸವನ್ನ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂಬ ಗುಸುಗುಸು ಜೆಡಿಎಸ್ ನಲ್ಲಿದೆ.. ಇದು ಸತ್ಯ ಎನ್ನುವಂತೆ ಸಿದ್ದು ಆಪ್ತರೇ ದೋಸ್ತಿ ಸರ್ಕಾರಕ್ಕೆ ಕಂಟಕವಾಗುತ್ತಿರೋದು ಉರಿಯುವ ಬೆಂಕಿಗೆ ತುಪ್ಪ ಹಾಕಿದಂತಾಗಿದೆ.ಬಾಗಲಕೋಟೆಯಲ್ಲಿ ಸರ್ಕಾರದ ಅಳಿವು, ಉಳಿವಿನ ಪ್ರಶ್ನೆ ಬಗ್ಗೆ ಸಿಎಂ ಕುಮಾರಸ್ವಾಮಿ ಮಾರ್ಮಿಕವಾಗಿ ತಿರುಗೇಟು ನೀಡಿದ್ದಾರೆ.

ತಮ್ಮ ವಿರುದ್ಧ ಮಾಸ್ಟರ್ ಫ್ಲ್ಯಾನ್ ನಡೆಸುತ್ತಿದ್ದಾರೆಯೇ ಎಂಬ ಸುದ್ದಿಗಾರರು ಪ್ರಶ್ನಿಸಿದಾಗ, ತಂತ್ರಗಾರಿಕೆ ಮಾನವ ಸಹಜ ಪ್ರಕ್ರಿಯೆ. ನಾನ್ಯಾಕೆ ಈ ಬಗ್ಗೆ ಮಾತನಾಡ್ಲಿ. ಅಲ್ಲೊಬ್ಬ ಮೇಲಿದ್ದಾನೆ, ಅವನೇನು ಮಾಡ್ಬೇಕು ಮಾಡುತ್ತಾನೆ ಎಂದು ಮಾರ್ಮಿಕವಾಗಿ ಹೆಚ್ಡಿಕೆ ಉತ್ತರಿಸಿದರು.ಇನ್ನು ರಾಮಲಿಂಗಾರೆಡ್ಡಿ, ರಮೇಶ ಜಾರಕಿಹೊಳಿ ಅಸಮಾಧಾನದ ಬಗ್ಗೆ ಮಾತನಾಡಿದ ಸಿಎಂ ಅವರಿಬ್ಬರು ನನ್ನ ಸ್ನೇಹಿತರು ಅವರ ಬಳಿ ಮಾತನಾಡುವೆ ಎಂದ್ರು.

ಕಾಂಗ್ರೆಸ್ ಪಕ್ಷದ ತೀರ್ಮಾನಗಳ ಬಗ್ಗೆ ನನಗೆ ಮಿತಿಗಳಿವೆ. ಸಮಸ್ಯೆ, ಅಸಮಾಧಾನವನ್ನು ಕಾಂಗ್ರೆಸ್ ಹೈಕಮಾಂಡ್, ಪಕ್ಷದ ಮುಖಂಡರು ಬಗೆಹರಿಸುತ್ತಾರೆ ಎಂದು ಹೇಳಿದರು.ಮತ್ತೊಂದೆಡೆ ಕಾಂಗ್ರೆಸ್ ನಲ್ಲಿ ಯಾವುದೇ ರೀತಿಯ ಭಿನ್ನಮತ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲ ಇಲ್ಲ, ನಾಯಕರ ಮಧ್ಯೆ ಭಿನ್ನಾಭಿಪ್ರಾಯ ಇಲ್ಲ ಎಂದಿದ್ದಾರೆ..

ತುಮಕೂರಿನಲ್ಲಿ ಡಿಸಿಎಂ ಪರಮೇಶ್ವರ್ ಮಾತನಾಡಿ, ರಮೇಶ ಜಾರಕಿಹೊಳಿ ರಾಜೀನಾಮೆ ಮಾಧ್ಯಮಗಳಲ್ಲಿ ಬರುತ್ತಿರೋ ವಿಚಾರ ಸತ್ಯ ಕ್ಕೆ ದೂರವಾಗಿದೆ ಎಂದು ಹೇಳಿದ್ದಾರೆ.. ಸಂಪುಟ ವಿಸ್ತರಣೆ ಬಳಿಕ ಇಂಥ ಅಸಮಾಧಾನಗಳು ಸಹಜ. ಅವರನ್ನ ಮನವೊಲಿಸುವ ಯತ್ನ ಮಾಡುತ್ತೇವೆ ಎಂದು ಪರಮೇಶ್ವರ್ ಹೇಳಿದ್ದಾರೆ.

ಒಟ್ಟಾರೆ ಕಾಂಗ್ರೆಸ್ ಆಂತರಿಕ ಬೇಗುದಿ ಮೈತ್ರಿ ಸರ್ಕಾರದ ಮೇಲೆ ಪ್ರಭಾವ ಬೀರುತ್ತಿದೆ.. ಕಾಂಗ್ರೆಸ್ ಪಾಳೆಯದಲ್ಲಿ ಕಾಣಿಸಿಕೊಂಡಿರೋ ಬಂಡಾಯ ಬೆಂಕಿ ಸರ್ಕಾರವನ್ನ ಬಲಿ ಪಡೆಯುತ್ತಾ ಇಲ್ಲ ನಂದಿಹೋಗುತ್ತಾ ಅನ್ನೋದಕ್ಕೆ ಕಾಲವೇ ಉತ್ತರ ನೀಡಲಿದೆ…

LEAVE A REPLY

Please enter your comment!
Please enter your name here