Home Cinema ಅವತ್ತು “ಮುದ್ದಾಟ”.. ಇವತ್ತು “ಬಡಿದಾಟ”..!“ಅಯೋಗ್ಯ” ಪ್ರೀತಿಯಲ್ಲಿ ಯಾರು ನಿಜವಾದ “ಖಳನಾಯಕ”..! ಛೇ..! ಪ್ರೀತಿ ನೆಪದಲ್ಲಿ ಬ್ಲ್ಯಾಕ್...

ಅವತ್ತು “ಮುದ್ದಾಟ”.. ಇವತ್ತು “ಬಡಿದಾಟ”..!“ಅಯೋಗ್ಯ” ಪ್ರೀತಿಯಲ್ಲಿ ಯಾರು ನಿಜವಾದ “ಖಳನಾಯಕ”..! ಛೇ..! ಪ್ರೀತಿ ನೆಪದಲ್ಲಿ ಬ್ಲ್ಯಾಕ್ ಮೇಲ್ ಮಾಡ್ತಿದ್ದಳ್ಳಂತೆ ಅವಳು..!

671
0
SHARE

ಪ್ರೀತಿ ಮಾಯೆ ಹುಷಾರು.. ಕಣ್ಣೀರ್ ಮಾರೋ ಬಜಾರು ಅಂತ ಪ್ರೀತಿಯನ್ನು ಕಳೆದುಕೊಂಡವರು, ಪ್ರೀತಿಸಿಗದೆ ಹಪಹಪಿಸೋರು ಹೇಳ್ತಾರೆ. ಆದ್ರೆ ಪ್ರೀತಿನೇ ಮಾರಾಟಕ್ಕಿಟ್ಟು, ಬಜಾರ್‌ನಲ್ಲಿ ಹಣಮಾಡುವ ಖಯಾಲಿಗಿಳಿದಿರುವ ಹಲವರಲ್ಲಿ ಸದ್ಯ ಅಯೋಗ್ಯ ಸಹ ನಟಿಯ ಹೆಸರು ಇತ್ತೀಚೆಗೆ ಸ್ಯಾಂಡಲ್‌ವುಡ್ ಸಿನಿ ದುನಿಯಾದಲ್ಲಿ ಸಿಕ್ಕಾಪಟ್ಟೆ ಕೇಳಿಬರ್ತಿದೆ.

ಅಯ್ಯೋಗ್ಯ ಸಿನಿಮಾ ಮೂಲಕ ಸಹ ನಟಿಯಾಗಿ ಗುರುತಿಸಿಕೊಂಡಿರುವ ದೃಶ್ಯ ಪ್ರಕರಣ ಗಾಂಧಿನಗರದಲ್ಲಿ ಸದ್ಯಕ್ಕೆ ಅಸ್ಪಷ್ಟವಾಗಿದ್ದು. ಸದ್ಯಕ್ಕೆ ತಣಗಾಗುವ ಲಕ್ಷಣಗಳು ಕಾಣ್ತಸಿಲ್ಲ..ಯಸ್… ಅಯೋಗ್ಯ ಸಿನಿಮಾದಲ್ಲಿ ಸಹ ನಟಿಯಾಗಿ ಬೆಳಕಿಗೆ ಬಂದಿದ್ದ ದೃಶ್ಯ ಸದ್ಯ ಪ್ರೀತಿಯ ಹೆಸರಿನಲ್ಲಿ ಪಂಗನಾಮ ಹಾಕಿದ್ದಾಳೆ ಎಂಬ ಆರೋಪದ ಸುಳಿಯಲ್ಲಿ ಸಿಲುಕಿ ಬಿದ್ದಿದ್ದಾಳೆ. ದೃಶ್ಯನ ಬಾಯ್ ಫ್ರೆಂಡ್ ಬೆಂಗಳೂರಿನ ನಿವಾಸಿಯಾಗಿರುವ ಪ್ರಶಾಂತ್ ಸದ್ಯ ಇಂಥದೊಂದು ದೃಶ್ಯ ಮೇಲೆ ಆರೋಪಗಳ ಸುರಿಮಳೆಯನ್ನೇ ಮಾಡಿದ್ದಾನೆ.

ಮೊದ ಮೊದಲಿಗೆ ಪ್ರಶಾಂತ್ & ದೃಶ್ಯ ಸಂಬಂಧ ಹಾಲು, ಜೇನು ಬೆರೆತಂತೆ ಮಧುರವಾಗಿತ್ತು. ಪ್ರೀತಿ ಗಟ್ಟಿಯಾದ ಮೇಲೆ ಎರಡು ವರ್ಷಗಳ ಕಾಲ ಈ ಜೋಡಿ ಲಿವಿಂಗ್ ಟು ಗೆದರ್ ರಿಲೇಷನ್ ಶೀಪ್‌ನಲ್ಲಿತ್ತು. ಬಣ್ಣದ ದುನಿಯಾದಲ್ಲಿ ಬದುಕು ಕಟ್ಟಿಕೊಳ್ಳಬೇಕೆಂಬ ಹಪಾಹಪಿ ತನದಿಂದಲ್ಲೋ ಅಥವ ಪ್ರಶಾಂತ್‌ಗೆ ಇನ್ನಿತರ ಹೆಣ್ಣಿನ ಮೇಲಿನ ಮೋಹದಿಂದಲ್ಲೋ ಇಬ್ಬರು ಸದ್ಯ ಒಬ್ಬರ ಮೇಲೊಬ್ಬರು ಕಂಪ್ಲೇಟ್ ದಾಖಲಿಸಿಕೊಂಡಿದ್ದಾರೆ. ಈ ಮೂಲಕ ಅತಿಯಾದ ಮುದ್ದಾಟದಲ್ಲಿದ್ದ ಪ್ರಣಯ ಪಕ್ಷಿಗಳ ಪ್ರೀತಿಯ ನಾಟಕ ಸದ್ಯ ಬೀದಿಗೆ ಬಿದಂತ್ತಾಗಿದೆ.ಇನ್ನೂ ಪ್ರಶಾಂತ್ ಮಾಡುವ ಇದೇ ಆರೋಪಗಳಿಗೆ ದೃಶ್ಯ ಬೇರೆಯದ್ಧೇ ಕಥೆ ಹೇಳುತ್ತಾಳೆ.

ಪ್ರಶಾಂತ್ ಮೇಲೆ ಅತ್ಯಾಚಾರದ ಗಂಭೀರವಾದ ಆರೋಪವನ್ನು ಮಾಡಿದ್ದಾಳೆ. ಮೂಲತಃ ಕೊಡಗಿನವರಾಗಿರುವ ದೃಶ್ಯ ಕುಶಾಲ್‌ನಗರ ಪೋಲೀಸ್ ಠಾಣೆಯಲ್ಲಿ ಪ್ರಶಾಂತ್ ವಿರುದ್ದ ರೇಪ್ ಕೇಸ್ ದಾಖಲಿಸಿದ್ದಾಳೆ. ಮೊದಲಿಗೆ ಫೋಟೋ ಶೂಟ್ ಮಾಡಿಸಿಕೊಳ್ಳುವಾಗ ದೃಶ್ಯಗೆ, ಪ್ರಶಾಂತ್ ಪರಿಚಯವಾಗಿದ್ದು. ಸಂಜಯ್ ನಗರದಲ್ಲಿ. ನಂತ್ರ ಪ್ರೀತಿಗೆ ತಿರುಗಿದ ಸ್ನೇಹ ಇಬ್ಬರನ್ನೂ ಒಂದೇ ಸೂರಿನಡಿ ಇರುವಂತೆ ಮಾಡಿತ್ತು. ಕೆಲಕಾಲ ಪ್ರಶಾಂತ್ ಜೊತೆ ಲಿವಿಂಗ್ ಟು ಗೆದರ್ ನಲ್ಲಿದ್ದ ದೃಶ್ಯ ಇದೀಗ ಪ್ರಶಾಂತ್ ನನಗೆ ಲೈಂಗಿಕ ಕುರುಕುಳ ಕೊಟ್ಟಿದ್ದಾನೆಂದು, ಅಲ್ಲದೆ ಪ್ರಶಾಂತ್ ನನ್ನ ಸಂಬಂಧವನ್ನು ಮಿಸ್ ಯೂಸ್ ಮಾಡಿಕೊಂಡಿದ್ದಾರೆ.

ನನ್ನ ಮೇಲೆ ಮನಬಂಧಂತೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ. ಅಲ್ಲದೆ ನನ್ನ ಪೋಷಕರಿಗೂ ಹಲ್ಲೆ ಪ್ರಯತ್ನ ಮಾಡಿದ್ದಾರೆಂದು ಪ್ರಶಾಂತ್ ವಿರುದ್ದ ಕುಶಾಲ್ ನಗರದಲ್ಲಿ ೩೭೬ ಕೇಸ್ ದಾಖಲಿಸಿದ್ದಾರೆ.ಇನ್ನೂ ಸಾಲು ಸಾಲು ಆರೋಪಗಳ ಜೊತೆಗೆ ಪ್ರಶಾಂತ್ ವಿರುದ್ದ ಎರಡು ದೂರುಗಳನ್ನು ದೃಶ್ಯ ದಾಖಲಿಸಿದ್ದಾಳೆ. ನನ್ನ ಫೇಸ್‌ಬುಕ್ ಅಕೌಂಟ್ ಮತ್ತು ಇನ್‌ಸ್ಟಾಗ್ರಾಮ್‌ನ್ನು ಪ್ರಶಾಂತ್ ಮಿಸ್ ಯೂಸ್ ಮಾಡಿಕೊಂಡಿದ್ಧಾನೆಂದು ಆರೋಪಿಸಿದ್ದು.. ಪ್ರಶಾಂತ್ ಅತ್ಯಾಚಾರ ಮಾಡಿರೋದು, ಮೆಡಿಕಲ್ ಟೆಸ್ಟ್ ಮಾಡಿಸಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ನಮೂದಿಸಿದ್ದಾಳೆ.

ಈ ಹಿಂದೆ ಬೇರೆಯವರೊಂದಿಗೆ ಮದುವೆಯಾಗಿರುವ ಈ ಜೋಡಿ ಪ್ರೀತಿಯಲ್ಲಿ ಬಿದ್ದಿದ್ದು, ಮನೆಯವರ ಮಧ್ಯಸ್ಥಿಕೆಯಲ್ಲಿ ಎಂಗೇಂಜ್ ಮೆಂಟ್ ಕೂಡ ಮಾಡಿಕೊಂಡಿತ್ತು. ಇಷ್ಟೆಲ್ಲಾ ಆದ್ರು ಪ್ರಶಾಂತ್ ನನಗೆ ಇಷ್ಟವಿಲ್ಲದಿದ್ರು ಮದುವೆಯಾಗುವಂತೆ ಬಲವಂತ ಮಾಡ್ತಿದ್ದಾನೆ. ನನ್ನ ಜೀವಕ್ಕೆ ತೊಂದರೆಯಾಗುವಂತೆ ವರ್ತಿಸುತ್ತಿದ್ದಾನೆಂದು ದೃಶ್ಯ ಪ್ರಶಾಂತ್ ಮೇಲೆ ಸುಬ್ರಹ್ಮಣ್ಯ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.ಈಗಾಗ್ಲೇ ಐಶ್ವರ್ಯ ಎಂಬುವರನ್ನು ಪ್ರಶಾಂತ್ ಮದುವೆಯಾಗಿದ್ದು. ವಿಷಯವನ್ನು ನನ್ನಿಂದ ಮರೆ ಮಾಚಿದ್ದಾನೆಂದು ಪ್ರಶಾಂತ್ ಮೇಲೆ ದೃಶ್ಯ ಆರೋಪವನ್ನು ಮಾಡಿದ್ದಾರೆ.

ಅಷ್ಟೇ ಅಲ್ಲದೆ ಗಾಯನ ಎಂಬುವರ ಜೊತೆಗೂ ಸಹ ಅನೈತಿಕ ಸಂಬಂಧವನ್ನು ಪ್ರಶಾಂತ್ ಹೊಂದಿದ್ದು. ಸ್ಯಾಂಡಲ್‌ವುಡ್‌ನ ಖ್ಯಾತ ನಾಮರ ರಿಲೇಷನ್ ಎಂದು ಹೇಳಿಕೊಂಡು ಹಲವು ನಟಿಯರನ್ನು ಮತ್ತು ಮಾಡಲ್‌ಗಳಿಗೆ ಪೋಟೋ ಶೂಟ್ ಮಾಡಿಸುವ ನೆಪದಲ್ಲಿ ಸಿನಿಮಾದಲ್ಲಿ ಅವಕಾಶ ಕೊಡಿಸುವ ಆಸೆಯೊಡ್ಡಿ ನಂಬಿಸುತ್ತಾನೆ, ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಾನೆಂದು ಪ್ರಶಾಂತ್ ಮೇಲೆ ದೂರಿದ್ದಾರೆ.ಯಸ್.. ಪ್ರೀತಿ ಪ್ರೇಮ ಅಂತ ಕಂಡ ಕಂಡಲ್ಲಿ ತಿರುಗಿದ್ದ ಜೋಡಿಗಳು ಪರಸ್ಪರ ದೂರು ದಾಖಲಿಸಿಕೊಂಡಿದ್ದಾರೆ.

ಆದ್ರೆ ಪ್ರಶಾಂತ್ ಮೇಲೆ ಆರೋಪ ಮಾಡಿರುವ ದೃಶ್ಯ ಮಾತನಾಡಿರುವ ಕೆಲವು ಆಡಿಯೋ ತುಣುಕುಗಳು ಸದ್ಯ ರಿಲೀಸ್ ಆಗಿದ್ದು ಅಯೋಗ್ಯ ಚಿತ್ರದ ಸಹನಟಿಯ ಅಸಲಿ ಕಹಾನಿ ಹೊರಬಿದ್ದಿದೆ.ಹೌದು.. ಹೀಗೆಆಡಿಯೋದಲ್ಲಿ ಚಿನ್ನ, ಬೇಬಿ ಅಂತ ಮಾತನಾಡ್ತಿರುವ ದೃಶ್ಯನ ಮಾತನಾಡುತ್ತಿರುವ ವರಸೆ ನೋಡಿದ್ರೆ. ಮದುವೆಯಾಗಿದ್ರು ಹುಡಗರ ಬೀಳಿಸಿಕೊಳ್ಳೊ ಅಭಾಸ್ಯ ಇಟ್ಟುಕೊಂಡಂತೆ ಕಾಣ್ತಿದೆ ಅನ್ನೋದು ಇದೀಗ ಕೇಳಿ ಬರ‍್ತಿರುವ ಮಾತು. ಅಷ್ಟೇ ಅಲ್ಲ ದುಡ್ಡು ಮಾಡೋಕೆ ಅಡ್ಡ ದಾರಿ ಹಿಡಿದ ನಟಿ ಎಂಬ ಅನುಮಾನ ಕಾಡುವಂತೆ ಮಾಡ್ತಿದೆ.

ದುಡ್ಡಿಗಾಗ್ಗಿ ಏನೂ ಮಾಡಲು ರೆಡಿ ಅನ್ನೊ ನಟಿ ಆಡಿಯೋದಲ್ಲಿ ಬಿಗ್ ಬಾಸ್ ಸ್ಫರ್ಧಿ ಮಸ್ತಾನ್ ಮತ್ತು ನಿರ್ಮಾಪಕನ ಹೆಸರೂ ಕೂಡ ಪ್ರಸ್ತಾಪಿಸಿದ್ದಾಳೆ. ಎಲ್ಲದಕ್ಕು ಒಪ್ಪಿಲ್ಲ ಅಂದ್ರೆ ಇಂಡಸ್ಟ್ರಿಯಲ್ಲಿ ಚಾನ್ಸ್ ಸಿಕ್ಕೊದಿಲ್ಲ ಹಾಗಾಗಿ ಎಲ್ಲದಕ್ಕೂ ರೆಡಿ ಎನ್ನುವ ಆಡಿಯೋ ನಿಜಕ್ಕೂ ಬೆಚ್ಚಿ ಬೀಳಿಸುವಂಥದ್ದೇ.ಸದ್ಯ ಪ್ರಶಾಂತ್ ಮೇಲೆ ಸಾಲು ಸಾಲು ಆರೋಪಗಳನ್ನು ಮಾಡಿರುವ ದೃಶ್ಯ ಅಸಲಿಯತ್ತು ಆಡಿಯೋದಲ್ಲಿ ಬಟಬಯಲಾಗಿದ್ದು. ದೂರು ಪ್ರತಿದೂರುಗಳನ್ನು ದಾಖಲಿಸಿಕೊಂಡಿರುವ ದೃಶ್ಯ & ಪ್ರಶಾಂತ್‌ರಲ್ಲಿ ನಗ್ನರಾಗೋದ್ಯಾರು ಅನ್ನುವ ಪ್ರಶ್ನೆಗಳಿಗೆ ಉತ್ತರ ತನಿಖೆ ನಂತ್ರವಷ್ಟೇ ಸಿಗಲಿದೆ.

LEAVE A REPLY

Please enter your comment!
Please enter your name here