Home Crime ಅವನಿಗೆ ಹೆಂಡ್ತಿ ಮಕ್ಕಳಿದ್ದಾರೆ, ಇವಳಿಗೆ ಗಂಡ ಮಗುವಿದೆ, ಆದ್ರೂ ಡೀಪ್ ಲವ್..!! ಪ್ರೀತಿ, ಪ್ರೇಮ, ಪ್ರಣಯ...

ಅವನಿಗೆ ಹೆಂಡ್ತಿ ಮಕ್ಕಳಿದ್ದಾರೆ, ಇವಳಿಗೆ ಗಂಡ ಮಗುವಿದೆ, ಆದ್ರೂ ಡೀಪ್ ಲವ್..!! ಪ್ರೀತಿ, ಪ್ರೇಮ, ಪ್ರಣಯ ಅಂತಾ ಸುತ್ತಾಡಿದವಳ ತಲೆ ಕತ್ತರಿಸಿದ್ದೇಕೆ..?!

2918
0
SHARE

ಅದು ವಿಶ್ವ ಪ್ರಸಿದ್ದ ಪವಿತ್ರ ಯಾತ್ರಾ ಸ್ಥಳ.. ದೇಶ ವಿದೇಶಗಳಿಂದ ಪ್ರತಿದಿನ ಸಾವಿರಾರು ಜನ ಭಕ್ತರು ಬಂದು ಹೋಗ್ತಾರೆ.. ಹೀಗೆ ಯಾತ್ರಾ ಸ್ಥಳಕ್ಕೆ ಬಂದ ಜೋಡಿಯೊಂದು ನಿರ್ಜನ ಪ್ರದೇಶಕ್ಕೆ ತೆರಳಿ ಮೋಜು ಮಸ್ತಿ ಮಾಡಿದ್ದಾರೆ.. ಹೀಗೆ ಮೋಜು ಮಸ್ತಿ ಟೈಮಲ್ಲಿ ಅದೇನಾಯ್ತೋ ಏನೋ…?

ಪ್ರೇಯಸಿಯ ರುಂಡ ಕಡಿದ ಪ್ರಿಯಕರ ರುಂಡಸಮೇತ ಪೊಲೀಸ್ ಠಾಣೆಗೆ ಬಂದು ಪೊಲೀಸರನ್ನೇ ಬೆಚ್ಚಿಬೀಳಿಸಿದ.ಯಾರಾದ್ರು ಪ್ರೇಯಸಿ ಇನ್ನೊಬ್ಬನ ಜೊತೆ ಅಫೇರ್ ಇಟ್ಕೊಂಡಿದ್ರೆ, ಅವಳ ಸಹವಾಸವೇ ಬೇಡ ಎಂದು ಇರ್ತಾರೆ, ಇಲ್ಲ ಕರೆದು ಬುದ್ದಿವಾದ ಹೇಳ್ತಾರೆ, ಆದ್ರೆ ಇಲ್ಲೊಬ್ಬ ಎಂಥವರು ಬೆಚ್ಚಿ ಬೀಳವಂತೆ ಮಾಡಿದ್ದಾನೆ.

ತನ್ನ ಪ್ರೇಯಸಿ ಇನ್ನೊಬ್ಬನ ಜೊತೆ ಲಿಂಕ್ ಇಟ್ಟುಕೊಂಡಿದ್ದಾಳೆ ಎಂದು ತಿಳಿದ ಈತ ಅವಳ ತಲೆಯನ್ನೇ ಕತ್ತರಿಸಿದ್ದಾನೆ.ಹೌದು ಈ ರೀತಿಯ ಭೀಕರ ಘಟನೆ ನಡೆದಿರುವು ಚಿಕ್ಕಬಳ್ಳಾ ಪುರದಲ್ಲಿ…ಇಲ್ನೋಡಿ ಈತನ ಹೆಸರು ಅಜೀಜ್ ಖಾನ್ ಅಲಿಯಾಸ್ ಸದ್ದಾಮ್ ಹುಸೇನ್ ಅಂತಾ, ಪ್ರೇಯಸಿಯ ಕತ್ತು ಕತ್ತರಿಸಿದ್ರೂ ಕೂಡಾ ಯಾವುದೇ ಭಯವಿಲ್ಲದೆ, ದುಃಖವಿಲ್ಲದೆ ಹೆಂಗ್ ರಾಜಾರೋಷವಾಗಿ ನಿಂತಿದ್ದಾನೆ ನೋಡಿ,

ಮೂಲತಃ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಈ ಸದ್ದಾಮ್ ಹುಸೇನ್ ಬೆಂಗಳೂರಿನ ನೀಲಸಂದ್ರ ನಿವಾಸಿ ವಿವಾಹಿತ ಮಹಿಳೆ ರೋಷಿಣಿ ಖಾನಂ ರನ್ನು ಪ್ರೀತಿಸುತ್ತಿದ್ದ.. ಅವಳಿಗೆ ಮದುವೆಯಾಗಿದ್ರೂ ಸಹ ಅವಳ ಸಹ ಎಲ್ಲ ಬಿಟ್ಟವಳಂತೆ ಇವನೊಂದಿಗೆ ಪ್ರೀತಿ, ಪ್ರೇಮ, ಪ್ರಣಯ ಎಂದು ಸುತ್ತುತ್ತಿದ್ದಳು…

ಆದ್ರೆ ಇತ್ತೀಚೆಗೆ ಸದ್ದಾಮ್ ಹುಸೇನ್ ಸಂಗ ಬಿಟ್ಟು ಈಕೆ ಇನ್ಯಾರನ್ನೋ ಪ್ರೀತಿಸುತ್ತಿದ್ದಾಳೆ ಎಂಬ ಅನುಮಾನದಿಂದ ಅವಳ ತಲೆಯೇ ಕಡಿದು ಠಾಣೆಗೆ ಹೋಗಿ ಆ ತಲೆ ಹಿಡಿದು ವಿಕೃತ ಆನಂದ ಮೆರೆದಿದ್ದಾನೆ.ಇನ್ನೂ ಅಜೀಜ್ ಖಾನ್ ಕತ್ತರಿಸಿಕೊಂಡು ತಂದ ಮಹಿಳೆಯ ತಲೆಯನ್ನು ನೋಡಿ ಕೆಲ ಕಾಲ ಬೆಚ್ಚಿಬಿದ್ದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಭಯಾನಕ ಸತ್ಯ ಬಾಯಿಬಿಟ್ಟಿದ್ದಾನೆ..

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ಪವಿತ್ರ ಯಾತ್ರಾಸ್ಥಳ ಮುರಗಮಲ್ಲಾಗೆ ತನ್ನ ಪ್ರೇಯಸಿ ರೋಷಿಣಿ ಖ್ಹಾನಂ ಜೊತೆ ಆಗಮಿಸಿ ನಂತರ ಮಾವಿನ ತೋಟದಲ್ಲಿ ಪ್ರೀತಿಯ ಮತ್ತಿನಲ್ಲಿ ತೇಲಾಡುತ್ತಿದ್ದಾಗ ಮಚ್ಚಿನಿಂದ ಅವಳನ್ನ ಕೊಚ್ಚಿದೆ ಅಂತ ತಿಳಿಸಿದ್ದಾನೆ.. ತಕ್ಷಣ ಎಚ್ಚೆತ್ತ ಶ್ರೀನಿವಾಸಪುರ ಪೊಲೀಸರು ಆರೋಪಿಯನ್ನು ಕರೆತಂದು ಕೃತ್ಯ ನಡೆದ ಸ್ಥಳದಲ್ಲೇ ಕೆಂಚಾರ್ಲಹಳ್ಳಿ ಪೊಲೀಸರಿಗೆ ಆರೋಪಿ ಹಾಗೂ ಮೃತಳ ತಲೆಯನ್ನು ಒಪ್ಪಿಸಿದ್ರು.

ಆರೋಪಿಗೂ ಮದುವೆಯಾಗಿ ಹೆಂಡತಿ ಮಕ್ಕಳಿದ್ದಾರೆ, ಕೊಲೆಗಿಡಾದ ಮಹಿಳೆಗೂ ಮದುವೆಯಾಗಿ ಗಂಡ ಮಕ್ಕಳಿದ್ದಾರೆ.. ಆದ್ರೂ ಪ್ರೀತಿಯ ನಶೆಗೆ ಸಿಲುಕಿ ಇಬ್ಬರೂ ಪ್ರೀತಿಸಿದ್ರು, ಆದ್ರೆ ಇತ್ತೀಚೆಗೆ ರೋಷಿಣಿ ಪ್ರಿಯಕರನನ್ನು ಬಿಟ್ಟು ಇನ್ನಾರೋ ಜೊತೆ ಸುತ್ತಾಡುತ್ತಿದ್ದಳು ಅನ್ನೋ ಗುಮಾನಿ ಮೇರೆಗೆ ಸ್ವತಃ ಪ್ರಿಯಕರನಿಂದಲೇ ಬರ್ಭರವಾಗಿ ಹತ್ಯೆಯಾಗಿದ್ದು ವಿಪರ್ಯಾಸ.

LEAVE A REPLY

Please enter your comment!
Please enter your name here