Home Crime ಅವನು ಅಂಕಲ್ ಅವಳಿನ್ನು ಕಾಲೇಜ್ ಟೀನೆಜ್ ಫಿಗರ್..! ಅವರಿಬ್ಬರ ನಡುವೆ ಇನ್ನಿಲ್ಲದ ಪ್ರೀತಿ ಹುಟ್ಟಿಸಿತ್ತು ಹೂವು.!...

ಅವನು ಅಂಕಲ್ ಅವಳಿನ್ನು ಕಾಲೇಜ್ ಟೀನೆಜ್ ಫಿಗರ್..! ಅವರಿಬ್ಬರ ನಡುವೆ ಇನ್ನಿಲ್ಲದ ಪ್ರೀತಿ ಹುಟ್ಟಿಸಿತ್ತು ಹೂವು.! ಪ್ರೇಮದ ಉನ್ಮಾದದಲ್ಲಿದ್ದವರಿಗೆ ಕೈ ಬೀಸಿ ಕರೆದಿತ್ತು ಸಾವು..!

1703
0
SHARE

ಇವನು ರವಿಕುಮಾರ್ ಅಂತ, ಗೌರಿಬಿದನೂರಿನ ನಿವಾಸಿ. ಹೂವಿನ ವ್ಯಾಪಾರ ಮಾಡಿಕೊಂಡು ಬದುಕು ನಡೆಸ್ತಿದ್ದ. ಇವನಿಗೆ ಉದ್ಯೋಗದಲ್ಲಾಗಲಿ, ಮನೆಯ ಕಡೆಯಲಾಗಲಿ ಯಾವುದೇ ಸಮಸ್ಯೆ ಇರಲಿಲ್ಲ. ಅಲ್ಲದೆ ತನ್ನ ಸಂಬಂಧಿಯನ್ನ ಮಗಳನ್ನೇ ಮದುವೆಯಾಗಿ ಒಂದೊಳ್ಳೆ ಜೀವನವನ್ನ ನೆಡಸ್ತಿದ್ದ. ಮನೆ, ಹೆಂಡ್ತಿ ಮತ್ತು ಇಬ್ಬರು ಮಕ್ಕಳು ಅವನ ನೆಮ್ಮದಿಯ ಜೀವನಕ್ಕೆ ಯಾವುದೇ ತೊಂದರೆಯಿರಲಿಲ್ಲ. ಅವನು ಇಷ್ಟಕ್ಕೆ ತೃಪ್ತಿಪಟ್ಟು ಸುಮ್ಮನಾಗಿಬಿಟ್ಟಿದ್ರೆ ಎಲ್ಲವೂ ಚೆನ್ನಾಗಿರ್ತಿತ್ತು.

ಅವನ ಹೆಂಡತಿ ಇವತ್ತು ಗಂಡ ಇಟ್ಟ ಕುಂಕುಮವನ್ನ ಅಳಸಿಕೊಂಡು ವಿಧವೆಯಾಗ್ತಿರಲಿಲ್ಲ. ಅವನ ಮಕ್ಕಳು ಚಿಕ್ಕವಯಸ್ಸಲ್ಲೇ ತಬ್ಬಲಿಗಳಾಗ್ತಿರಲಿಲ್ಲ. ಆದ್ರೆ ಇವನಿಗೆ ಇರುವುದನ್ನೆಲ್ಲಾ ಬಿಟ್ಟು ಮತ್ತೇನನ್ನೋ ಮಾಡೋ ಬಯಸೋ ಹುಚ್ಚು. ಅದಕ್ಕೆ ತನ್ನ ಜೀವನದ ಜೊತೆ ಇನ್ನೊಂದು ಹುಡುಗಿಯ ಜೀವನವನ್ನ ಕೂಡಾ ಹಾಳು ಮಾಡಿಬಿಟ್ಟಿದ್ದಾನೆ. ಅವನು ಅವತ್ತ ಸ್ವಲ್ಪ ದೊಡ್ಡತನದಿಂದ ಯೋಚನೆ ಮಾಡಿದ್ರೆ ಇವತ್ತು ಎರಡು ಕುಟುಂಬಗಳು ಕಣ್ಣೀರು ಹಾಕುತ್ತ ಬದುಕೋ ಅವಕಾಶವಿರ್ತಿರಲಿಲ್ಲ.ರವಿಗೆ ಮೊದಲೇ ಹೇಳಿದ ಹಾಗೆ ಶೋಕಿ ಜಾಸ್ತಿ. ಅದ್ಯಾವಾಗ ಇವಳ ಪರಿಚಯವಾಯ್ತೋ ಸ್ವಲ್ಪ ಜಾಸ್ತಿಯೇ ಶೋಕಿ ಮಾಡೋದಕ್ಕೆ ಶುರುಮಾಡಿದ್ದ. ಅವಳ ಕಣ್ಣಲ್ಲಿ ಇವನೊಂದು ರೀತಿ ಹೀರೋ ಆಗಿ ಕಾಣಿಸೋದಕ್ಕೆ ಶುರುಮಾಡಿದ್ದ.

ಅವನು ಕೂಡಾ ಯಾವುದೋ ಹಕ್ಕಿ ಈಸಿಯಾಗಿ ಬಲೆಗೆ ಬೀಳ್ತಿದೆ ಯಾಕೆ ಬೀಳಿಸ್ಕೊಂಡು ಟೇಸ್ಟ್ ನೋಡಬಾರದು ಅಂತ ಆಕೆಗೆ ಲೈನ್ ಹೊಡೆಯೋದಕ್ಕೆ ಶುರುಮಾಡಿದ್ದ. ಅವಳ ಏಜ್ ಕೂಡಾ ಅಂತಹದ್ದೇ ಬಿಡಿ. ಅಪೋಸಿಟ್ ಕ್ಯಾರೆಕ್ಟರ್ ಗೆ ಅಟ್ರಾಕ್ಟ್ ಆಗುವಂತಹ ವಯಸ್ಸದು. ಅವಳ ತಪ್ಪು ಅನ್ನೋದಕ್ಕಿಂತ ಅವಳ ವಯಸ್ಸಿನ ತಪ್ಪದು. ಹೀಗಾಗಿ ಆಕೆ ಇವನ ಲೈನ್ ಅಂಡ್ ಲೆಂಗ್ತ್ ಗೆ ಬೌಲ್ಡ್ ಆಗಿ ಬಿಟ್ಟಿದ್ಲು. ಅವಳಿಗೆ ಇವನಿಗೆ ಮದುವೆಯಾಗಿದೆ. ಎರಡು ಮಕ್ಕಳ ತಂದೆ ಅನ್ನೋದು ಪಾಪ ಗೊತ್ತೇ ಇರಲಿಲ್ಲ. ರವಿ ಕೂಡಾ ನೋಡೋದಕ್ಕೆ ಚೆನ್ನಾಗಿದ್ದ ಕಾರಣ ಅವನು ಹಾಕಿದ್ದ ಕಾಳನ್ನ ಈ ಹಕ್ಕಿ ತಿಂದುಬಿಟ್ಟಿತ್ತು.

ಹೀಗೆ ಕಣ್ಣಲ್ಲೇ ಶುರುವಾದ ಪರಿಚಯ ಈಗ ಪ್ರೀತಿಗೆ ತಿರುಗಿತ್ತು. ಅವನು ತನ್ನ ಹೆಂಡ್ತಿ ಮಕ್ಕಳ ಕಥೆಯನ್ನ ಆಕೆಗೆ ಹೇಳಿದ್ನೋ ಇಲ್ವೋ ಗೊತ್ತಿಲ್ಲ. ಅಥವಾ ಅದು ಗೊತ್ತಿದ್ರು ಇವನನ್ನ ಮೆಚ್ಚಿ ಅದೇನಾಗುತ್ತೋ ನೋಡೋಬಿಡೋಣ ನನ್ನನ್ನ ಕಟ್ಟಿಕೊಂಡು ಬಾಳಿಸು ಅಂತ ಹೇಳಿದ್ಲೋ ಅದು ಗೊತ್ತಿಲ್ಲ. ಆದ್ರೆ ಇಬ್ಬರು ಮಾತ್ರ ಲವ್ ಮಾಡೋದಕ್ಕೆ ಶುರುಮಾಡಿದ್ರು. ಹೂವಿನ ವ್ಯಾಪಾರದ ನಂತ್ರ ಇವರಿಬ್ಬರು ಮೀಟ್ಆಗಿ ಲವ್ ಮಾಡೋದಕ್ಕೆ ಶುರುಮಾಡಿದ್ರು. ಅದೆಷ್ಟರ ಮಟ್ಟಿಗೆ ಇವರಿಬ್ಬರು ಇಷ್ಟಪಡೋದಕ್ಕೆ ಶುರುಮಾಡಿದ್ರು ಅಂದ್ರೆ ಒಬ್ಬರನ್ನ ಬಿಟ್ಟು ಒಬ್ಬರು ಇರೋದಕ್ಕೆ ಸಾಧ್ಯವೇ ಇಲ್ಲ ಅನ್ನೋ ಹಂತಕ್ಕೆ ಬಂದಿದ್ರು. ಅವನಿಗೂ ಮನೆಯಲ್ಲಿ ಅದೇ ಹೆಂಡತಿಯ ಮುಖವನ್ನ ನೋಡಿ ಸಾಕಾಗಿತ್ತು ಅನ್ಸುತ್ತೆ. ಅದಕ್ಕೆ ಹೊಸ ರುಚಿ ನೋಡೋಣ ಅಂತ ಹೆಚ್ಚು ಟೈಂ ಆಕೆಯೊಂದಿಗೆ ಕಳೆಯೋದಕ್ಕೆ ಶುರುಮಾಡಿದ್ದ.

ಆಕೆಯ ಮನೆಯಲ್ಲಿ ಗೊತ್ತಿಲ್ಲದ ಇವರಿಬ್ಬರ ಪ್ರೀತಿ, ಪ್ರೇಮ, ಪ್ರಣಯಗಳು ನಡೆಯೋದಕ್ಕೆ ಶುರುವಾಗಿತ್ತು. ಅಲ್ಲಿಂದ ಒಂದು ದುರಂತ ಅಧ್ಯಾಯಕ್ಕೆ ಮುಹೂರ್ತ ಫಿಕ್ಸ್ ಆಗೋದಕ್ಕೆ ಶುರುವಾಗಿತ್ತು.ರವಿ ಮತ್ತು ಹರಿಣಿಯ ಲವ್ ಕೆಲವೇ ದಿನಗಳಾದ್ದಾದ್ರು ಅದು ಗಾಢವಾಗಿ ಬೆಳೆದು ಬಿಟ್ಟಿತ್ತು. ಇಲ್ಲಿ ಎಲ್ಲರಿಗೂ ಕಾಡುವ ಒಂದು ಪ್ರಶ್ನೆ ಅಂದ್ರೆ. ರವಿಯ ಬಗ್ಗೆ ಆಕೆ ಹಿಂದು ಮುಂದೆ ಏನು ತಿಳಿದುಕೊಂಡಿರಲಿಲ್ವಾ ಅಂತ. ಇವತ್ತು ತಾನು ಪ್ರೀತಿಸಿದ ಹುಡುಗ ಇನ್ನೊಬ್ಬ ಹುಡುಗಿ ಜೊತೆ ಮಾತನಾಡಿದ್ರೆ ಸುಮ್ಮನಿರೋದಿಲ್ಲ. ಅಂತಹದ್ದರಲ್ಲಿ ಆತನಿಗೆ ಮದುವೆಯಾಗಿ ಎರಡು ಮಕ್ಕಳಾಗಿದೆ ಅನ್ನೋದು ಗೊತ್ತಿದ್ದು ಆಕೆ ಆತನನ್ನ ಪ್ರೀತಿಸಿದ್ಲ. ಮದುವೆಯಾಗೋದಕ್ಕೆ ಒಪ್ಪಿಕೊಂಡಿದ್ಲಾ ಅನ್ನೋದು ಪ್ರಶ್ನೆಯಾಗಿಯೇ ಉಳಿದಿದೆ. ಅಥವಾ ಆಕೆಯನ್ನ ಪಡೆಯಬೇಕು ಅನ್ ಹಠದಲ್ಲಿ ಆತ ಎಲ್ಲಾ ಸತ್ಯವನ್ನ ಆಕೆಯಿಂದ ಮುಚ್ಚಿಟ್ಟುಬಿಟ್ನ ಅನ್ನೋದು ಕೂಡಾ ಇಲ್ಲಿ ಕಾಡುತ್ತೆ. ಇಲ್ಲದಿದ್ರೆ ಆಕೆ ಅಷ್ಟು ಸುಲಭಕ್ಕೆ ಮದುವೆಗೆ ಒಪ್ಪಿಕೊಳ್ತಿರಲಿಲ್ಲ.

ಅವರಿಬ್ಬರು ಅದ್ಯಾಕೆ ಅಷ್ಟು ಬೇಗೆ ಮದುವೆಯ ತೀರ್ಮಾನಕ್ಕೆ ಬಂದ್ರೋ ಗೊತ್ತಿಲ್ಲ. ಆಕೆಗೆ ಇನ್ನು ಮದುವೆಯ ವಯಸ್ಸು ಕೂಡಾ ಆಗಿರಲಿಲ್ಲ. ಆದ್ರೆ ಅದ್ಯಾಗೋ ಆಕೆಯನ್ನ ಮದುವೆಗೆ ರವಿ ಒಪ್ಪಿಸಿಬಿಟ್ಟಿದ್ದ. ಅಲ್ಲದೆ ನಾನು ನಿನ್ನನ್ನ ಕೈ ಬಿಡೋದಿಲ್ಲ ಅಂತಾನು ಆತ ಆಕೆಗೆ ಪ್ರಾಮಿಸ್ ಮಾಡಿದ್ದ. ಹೀಗಾಗಿ ಆಕೆ ಇವನ ಬಣ್ಣದ ಮಾತುಗಳನ್ನೆಲ್ಲಾ ನಿಜ ಅಂತ ನಂಬಿದ್ದ ಅಂತ ಅನ್ಸುತ್ತೆ. ಅಲ್ಲಿವರೆಗೂ ಎಲ್ಲವು ಚೆನ್ನಾಗಿಯೇ ಇತ್ತು. ಅದಾದ ನಂತ್ರ ಆತ ತನ್ನ ಪತ್ನಿಯ ಬಳಿಗೆ ಹೋಗಿದ್ದ. ಅಲ್ಲಿ ತನ್ನ ಹೆಂಡ್ತಿ ಹತ್ತಿರ ನಡೆದಿರೋ ವಿಚಾರವನ್ನೆಲ್ಲಾ ಹೇಳಿದ್ದ. ಅಲ್ಲದೆ ನಾನು ಆಕೆಯನ್ನ ಮದುವೆಯಾಗ್ತೀನಿ ಅಂತ ಹೇಳಿದ್ದ. ಈ ಮಾತನ್ನ ಕೇಳಿದ ತಕ್ಷಣ ಆಕೆಗೆ ಸಿಡಿಲು ಹೊಡೆದ ಹಾಗೆ ಆಗಿತ್ತು. ಗಂಡನೊಬ್ಬ ಹೆಂಡ್ತಿ ಹತ್ತಿರ ಬಂದು ಎರಡನೇ ಮದುವೆಗೆ ಪರ್ಮೀಷನ್ ಕೇಳ್ತಾನೆ ಅಂದ್ರೆ ಆಕೆ ಅದ್ಯಾಕೆ ಅದಕ್ಕೆ ಒಪ್ಪಿಕೊಳ್ತಾಳೆ ಅಲ್ವಾ. ಆಕೆ ತನ್ನ ಸರ್ವಸ್ವವನ್ನ ಬೇಕಾದ್ರು ಹಂಚಿಕೊಂಡಾಳು. ಆದ್ರೆ ಗಂಡನನ್ನ ಹಂಚಿಕೊಳ್ಳಬೇಕು ಅಂದ್ರೆ ಅದ್ಯಾಗೆ ಸಾಧ್ಯ.

ಅದಕ್ಕೆ ಅವಳು ಇದೇ ವಿಚಾರಕ್ಕೆ ಗಂಡನ ಜೊತೆ ಜಗಳವಾಡೋದಕ್ಕೆ ಶುರುಮಾಡ್ತಾಳೆ. ನೀವೇನಾದ್ರೆ ಹಾಗೆ ಮಾಡಿದ್ರೆ ನಾನು ಸುಮ್ಮನಿರೋದಿಲ್ಲ. ಮಕ್ಕಳಿಗೆ ವಿಷ ಕುಡಿಸಿ ನಾನು ಕೂಡ ವಿಷ ಕುಡಿದು ಸತ್ತು ಹೋಗ್ತೀನಿ ಅಂತ ಕಣ್ಣೀರು ಹಾಕಿದ್ಲು. ಅಲ್ಲದೆ ನನ್ನ ನಡುನೀರಿನಲ್ಲಿ ಕೈಬಿಡಬೇಡಿ ಅಂತ ಬೇಡಿಕೊಂಡಿದ್ಲು.ಅವತ್ತು ಗಂಡ ಮತ್ತು ಹೆಂಡ್ತಿ ಇಬ್ಬರು ಇದೇ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದಾರೆ. ಇವನು ತನ್ನ ಹೆಂಡತಿಯನ್ನ ಒಪ್ಪಿಸೋದಕ್ಕೆ ಇನ್ನಿಲ್ಲದ ಸರ್ಕಸ್ ಮಾಡಿದ್ದಾನೆ. ಆದ್ರೆ ಆಕೆ ಅದಕ್ಕೆ ಸುತರಾಂ ಒಪ್ಪಲೇ ಇಲ್ಲ. ಇದಾದ ನಂತ್ರ ಇನ್ನು ಇವಳು ಮದುವೆಗೆ ಒಪ್ಪೋದಿಲ್ಲ. ಮದುವೆಯಾದ್ರು ಸುಮ್ಮನಿರೋದಿಲ್ಲ ಅನ್ನೋದು ಗೊತ್ತಾಗಿತ್ತು. ಅಲ್ಲದೆ ಇದೇ ವಿಚಾರವನ್ನ ಮನೆಯವರಿಗೆ ತಿಳಿಸಿ ರಂಪರಾಮಾಯಣ ಮಾಡ್ತಾಳೆ ಅನ್ನೋದು ಕನ್ಫರ್ಮ್ ಆಗಿತ್ತು. ಹೀಗಾಗಿ ಅವನಿಗೆ ಈಗ ಏನು ಮಾಡಬೇಕು ಅನ್ನೋದು ಗೊತ್ತಾಗಲಿಲ್ಲ.

ಅಲ್ಲದೆ ಮನೆಯಲ್ಲಿ ಈ ವಿಷಯ ಗೊತ್ತಾದ್ರೆ ಒಂದಕ್ಕೆರಡು ಆಗುತ್ತೆ ಅನ್ನೋ ಹೆದರಿಕೆಯು ಶುರುವಾಗಿದೆ. ಅತ್ತ ಆ ಹುಡುಗಿಗೆ ಬೇರೆ ಮದುವೆಯಾಗ್ತೀನಿ ಅಂತ ಹೇಳಿದ್ದೀನಿ. ಇನ್ನು ಈಗ ಆಗೋದಿಲ್ಲ ಅಂತ ಹೇಳಿದ್ರೆ ಅವಳು ಸುಮ್ಮನಿರ್ತಾಳ ಅನ್ನೋದು ಕೂಡಾ ಇವನಿಗೆ ಹೆದರಿಕೆ ಶುರುವಾಗಿತ್ತು. ಇವನ ಪರಿಸ್ಥಿತಿ ಅದ್ಯಾಗೆ ಆಗಿತ್ತು ಅಂದ್ರೆ  ಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡ ಅಡಿಕೆಯಂತಾಗಿತ್ತು.ನಂತ್ರ ಏನಾದ್ರು ಆಗಲಿ ಅಂತ ಅವನು ಆ ಹುಡುಗಿ ಹತ್ತಿರ ಹೋಗಿ ನಾವಿಬ್ರು ಮದುವೆಯಾಗೋಣ. ಆದ್ರೆ ಮನೆಯವರು ಇದಕ್ಕೆ ಒಪ್ಪೋದಿಲ್ಲ. ಇಬ್ಬರು ಓಡಿ ಹೋಗಿ ಮದುವೆಯಾಗೋಣ ಆಮೇಲೆ ಎಲ್ಲಾ ಸರಿಯಾಗುತ್ತೆ ಅಂತ ಆತ ಹೇಳಿದ್ದ. ಅವಳು ಕೂಡಾ ಅದಕ್ಕೆ ಎರಡು ಮಾತನಾಡದೆ ಸರಿ ಅಂತ ಹೇಳಿದ್ಲು.

ಪಾಪ ಆ ಹುಡುಗಿಗೆ ಇನ್ನು ಸರಿಯಾಗಿ ಲೋಕ ಜ್ಞಾನವೇ ಇರಲಿಲ್ಲ. ಅಂತಹದರಲ್ಲಿ ಇವನು ಏನು ಹೇಳಿದ್ರು ಅದನ್ನ ಆಕೆ ಕೇಳ್ತಿದ್ಲು. ಇವನು ನಾವು ಓಡಿ ಹೋಗಿ ಮದುವೆಯಾಗೋಣ ಆಮೇಲೆ ವಾಪಸ್ ಬಂದು ಮನೆಯವರಿಗೆ ಎಲ್ಲಾ ವಿಷಯ ಹೇಳಿ ಸರಿ ಮಾಡಿಕೊಳ್ಳೋಣ ಅಂತ ಆಕೆಯನ್ನ ಒಪ್ಪಿಸಿದ್ದ. ಆಕೆ ಕೂಡಾ ಆಗಿದ್ದೆಲ್ಲಾ ಅಗ್ಲಿ ಅಂತ ತಲೆ ಎಲ್ಲಾಡಿಸಿದ್ಲು. ಅವಳು ಅವತ್ತು ಮನೆಯವರ ಒಪ್ಪಿಗೆ ಇಲ್ಲದೆ ನಾನು ಮದುವೆಯಾಗೋದಿಲ್ಲ ಅಂತಾನೋ, ಅಥವಾ ನಾನು ಓದಬೇಕು ಎಕ್ಸಾಂ ಮುಗಿಲಿ ಅಂತಾನೋ ಹಠ ಹಿಡಿದು ಕುಳಿತುಬಿಟ್ಟಿದ್ರೆ ಇಂತಹದ್ದೊಂದು ಅನಾಹುತ ನಡೆಯುತ್ತಿರಲಿಲ್ಲ.ಆದ್ರೆ ಅವಳು ಹಾಗೆ ಮಾಡಲಿಲ್ಲ. ನೀನು ನನ್ನನ್ನ ಕರ್ಕೊಂಡು ಹೋಗಿ ಮದುವೆ ಮಾಡ್ಕೊ ನಾನು ನೀನು ಗಂಡ ಹೆಂಡ್ತಿ ಆಟ ಆಡೋಣ ಅಂತ ಅಂದುಬಿಟ್ಲು.

ಇವನು ಕೂಡಾ ಸರಿ ಜೂಟ್ ಹೇಳೋಣ ಅಂತ ಹೇಳಿ ಅವಳನ್ನ ಎಗರಿಸಿಕೊಂಡು ಹೋಗೋದಕ್ಕೆ ಪ್ಲಾನ್ ಮಾಡಿದ್ದ. ಸುಮಾರು 15 ದಿನದ ಹಿಂದೆ ಆಕೆ ಮನೆಯಿಂದ ಅಂಗಡಿ ಹೋಗಿ ಹಾಲು ತಗೊಂಡು ಬರ್ತೀನಿ ಅಂತ ಹೇಳಿದ್ಲು. ಹಾಗೆ ಹಾಲು ತರೋದಕ್ಕೆ ಅಂತ ಬಂದವಳು ವಾಪಸ್ ಮನೆಗೆ ಹೋಗಲೇ ಇಲ್ಲ. ಒಂದರ್ಧಗಂಟೆಯಾದ ಮೇಲೆ ಮನೆಯವರಿಗೆ ಅನುಮಾನ ಬಂದಿತ್ತು. ಆದ್ರೆ ಮಗಳು ಮನೆಬಿಟ್ಟು ಯಾವನ ಜೊತೆಯೋ ಓಡಿ ಹೋಗಿದ್ದಾಳೆ ಅನ್ನೋದು ಗೊತ್ತಿರಲಿಲ್ಲ. ಆದ್ರೆ ಮಗಳು ಕಾಣೆಯಾಗಿದ್ದಾಳೆ ಅನ್ನೋದು ಮಾತ್ರ ಅವರನ್ನ ಆತಂಕಕ್ಕೆ ದೂಡಿತ್ತು. ಎಲ್ಲಿ ಹೋದ್ಲು ಅಂತ ಅಕ್ಕಪಕ್ಕ ಎಲ್ಲಾ ಹುಡಿಕಿದ್ದಾರೆ. ತಮಗೆ ಗೊತ್ತಿದವರಿಗೆಲ್ಲಾ ಫೋನ್ ಮಾಡಿ ಕೇಳಿದ್ದಾರೆ. ಆದ್ರೆ ಎಲ್ಲರೂ ಆಕೆ ಇಲ್ಲಿಗೆ ಬಂದಿಲ್ಲ ಅಂತಾನ ಹೇಳಿದ್ರು.

ಮನೆಯಲ್ಲಿದ್ದವರಿಗೆಲ್ಲಾ ಟೆನ್ ಷನ್ ಶುರುವಾಗಿತ್ತು. ಯಾರಾದ್ರು ಇವಳನ್ನ ಕಿಡ್ನಾಪ್ ಮಾಡಿದ್ರ ಅಥವಾ ಇವಳು ಎಲ್ಲಾದ್ರು ಹೋದ್ಲ ಅಂತ ಇಡೀ ಊರನ್ನೆಲ್ಲಾ ಒಮ್ಮೆ ಹುಡುಕಿಬಿಟ್ಟಿದ್ರು. ಆದ್ರೆ ಸಂಜೆಯಾದ್ರು ಆಕೆ ಮಾತ್ರ ಎಲ್ಲಿಯು ಸಿಗಲೇ ಇಲ್ಲ. ಆಕೆ ರವಿ ಜೊತೆ ಓಡಿ ಹೋಗಿರುವ ವಿಷಯ ಅವರ್ಯಾರಿಗೂ ಗೊತ್ತೇ ಇರಲಿಲ್ಲ. ಅಲ್ಲದೆ ಅವಳ ಲವ್ ಸ್ಟೋರಿ ಕೂಡಾ ಅವರಿಗೆ ಗೊತ್ತಿರಲಿಲ್ಲ.ಇದೇ 9ನೇ ತಾರೀಖು ಇಬ್ಬರು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಬಳಿಯಲ್ಲಿ ಸಿಕ್ಕಿದ್ರು. ಆದ್ರೆ ಅವರಿಬ್ಬರು ಜೀವಂತವಾಗಿ ಸಿಕ್ಕಿರಲಿಲ್ಲ. ಇದೇ ಪೊಲೀಸ್ ಠಾಣೆ ಬಳಿಯಿರೋ ರೈಲ್ವೇ ಟ್ರ್ಯಾಕ್ ಮೇಲೆ ಇಬ್ಬರು ಹೆಣವಾಗಿ ಬಿದ್ದಿದ್ರು, ಅದ್ಯಾವಾಗ ಇಲ್ಲಿ ಗಂಡು ಹೆಣ್ಣಿನ ಹೆಣ ಬಿದ್ದಿದೆ ಅನ್ನೋದು ಪೊಲೀಸ್ರಿಗೆ ಗೊತ್ತಾಯ್ತೋ ಆಗ ಮಿಸ್ಸಿಂಗ್ ಆಗಿದ್ದವರ ಬಗ್ಗೆ ಪರಿಶೀಲನೆ ನಡೆಸಿದ್ರು.

ಆಗಲೇ ಗೊತ್ತಾಗಿದ್ದು ಇದು ರವಿ ಕುಮಾರ್ ಮತ್ತು ಹರಿಣಿ ಅಂತ. ಪೊಲೀಸ್ರು ಮತ್ತು ಮನೆಯವರು ಇವರನ್ನ ಜೀವಂತವಾಗಿ ಕರ್ಕೊಂಡು ಬರೋದಕ್ಕೆ ಹುಡುಕಾಟ ನಡೆಸ್ತಿದ್ರು. ಆದ್ರೆ ತಮ್ಮೊಳಗೆ ಸಾವಿರಾರು ಉತ್ತರಗಳನ್ನ ಇಟ್ಕೊಂಡು ಹೊರಜಗತ್ತಿಗೆ ಅಷ್ಟೇ ಪ್ರಶ್ನೆಗಳನ್ನ ಬಿಟ್ಟು ಇಬ್ಬರು ಸಾವನ್ನಪ್ಪಿದ್ರು.ಪೊಲೀಸ್ ಠಾಣೆಯ ಬಳಿಯೇ ಇಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ರು. ತಾವೇಕೆ ಆತ್ಮಹತ್ಯೆ ಮಾಡಿಕೊಳ್ತಿದ್ದೀವಿ. ನಮಗೆ ಏನು ಸಮಸ್ಯೆ ಇತ್ತು ಅನ್ನೋದನ್ನ ಕೂಡಾ ಅವ್ರು ತಿಳಿಸಿರಲೇ ಇಲ್ಲ. ಇಬ್ಬರು ಸಾಯುವಂತಹ ಕೆಲಸವೇನು ಮಾಡಿದ್ರು. ಅವ್ರಿಗೆ ಸಾಯುವಂತಹ ಸಮಸ್ಯೆ ಏನಿತ್ತು ಅನ್ನೋದು ಕೂಡಾ ಗೊತ್ತಾಗಲೇ ಇಲ್ಲ. ಯಾಕಂದ್ರೆ ಅವರಿಬ್ಬರು ಮದುವೆಯಾಗಿ ಒಂದಷ್ಟು ದಿನ ಸಂಸಾರ ನಡೆಸಿದ್ರು. ಹೀಗಾಗಿ ಮನೆಯವರು ಮರ್ಯಾದೆಗಾದ್ರು ಅವರನ್ನ ಈಗ ಮನೆಯೊಳಗೆ ಸೇರಿಸ್ತಿದ್ರು.

ಈಗ ಗಂಡ ಸಂಪೂರ್ಣವಾಗಿ ಕೈ ತಪ್ಪಿ ಹೋಗಬಾರದು ಅನ್ನೋ ಕಾರಣಕ್ಕಾದ್ರು ಆಕೆ ಅದನ್ನ ಒಪ್ಪಿಕೊಳ್ತಿದ್ಲೋ ಏನೋ. ಆದ್ರೆ ಅವರು ಆಕೆ ಕೆಲಸ ಮಾಡದೆ ತಮ್ಮದೇ ಯೋಚನೆಯಲ್ಲಿ ಮುಂದಿನ ನಿರ್ಧಾರ ತೆಗೆದುಕೊಂಡು ಬಿಟ್ಟಿದ್ರು.ಅಥವಾ ಅವರಿಬ್ಬರು ಮದುವೆಯಾದ ನಂತ್ರ ಫ್ಯಾಮಿಲಿಯವರು ಕೂಡ ಬೆದರಿಕೆ ಹಾಕಿರೋ ಸಾಧ್ಯತೆಯಿದೆ. ಮನೆಗೆ ಬಂದ್ರೆ ಪರಿಣಾಮ ನೆಟ್ಟಗಿರೋದಿಲ್ಲ ಅಂತ ಹೆದರಿಸಿರೋ ಸಾಧ್ಯತೆಯಿದೆ. ಪೂರ್ಣವಾಗಿ ಸಮಾಜ ಮತ್ತು ಮನೆಯವರನ್ನ ಎದುರು ಹಾಕಿಕೊಂಡು ಬದುಕೋದಕ್ಕೆ ಆಗೋದಿಲ್ಲ ಅನ್ನೋದು ಅವರಿಬ್ಬರ ತಲೆಗೆ ಬಂದಿರಬೇಕು. ಅಥವಾ ಇಬ್ಬರಿಗೂ ಪೊಲೀಸ್ರು ಠಾಣೆಗೆ ಬಂದು ಪೋಷಕರು ಹೇಳಿದ ಹಾಗೆ ಕೇಳ್ಕೊಂಡು ಇರೋ ಹಾಗೆ ಒತ್ತಡ ಹೇರಿದ್ರೋ ಹೇಗೋ ಗೊತ್ತಿಲ್ಲ. ಒಟ್ಟಿಲ್ಲಿ ಅವ್ರು ಮನೆಯವರು ಅಥವಾ ಪೊಲೀಸ್ರಿಂದ ಬೆದರಿಕೆಯನ್ನ ಅನುಭವಿಸಿದ್ದು ಮಾತ್ರ ನಿಜ.

ಇದೇ ಕಾರಣಕ್ಕೆ ಅವ್ರು ಅವರಿಬ್ಬರು ಇನ್ನು  ಇವರನ್ನೆಲ್ಲಾ ಎದುರಿಸಿ ನಾವು ಬದುಕೋದಕ್ಕೆ ಆಗೋದಿಲ್ಲ ಅಂತ ತೀರ್ಮಾನಿಸಿರಬೇಕು. ಅದಕ್ಕೆ ಅವತ್ತು ಇನ್ನು ಮನೆಗೆ ಹೋಗೋದಕ್ಕೆ ಆಗೋದು ಇಲ್ಲ ಬದುಕೋದಕ್ಕೂ ಆಗೋದಿಲ್ಲ ಅಂತ ಎನಿಸಿ ಇಬ್ಬರು ಆತ್ಮಹತ್ಯೆ ನಿರ್ಧಾರ ಮಾಡಿರಬೇಕು.ಅವರಿಬ್ಬರ ಸಾವು ಕೂಡಾ ಅನ್ಯಾಯವೆ. ಮನುಷ್ಯನ ವೀಕ್ನೆಸ್ ಪ್ರೀತಿ. ಅವರಿಬ್ಬರು ಮಾಡಿದ್ದ ಸಮಾಜ ಯಾವತ್ತಿದ್ರು ತಪ್ಪು ಅಂತಾನೆ ಹೇಳುತ್ತೆ. ಇಬ್ಬರು ಸತ್ತ ಮೇಲೆ ಛೇ ಸಾಯಬಾರದಿತ್ತು ಅಂತಾನು ಇವರೇ ಹೇಳ್ತಾರೆ. ಅವತ್ತು ಅವರಿಬ್ಬರು ಮಾಡಿದ್ದು ನಿಜಕ್ಕೂ ತಪ್ಪೆ ಒಬ್ಬ ಸಂಸಾರಸ್ಥನ ಜೊತೆ ಅಪ್ರಾಪ್ತೆ ಮದುವೆಯಾಗ್ತಾಳೆ ಅಂದ್ರೆ ಅದನ್ನ ಸಮಾಜ ಒಪ್ಪೋದಿಲ್ಲ ನಿಜ. ಆದ್ರೆ ಒಂದು ಬದುಕಿಗಿಂತ ಯಾವ ಸಮಾಜವು ಮುಖ್ಯವಲ್ಲ. ಅವರಿಬ್ಬರು ಒಪ್ಪಿಕೊಂಡು ಬದುಕ್ತೀವಿ ಅಂತ ಅಂದಾಗ ಯಾರಾದ್ರು ಸ್ವಲ್ಪ ಅಡ್ಜಸ್ಟ್ ಮಾಡ್ಕೊಂಡಿದ್ರೆ ಇವತ್ತು ಹೀಗೆ ಆಗ್ತಿರಲಿಲ್ಲ. ಹಾಗಂತ ನಾವು ಅವರು ಮಾಡಿರೋ ಕೆಲಸವನ್ನ ಸಮರ್ಥನೆ ಮಾಡಿಕೊಳ್ತಿಲ್ಲ.

ಆದ್ರೆ ಆ ಸಾವನ್ನ ತಪ್ಪಿಸಬಹುದಿತ್ತಲ್ವಾ ಅನ್ನೋ ಕಾಳಜಿ ಅಷ್ಟೇ. ಇವತ್ತು ರವಿ ಕುಮಾರ್ ನ ಇಬ್ಬರು ಮಕ್ಕಳು ತಬ್ಬಲಿಗಳಾಗಿದ್ದಾರೆ. ಆತನ  ಪತ್ನಿ ವಿಧಯೆಯಾಗಿದ್ದಾಳೆ. ಇದಕ್ಕಿಂತ ಅವನು ಅವಳೊಟ್ಟಿಗೆ ಬದುಕಿದ್ರೆ ಈ ಎಲ್ಲಾ ಅನಾಹುತಗಳನ್ನ ತಪ್ಪಿಸಬಹುದಿತ್ತು ಅನ್ನೋದು ಅಷ್ಟೇ. ಸಾವಿಗಿಂತ ಬದುಕು ಮುಖ್ಯ. ಅದ್ರಲ್ಲೂ ರವಿ ವಯಸ್ಸಲ್ಲಿ ದೊಡ್ಡವನು ಅವನು ಆ ಅಪ್ರಾಪ್ತೆಗೆ ಬುದ್ಧಿ ಹೇಳಿ ಮದುವೆ ಸಾಧ್ಯವಿಲ್ಲ. ನಿನ್ನ ಪ್ರೀತಿ ನನ್ನಂತಹ ಅಂಕಲ್ ಜೊತೆಗಲ್ಲ ಅಂತ ಹೇಳಿದ್ರೆ ಆಕೆ ಕೇಳ್ತಿದ್ಲು ಅಂತ ಅನ್ಸುತ್ತೆ. ಆದ್ರೆ ಅವನಿಗೆ ಹೆಣ್ಣಿನ ಮೇಲಿನ ಮೋಹ ಅದೆಲ್ಲವನ್ನ ಮಾಡಿಸಿಬಿಟ್ಟಿತ್ತು.

ಇವತ್ತು ಎರಡು ಕುಟುಂಬಗಳು ಕಣ್ಣೀರು ಹಾಕ್ತಿರೋದಕ್ಕೆ ಸರಿ ಮಾಡಲಾಗದಂತಹ ಅನಾಹುತವಾಗಿರೋದಕ್ಕೆ ರವಿಕುಮಾರ್ ನೇ ನೇರ ಹೊಣೆ. ಅವನು ಸರಿಯಾಗಿದ್ದಿದ್ರೆ ಇದ್ಯಾವುದು ಆಗ್ತಿರಲಿಲ್ಲ. ಅವನು ಕೂಡಾ ಹೆಂಡತಿ ಮಕ್ಕಳ ಜೊತೆ ಚೆನ್ನಾಗಿಯೇ ಬದುಕಬಹುದಿತ್ತು. ಕೆಲವೊಮ್ಮೆ ವಿಧಿ ಆಟ ಆಡೋದಕ್ಕೆ ಶುರುಮಾಡುತ್ತೆ. ಅದರ ಮುಂದೆ ಈ ಅಲ್ಪ ಮನುಷ್ಯರಾದ್ರು ಏನು ಮಾಡೋದಕ್ಕೆ ಆಗುತ್ತೆ ಅಲ್ವ. ಅವರ ಆಯಸ್ಸೇ ಅಷ್ಟು ಅಂತ ಸುಮ್ಮನಿರಬೇಕು. ಆದ್ರೆ ನಾವೇ ಸೃಷ್ಠಿಸಿಕೊಂಡ ವ್ಯವಸ್ಥೆಯೊಂದು ಬದುಕುಳಿದವರನ್ನ ಹ್ಯಾಗೆ ಹಿಂಸೆ ಮಾಡುತ್ತೆ ಅನ್ನೋದು ಕೂಡಾ ನಮಗೆ ಗೊತ್ತಲ್ವ.

LEAVE A REPLY

Please enter your comment!
Please enter your name here