Home Crime ಅವನು ಹಾಕಿದ ಕಾಳನ್ನ ತಿಂದಿತ್ತು ಬ್ಯೂಟಿಫುಲ್ ಡವ್..! ಪ್ರೀತಿಯಲ್ಲಿ ಮೈಮರೆತು ನಡೆಸಿದ್ರು ಮಿಲನ ಮಹೋತ್ಸವ..! ತಾಯಿಯಾದ್ರು...

ಅವನು ಹಾಕಿದ ಕಾಳನ್ನ ತಿಂದಿತ್ತು ಬ್ಯೂಟಿಫುಲ್ ಡವ್..! ಪ್ರೀತಿಯಲ್ಲಿ ಮೈಮರೆತು ನಡೆಸಿದ್ರು ಮಿಲನ ಮಹೋತ್ಸವ..! ತಾಯಿಯಾದ್ರು ಬಿಡಲಿಲ್ಲ ಸೋಷಿಯಲ್ ಮೀಡಿಯಾ ಹುಚ್ಚು..

6745
0
SHARE

ಮನುಷ್ಯನ ಟೈಂ ಹಾಗೆ ಇವನಿಗೆ ಒಳ್ಳೇ ಟೈಂ ಇದ್ದಿದ್ರೆ ಸಿನಿಮಾ ನಾಯಕನಾಗಿ ಅಲ್ಲದಿದ್ರು ಅವನ ಲೈಫ್ ಗೆ ಅವನು ಹೀರೋ ಆಗಿ ಇರ್ತಿದ್ದ. ಅವನ ಲೈಫ್ ನಲ್ಲಿ ಬಿಂದಾಸ್ ಆಗಿಯೇ ಇರ್ತಿದ್ದ.

ಆದ್ರೆ ಟೈಂ ನೋಡಿ ಎಲ್ಲರಿಗೂ ಚೆನ್ನಾಗಿರೋದಿಲ್ಲ. ತಾನೊಂದು ಬಯಸಿದ್ರೆ ವಿಧಿ ಇನ್ನೊಂದು ಬಯಸುತ್ತೆ. ಅದೇ ಕಾರಣಕ್ಕೆ ಇವತ್ತು ಇವನ ಬಗ್ಗೆ ನಾವು ಹೇಳ್ತಿರೋದು. ಇವನ ಟೈಂ ಚೆನ್ನಾಗಿದ್ದಿದ್ರೆ ನಾವು ಯಾಕೆ ಇಲ್ಲಿ ಹಾಕ್ಕೊಂಡು ರುಬ್ತಾ ಇದ್ವಿ ಅಲ್ವಾ. ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಶನಿ ಹೆಗಲೇರಿ ಕೂತ್ಕೊತಾನೆ. ಶನಿ ಅದ್ಯಾರ ಪಾಲಿಗೆ ಯಾವ ರೂಪದಲ್ಲಿ ಬಂದು ಕೂರ್ತಾನೋ ಗೊತ್ತಿಲ್ಲ.

ಈ ರಾಜು ಕೆಲವು ದಿನಗಳ ಹಿಂದೆ ಎರಡು ಕೊಲೆಯನ್ನ ಮಾಡಿದ್ದ. ಆ ಕೊಲೆ ಬೇರ್ಯಾರದ್ದು ಅಲ್ಲ. ತನ್ನ ಪತ್ನಿ ಮತ್ತು ಮೂರು ತಿಂಗಳ ಮಗುವನ್ನ ನಿಷ್ಕಾರುಣವಾಗಿ ಅವನು ಕೊಲೆ ಮಾಡಿದ್ದ. ಅಷ್ಟೇ ಅಲ್ಲ ತನ್ನ ಪತ್ನಿಯ ಶವಕ್ಕೆ ಇಲ್ಲೇ ಬೆಂಕಿ ಹಾಕಿ ಹೋಗಿದ್ದ. ಒಂದು ಕೊಲೆ ಮಾಡಿ ಎಷ್ಟು ದಿನ ತಾನೇ ತಪ್ಪಿಸಿಕೊಳ್ಳೋದಕ್ಕೆ ಸಾಧ್ಯವಾಗುತ್ತೆ ಅಲ್ವಾ. ಇವನ ಕಥೆಯು ಹಾಗೆ ಆಗಿತ್ತು. ಯಾರು ನೋಡದ ಜಾಗದಲ್ಲಿ ಬಂದು ಕೊಲೆ ಮಾಡಿದ್ದೀನಿ. ಅವಳ ಶವವನ್ನ ಕೂಡ ಅರ್ಧಂಬರ್ಧ ಸುಟ್ಟು ಹಾಕಿದ್ದೀನಿ ಅಂತ ಅಂದುಕೊಂಡು ನೆಮ್ಮದಿಯಾಗಿ ಇದ್ದ. ಆದ್ರೆ ಕೊಲೆ ಮಾಡಿದಷ್ಟು ಸುಲಭಕ್ಕೆ ಅದರಿಂದ ತಪ್ಪಿಸಿಕೊಳ್ಳೋದಕ್ಕ ಸಾಧ್ಯವಿಲ್ಲ.

ರಾಜು ಇವತ್ತು ಹೀಗೆ ಪೊಲೀಸ್ರಿಂದ ಬಂಧಿತನಾಗಿ ಕಂಬಿ ಎಣಿಸೋದಕ್ಕೆ ಒಂದು ಕಾರಣವು ಇತ್ತು. ಅವನ ಪ್ರೀತಿಯ ಕಥೆಯೇ ಇದಕ್ಕೆಲ್ಲಾ ಮೂಲವಾಗಿತ್ತು. ಈ ರಾಜು ತುಮಕೂರಿನ ಸಮೀಪದ ಕ್ಯಾತಸಂದ್ರದವನು ಅಲ್ಲೇ ಕಂಪನಿಯೊಂದರಲ್ಲಿ ಕೆಲಸ ಮಾಡ್ಕೊಂಡಿರ್ತಾನೆ. ಇವನಿಗೆ ಫೇಸ್ ಬುಕ್ ನಲ್ಲಿ ಸುಷ್ಮಾ ಅನ್ನೋ ಹುಡುಗಿಯ ಪರಿಚಯವಾಗುತ್ತೆ. ಹೀಗೆ ಇಬ್ಬರು ಪರಿಚಯವಾದ ಮೇಲೆ ಒಂದಿಷ್ಟು ತಿಂಗಳು ಇಬ್ಬರು ಫೇಸ್ ಬುಕ್, ಫೋನ್ ಅಂತ ಮೆಸೆಜ್ ಕಾಲ್ ಮಾಡ್ಕೊಂಡು ಚೆನ್ನಾಗಿರ್ತಾರೆ. ಅಲ್ಲದೆ ಒಬ್ಬರನ್ನ ಒಬ್ಬರು ಚೆನ್ನಾಗಿ ಅರ್ಥ ಮಾಡ್ಕೊಂಡಿರ್ತಾರೆ.

ರಾಜುಗೆ ಆಕೆಯ ಸಲುಗೆ ಆಕೆಯನ್ನ ಪ್ರೀತಿ ಮಾಡುವಂತೆ ಪ್ರೇರೇಪಿಸಿತ್ತು.ಹಾಗೆ ಅದಕ್ಕಾಗಿ ಒಂದು ಸಮಯಕ್ಕಾಗಿ ಆತ ಕಾದಿದ್ದ. ನಂತ್ರ ಆಕೆಯ ಬರ್ತ್ ಡೇ ದಿನ ಆತ ಅವಳನ್ನ ಕರ್ಕೊಂಡು ದೇವರಾಯನ ದುರ್ಗಾಕ್ಕೆ ಹೋಗಿದ್ದ. ಅಲ್ಲಿಗೆ ಹೋಗಿ ಅವಳ ಬರ್ತ್ ಡೇಯನ್ನ ಭರ್ಜರಿಯಾಗಿ ಸೆಲಬ್ರೇಟ್ ಮಾಡಿದ್ದ. ನಂತ್ರ ತನ್ನ ಪ್ರೇಮವನ್ನ ನಿವೇದಿಸಿಕೊಂಡಿದ್ದ.ಅವತ್ತು ಆ ಚೆಂದುಳ್ಳಿ ಚೆಲುವೆ ಸುಷ್ಮಾ ಯಾವುದೇ ಕಿರಿಕ್ ಮಾಡದೆ ಅವನ ಪ್ರೀತಿಯನ್ನ ಒಪ್ಪಿಕೊಂಡು ಬಿಟ್ಟಿದ್ಲು. ಅವನಿಗೆ ಆಗ ಸ್ವರ್ಗಕ್ಕೆ ಮೂರೇ ಗೇಣು ಅಂತ ಅನಿಸಿತ್ತು.

ಅವತ್ತೇ ಇಬ್ಬರು ಜೊತೆಯಾಗಿ ಒಂದಷ್ಟು ಫೋಟೋಗಳನ್ನ ತೆಗೆಸಿಕೊಂಡು ತಮ್ಮ ಪ್ರೀತಿಯನ್ನ ಸೆಲಬ್ರೇಟ್ ಮಾಡೋದಕ್ಕೆ ಶುರುಮಾಡಿದ್ರು. ಇಬ್ಬರು ಕೂಡಾ ನೋಡೋದಕ್ಕೆ ತುಂಬಾ ಅಂದವಾಗಿ ಇದ್ರು. ಇಬ್ಬರದ್ದು ಮೇಡ್ ಫಾರ್ ಈಚ್ ಅದರ್ ಅನ್ನೋ ರೀತಿಯ ಜೋಡಿ. ಅವತ್ತಿನಿಂದ ಅವರು ಇನ್ನಷ್ಟು ಸಲುಗೆಯಿಂದ ವರ್ತಿಸೋದಕ್ಕೆ ಶುರುಮಾಡಿದ್ರು. ಇನ್ನು ಮುಂದೆ ನಾವಿಬ್ರು ಗಂಡ ಹೆಂಡತಿ ಅಂತ ಅಂದುಕೊಂಡಿದ್ರು. ಇವತ್ತಿನ ಜನರೇಷನ್ ಗೊತ್ತಲ್ವಾ ನಿಮಗೆ. ಪ್ರೀತಿ ಮಾಡೋದೆ ಅದ್ಯಾವಾಗ ಹಾಸಿಗೆ ತನಕ ಬರುತ್ತೆ ಅನ್ನೋ ವಿಷಯಕ್ಕೆ. ಇವರಿಬ್ಬರು ಪ್ರೀತಿಸೋದಕ್ಕೆ ಶುರುಮಾಡಿ ಮದುವೆಯಾಗೋ ತೀರ್ಮಾನ ಮಾಡಿದ ಮೇಲೆ ಇವರ ಪ್ರೀತಿ ಪಲ್ಲಂಗ ಏರಿತ್ತು.

ಪ್ರೀತಿ ಅಂದರೆ ಇವತ್ತಿನ ಯೂತ್ಸ್ ಗೆ ಸೆಕ್ಸ್ ಅನ್ನೋದನ್ನ ಬಿಡಿಸಿ ಹೇಳುವ ಅವಶ್ಯಕತೆಯಿಲ್ಲ ಅಲ್ವಾ. ಇಬ್ಬರು ಒಬ್ಬರಿಗೆ ಒಬ್ಬರು ಆಕರ್ಷಿತವಾದ ಮೇಲೆ ಮಂಚ ಮುರಿಯೋದಕ್ಕೆ ಎಷ್ಟು ಹೊತ್ತು ಹೇಳಿ. ಇವರ ವಿಷಯದಲ್ಲು ಹಾಗೆ ಆಗಿತ್ತು. ಪ್ರೀತಿಸಿದ ಕೆಲವು ತಿಂಗಳಲ್ಲಿ ಸುಷ್ಮಾ ಮದುವೆಯಾಗದೇ ಇದ್ರು ಹೊಟ್ಟೆಯಲ್ಲಿ ಭ್ರೂಣ ಬೆಳೆಸಿಕೊಂಡು ಬಿಟ್ಟಿದ್ಲು. ಹುಡುಗಾಟ ಈಗ ಪೇಚಾಟಕ್ಕೆ ಬಂದಿತ್ತು. ಅಲ್ಲದೆ ಅತ್ತ ಮದುವೆಯಾಗದೆ ಇತ್ತ ಅದನ್ನ ತೆಗೆಸಲು ಆಗದೆ ಅವರಿಬ್ಬರು ಒದ್ದಾಡೋದಕ್ಕೆ ಶುರುಮಾಡಿದ್ರು. ನಂತ್ರ ಆತನೆ ತುಮಕೂರಿನ ಆಸ್ಪತ್ರೆಗೆ ಕರ್ಕೊಂಡು ಹೋಗಿ ಅವಳನ್ನ ಸೇರಿಸಿದ್ದ.

ಅಲ್ಲದೆ ಅಲ್ಲಿ ಯಾರಿಗೂ ಅನುಮಾನ ಬರಬಾರದು ಅಂತ ಆತ ಆಕೆಗೆ ಒಂದು ಕರಿಮಣಿಯನ್ನ ಕಟ್ಟಿದ್ದ. ಯಾಕಂದ್ರೆ ಇನ್ನು ಹುಡುಗಾಟ ಮಾಡೋದಕ್ಕೆ ಸಾಧ್ಯವಿರಲಿಲ್ಲ. ಹೀಗಾಗಿ ಶಾರ್ಟ್ ಟೈಂಗೆ ಅಂತ ಒಂದು ತಾಳಿ ಕಟ್ಟಿಕೊಂಡು ಅವಳು ಆಸ್ಪತ್ರೆಗೆ ಅಡ್ಮಿಟ್ ಆಗಿದ್ಲು.ಈ ವಿಷಯ ಅವರ ಪೋಷಕರಿಗೂ ಗೊತ್ತಾಗಿತ್ತು. ಇನ್ನು ಈ ವಿಷಯ ಊರೋರಿಗೆ ಗೊತ್ತಾದ್ರೆ ಮರ್ಯಾದೆ ಹೋಗುತ್ತೆ ಅನ್ನೋ ಕಾರಣಕ್ಕೆ ಅವರೇ ಗಂಗೊಂಡನಹಳ್ಳಿ ಗ್ರಾಮದ ಬಳಿ ಒಂದು ಮನೆಯನ್ನ ಮಾಡಿಕೊಟ್ಟು ಇವರಿಗೆ ಸಂಸಾರ ಮಾಡೋದಕ್ಕೆ ಏನು ಬೇಕು ಅದನ್ನ ವ್ಯವಸ್ಥೆ ಮಾಡಿಕೊಟ್ಟಿದ್ರು. ಪ್ರೀತಿ ಮಾಡಿ ಹೊಟ್ಟೆ ಬರಿಸಿಕೊಂಡಿದ್ರಿಂದ ಮನೆಯವರು ಇವರಿಬ್ಬರು ಒಟ್ಟಿಗೆ ಇರೋದಕ್ಕೆ ಯಾವ ತಕರಾರು ತೆಗೆದಿರಲಿಲ್ಲ.

ಅಲ್ಲಿ ಪೋಷಕರಿಗೂ ಕ್ಯಾತೆ ಮಾಡೋದಕ್ಕೆ ಅವಕಾಶವಿರಲಿಲ್ಲ. ಇದೇ ಟೈಂನಲ್ಲಿ ಸುಷ್ಮಾ ಗಂಡು ಮಗುವಿಗೆ ಜನ್ಮಕೊಟ್ಟಿದ್ದಾಳೆ. ಅಲ್ಲಿಗೆ ಶಾಸ್ತ್ರೋಕ್ತವಾಗಿ ಅವರು ಮದುವೆಯಾಗದಿದ್ರು ಶಾಸ್ತ್ರೋಕ್ತವಾಗಿ ಅವರು ಅಪ್ಪ ಅಮ್ಮ ಆಗಿದ್ರು. ನಂತ್ರ ಇಬ್ಬರು ಅದೇ ಮನೆಯಲ್ಲಿ ಮತ್ತೆ ಹೊಸದಾಗಿ ಗಂಡ ಹೆಂಡತಿ ಅನ್ನೋ ಹಾಗೆ ಸಂಸಾರ ಶುರುಮಾಡ್ಕೊಂಡಿದ್ರು.ಪ್ರೀತಿಸಿದವರೇ ಜೊತೆಯಲ್ಲಿ ಇರೋ ಅದೃಷ್ಠ ಅದೆಷ್ಟು ಜನಕ್ಕೆ ಸಿಗುತ್ತೆ ಹೇಳಿ. ಇವರಿಗೆ ಆ ಅದೃಷ್ಠವಿತ್ತು ಆದ್ರೆ ಅದನ್ನ ಕಾಪಾಡಿಕೊಳ್ಳೋದ್ರಲ್ಲಿ ಇವರು ಸೋತಿದ್ರು.

ಮನೆಯಲ್ಲಿ ಒಬ್ಬಳೇ ಇರ್ತಾಳಲ್ವಾ ಫೇಸ್ ಬುಕ್ ನೋಡ್ಕೊಂಡು ಇರ್ತಾಳೆ ಅವಳಿಗೆ ಟೈಂ ಪಾಸ್ ಆಗಬೇಕಲ್ಲ ಅಂತ ಅವನು ಅಂದುಕೊಂಡಿದ್ದ. ಇಬ್ಬರಿಗೂ ಒಬ್ಬರ ಮೇಲೆ ಒಬ್ಬರಿಗೆ ನಂಬಿಕೆಯಿದ್ದ ಕಾರಣ ಅವರು ಆ ವಿಚಾರವಾಗಿ ಯಾವತ್ತು ಗಲಾಟೆ ಮಾಡಿಕೊಂಡಿರಲಿಲ್ಲ.ಸಂಸಾರ ಅಂದ ಮೇಲೆ ಅಲ್ಲಿ ಗಂಡ ಹೆಂಡತಿ ಇಬ್ಬರು ಸಮಾನವಾಗಿ ಬಂಡಿ ಎಳಿಬೇಕು. ಇಲ್ಲಿ ಒಬ್ಬರು ಸ್ವಲ್ಪ ಯಡವಟ್ಟು ಮಾಡಿದ್ರು ಅನಾಹುತವೇ ನಡೆದು ಹೋಗುತ್ತೆ. ಈ ಸಂಸಾರದಲ್ಲಿ ಆ ದುರಂತ ನಡೆಯೋದಕ್ಕೆ ಕಾರಣವಾಗಿದ್ದು ಇದೇ ತಪ್ಪು ಹೆಜ್ಜೆಗಳು.

ಸುಷ್ಮಾ ಅದ್ಯಾವಾಗ ಮತ್ತೆ ಸೋಷಿಯಲ್ ಮೀಡಿಯಾಗೆ ಎಂಟ್ರಿಕೊಟ್ಲೋ ಆಗ ಮತ್ತೆ ಇವಳನ್ನ ಅರೆಸಿ ಒಂದಷ್ಟು ಮೆಸೆಜ್ ಗಳು ಬರೋದಕ್ಕೆ ಶುರುವಾಗಿತ್ತು. ಒಂದಷ್ಟು ದಿನ ರಾಜು ಕೂಡಾ ಇದನ್ನ ಸೀರಿಯಲ್ ಆಗಿ ತೆಗೆದುಕೊಂಡಿರಲಿಲ್ಲ. ಆದ್ರೆ ಹುಡುಗಿ ಚೆನ್ನಾಗಿದ್ದಾಳೆ ಅನ್ನೋ ಕಾರಣಕ್ಕೆ ಬರ್ತಾ ಬರ್ತಾ ಮಸೆಜ್ ಗಳ ಸಂಖ್ಯೆ ಕೂಡಾ ಜಾಸ್ತಿಯಾಗ್ತಾ ಹೋಯ್ತು. ಅದ್ಯಾಕೋ ಇವಳು ಒಳ್ಳೇ ಲೈಫ್ ಅನ್ನ ಬಿಟ್ಟು ಬೇರಿನ್ನೇನನ್ನೋ ಹುಡ್ಕೊಂಡು ಹೊರಟಿದ್ದಾಳೆ ಅಂತ ಅವನಿಗೆ ಅನಿಸಿತ್ತು.ಅದಕ್ಕೆ ಹೆಂಡ್ತಿಗೆ ಒಂದೆರಡು ಸಾರಿ ನಿಧಾನವಾಗಿ ಅದನ್ನ ಅರ್ಥ ಆಗುವ ಹಾಗೆ ಹೇಳಿದ್ದ. ಆದ್ರೆ ಅದ್ಯಾಕೋ ಸುಷ್ಮಾ ಅವನ ಮಾತನ್ನ ಕಿವಿ ಮೇಲೆ ಹಾಕಿಕೊಳ್ಳಲೇ ಇಲ್ಲ.

ಅವನಿಗೆ ಇವಳ ವರ್ತನೆಯಿಂದ ಇನ್ನಷ್ಟು ಕೋಪ ಬರೋದಕ್ಕೆ ಶುರುವಾಯ್ತು. ಪ್ರೀತಿಸಿ ಮದುವೆಯಾಗಿದ್ದೀನಿ. ಆದ್ರೆ ಇವಳು ನೋಡಿದ್ರೆ ಈಗ ದಾರಿ ತಪ್ಪುತ್ತಿದ್ದಾಳೆ ಅಂತ ಅಂದುಕೊಂಡಿದ್ದ. ಅಲ್ಲದೆ ಈ ವಿಷಯವನ್ನ ಯಾರಿಗೂ ಹೇಳೋ ಹಾಗೆ ಬೇರೆ ಇರಲಿಲ್ಲ. ಹೀಗಾಗಿ ಅವನು ಈ ವಿಚಾರದಲ್ಲಿ ಸ್ವಲ್ಪ ಖಾರವಾಗಿಯೇ ನಡೆದುಕೊಂಡಿದ್ದ. ಮೊದ ಮೊದಲಿಗೆ ಇದು ಸಣ್ಣ ಜಗಳವಾಗಿತ್ತು. ಆದ್ರೆ ಬರ್ತಾ ಬರ್ತಾ ಇದೇ ವಿಚಾರಕ್ಕೆ ಮನೆಯಲ್ಲಿ ಜೋರಾಗಿ ಜಗಳವಾಗೋದಕ್ಕೆ ಶುರುವಾಯ್ತು. ನಂತ್ರ ಇನ್ನು ಇವಳನ್ನ ಸುಮ್ಮನೆ ಬಿಟ್ರೆ ಸರಿಯಾಗೋದಿಲ್ಲ ಅನ್ನೋ ಕಾರಣಕ್ಕೆ ಕೊಲೆ ಮಾಡೋ ಪ್ಲಾನ್ ಮಾಡಿದ್ದ. ಅದಕ್ಕಾಗಿ ಒಂದು ತಿಂಗಳಿನಿಂದ ಸ್ಕೆಚ್ ಹಾಕ್ಕೊಂಡಿದ್ದ.

ಒಂದು ದಿನ ಆಕೆ ನಾನು ಹಾಸನದಲ್ಲಿರೋ ನನ್ನ ಫ್ರೆಂಡ್ ಮನೆಗೆ ಹೋಗಿ ಬರ್ತೀನಿ ಅಲ್ಲಿಗೆ ಬಿಟ್ಟು ಬಾ ಅಂತ ಹೇಳಿದ್ಲು. ಆಗ ಇದೇ ಸರಿಯಾದ ಸಮಯ ಅಂತ ಅವಳನ್ನ ಮುಗಿಸೋದಕ್ಕೆ ಯೋಚನೆ ಮಾಡಿದ. ಅಲ್ಲದೆ ಅದಕ್ಕಾಗಿ ತಾನು ಮೊದಲೇ ಫಿಕ್ಸ್ ಮಾಡಿಟ್ಟಿದ್ದ ಜಾಗಕ್ಕೆ ಕರ್ಕೊಂಡು ಹೋಗೋದಕ್ಕೆ ಯೋಚನೆ ಮಾಡಿದ. ಬೆಂಗಳೂರಿನಿಂದ ಸ್ವಲ್ಪ ದೂರದಲ್ಲಿರೋ ಕುಂಬಳಗೋಡಿನ ಅರಣ್ಯ ಪ್ರದೇಶದಲ್ಲಿ ಆತ ಒಮ್ಮೆ ತನ್ನ ಸ್ನೇಹಿತರ ಜೊತೆ ಎಣ್ಣೆ ಹೊಡೆದಿದ್ದ. ಅದೇ ಪ್ರದೇಶದಲ್ಲಿ ಆಕೆಯನ್ನ ಕೊಂದ್ರೆ ಯಾರಿಗೂ ಅನುಮಾನ ಬರೋದಿಲ್ಲ ಅಂತ ಅಂದುಕೊಂಡಿದ್ದ. ಅದು ನೀಲಗಿರಿ ಮರಗಳೇ ಇರೋ ಪ್ರದೇಶ. ಅಲ್ಲದೆ ಈ ಕಾಡಲ್ಲಿ ಜನ ಕೂಡಾ ಜಾಸ್ತಿಯಿರೋದಿಲ್ಲ.

ಹೀಗಾಗಿ ಅಲ್ಲಿಗೆ ಕರ್ಕೊಂಡು ಹೋಗಿದ್ದ. ಹಾಸನಕ್ಕೆ ಹೋಗೋಣ ಅಂತ ಅಲ್ಲಿ ಇಲ್ಲಿ ತಿರುಗಿಸಿ ನಂತ್ರ ಅರಣ್ಯಕ್ಕೆ ಕರ್ಕೊಂಡು ಹೋಗಿದ್ದ.ನಂತ್ರ ಅರಣ್ಯ ಪ್ರದೇಶಕ್ಕೆ ಹೋಗಿ ಮೂತ್ರ ವಿಸರ್ಜನೆಗೆ ಅಂತ ಗಾಡಿ ನಿಲ್ಲಿಸಿದ್ದಾನೆ. ಆಗ ಆತ ಇದೇ ವಿಚಾರಕ್ಕೆ ಅವಳೊಂದಿಗೆ ಮಾತು ಆರಂಭಿಸಿದ್ದಾನೆ. ಆಗ ಇಬ್ಬರಿಗೂ ಮಾತಿಗೆ ಮಾತು ಬೆಳದಿದೆ. ಆಗ ಸಿಟ್ಟಲ್ಲಿ ಆಕೆಯ ಕೆನ್ನೆಗೆ ಬಲವಾಗಿ ಬಾರಿಸಿದ್ದ. ಆ ಹೊಡೆತಕ್ಕೆ ಆಕೆ ಅಲ್ಲೇ ಬಿದ್ದುಬಿಟ್ಟಿದ್ಲು. ನಂತ್ರ ಆಕೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದ. ಬಾಡಿಯನ್ನ ಅಲ್ಲೇ ಬಿಟ್ಟು ಹೋದ್ರೆ ಯಾರಾದ್ರೂ ನೋಡ್ತಾರೆ ಅಂತ ಅಲ್ಲದೆ ಗುರುತು ಸಿಗಬಾರದು ಅನ್ನೋ ಕಾರಣಕ್ಕೆ ಬೆಂಕಿ ಹಾಕಿ ಸುಡೋದಕ್ಕೆ ಯೋಚಿಸಿದ್ದ.

ನಂತ್ರ ಅಲ್ಲೇ ಇರೋ ಒಣ ಕಟ್ಟಿಗೆಗಳನ್ನ ಅವಳ ಮೇಲೆ ಹಾಕಿ ಗಾಡಿಯಿಂದ ಪೆಟ್ರೋಲ್ ತೆಗೆದು ಬೆಂಕಿ ಹಾಕಿದ್ದ. ಅಷ್ಟೊತ್ತಿಗೆ ಮಗು ಕೂಡಾ ಅಳುತ್ತಿತ್ತು. ಇನ್ನು ಮಗುವನ್ನ ಯಾಕೆ ಕರ್ಕೊಂಡು ಹೋಗಬೇಕು ಅಂತ ಯೋಚಿಸಿ ಆ ಮಗುವನ್ನು ಅಲ್ಲೇ ಸಾಯಿಸಿ ಬ್ಯಾಗ್ ಒಂದರಲ್ಲಿ ಹಾಕಿ ಎಲ್ಲೆ ಎಸೆದು ಪರಾರಿಯಾಗಿದ್ದ.ಕೆಲವು ದಿನಗಳ ನಂತ್ರ ಅಲ್ಲಿ ವಾಚಮನ್ ಒಬ್ಬರು ಬೀಟ್ ಗೆ ಹೋದಾಗ ಆಕೆಯ ಬಾಡಿ ಸಿಕ್ಕಿತ್ತು. ನಂತ್ರ ಬಿಡದಿ ಪೊಲೀಸ್ರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ರು. ಆಗ ಸುಷ್ಮಾಳ ಪೋಷಕರು ಇವಳು ನಮ್ಮ ಮಗಳೇ ಅಂತ ಗುರುತು ಪತ್ತೆ ಮಾಡಿದ್ರು.

ನಂತ್ರ ಒಂದು ವಾರದಿಂದ ಮನೆಯವರಿಂದ ತಪ್ಪಿಸಿಕೊಂಡು ಓಡಾಡ್ತಿದ್ದ ರಾಜು ಮೇಲೆ ಪೊಲೀಸ್ರಿಗೆ ಅನುಮಾನ ಬಂದಿತ್ತು. ನಂತ್ರ ಅವನನ್ನ ಕರ್ಕೊಂಡು ಬಂದು ವಿಚಾರಣೆ ನಡೆಸಿದಾಗ ಆತ ಮೊದಲಿಗೆ ಒಪ್ಪಿಕೊಳ್ಳಲೇ ಇಲ್ಲ. ಆದ್ರೆ ಪೊಲೀಸ್ರು ಅದ್ಯಾವಾಗ ಲಾಠಿಯ ರುಚಿ ತೋರಿಸಿದ್ರೋ ಆಗ ಆತ ನಿಜ ಬಾಯಿಬಿಟ್ಟಿದ್ದಾನೆ. ನಾನೇ ನನ್ನ ಹೆಂಡತಿ ಮಗವನ್ನ ಕೊಲೆ ಮಾಡಿದ್ದೀನಿ ಅಂತ ಒಪ್ಪಿಕೊಂಡಿದ್ದ. ಆದ್ರೆ ಅರಣ್ಯ ಪ್ರದೇಶದಲ್ಲಿ ಮಗುವಿನ ಶವ ಪೊಲೀಸ್ರಿಗೆ ಸಿಗಲಿಲ್ಲ.ಆ ಪ್ರದೇಶದಲ್ಲಿ ಚಿರತೆ ಹಾವಳಿ ಇರೋದ್ರಿಂದ ಚಿರತೆಯೋ ಇಲ್ಲ ನಾಯಿಯೋ ಆ ಮಗುವಿನ ಶವವನ್ನ ಎತ್ಕೊಂಡು ಹೋಗಿರಬಹುದು ಅಂತ ಅಂದುಕೊಳ್ಳಲಾಗಿದೆ.

ಅಲ್ಲಿಗೆ ಬಿಡದಿ ಪೊಲೀಸ್ರು ಎರಡು ಕೊಲೆಯ ಆರೋಪಿಯನ್ನ ಬಂಧಿಸಿದ್ರು. ಅಲ್ಲದೆ ಕಾಡಿನಲ್ಲಿ ಸಿಕ್ಕಿದ್ದ ಅಪರಿಚಿತ ಮಹಿಳೆಯ ಶವದ ಕೇಸ್ ಗೆ ಮುಕ್ತಿ ಕೊಡಿಸಿದ್ರು. ರಾಜು ಮತ್ತು ಸುಷ್ಮಾಗೆ ತಮ್ಮ ಜೀವನವನ್ನ ಚೆನ್ನಾಗಿ ಕಟ್ಟಿಕೊಳ್ಳೋದಕ್ಕೆ ಸಾವಿರ ಅವಕಾಶಗಳಿತ್ತು. ಆದ್ರೆ ಅವರಿಗೆ ಬದುಕಿಗಿಂತ ಆತುರವೇ ಮುಖ್ಯವಾಗಿತ್ತು. ಅವರಿಬ್ಬರು ಕೂತ್ಕೊಂಡು ಮಾತನಾಡಿ ಇಂತಹ ತಪ್ಪುಗಳನ್ನ ನಾವು ಮಾಡಬಾರದು ಅಂತ ನಗು ಮುಖದಲ್ಲಿ ಕಾಂಪ್ರಮೈಸ್ ಮಾಡ್ಕೊಂಡಿದ್ರೆ ಇವತ್ತು ಈ ಸಂಸಾರ ನಿಜಕ್ಕು ಚೆನ್ನಾಗಿರ್ತಿತ್ತು. ಆದ್ರೆ ಅವರ ಹುಚ್ಚಾಟ, ಆತುರ ಎಲ್ಲವೂ ಇಡೀ ಬದುಕನ್ನ ಬಲಿತೆಗೆದುಕೊಂಡಿದೆ. ಪ್ರೀತಿ ಮಾಡೋದು ದೊಡ್ಡದಲ್ಲ ಅದನ್ನ ಉಳಿಸಿಕೊಳ್ಳೋದು ಇದೆಯಲ್ಲ ಅಂದ ದೊಡ್ಡದು. ಈ ವಿಷಯದಲ್ಲಿ ನಿಜಕ್ಕೂ ಇವರಿಬ್ಬರು ಸೋತು ಹೋಗಿದ್ರು.

LEAVE A REPLY

Please enter your comment!
Please enter your name here