Home KARNATAKA ಅವರೆಲ್ಲಾ ಶವಗಳೊಂದಿಗೇ ಮಾತಾಡ್ತಾರೆ ,ಉಣ್ತಾರೆ ,ಮಲಗ್ತಾರೆ ! ಹೆಣಕ್ಕೆ ಸ್ನಾನ ಮಾಡಿಸ್ತಾರೆ ,ಬಟ್ಟೆ ತೊಡಿಸ್ತಾರೆ...

ಅವರೆಲ್ಲಾ ಶವಗಳೊಂದಿಗೇ ಮಾತಾಡ್ತಾರೆ ,ಉಣ್ತಾರೆ ,ಮಲಗ್ತಾರೆ ! ಹೆಣಕ್ಕೆ ಸ್ನಾನ ಮಾಡಿಸ್ತಾರೆ ,ಬಟ್ಟೆ ತೊಡಿಸ್ತಾರೆ , ಸಂಭ್ರಮಿಸ್ತಾರೆ !! ಗೋರಿಯಿಂದ ಹೊರಬಂದ ಮೃತದೇಹಗಳಿಗೆ ಜೀವ ಬರುತ್ತಾ.?!

1211
0
SHARE

ಇದು ನಿಜಕ್ಕೂ  ನೀವೆಂದೂ ಕೇಳಿರದ, ನೋಡಿರದ ವಿಭಿನ್ನವಾದ  ನೈಜತೆಯ ಕಥಾನಕ.  ಯಾಕೆಂದ್ರೆ ಸಾಮಾನ್ಯವಾಗಿ ಸತ್ತವರನ್ನ ಅಂತ್ಯ ಸಂಸ್ಕಾರ ಮಾಡೋ ಸಂಸ್ಕೃತಿಯನ್ನೇ ನಾವು ಬಹುತೇಕ ನೋಡಿದ್ದೇವೆ.ಅಷ್ಟೆಅಲ್ಲ ಇಂತಹದೊಂದು ವಿಚಿತ್ರ ಆಚರಣೆ ಇಂದಿನ ಅಧುನಿಕ ಯುಗದಲ್ಲೂ ಜೀವಂತವಾಗಿದ್ಯಾ ಅನ್ನೋ ಪ್ರಶ್ನೆ ಮೂಡೋದು ಸತ್ಯ. ಇಷ್ಟಕ್ಕೂ ಇಲ್ಲಿನವರು ಯುಗ ಯುಗಗಳಿಂದ ಆಚರಿಸಿಕೊಂಡು ಬರುತ್ತಿರೋ ವಿಚಿತ್ರ ಪದ್ದತಿಯಾದ್ರೂ ಎಂತಹದ್ದು ಅನ್ನೋ ಕುತೂಹಲಕಾರಿ ಪ್ರಶ್ನೆಗೆ ಉತ್ತರವೇ ಮೃತದೇಹಗಳನ್ನ ಅಂತ್ಯ ಸಂಸ್ಕಾರ ಮಾಡದೆ ಇಡೋದು.

ಅಷ್ಟೆಅಲ್ಲ  ಈ ಮೃತದೇಹಗಳಿಗೆ ನೂತನ ವಸ್ತ್ರಗಳನ್ನ ಧರಿಸಿ, ಸಂಭ್ರಮಾಚರಣೆ ಮಾಡೋದು.ಹೌದು.. ಇಲ್ಲಿರುವ ಜನರು, ಸಾವನ್ನಪ್ಪಿರೋ ಮೃತದೇಹಗಳನ್ನ ವಾರಗಟ್ಟಲೇ ವರ್ಷಗಟ್ಟಲೇ ಶವ ಪೆಟ್ಟಿಗೆಗಳಲ್ಲಿ ಸಂಸ್ಕರಣೆ ಮಾಡ್ತಾರೆ. ಅಷ್ಟೆಅಲ್ಲ  ಇಲ್ಲಿನವರು ಶವಗಳಿಗಾಗಿ ನಡೆಸೋ ವಿಚಿತ್ರ  ಆಚರಣೆ ನಿಜಕ್ಕೂ ಬೆಚ್ಚಿಬೀಳಿಸುವಂತಿರುತ್ತೆ.  ಅದ್ಯಾವ ಕಾರಣಕ್ಕೆ ಇಲ್ಲಿನವರು ಇಂತಹ ಆಚರಣೆಯನ್ನ ಪಾಲಿಸಿಕೊಂಡು ಬಂದಿದ್ದಾರೆ.? ಇದರಿಂದ ಎಂತಹ ಫಲ ಪ್ರಾಪ್ತಿಯಾಗುತ್ತೆ.? ಅನ್ನೋ ಹತ್ತು ಹಲವು ಪ್ರಶ್ನೆಗಳು ಈಗಾಗಲೇ ನಿಮ್ಮಲ್ಲಿ ಹುಟ್ಟಿಕೊಂಡಿರುತ್ತೆ.

ಇದು ವಿಚಿತ್ರ ಅನ್ನಿಸಿದ್ರು ಇದುವೇ ಸತ್ಯ. ನೀವು ನೋಡುತ್ತಿರೋ ಈ ದೃಶ್ಯಗಳಲ್ಲಿ ಕಾಣುತ್ತಿರೋದು ಯಾವುದೇ ಮಣ್ಣಿನಿಂದ, ಅಥವಾ ಮರದಿಂದ ಮಾಡಿರೋ ಬೊಂಬೆಗಳಲ್ಲ. ಹೊಸ ವಸ್ತ್ರಗಳನ್ನ ಧರಿಸಿ,  ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿರೋದು ಅಕ್ಷರಶಃ ಮೃತದೇಹಗಳು. ಏನಿದು ವಿಚಿತ್ರ ಅಂತೀರಾ. ಇದೇ ವೀಕ್ಷಕರೇ ಇಲ್ಲಿನವರು ಸತ್ತವರನ್ನೂ ಕೂಡ ತಮ್ಮಂತೆ ನೋಡಿಕೊಳ್ಳುತ್ತಿರೋ  ವಿಚಿತ್ರ ಆಚರಣೆ. ಇವರನ್ನ ಹೀಗೆ ಇಟ್ಟು ವಾರಗಟ್ಟಲೇ, ವರ್ಷಗಟ್ಟಲೇ ನೋಡಿಕೊಳ್ತಾರೆ. ಅಷ್ಟೆಅಲ್ಲ ಅಂತವ್ರಿಗಾಗಿ ವಿಭಿನ್ನವಾದ ಆಚರಣೆಯನ್ನು ಕೂಡ ನಡೆಸುತ್ತಾರೆ.

ವಿಚಿತ್ರ ಅನ್ನಿಸೋ ಇಲ್ಲಿನವರ ಆಚರಣೆ ವರ್ಷಕ್ಕೊಮ್ಮೆ ಮಾಡೋದು ಸಹಜ. ವ್ಯಕ್ತಿ ಸಾವನ್ನಪ್ಪಿದ ವರ್ಷಕ್ಕೆ ಸರಿಯಾಗಿ ಅವರನ್ನ ವಿಶೇಷವಾದ  ರೀತಿಯಲ್ಲಿ ಸಿಂಗಾರ ಮಾಡ್ತಾರೆ. ಹಾಗೇ ಸಿಂಗಾರ ಮಾಡೋ ವೇಳೆ ಇನ್ನು ಸಂಸ್ಕರಣೆ ಮಾಡಿಟ್ಟಿರೋರನ್ನ ಕೂಡ ಹೊರ ತೆಗೆದು, ಅವರಿಗೂ ಸಿಂಗಾರ ಮಾಡಿ, ಜೀವಂತ ಮನುಷ್ಯರಂತೆ ನೋಡಿಕೊಳ್ತಾರೆ. ಇನ್ನು ಮೃತ ಪಟ್ಟವರಿಗಾಗಿ ನಿರ್ಮಿಸೋ ಚಟ್ಟವನ್ನೇ ಅದ್ದೂರಿಯಾಗಿ ಸಿಂಗಾರ ಮಾಡ್ತಾರೆ. ಶವವನ್ನಿಡೋ ಪೆಟ್ಟಿಗೆಯನ್ನೂ ಕೂಡ ವಿವಿಧ ಬಣ್ಣದ ವಸ್ತ್ರಗಳಿಂದ ಅಲಂಕಾರ ಮಾಡ್ತಾರೆ. ಹೀಗೆ ಅಲಂಕಾರಿಸಿದ ಪೆಟ್ಟಿಗೆಯನ್ನ ಸಿಂಗಾರ ಮಾಡಿರೋ ಬಿದಿರಿನ ಚಟ್ಟದ ಮೇಲೆ ಹೊತ್ತು ತರಬೇಕಾದ್ರೆ, ಕೋಣಗಳನ್ನು ಕೂಡ ಜೊತೆಯಲ್ಲಿ ತರುತ್ತಾರೆ.

ಇನ್ನು ಶವಗಳನ್ನ ಸಂಸ್ಕರಣೆ ಮಾಡಿಟ್ಟವರು ಕೂಡ ಆ ಒಂದು ವಿಶೇಷವಾದ ದಿನ ಹೊರತೆಗದು  ಅವುಗಳನ್ನ ಸಿಂಗಾರ ಮಾಡ್ತಾರೆ. ಹೀಗೆ ಸಿಂಗಾರ ಮಾಡಿದ ಶವಗಳನ್ನ ಹೊತ್ತು ತರೋವಾಗ ಕೋಣಗಳನ್ನ ಕೂಡ ಎಳೆದು ತರುತ್ತಾರೆ. ತಂದಂತಹ ಕೋಣಗಳನ್ನ ಎಲ್ಲಾ ಪೂಜಾ ವಿಧಾನಗಳನ್ನ ಮುಗಿಸಿದ ನಂತ್ರ ಬಲಿ ಕೊಡ್ತಾರೆ. ಹೀಗೆ ಬಲಿ ಕೋಡೋಕು ಕೂಡ ಒಂದು ಕಾರಣವಿದೆಯಂತೆ. ಅದೇನಾಪ್ಪ ಅಂದ್ರೆ ಸತ್ತವರು ಸ್ವರ್ಗಕ್ಕೆ ಹೋಗಲು ಬೇಕಾದ ವಾಹನಗಳೇ ಈ ಕೋಣಗಳೆಂತೆ. ಕೋಣಗಳನ್ನ ಬಲಿಕೊಟ್ರೆ, ಮಡಿದವರು ಸ್ವರ್ಗಕ್ಕೆ ಹೋಗ್ತಾರೆ ಅನ್ನೋ ನಂಬಿಕೆ ಅವರದ್ದು.

ಇನ್ನು ಹಲವು ಮೃತದೇಹಗಳನ್ನ ಒಮ್ಮೆಲೆ ಇಲ್ಲಿ ತಂದು ಅವರಿಗಾಗಿ ವಿಶೇಷವಾದ ಆಚರಣೆಗಳನ್ನ ನಡೆಸುತ್ತಾರೆ. ಹೀಗೆ ಒಂದೇ ಕಡೆ ತರುವಂತಹ ಶವಗಳನ್ನಿಟ್ಟು ಬಂದಂತಹ ಅಥಿತಿಗಳ ಮುಂದೆ  ದೈವ ಸಮಾನದಂತೆ ಪೂಜಿಸಿ ಕುಡಿಯಲು ವೈನೂ, ತಿನ್ನಲು ಆಹಾರವನ್ನ ನೀಡ್ತಾರೆ.  ಅನಂತ್ರ ಕೆಲವರು ಶವಗಳಿಗಾಗೀಯೇ ಪ್ರತ್ಯೇಕವಾದ ಕೋಣೆಗಳನ್ನ ನಿರ್ಮಿಸುತ್ತಾರೆ. ಇನ್ನು ಕೆಲವರು  ಬೆಟ್ಟಗಳಲ್ಲಿ ಕಲ್ಲು ಬಂಡೆಗಳನ್ನ ಕೊರೆದು ನಿರ್ಮಿಸೋ ಗವಿಗಳಲ್ಲಿ ಸಂಸ್ಕರಣೆ ಮಾಡಿ ಅವರ ದಿನನಿತ್ಯದ ಬಳಕೆಯ ವಸ್ತುಗಳನ್ನ ಅವರೊಂದಿಗೆ ಇಡುತ್ತಾರೆ.

ಹೀಗೆ ಶವಗಳನ್ನ ಕಲ್ಲು ಬಂಡೆಗಳ ಗವಿಗಳ್ಲಿಟ್ಟ ನಂತ್ರ ಅದೇ ಜಾಗದಲ್ಲಿ ಮರದಲ್ಲಿ ಮಾಡಿರೋ ಅವರ ಪ್ರತಿಮೆಗಳನ್ನ ಗುರುತಿಗಾಗಿ ಪಕ್ಕದಲ್ಲೇ ಇಡುತ್ತಾರೆ.  ಇಂತಹ ವಿಚಿತ್ರವಾದ ಆಚರಣೆಯನ್ನ ನೋಡಿದ್ರೆ ನಿಜಕ್ಕೂ ಅಚ್ಚರಿ ಮೂಡೋದು ಖಚಿತ. ಆದ್ರೆ ಅದಕ್ಕೂ ಮೀರಿದ ಭಯಾನಕ ವೃತ್ತಾಂತವೊಂದು ಈ ಆಚರಣೆಯ ಹಿಂದಿದೆ.ಕೆಲವೊಂದು ವಿಚಿತ್ರ ಆಚರಣೆಗಳು ಭಯಾನಕವಾದ ಸಂಪ್ರದಾಯಗಳೇ ಜಗತ್ತಿನಲ್ಲಿರೋ ಒಂದು ಭಾಗದ ಜನರಿಂದ ಮತ್ತೊಂದು ಭಾಗದ ಜನರನ್ನ ಬೇರ್ಪಡಿಸುತ್ತಿದೆ. ಇಂತಹ ವಿಲಕ್ಷಣ ಆಚರಣೆಗೆ, ನಡುಕ ಹುಟ್ಟಿಸೋ ಸಂಪ್ರದಾಯಕ್ಕೆ ಪ್ರತೀಕವೇ ಇಲ್ಲಿನವರು ಮೃತದೇಹಗಳಿಗಾಗಿ ಆಚರಿಸೋ ಈ ವಿಭಿನ್ನವಾದ ಜಾತ್ರೆ.

ಇಂತಹದೊಂದು ಸಂಭ್ರಮವನ್ನ ಆಚರಿಸೋದು ಅಂದ್ರೆ ಇಲ್ಲಿನವರಿಗೆ ಅದು ಮಹಾ ಹಬ್ಬವೇ ಸರಿ.  ನಾವೆಲ್ಲ ಎಷ್ಟು ದಿನಗಳ ಕಾಲ ಸಾವನ್ನಪ್ಪಿದವರನ್ನ ಮನೆಯಲ್ಲೇ ಇಟ್ಟುಕೊಳ್ತೀವಿ.. ಒಂದು ದಿನ, ಎರಡು ದಿನ, ಅಬ್ಬಾಬ್ಬಾ ಅಂದ್ರೆ  ಮೂರು ದಿನ. ದೂರದಲ್ಲಿರೋ ಮಗನೋ, ಅಥವಾ ಮಗಳೋ ಬರೋವರೆಗೂ, ಮನೆಯಲ್ಲಿ ಇಟ್ಟುಕೊಳ್ಳೋದು ನೋಡಿದ್ದೀವಿ.. ಕೇಳಿದ್ದೀವಿ. ಆದ್ರೆ ಇಲ್ಲಿ ಮಾತ್ರ ಶವಗಳನ್ನ  ವಾರಗಟ್ಟಲೇ ಮನೆಯಲ್ಲೇ ಇಟ್ಟುಕೊಳ್ತಾರೆ. ಅಷ್ಟೆಅಲ್ಲ ಮೃತಪಟ್ಟ ದೇಹಗಳನ್ನ ಮನೆಯ ಸದಸ್ಯರಂತೆ ನೋಡಿಕೊಳ್ತಾರೆ. ಅವರ ಬಟ್ಟೆ ಬದಲಿಸೋದ್ರಿಂದ ಹಿಡಿದು,  ಅವರಿಗೆ ಆಹಾರ ನೀಡೋ ವರೆಗೂ ಎಲ್ಲ ವಿದಿಗಳನ್ನ ಮನೆಯಲ್ಲಿ ಮಾಡ್ತಾರೆ.

ಇದಿಷ್ಟೆಅಲ್ಲ  ಸತ್ತವರನ್ನ ಸುರಕ್ಷಿತವಾಗಿ ಸಂಸ್ಕರಣೆ ಮಾಡಿ ಮನೆಯಲ್ಲೇ ಇಟ್ಟುಕೊಂಡು ಅದರೊಂದಿಗೆ ಮಲಗ್ತಾರೆ. ಇನ್ನು ಮತ್ತೊಂದು ಕುತೂಹಲ ಸಂಗತಿ ಏನಾಪ್ಪ ಅಂದ್ರೆ, ಸತ್ತವರು ಇನ್ನು ಜೀವಂತವಾಗಿದ್ದು ಅವರು ನಿದ್ರಿಸುತ್ತಿದ್ದಾರೆ ಅನ್ನೋ ನಂಬಿಕೆ ಅವರದ್ದು. ಇದರೊಂದಿಗೆ ಮತ್ತೊಂದು ವಿಸ್ಮಯ ಸಂಗತಿ ಇದೆ. ಅದುವೇ ಹೆಣದ ಮುಂದೆ ಪ್ರತಿನಿತ್ಯ ಪ್ರಾರ್ಥನೆ ಮಾಡೋದು. ಹೀಗೆ ಮಾಡೋದ್ರಿಂದ ಸತ್ತವರು ಮತ್ತೆ ಬದುಕಿ ಬರ್ತಾರೆ ಅನ್ನೋದು ಅವ್ರ ವಿಶ್ವಾಸ.ಇನ್ನು ಹೀಗೆ ಮನೆಯಲ್ಲೇ ವಾರಗಟ್ಟಲೇ ಇಟ್ಟುಕೊಳ್ಳೋದ್ರಲ್ಲೂ ಭಿನ್ನತೆಯಿದೆ.

ಅದು ಕೂಡ ಅವರವರ ಆರ್ಥಿಕ ಸ್ಥಿತಿಯನ್ನ ಅವಲಂಬಿಸಿರುತ್ತೆ. ಆರ್ಥಿಕವಾಗಿ ಸದೃಡವಿಲ್ಲದವರು, ಒಂದು ಪದ್ದತಿ ಅನುಸರಿಸಿದ್ರೆ, ಆರ್ಥಿಕವಾಗಿ ಸದೃಡವಾಗಿರೋರು ಮತ್ತೊಂದು ರೀತಿಯ ಪದ್ದತಿ ಅನುಸರಿಸುತ್ತಾರೆ.ಜಗತ್ತಿನಾದ್ಯಂತವಿರೋ  ಬಡತನ ಅನ್ನೋ  ಕರಾಳ ಮುಖ ಇಲ್ಲೂ ಹೇರಳವಾಗಿದೆ. ಅದೇ ಕಾರಣಕ್ಕೆ ಸತ್ತವರನ್ನ ಸಂಸ್ಕರಣೆ ಮಾಡೋದ್ರಲ್ಲೂ ವಿಭಿನ್ನತೆ ಕಾಣುತ್ತದೆ. ಆರ್ಥಿಕವಾಗಿ ಸಬಲರಾದವರು ಹೆಣಗಳನ್ನ ಭದ್ರವಾಗಿ ಕಟ್ಟಿಟ್ಟು ಯಾವುದೇ ದುರ್ನಾತ ಬೀರದಂತೆ ಕಾಪಾಡುತ್ತಾರೆ.

ಅಲ್ಲದೇ ಅದರೊಂದಿಗೆ ಹಲವು ಕೆಮಿಕಲ್ಸ್ ಗಳನ್ನ ಬಳಸಿ ದೇಹ ಕೆಡದಂತೆ ನೋಡಿಕೊಳ್ತಾರೆ. ಆದ್ರೆ ಆರ್ಥಿಕ ಸ್ಥಿತಿಯಲ್ಲಿ ದುರ್ಬಲವಾಗಿರೋರು ಶವಗಳನ್ನ ಸಾವನ್ನಪ್ಪಿದವರ ಬಟ್ಟೆಗಳಿಂದ್ಲೇ ಸುತ್ತಿ ದುರ್ನಾತ ಬೀರದಂತೆ ಕಾಪಾಡಿಕೊಳ್ತಾರೆ.ಇನ್ನು ಮತ್ತೊಂದು ವಿಷಾದ ಸಂಗತಿ ಏನಾಪ್ಪ ಅಂದ್ರೆ ಕೋಣಗಳನ್ನ ತಂದು ಬಲಿ ಕೊಡದೆ ಸತ್ತವರನ್ನ  ಗವಿಗಳಲ್ಲಿ ಇಡೋದೇ ಇಲ್ವಂತೆ. ಆದ್ರೆ ಕೋಣಗಳನ್ನ ಖರೀದಿಸೋ ಶಕ್ತಿ ಎಲ್ಲರಿಗೂ ಇರೋಲ್ಲ. ಶ್ರೀಮಂತರು ಒಂದು ವೇಳೆ ಕೋಣಗಳನ್ನ ತರಿಸಿ, ಅವರ ಮನೆಯಲ್ಲಿ ಸತ್ತವರನ್ನ ಬಲಿ ಕೊಡೋಕೆ ಮುಂದಾದ್ರೆ ಆಗ ಬಡವರು ಕೂಡ ಅವರೊಂದಿಗೆ ಸೇರಿಕೊಂಡು ತಮ್ಮ ಮನೆಯಲ್ಲಿ ಮಡಿದವರನ್ನ ಅಂತೀಮ ಯಾತ್ರೆಗೆ ಕಳುಹಿಸಿಕೊಡ್ತಾರೆ.

ಅದುವೇ ಸೌಂದರ್ಯದ ಗಣಿಯಂತಿರೋ  ಇಂಡ್ಯೋನೆಷ್ಯಾದ ದ್ವೀಪಗಳಲ್ಲಿ ಒಂದಾದ ಟೋಜಾರಾದಲ್ಲಿ.ಈ  ಪ್ರಪಂಚದಲ್ಲಿ   ಒಂದೊಂದು  ಪ್ರದೇಶದಲ್ಲಿ   ಒಂದೊಂದು  ಆಚರಣೆ  ಭಿನ್ನ  ಎನ್ನಿಸುತ್ತದೆ.. ಅದನ್ನು  ನೋಡುವವರಿಗೆ, ಕೇಳುವವರಿಗೆ  ಮೂಡನಂಭಿಕೆ ಎಂದು ಎನ್ನಿಸದೇ ಇರದು. ಆದ್ರೆ ಯಾವ    ಪದ್ಧತಿಯೂ  ಮೂಡ ನಂಬಿಕೆಯನ್ನು   ಭಿತ್ತರಿಸುವುದಿಲ್ಲ.. ಎಲ್ಲವೂ  ಆಯಾ ಕಾಲಘಟ್ಟ, ಪ್ರದೇಶದಲ್ಲಿ  ಅನೂಚಾನವಾಗಿ  ನಡೆದು ಬಂದಿರುವ  ಪದ್ಧತಿಯಾಗಿರುತ್ತಷ್ಟೇ.  ನಂಬಿಕೆ- ಅಪನಂಬಿಕೆಯ ಪ್ರಶ್ನೆ ಇಲ್ಲಿ ಹುಟ್ಟುವುದೂ ಇಲ್ಲ.

LEAVE A REPLY

Please enter your comment!
Please enter your name here