Home Crime ಅವರ ಕಾಮದಾಹಕ್ಕೆ ಮಂಚವೇ ಸುಟ್ಟು ಹೋಯ್ತಲ್ಲಾ ಆ ರಾತ್ರಿ..!? ಮದುವೆಯಾಗಿ ಮಕ್ಕಳಿದ್ರೂ ಅವಳದು ಮಾಸದ ಬ್ಯೂಟಿ..!...

ಅವರ ಕಾಮದಾಹಕ್ಕೆ ಮಂಚವೇ ಸುಟ್ಟು ಹೋಯ್ತಲ್ಲಾ ಆ ರಾತ್ರಿ..!? ಮದುವೆಯಾಗಿ ಮಕ್ಕಳಿದ್ರೂ ಅವಳದು ಮಾಸದ ಬ್ಯೂಟಿ..! ಕಾಲೇಜು ದಿನಗಳಿಂದಲೇ ನಡೀತಿತ್ತು ಅವರಿಬ್ಬರ ಮಧ್ಯೆ ಲವ್ವಿಡವ್ವಿ.!?

3471
0
SHARE

ಮೊನ್ನೆ 18 ನೇ ತಾರೀಖು. ಸಂಜೆ ಸುಮಾರು ಆರೂ ಆರೂವರೆ ಗಂಟೆ ಸಮಯ. ಬಳ್ಳಾರಿಯ ಡಿ ಆರ್ ಪೊಲೀಸ್ ಕ್ವಾಟ್ರಸಲ್ಲಿ ಇದ್ದಕ್ಕಿದಂತೆ ದಟ್ಟ ಹೊಗೆ ಕಾಣಿಸಿಕೊಂಡಿತ್ತು. ಏನಾಯ್ತು ಅಂತ ಅಲ್ಲಿನ ಸಿಬ್ಬಂದಿ ಹಾಗೂ ಅಕ್ಕಪಕ್ಕದ ಕ್ವಾಟ್ರಸ್ ನವರು ಬಂದು ನೋಡಿದಾಗ ಹೊಗೆಯಾಡುತ್ತಿದ್ದ ಮನೆಯೊಂದರಲ್ಲಿ ಬೆಂಕಿ ಧಗಧಗ ಹೊತ್ತಿ ಉರಿದಿತ್ತು.ಡಿಆರ್ ಪೊಲೀಸ್ ಕ್ವಾಟ್ರಸ್ನ ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ಬಿದ್ದಿತ್ತು. ಕೂಡಲೇ ಫೈಯರ್ ಕಂಟ್ರೋಲ್ ಗೆ ಕರೆ ಮಾಡಿ ಕರೆಸಿ ಬೆಂಕಿಯನ್ನ ಆರಿಸಲಾಯ್ತು. ಆಗ ಅಲ್ಲೇ ಪಕ್ಕದಲ್ಲೇ ಕೂತಿದ್ದ ಹೆಣ್ಮಗಳೊಬ್ಬಳು ಕಂಠಪೂರ್ತಿ ಕುಡಿದು ಮತ್ತಿನ ನಶೆಯಲ್ಲಿ ಪೊಲೀಸರ ಜೊತೆಯೇ ಜಗಳಕ್ಕೆ ಇಳಿದುಬಿಟ್ಟಿದ್ಳು…

ಈಕೆ ಪೊಲೀಸ್ ಪೇದೆಯೊಬ್ಬರ ಧರ್ಮಪತ್ನಿ. ಪೊಲೀಸ್ ಕುಡಿದ ಮತ್ತಲ್ಲಿ ಏನೇನೋ ಮಾತಾಡ್ತಾ ಅಲ್ಲಿದ್ದವರ ಮೇಲೆಯೇ ಅವಾಜ್ ಹಾಕ್ತಾ ಇದ್ದ ಪೊಲೀಸಪ್ಪನ ಈ ಹೆಂಡ್ತಿ ಎಲ್ಲೂ ಕದಲದೇ ಅಲ್ಲೇ ಠಿಕಾಣಿ ಹೂಡಿಬಿಟ್ಟಿದ್ದಳು. ಕ್ವಾಟ್ರಸ್ ಅಂದ್ಮೇಲೆ ಪೊಲೀಸ್ರೂ, ಅವರ ಫ್ಯಾಮಿಲಿ ಇದ್ದೇ ಇರುತ್ತೆ ಅನ್ನಬಹುದು. ಆದ್ರೆ.. ಅದು ಈಕೆಯ ಮನೆಯೂ ಅಲ್ಲಾ, ಬೆಂಕಿ ಬಿದ್ದಿದ್ದು ಈಕೆಯ ಮನೆಗಂತೂ ಅಲ್ಲವೇ ಅಲ್ಲ. ಬದಲಾಗಿ ವೈರ್ ಲೆಸ್ ಡಿವಿಷನಿನ ಇನ್ಸ್ಪೆಕ್ಟರ್ ಈ ಕಿರಣ್ ಸಾಮಾಟ್ರ್ ಮನೆಗೆ.ಪೊಲೀಸ್ ಕ್ವಾಟ್ರಸ್ ನಲ್ಲಿರೋ ಇನ್ಸ್ ಪೆಕ್ಟರ್ ಕಿರಣ್ ಸಾಮ್ರಾಟ್ ಮನೆಗೆ ಬೆಂಕಿ ಬಿದ್ದಿದ್ದೇನೋ ಸರಿ…

ಆದ್ರೆ, ಆ ಮನೆಗೆ ಸಂಬಂಧವೇ ಇಲ್ಲದ ಪೊಲೀಸ್ ಪೇದೆಯೊಬ್ಬರ ಹೆಂಡ್ತಿ ಯಾಕೆ ಆ ಮನೆಯಲ್ಲಿದ್ಳು.. ಕಂಠಪೂರ್ತಿ ಕುಡಿದು ಪೊಲೀಸ್ರ ಜೊತೆ ಫೈಟಿಂಗಿಗೆ ಇಳಿದಿದ್ಯಾಕೆ.. ಅಂತ ನೋಡಿದಾಗ.. ಆ ಬೆಂಕಿಯಲ್ಲಿ ಕಂಡಿದ್ದು ಇನ್ಸ್ ಪೆಕ್ಟರ್ ಕಿರಣ್ ಸಾಮ್ರಾಟ್ ಹಾಗೂ ಈ ಹೆಣ್ಣಿನ ನಡುವಿನ ಅನೈತಿಕಥೆಯ ನೆರಳು ಕಣ್ರೀ. ಅಥಾರ್ತ್.. ಪೊಲೀಸ್ ಪೇದೆಯ ಹೆಂಡ್ತಿ ಹಾಗೂ ಇನ್ಸ್ ಪೆಕ್ಟರ್ ಕಿರಣ್ ಸಾಮ್ರಾಟ್ ನ ಹಸಿಬಿಸಿ ಅಕ್ರಮ ಸಂಬಂಧ. ಅಂದ ಹಾಗೆ..  ಕತ್ತಲಲ್ಲಿ ಪೊಲೀಸಪ್ಪನ ಹೆಂಡ್ತಿಯ ಮುಖಾರವಿಂದ ಸರಿಯಾಗಿ ಕಾಣ್ತಿಲ್ಲ ಅನ್ಸುತ್ತೆ.. ಇಗೋ ನೋಡಿ ಆಕೆಯ ಬ್ಯೂಟಿಯನ್ನ.ನೋಟದಲ್ಲೇ ಕಣ್ಣು ಕುಕ್ಕೋ ಚೆಲುವು ಈಕೆಯದು…

ಮದ್ವೆಯಾಗಿ ಮಕ್ಕಳಿದ್ರೂ ಮಾಸದ ಸೌಂದರ್ಯ. ಒಂದ್ಸಾರಿ ನೋಡಿದ್ರೆ ಮತ್ತೆ ಮತ್ತೆ ಕಣ್ಣೋಟ ಈಕೆಯತ್ತ ಹೋಗದೇ ಇರದು. ತೆಳಗ್ಗೆ ಬೆಳಗ್ಗೆ ದಂದತ ಬೊಂಬೆ ತರ ಇರೋ ಈಕೆಯ ಕುಲಗೋತ್ರ ಹೆಸರು ಏನನ್ನೂ ನಾವು ಹೇಳಲ್ಲಬಿಡಿ. ಹಾಗೆ ಹೇಳೋದು ಸರಿನೂ ಅಲ್ಲ. ಆದ್ರೆ ಗಂಡ ಬೇರ ಕಡೆ ಡ್ಯೂಟಿ ಮಾಡ್ತಿದ್ರೆ.. ಈ ಹೆಂಗಸು ಇನ್ಸ್ ಪೆಕ್ಟರ್ ಕಿರಣ್ ಸಾಮ್ರಾಟ್ ಮನೆಯಲ್ಲಿ ಸೇರ್ಕೊಂಡು ಸರಸ ಸಲ್ಲಾಪದಲ್ಲಿ ತೊಳಗಿದ್ಳು. ಆದ್ರೆ.. ಕುಡಿದ ಮತ್ತಲ್ಲಿ ಇಬ್ಬರ ನಡುವೆ ಅದೇನಾಯ್ತೋ ಏನೋ.. ಕಡ್ಡಿ ಗೀಚಿದವಳೇ ಪ್ರಿಯಕರನ ಮನೆಗೆ ಬೆಂಕಿ ಹಾಕೇಬಿಟ್ಟಿದ್ಳು. ಘಟನೆ ಬೆಳಕಿಗೆ ಬಂದಾಗ ಅಲ್ಲಿಗೆ ಬಂದು ನೋಡಿದಾಗ…

ಪೊಲೀಸಪ್ಪನ ಹೆಂಡ್ತಿ ಇನ್ಸ್ ಪೆಕ್ಟರ್ ಸಾಹೇಬ್ರು ಇಬ್ರೂ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದು ಇವರ ಗಪ್ ಚುಪ್ ಸಂಬಂಧ ಬಟಾ ಬಯಲಾಗಿಹೋಯ್ತು. ಅಷ್ಟೇ ಅಲ್ಲ.. ಸರ್ಕಾರಿ ಆಸ್ತಿಪಾಸ್ತಿ ಹಾನಿ ಸೇರಿ ಕರ್ನಾಟಕ ಪೊಲೀಸ್ ಆಕ್ಟ್ ನ ಕೆಲ ಸೆಕ್ಷನ್ ಗಳ ಅಡಿಯಲ್ಲಿ ಇನ್ಸ್ ಪೆಕ್ಟರ್ ಹಾಗೂ ಈ ಪೊಲೀಸಪ್ಪನ ಹೆಂಡ್ತಿಯನ್ನ ಮೇಲೆ ಕೇಸ್ ದಾಖಲಿಸಿದ ಗಾಂಧಿನಗರ ಪೊಲೀಸರು ಅರೆಸ್ಟ್ ಮಾಡಿ ಜೈಲಿಗೆ ಕಳಿಸಲಾಗಿದೆ. ಅಷ್ಟೇ ಅಲ್ಲ.. ಇಮಿಡಿಯೆಟ್ಟಾಗಿ ಇನ್ಸ್ ಪೆಕ್ಟರ್ ಕಿರಣ್ ಸಾಮ್ರಾಟ್ ನನ್ನ ಸಸ್ಪೆಂಡ್ ಮಾಡಲಾಗಿದೆ.ಹೆಂಡ್ತಿಯನ್ನ ತವರು ಮನೆಗೆ ಕಳಿಸಿದ ಈ ಪೋಲಿ ಪೊಲೀಸಪ್ಪ ಮತ್ತೊಬ್ಬನ ಹೆಂಡ್ತಿ ಜೊತೆ ತನ್ನದೇ ಮನೆಯಲ್ಲಿ ಮಜಾ ಮಾಡಿ, ಕುಡಿದ ಮತ್ತಿನಲ್ಲಿ ಯಡವಟ್ಟು ಮಾಡ್ಕೊಂಡಿದ್ದ…

ಇತ್ತ ಗಂಡನಿಲ್ಲದ ಹೊತ್ತಲ್ಲಿ ಈ ಪತಿವ್ರತೆ ಶಿರೋಮಣಿ ಮಾಡಬಾರದ್ದು ಮಾಡಿ ಮಾನ ಹರಾಜು ಹಾಕೊಂಡಿದ್ದಾಳೆ. ಅಂದ ಹಾಗೆ ಇವರದು ಕೆಲ ದಿನಗಳಿಂದ ನಡೆಯುತ್ತಿದ್ದ ಕಥೆಯಲ್ಲ. ಇವರದು ಕಾಲೇಜ್ ಡೇಸ್ ನ ಲವ್ವಿಡವ್ವಿ. ಇವರಿಬ್ಬರೂ ಮೂಲತಃ ಚಿತ್ರದುರ್ಗ ಜಿಲ್ಲೆಯ ಕೊಟ್ಟೂರು ನವರು. ಒಟ್ಟಿಗೇ ಕಾಲೇಜ್ ಹೋಗ್ತಿದ್ದವರು. ಆಗ ಇಬ್ಬರಿಗೂ ಲವ್ ಶುರುವಾಗಿತ್ತು. ಆದ್ರೆ.. ಯಾವುದೋ ಕಾರಣದಿಂದ ಲವ್ ಬ್ರೇಕಪ್ ಆಗಿ ಇಬ್ಬರೂ ಕೂಡ ಬೇರೆ ಬೇರೆ ಮದ್ವೆಯಾಗಬೇಕಾಗಿ ಬಂತು. ಆದ್ರೆ.. ಇವರ ನಡುವಿನ ಆ ಸಂಬಂಧ ಮಾತ್ರ ಹಳಸದೆ ಇನ್ನೂ ಫ್ರೆಶ್ ಆಗೇ ಇತ್ತು.ಅದಕ್ಕೆ ತಕ್ಕಂತೆ ಕಿರಣ್ ಸಾಮ್ರಾಟ್ ಪೊಲೀಸ್ ಡಿಪಾರ್ಟ್ಮೆಂಟಿಗೇ ಸೇರಿದ್ರೆ, ಅತ್ತ ಈ ಚೆಂದುಳ್ಳಿಗೂ ಕೂಡ ಅದೇ ಪೊಲೀಸ್ ಇಲಾಖೆಯ ಗಂಡನೇ ಸಿಕ್ಕಿದ್ದ…

ಅಷ್ಟೇ ಅಲ್ಲ .. ಇಬ್ಬರ ಸಂಸಾರಗಳೂ ಕೂಡ ಒಂದೇ ಕ್ವಾಟ್ರಸಲ್ಲಿ ಬಂದು ನೆಲೆಸಿದ್ದವು. ಈಕೆಗೆ ಗಂಡ ಕೊಪ್ಪಳ ಜಿಲ್ಲೆಯಲ್ಲಿ ಕೆಲಸ ಮಾಡ್ತಿದ್ರೆ.. ಇತ್ತ ಈಕೆ ಪೊಲೀಸ್ ಪ್ರಿಕಯರನ ಹೆಂಡ್ತಿ ಮನೆಯಲ್ಲಿ ಇಲ್ಲದಿದ್ದಾಗ ಹೋಗಿ ಚಕ್ಕಂದ ಆಡಿ ಬರ್ತಿದ್ದಳು. ಹೀಗೆ ಗಪ್ ಚುಪ್ಪಾಗಿ ಇವರ ಹಸಿಬಿಸಿ ಸಂಬಂಧ ಸಾಗ್ತಿದ್ದಾಗ.. ಮೊನ್ನೆ ಮದಿರೆಯ ಮತ್ತಲ್ಲಿ ಇವರ ಕಾಮ ಮಿತಿಮೀರಿದಾಗ.. ಆ ಕಾಮಾಗ್ನಿಗೆ ಇಡೀ ಮನೆಯೇ ಸುಟ್ಟು ಹೋಗಿ.. ರಹಸ್ಯ ಸಂಬಂಧ ಬಯಲಾಗಿ ಹೋಗಿತ್ತು. ಇದೀಗ.. ಈ ಅಕ್ರಮ ಜೋಡಿ ಹಕ್ಕಿ ಜೈಲು ಸೇರಿ ಜೈಲು ಹಕ್ಕಿಗಳಾಗಿವೆ…

 

LEAVE A REPLY

Please enter your comment!
Please enter your name here