Home Crime ಅವಳದ್ದು ಯುವಕರ ಎದೆಬಡಿತ ಹೆಚ್ಚಿಸುವ ಚೆಲುವು..! ಸಣ್ಣ ವಯಸ್ಸಿಗೆ ಶುರುಮಾಡಿದ್ಲು ಲವ್ವು ಡವ್ವು..! GIRL IN...

ಅವಳದ್ದು ಯುವಕರ ಎದೆಬಡಿತ ಹೆಚ್ಚಿಸುವ ಚೆಲುವು..! ಸಣ್ಣ ವಯಸ್ಸಿಗೆ ಶುರುಮಾಡಿದ್ಲು ಲವ್ವು ಡವ್ವು..! GIRL IN ROOM #302..!

5712
0
SHARE

ಎಷ್ಟೊಂದು ಮುದ್ದಾಗಿದ್ದಾಳೆ. ಸೌಂದರ್ಯದ ಖನಿಯೇ ಇವಳು ಅನಿಸೋ ಹಾಗೆ ಇದ್ದಾಳೆ. ಈ ಚೆಲುವನ್ನ, ಈ ಅಂದವನ್ನ ನೋಡಿದ ಯಾವುದೇ ಯುವಕರಾದ್ರು ಛೇ ಇವಳ್ಯಾಕೆ ಸತ್ತೋದ್ಲು ಅಂತ ಕನಿಕರ ಪಡದೇ ಇರೋದಿಲ್ಲ. ಯಾಕಂದ್ರೆ ಇಂತಹ ಚೆಲುವೆಯೊಬ್ಬಳು ಸತ್ತು ಹೋಗಿದ್ದಾಳೆ ಅಂದ್ರೆ ಯಾರಾದ್ರೂ ಬೇಜಾರು ಮಾಡ್ಕೊಳ್ಳೋದೆ ಬಿಡಿ. ಆಕೆ ಯಾಕೆ ಸತ್ತಳು ಅನ್ನೋದನ್ನ ಆಮೇಲೆ ಹೇಳ್ತೀವಿ. ಅದಕ್ಕೂ ಮೊದಲು ಅವಳ ಫುಲ್ ಪರಿಚಯವನ್ನ ನಿಮಗೆ ಮಾಡಿಕೊಡ್ತೀವಿ. ಇವಳ ಹೆಸರು ಚಿನಂತಿ ಅಂತ. ಹಾಸನದ ಸಕಲೇಶಪುರದ ಬ್ಯಾಕರವಳ್ಳಿಯ ಊರಿನವಳು. ಶಂಕರ್ ವೇದಾವತಿ ದಂಪತಿಯ ಒಬ್ಬಳೇ ಸುಪುತ್ರಿ.ನೋಡೋದಕ್ಕೆ ಚೆನ್ನಾಗಿದ್ದ ಕಾರಣ ಆಕೆ ಎಲ್ಲಿ ಹೋದ್ರು ಹುಡುಗರ ಕಣ್ಣು ಕುಕ್ಕುತ್ತಿದ್ಲು.

ಹೀಗೆ ಈಕೆಯ ಸೌಂದರ್ಯದ ಸೆಳೆತಕ್ಕೆ ಒಳಗಾದವನು ಅದೇ ಮನೆಯ ಓನರ್ ಮಗ ರಾಕೇಶ್. ರಾಕೇಶ್ ಬೆಂಗಳೂರಿನಲ್ಲಿ ಸಣ್ಣ ಪುಟ್ಟ ಕೆಲಸ ಮಾಡ್ಕೊಂಡಿದ್ದ. ಆಗಾಗ ಮನೆಗೆ ಬಂದಾಗ ಇವಳನ್ನ ನೋಡಿದ್ದ. ಹೀಗೆ ಅವರಿಬ್ಬರ ಪರಿಚಯವಾಗಿತ್ತು. ಹೀಗೆ ನೋಡುತ್ತಾ ನಗುತ್ತಾ ಮಾತನಾಡ್ತ ಇಬ್ಬರು ಲವ್ ಮಾಡೋದಕ್ಕೆ ಶುರುಮಾಡಿದ್ರು. ಅವನಿಗೆ ನಾನು ಒಳ್ಳೆ ಫಿಗರ್ ಅನ್ನ ಪಟಾಯಿಸಿದ್ದೆ ಅಂತ ಅಂದುಕೊಂಡು ಆಕೆಯನ್ನ ಲವ್ ಮಾಡೋದಕ್ಕೆ ಶುರುಮಾಡಿದ.ಇಬ್ಬರು ಲವ್ ಏನೋ ಮಾಡ್ತಿದ್ರು ಆದ್ರೆ ಆ ಮನೆಯಲ್ಲಿ ಇವರಿಗೆ ಎಷ್ಟೊಂದು ಪ್ರೈವೆಸಿ ಸಿಗ್ತಿರಲಿಲ್ಲ. ಹೀಗಾಗಿ ಆಕೆ ಆ ಮನೆಯನ್ನ ಖಾಲಿ ಮಾಡಿ ಅಲ್ಲಿಂದ ಬೇರೆ ಕಡೆ ಹೋಗಿ ಲೇಡಿಸ್ ಪಿಜಿಯೊಂದನ್ನ ಮಾಡ್ಕೊಂಡು ಇದ್ಲು. ನಂತ್ರ ಇಬ್ಬರು ಆಗಾಗ ಮೀಟ್ ಆಗೋದು, ಸುತ್ತಾಡೋದು ಮಾಡ್ತಿದ್ರು. ಆದ್ರೆ ಆತನನ್ನ ಪ್ರೀತಿಸೋ ಮೊದಲು ಚಿನಂತಿ ಆತನಿಗೆ ಒಂದು ಶರತ್ತನ್ನ ಹಾಕಿದ್ಲು.

ಅದೇನಪ್ಪಾ ಅಂದ್ರೆ ನೀನು ನನ್ನನ್ನ ಬಿಟ್ಟು ಮತ್ತ್ಯಾವ ಹುಡುಗಿಯ ಜೊತೆ ಮಾತನಾಡಬಾರದು ಯಾರ ಜೊತೆಯು ಓಡಾಡಬಾರದು ಅಂತ ಹೇಳಿದ್ಲು. ಅವನು ಕೂಡಾ ಹೊಸದರಲ್ಲಿ ಆಯ್ತು ಆಯ್ತು ಅಂತ ಹೇಳಿದ್ದ. ಆದ್ರೆ ಎಲ್ಲದಕ್ಕೂ ಬಸವನ ರೀತಿ ತಲೆ ಅಲ್ಲಾಡಿಸಿ ತಗಲಾಕ್ಕೊಂಡಿದ್ದ.ಪ್ರೀತಿ ಶುರುವಾದ ಹೊಸದರಲ್ಲಿ ಅವಳು ಹೇಳಿದ್ದಕ್ಕೆಲ್ಲಾ ಅವನು ಆಯ್ತು ಅಂತಾನೆ ಹೇಳ್ತಿದ್ದ. ಅಲ್ಲದೆ ಆಕೆಗೆ ನನ್ನ ಮೇಲೆ ಪೊಸೆಸಿವ್ ನೆಸ್ ಇರೋದ್ರಿಂದ ಹೀಗೆಲ್ಲಾ ಹೇಳ್ತಾಳೆ ಮುಂದೆ ಸರಿಯಾಗುತ್ತೆ ಅಂತ ಅಂದುಕೊಂಡಿದ್ದ. ಹೀಗೆ ಇಬ್ಬರ ಲವ್ ಜರ್ನಿ ಚೆನ್ನಾಗಿಯೇ ನಡಿತಾ ಇತ್ತು. ಅದ್ರಲ್ಲೂ ಇವತ್ತಿನ ಯಂಗ್ ಜನರೇಷ್ ನೋಡಿ ಬೆಳಗ್ಗೆ ಲವ್ ಯು ಅಂತ ಹೇಳಿದ್ರೆ ಸಂಜೆಗೆಲ್ಲಾ ಲಾಜ್ಡ್ ನಲ್ಲಿ ರೂಂ ಮಾಡಿ ಸಂಸಾರ ಶುರುಮಾಡ್ತಾರೆ. ಹಾಗೆ ಇವರಿಬ್ಬರು ಕೂಡಾ ಇನ್ನೇನು ಮದುವೆಯಾಗ್ತೀವಲ್ಲ ಅಂತ ಹಾಸನದ ಮೂನ್ ಲೈಟ್ ನಲ್ಲಿ ಟೈಂ ಸಿಕ್ಕಿದಾಗಲೆಲ್ಲಾ ಗಾಢವಾಗಿ ಪ್ರೀತಿಸಿ ಸಂಸಾರ ನಡೆಸ್ತಿದ್ರು.

ಹೀಗೆ ಆಗಾಗ ಇವರಿಬ್ಬರ ಪ್ರೀತಿ ಗಾಢವಾಗಿರೋದಕ್ಕೆ ಮೂನ್ ಲೈಟ್ ನ ರೂಂಗಳು ಸಾಕ್ಷಿಯಾಗಿದ್ವು. ಅದೆಷ್ಟರ ಮಟ್ಟಿಗೆ ಅಂದ್ರೆ ಅವರಿಬ್ಬರು ಆ ಲಾಡ್ಜ್ ಗೆ ಫುಲ್ ಪರಿಚಯ ಆಗಿ ಹೋಗಿದ್ರು. ಅಲ್ಲದೆ ಅಲ್ಲಿಗೆ ಪರ್ಮನೆಂಟ್ ಕಸ್ಟಮರ್ ಕೂಡಾ ಆಗಿದ್ರು. ಆದ್ರೆ ನಿಧಾನಕ್ಕೆ ಅವರಿಬ್ಬರ ಮಧ್ಯೆ ಜಗಳ ಶುರುವಾಗಿತ್ತು. ಅದ್ಯಾಕೆ ಅಂದ್ರೆ ಈಕೆ ರಾಕೇಶ್ ಗೆ ಫೋನ್ ಮಾಡಿದಾಗ ಬ್ಯುಸಿ ಬಂದ್ರೆ ಅವಳು ಯಾವಳ ಹತ್ತಿರ ಮಾತನಾಡ್ತಿದ್ದೀಯ ಆಂತ ಗಲಾಟೆ ಶುರುಮಾಡ್ತಿದ್ಲು. ಹೀಗೆ ಇವರಿಬ್ಬರ ಗಲಾಟೆ ನಿಧಾನಕ್ಕೆ ಶುರುವಾಗಿ ಆಗಾಗ ದೊಡ್ಡದಾಗ್ತಿತ್ತು. ಆಕೆಯಿಂದ ರಾಕೇಶ್ ಇದು ಒಂಥರಾ ಟಾರ್ಚರ್ ಆಗೋದಕ್ಕೆ ಶುರುವಾಯ್ತು. ಅಲ್ಲಿಗೆ ಅವರಿಬ್ಬರ ಸಂಬಂಧ ಚೆನ್ನಾಗಿದ್ದಾಗ ಚಕ್ಕಂದ, ಸಿಟ್ಟು ಬಂದ್ರೆ ಜಗಳ ಅನ್ನೋ ಹಾಗೆ ಆಗಿತ್ತು.ಹೀಗೆ ಅವರಿಬ್ಬರು ಮೊನ್ನೆ ಮತ್ತೆ ಅದೇ ಮೂನ್ ಲೈಟ್ ಲಾಜ್ಡ್ ಗೆ ರಾತ್ರಿ ಬಂದಿದ್ರು. ಪ್ರತಿ ಸಾರಿಯಂತೆ ಅವ್ರು ಅದೇ ಲಾಜ್ಡ್ ನಲ್ಲಿ ಕಾಲ ಕಳೆಯೋದಕ್ಕೆ ಹೋಗಿದ್ರು. ಆದ್ರೆ ಈ ಬಾರಿ ರೂಂನಲ್ಲಿ ಹ್ಯಾಪಿ ಎಂಡಿಂಗ್ ನಡಿಲೇ ಇಲ್ಲ.

ಇವರಿಬ್ಬರ ಮಧ್ಯೆ ವಾರ್ ಶುರುವಾಗಿತ್ತು. ಯಾಕಂದ್ರೆ ಮತ್ತದೇ ಹಳೆ ವಿಷಯ ಫೋನ್ ಗಲಾಟೆ ಶುರುವಾಗಿತ್ತು. ರೂಂಗೆ ಹೋಗ್ತಿದ್ದ ಹಾಗೆ ಆ ಗಲಾಟೆ ತಾರಕ್ಕಕ್ಕೆ ಹೋಗಿತ್ತು.ಅವಳು ಹಾಸನಕ್ಕೆ ಬಸ್ ಹುತ್ತುತ್ತ ಇದ್ದ ಹಾಗೆ ರಾಕೇಶ್ ಗೆ ಫೋನ್ ಮಾಡಿದ್ದಾಳೆ. ಆದ್ರೆ ಆ ಕಡೆಯಿಂದ ಫೋನ್ ಫುಲ್ ಬ್ಯುಸಿ ಬರೋದಕ್ಕೆ ಶುರುವಾಗಿತ್ತು. ಅಲ್ಲಿಗೆ ಚಿನಂತಿ ಕೂಲ್ ಆಗಿದ್ದವಳು ಒಂದೇ ಸಾರಿ ವೈಲೆಂಟ್ ಆಗಿದ್ದಾಳೆ, ಲೇ ಯಾವಳ ಜೊತೆ ಮಾತನಾಡ್ತಿದ್ದಿಯೋ ಅಂತ ಅವನ ಜೊತೆ ಅಲ್ಲೇ ಗಲಾಟೆ ಶುರುಮಾಡಿದ್ದಾಳೆ. ನಾನು ಈಗ ಹಾಸನಕ್ಕೆ ಬರ್ತಾ ಇದ್ದೀನಿ. ನಾನು ಬರೋ ಟೈಂಗೆ ನೀನು ಅಲ್ಲಿಗೆ ಬಂದಿರಬೇಕು ಅಂತ ಹೇಳಿದ್ದಾಳೆ. ಆಗ ಅವನು ಆಯ್ತು ಅಂತ ಹೇಳಿ ಫೋನ್ ಕಟ್ ಮಾಡಿದ್ದಾನೆ. ನಂತ್ರ ಮಧ್ಯಾಹ್ನದ ಹೊತ್ತಿಗೆ ಇಬ್ಬರು ಪಾರ್ಕ್ ಒಂದರಲ್ಲಿ ಮೀಟ್ ಆಗಿದ್ದಾರೆ. ಅದೇ ವಿಚಾರಕ್ಕೆ ಅಲ್ಲಿ ಮತ್ತೆ ಗಲಾಟೆ ಮಾಡಿಕೊಂಡಿದ್ದಾರೆ.ಆದ್ರೆ ರಾಕೇಶ್ ನಾನು ನನ್ನ ಸ್ನೇಹಿತನ ಜೊತೆ ಮಾತನಾಡ್ತಿದ್ದೆ ಅಂತ ಹೇಳಿದ್ದ. ಅಲ್ಲದೆ ಅವನಿಂದಲೇ ಅವಳಿಗೆ ಫೋನ್ ಮಾಡಿಸಿ ಅವನು ನನ್ನ ಜೊತೆಯೇ ಮಾತನಾಡ್ತಿದ್ದ ಅಂತ ಹೇಳಿಸಿದ್ದ.

ಆದ್ರೆ ಅವರ್ಯಾರ ಮಾತನ್ನ ಅವಳು ಕೇಳೋ ಸ್ಥಿತಿಯಲ್ಲಿ ಇರಲಿಲ್ಲ. ಹಾಗೆ ಮಾತುಕತೆ ಮಾಡ್ತಾ ಅವತ್ತು ಪಾರ್ಕ್ ನಲ್ಲೇ ಸಂಜೆಯಾಗಿ ಹೋಗಿತ್ತು. ಇನ್ನು ಪಿಜಿಗೆ ಹೋಗೋದಕ್ಕೆ ಸಾಧ್ಯವಿಲ್ಲ ಅಂತ ಗೊತ್ತಾದಾಗ ಅವರಿಗೆ ನೆನಪಾಗಿತ್ತು ಮತ್ತೆ ತಮ್ಮ ಮೂನ್ ಲೈಟ್ ಲಾಡ್ಜ್. ಇವತ್ತು ನೈಟ್ ಅಲ್ಲೇ ಇರೋಣ ಅಂತ ಇಬ್ಬರು ತೀರ್ಮಾನ ಮಾಡ್ಕೊಂಡು ಲಾಡ್ಜ್ ಗೆ ಹೋಗಿದ್ದಾರೆ. ಈ ಬಾರಿ ಅವ್ರು ರೂಂ ನಂಬರ್ 302 ಅನ್ನ ಬುಕ್ ಮಾಡ್ಕೊಂಡಿದ್ರು.ರೂಂಗೆ ಹೋದ ಮೇಲೂ ಅವರಿಬ್ಬರ ಮುನಿಸು ಕಡಿಮೆಯಾಗಿರಲಿಲ್ಲ. ಅದೇನು ವಿಷಯಕ್ಕೆ ಅವರಿಬ್ಬರು ಅಲ್ಲಿ ಮತ್ತೆ ಜಗಳ ಮಾಡ್ಕೊಂಡ್ರು ಅನ್ನೋದು ಲಾಡ್ಜ್ ರೂಂ ಗೋಡೆ, ಬಾಗಿಲುಗಳಿಗೆ ಮಾತ್ರ ಗೊತ್ತು.

ನಂತ್ರ ಅವತ್ತು ಅವರಿಬ್ಬರು ಮಲಗೋ ಹೊತ್ತಿಗೆ ಅದೇನು ಅಂತ ಡಿಸೈಡ್ ಮಾಡ್ಕೊಂಡಿದ್ರೋ ಗೊತ್ತಿಲ್ಲ. ಅಂತ ಇಬ್ಬರು ಬೆಳಗ್ಗೆ ಶುರುವಾಗಿದ್ದ ಜಗಳವನ್ನ ನಿಲ್ಲಿಸಿ ಮಲಗಿಕೊಂಡಿದ್ರು. ಎಂದಿನಂತೆ ಬೆಳಗ್ಗೆ ರಾಕೇಶ್ ಎದ್ದು ನೋಡ್ತಾನೆ ರಾತ್ರಿ ಪಕ್ಕದಲ್ಲಿ ಮಲಗಿದ್ದ ಚಿನಂತಿ ಕಾಣಿಸಲಿಲ್ಲ. ಎಲ್ಲೋ ಟಾಯ್ಲೆಟ್ ನಲ್ಲಿ ಇರಬೇಕು ಅಂತ ಹೋಗಿ ನೋಡ್ತಾನೆ ಅಲ್ಲಿ ಬಾಗಿಲು ಲಾಕ್ ಆಗಿದೆ. ಎಷ್ಟು ಕರೆದ್ರು ಅವಳು ಮಾತನಾಡ್ತಾನೆ ಇಲ್ಲ. ಆಗ ಅವನಿಗೆ ಹೆದರಿಕೆ ಆಗಿದೆ. ಆಗ ಲಾಡ್ಜ್ ನ ಸಿಬ್ಬಂದಿಗಳಿಗೆ ಫೋನ್ ಮಾಡಿ ಕರೆಸಿಕೊಂಡಿದ್ದಾನೆ. ಅವ್ರು ಕೂಡಾ ಒಂದಿಷ್ಟು ಹೊತ್ತು ಆಕೆಯನ್ನ ಬಾಗಿಲು ಓಪನ್ ಮಾಡೋದಕ್ಕೆ ಕರೆದಿದ್ದಾರೆ. ಆದ್ರೆ ಬಾಗಿಲು ಮಾತ್ರ ಓಪನ್ ಆಗಿಲ್ಲ.

ಇನ್ನು ಅವರಿಗೆಲ್ಲಾ ಒಳಗೆ ಏನೋ ಅನಾಹುತವಾಗಿದೆ ಅನ್ನೋದು ಅರ್ಥವಾಗದೇ ಉಳಿದಿರಲಿಲ್ಲ. ಹೀಗಾಗಿ ಬಾಗಿಲನ್ನ ಒಡೆದು ಓಪನ್ ಮಾಡಿದ್ದಾರೆ. ಡೋರ್ ಓಪನ್ ಆಗ್ತಿದ್ದ ಹಾಗೆ ಅಲ್ಲಿ ನಿಂತಿದ್ದವರೆಲ್ಲಾ ದಂಗಾಗಿ ಹೋಗಿದ್ರು. ಯಾಕಂದ್ರೆ ರಾತ್ರಿ ಗಲಾಟೆ ಮಾಡಿಕೊಂಡಿದ್ದ ಚಿನಂತಿ ಈಗ ಶವವಾಗಿ ಹೋಗಿದ್ಲು. ಅದೇ ಬಾತ್ ರೂಂನಲ್ಲಿ ತನ್ನ ವೇಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ಲು. ಅಲ್ಲಿಗೆ ಲವ್ ಮೂಡ್ ನಲ್ಲಿದ್ದ ರಾಕೇಶ್ ಠುಸ್ ಆಗಿ ಹೋಗಿದ್ದ. ಏನೋ ಮಾಡೋದಕ್ಕೆ ಹೋಗಿ ಏನೋ ಆಯ್ತಲ್ಲ ಅಂತ ತಲೆ ಮೇಲೆ ಕೈ ಹೊತ್ತು ಕೂತ್ಕೊಂಡಿದ್ದ. ನಂತ್ರ ಹೋಟೆಲ್ ಸಿಬ್ಬಂದಿ ಪೊಲೀಸ್ರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ರು.ಸ್ಥಳಕ್ಕಾಗಮಿಸಿದ ಪೊಲೀಸ್ರು ನಡೆದ ಘಟನೆಯನ್ನೆಲ್ಲಾ ಗ್ರಹಿಸಿದ್ರು, ಅಲ್ಲದೆ ಆಕೆಯ ಬಾಡಿಯನ್ನ ಕೆಳಗಿಳಿಸಿ ಪೋಸ್ಟ್ ಮಾರ್ಟಂಗೆ ಅಂತ ಆಸ್ಪತ್ರೆಗೆ ಕಳುಹಿದ್ರು. ನಂತ್ರ ಆಕೆಯ ಪೋಷಕರಿಗೂ ಫೋನ್ ಮಾಡಿ ವಿಷಯ ತಿಳಿಸಿದ್ರು. ಆದ್ರೆ ಈ ವಿಷಯ ಕೇಳಿ ಊರಲ್ಲಿ ಆಕೆಯ ಅಪ್ಪ ಅಮ್ಮ ಎದೆ ಒಡೆದುಕೊಂಡಿದ್ರು. ನಿನ್ನೆ ಮನೆಯಿಂದ ಹೋದ ಮಗಳು ಈಗ ಹೆಣವಾಗಿದ್ದಾಳೆ ಅಂದ್ರೆ ಅವರ ಸ್ಥಿತಿ ಹೇಗಾಗಿರೋದಿಲ್ಲ ಹೇಳಿ.

ನಂತ್ರ ಆಸ್ಪತ್ರೆಗೆ ಆಕೆಯ ಸಂಬಂಧಿಗಳು ಬಂದು ನೋಡಿದ್ರು. ಸತ್ತಿರೋದು ಚಿನಂತಿಯೇ ಅನ್ನೋದು ಕನ್ಫರ್ಮ್ ಆಗಿತ್ತು. ನಂತ್ರ ಆಕೆಯ ಅಪ್ಪ ಅಮ್ಮನು ಅಲ್ಲಿಗೆ ಬಂದಿದ್ರು. ಅಲ್ಲಿಗೆ ಬಂದು ಮಗಳ ಶವ ನೋಡಿ ಇದು ಆತ್ಮಹತ್ಯೆಯಲ್ಲ ಅಂತ ಆರೋಪ ಮಾಡೋದಕ್ಕೆ ಶುರುಮಾಡಿದ್ರು. ಈ ಸಾವಿನ ಹಿಂದೆ ಬೇರೆಯದ್ದೇ ಏನೋ ನಡೆದಿದೆ ಅಂತ ಕಣ್ಣೀರು ಹಾಕೋದಕ್ಕೆ ಶುರುಮಾಡಿದ್ರು.ಅವರ್ಯಾರಿಗೂ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅನ್ನೋದನ್ನ ನಂಬೋದಕ್ಕೆ ಆಗಲಿಲ್ಲ. ಆಕೆ ಧೈರ್ಯವಂತ ಹುಡುಗಿ, ನಮಗೆ ಸಮಾಧಾನ ಮಾಡ್ತಿದ್ಲು. ಆದ್ರೆ ಈಗ ಸೂಸೈಡ್ ಮಾಡಿಕೊಳ್ಳೋದಕ್ಕೆ ಕಾರಣವೇ ಇರಲಿಲ್ಲ. ನಮಗೆ ಪೊಲೀಸ್ರು ಈ ವಿಷಯದಲ್ಲಿ ನ್ಯಾಯ ಕೊಡಿಸಬೇಕು ಅಂತ ಅವ್ರು ಗೋಳಾಡೋದಕ್ಕೆ ಶುರುಮಾಡಿದ್ರು. ರಾತ್ರಿ ಇಲ್ಲಿ ಇನ್ನೇನೋ ನಡೆದಿದೆ ಅನ್ನೋದು ಅವರ ಆರೋಪವಾಗಿತ್ತು.

ಅವ್ರು ಒಂದು ಕಡೆ ಈ ರೀತಿಯ ಆರೋಪವನ್ನ ಮಾಡ್ತಿದ್ರೆ, ಇನ್ನೊಂದು ಕಡೆ ಆಕೆಯ ಹಳೆಯ ಕಥೆಯೊಂದನ್ನ ಬಿಚ್ಚಿಡ್ತಾ ಹೋದ್ರು. ಆ ವಿಷಯ ಮತ್ಯಾವುದು ಅಲ್ಲ ಅದು ಆಕೆಯ ಮೊದಲ ಮದುವೆಯ ಕಥೆ. ಆದ್ರೆ ಅವ್ರು ಹೇಳ್ತಾ ಇದ್ದ ಕತೆ ಅದಾಗ್ಲೇ ಮುಗಿದು ಹೋಗಿತ್ತು. ಅಲ್ಲದೆ ಅವ್ರು ಹೇಳ್ತಾ ಇರೋದು ನಿಜವೋ ಸುಳ್ಳೋ ಅನ್ನೋದು ಕೂಡಾ ಯಾರಿಗೂ ಅರ್ಥವೇ ಆಗ್ತಿರಲಿಲ್ಲ. ಆದ್ರೆ ಹಿಂದೊಂದು ಭಾರಿ ಕಥೆ ಇದೆ ಅನ್ನೋದು ಮಾತ್ರ ಎಲ್ಲರಿಗೂ ಗೊತ್ತಾಗಿತ್ತು. ಚಿನಂತಿ ಅನ್ನೋ ಸುಂದರಿಯ ಹಿಂದಿನ ಇನ್ನೊಂದು ಮ್ಯಾರೇಜ್ ಅಂಡ್ ರೇಪ್ ನ ಕಥೆಯನ್ನ ಅವರೇ ಬಿಚ್ಚಿಡ್ತಾ ಹೋಗಿದ್ರು. ಅಲ್ಲಿಗೆ ಈ ಕೇಸ್ ಮತ್ತೊಂದು ಟ್ವಿಸ್ಟ್ ಅನ್ನ ಪಡ್ಕೊಂಡಿತ್ತು.

ಅಲ್ಲಿವರೆಗೂ ಚನಂತಿ ಒಬ್ಬಳು ಒಳ್ಳೇ ಹುಡುಗಿ ಲವ್ವರ್ ಜೊತೆ ಗಲಾಟೆ ಮಾಡಿಕೊಂಡು ಸತ್ತಿದ್ದಾಳೆ ಅಂತ ಎಲ್ಲಾ ಅಂದುಕೊಂಡಿದ್ರು. ಆದ್ರೆ ಅದ್ಯಾವಾಗ ಇವಳ ಹಳೆ ಕಥೆಯ ಫೈಲ್ ಗಳೆಲ್ಲಾ ಓಪನ್ ಆಯ್ತೋ ಆಗ ಸುಂದರಿಯ ಹಿಂದಿನ ಕತೆಗಳು ಅನಾವರಣವಾಗೋದಕ್ಕೆ ಶುರುವಾಯ್ತು. ಯಾಕಂದ್ರೆ ಆಕೆ ಪ್ರೀತಿ ಹೆಸರಲ್ಲಿ ಅದೆಷ್ಟೋ ಹುಡುಗರ ಜೊತೆ ಸುತ್ತಾಡಿ ಮಜಾ ಮಾಡದ್ದಾಳೆ ಅಂತ ಅವತ್ತು ಮಾರ್ಚರಿಗೆ ಬಂದಿದ್ದ ಅವರ ಸಂಬಂಧಿಗಳೇ ಮಾತನಾಡಿಕೊಳ್ಳೋದಕ್ಕೆ ಶುರುಮಾಡಿದ್ರು.ಇನ್ನೊಂದು ಕಡೆ ಅವಳ ಬ್ಯಾಗ್ ನಲ್ಲಿ ಆಕೆ ಬೇರೆ ಬೇರೆಯವರ ಜೊತೆ ಬೇರೆ ಊರಿಗೆ ಓಡಾಡಿರೋದಕ್ಕೆ ಸಾಕ್ಷಿಯಾಗಿ ಟ್ರೈನ್ ಮತ್ತು ಬಸ್ ಟಿಕೆಟ್ ಕೂಡಾ ಸಿಕ್ಕಿತ್ತು. ಹೀಗಾಗಿ ಪೊಲೀಸ್ರಿಗೂ ಈ ಕೇಸ್ ನಲ್ಲಿ ಒಂದಿಷ್ಟು ಅನುಮಾನ ಬಂದಿತ್ತು. ಅಲ್ಲದೆ ಹಾಸ್ಪಿಟಲ್ ನಲ್ಲಿ ನನ್ನ ಮಗಳು ಸಾವಿನ ಹಿಂದೆ ಅನುಮಾನವಿದೆ ಅಂತಿದ್ದವರು ದೂರು ಕೊಡುವಾಗ ಮಾತ್ರ ಅದ್ರಲ್ಲಿ ಯಾರ ಹೆಸರನ್ನು ಹೇಳಿರಲಿಲ್ಲ. ಅಲ್ಲದೆ ತಮಗಿರೋ ಅನುಮಾನವನ್ನು ತೋರಿಸಿರಲಿಲ್ಲ. ಹೀಗಾಗಿ ಪೊಲೀಸ್ರಿಗೂ ಅನುಮಾನ ಕಾಡಿತ್ತು.

ಅಲ್ಲದೆ ರಾಕೇಶ್ ನನ್ನ ಪೊಲೀಸ್ರು ವಿಚಾರಣೆಗೊಳಪಡಿಸಿದಾಗ ಫೋನ್ ನಲ್ಲಿ ಮಾತನಾಡಿದ ವಿಚಾರಕ್ಕೆ ನಮ್ಮಿಬ್ಬರ ನಡುವೆ ಗಲಾಟೆಯಾಗಿತ್ತು ಅಂತ ಹೇಳಿದ್ದ. ಅಲ್ಲಿ ಅವನ ಹೇಳಿಕೆಯಲ್ಲಿ ಯಾವುದೇ ಅನುಮಾನವಿರಲಿಲ್ಲ. ಆದ್ರೆ ಆಕೆ ಸಾಯೋದಕ್ಕೆ ಅದು ಕಾರಣಾನ ಅಂತ ಪೊಲೀಸ್ರಿಗೆ ಅನಿಸ್ತಿದೆ. ಬೇರೆ ಇನ್ನೇನೋ ವಿಚಾರಕ್ಕೆ ಆಕೆ ಸತ್ತಿದ್ದಾಳೆ ಅನ್ನೋದು ಪೊಲೀಸ್ರಿಗೂ ಗೊತ್ತು. ಆದ್ರೆ ಆ ಸತ್ಯ ಹೊರಗೆ ಬರಬೇಕು ಅಂದ್ರೆ ರಾಕೇಶ್ ನಿಜವನ್ನ ಹೇಳಬೇಕು. ಈಗಾಗ್ಲೇ ಪೊಲೀಸ್ರು ಆತನನ್ನ ವಿಚಾರಣೆ ನಡೆಸ್ತಿದ್ದಾರೆ. ಆಕೆಯನ್ನ ಈತ ಪ್ರೀತಿಸ್ತಿದ್ನ ಅಥವಾ ಲಾಡ್ಜ್ ಬರೋದಕ್ಕೆ ಮಾತ್ರವೇ ಆಕೆ ಸೀಮಿತವಾಗಿದ್ಲ ಅನ್ನೋದು ಕೂಡ ತನಿಖೆಯಲ್ಲಿ ತಿಳಿಯಬೇಕಿದೆ. ಯಾಕಂದ್ರೆ ಒಂದು ಮದುವೆಯಾಗಿ ಆ ಸಂಬಂಧವನ್ನ ಕಿತ್ಕೊಂಡು ಬಂದಿದ್ದ ಆಕೆ ಯಾವುದೇ ಕಥೆಯನ್ನ ಹೇಳದೆ ಆತನ ಜೊತೆ ಓಡಾಡಿಕೊಂಡಿದ್ಲು ಅಂದ್ರೆ ಕಥೆ ಇನ್ನೊಂದು ದಿಕ್ಕಿಗೆ ಹೋಗುತ್ತೆ.  ಹೀಗಾಗಿ ಪೊಲೀಸ್ರಿಗೆ ಸದ್ಯಕ್ಕೆ ತಲೆ ಬುಡ ಯಾವುದು ಅರ್ಥವಾಗ್ತಿಲ್ಲ.

ಸದ್ಯಕ್ಕೆ ಪೊಲೀಸ್ರು ಸೂಸೈಡ್ ಕೇಸ್ ಅನ್ನ ಮಾತ್ರ ದಾಖಲಿಸಿಕೊಂಡಿದ್ದಾರೆ. ತನಿಖೆ ಇನ್ನು ಪ್ರಾಥಮಿಕ ಹಂತದಲ್ಲೇ ಇದೆ. ಅವರಿಬ್ಬರ ಸಂಬಂಧ ಏನು ಅನ್ನೋದು ಗೊತ್ತಾದ್ರೆ ಮಾತ್ರ ತನಿಖೆ ಮುಂದೆ ಹೋಗೋದಕ್ಕೆ ಸಾಧ್ಯವಾಗುತ್ತೆ. ಅಲ್ಲದೆ ಅವತ್ತು ರಾತ್ರಿ ಯಾವ ವಿಚಾರಕ್ಕೆ ಗಲಾಟೆಯಾಯ್ತು ಅನ್ನೋ ಸತ್ಯ ಅವನು ಹೇಳಿದ್ರೆ ಮಾತ್ರ ಆ ಸಾವಿನ ಹಿಂದಿನ ಸೀಕ್ರೆಟ್ ಹೊರಗೆ ಬರುತ್ತೆ. ಅಲ್ಲಿವರೆಗೂ ಚನಂತಿ ಸಾವು ರಹಸ್ಯವಾಗಿಯೇ ಇರುತ್ತೆ. ಈಗ ಆಕೆ ನಮ್ಮೊಂದಿಗಿಲ್ಲ ಅನ್ನೋ ಕಾರಣಕ್ಕೆ ಸಾವಿನ ಸುಳ್ಳಿನ ಕಂತೆಗಳು ಹುಟ್ಟಿಕೊಳ್ಳಬಹುದು. ಆಕೆಯ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಬಹುದು. ಆದ್ರೆ ಅದ್ರಲ್ಲಿ ಸತ್ಯ ಮಾತ್ರವೇ ಹೊರಗೆ ಬರಬೇಕಿದೆ.

LEAVE A REPLY

Please enter your comment!
Please enter your name here