Home Crime ಅವಳು ಏರಿಯಾ ಹುಡುಗರ ಪಾಲಿನ ರಸಗುಲ್ಲ..! ಶೋಕಿಗಾಗಿ ನಾಲ್ಕೈದು ಯುವಕರ ಜೊತೆ ಎಂಜಾಯ್ ..!? ಲವ್ವರ್...

ಅವಳು ಏರಿಯಾ ಹುಡುಗರ ಪಾಲಿನ ರಸಗುಲ್ಲ..! ಶೋಕಿಗಾಗಿ ನಾಲ್ಕೈದು ಯುವಕರ ಜೊತೆ ಎಂಜಾಯ್ ..!? ಲವ್ವರ್ ಗೆ ಕೈಕೊಟ್ಟು ಬೇರೊಬ್ಬನ ಜೊತೆ ರೊಮ್ಯಾನ್ಸ್..! ಕೈಕೊಟ್ಟ ಪ್ರಿಯತಮೆ ಆಗಿದ್ಲು ನಿರ್ಜನ ಪ್ರದೇಶದಲ್ಲಿ ಫಿನಿಶ್..!

3553
0
SHARE

ಇದೇ ತಿಂಗಳ ಎರಡನೇ ತಾರೀಖು ಕುಣಿಗಲ್ ನ ಸಂತೆಮಾವತ್ತೂರಿನ ನಿರ್ಜನ ಪ್ರದೇಶದಲ್ಲಿ ಯಾರೋ ಹೀಗೆ ನಡ್ಕೊಂಡು ಹೋಗ್ತಿದ್ರು. ಅಲ್ಲಿ ಸುತ್ತ ಕಾಡು ಒಂದಿಷ್ಟು ಬಯಲು ಜಾಗವಿತ್ತು. ಹಾಗೆ ನಡೆದು ಹೋಗ್ತಿದ್ದ ಹಾಗೆ ಅಲ್ಲಿ ದೂರದಲ್ಲಿ ಯಾರೋ ಬಿದ್ದಿರೋ ಹಾಗೆ ಕಾಣಿಸಿತ್ತು. ಹತ್ತಿರ ಹೋಗಿ ನೋಡಿದ್ರೆ ಅಲ್ಲೊಂದು ಹುಡುಗಿ ಕೊಲೆಯಾಗಿ ಬಿದ್ದರೋದು ಕಂಡಿತ್ತು.

ಹಾಗೆ ಶವವನ್ನ ನೋಡಿದ ವ್ಯಕ್ತಿ ಓಡಿ ಹೋಗಿ ಹತ್ತಿರದಲ್ಲೇ ಇದ್ದ ಒಂದಷ್ಟು ಜನರನ್ನ ಕರ್ಕೊಂಡು ಬಂದಿದ್ದ. ದೂರದಿಂದ ನೋಡಿದ್ರೆ ಅಲ್ಯಾವುದೋ ಸ್ಕೂಲ್ ಹುಡುಗಿಯನ್ನ ಕೊಲೆ ಮಾಡಿ ಹೋಗಿದ್ದಾರೆ ಅಂತ ಅಂದುಕೊಂಡಿದ್ರು. ಯಾಕಂದ್ರೆ ಆಕೆ ಧರಿಸಿದ್ದ ಯೂನಿಫಾರಂ ಹಾಗಿತ್ತು. ಹೀಗಾಗಿ ಜನ ಪಾಪ ಸ್ಕೂಲ್ ಹುಡುಗಿ ಅಂದುಕೊಂಡು ಅವ್ರು ಹತ್ತಿರ ಹೋಗಿ ನೋಡಿದ್ರು. ಆದ್ರೆ ಅಲ್ಲಿ ಸತ್ತು ಬಿದ್ದದ್ದು ಸ್ಕೂಲ್ ಹುಡುಗಿಯಾಗಿರಲಿಲ್ಲ. ಬದಲಿಗೆ ಅವಳೊಬ್ಬಳು ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡ್ತಿದ್ದ ಹುಡುಗಿಯಾಗಿದ್ಲು.ಆಕೆ ಹಾಕಿಕೊಂಡಿದ್ದ ಬಟ್ಟೆ ಪೆಟ್ರೋಲ್ ಬಂಕ್ ನ ಯೂನಿಫಾರಂ ಆಗಿತ್ತು. ಹೀಗಾಗಿ ಆಕೆ ಪೆಟ್ರೋಲ್ ಬಂಕ್ ಉದ್ಯೋಗಿ ಅನ್ನೋದನ್ನ ಆ ಬಟ್ಟೆಯೇ ಹೇಳ್ತಿತ್ತು.

ಅದು ಎಚ್ ಪಿ ಪೆಟ್ರೋಲ್ ಬಂಕ್ ನ ಯೂನಿಫಾರಂ. ಹಾಗಾಗಿ ಕೊಲೆಯಾದ ಹುಡುಗಿ ಇಲ್ಲೇ ಎಲ್ಲೋ ಹತ್ತಿರದ ಊರಿನವರು ಇರಬೇಕು ಅಂತ ಅಂದುಕೊಂಡಿದ್ರು. ಆ ಹುಡುಗಿಯ ಮುಖದ ಮೇಲೆಯೇ ಕಲ್ಲು ಎತ್ತಿ ಹಾಕಿದ್ರಿಂದ ಮುಖದ ಗುರುತು ಸಿಕ್ತಿರಲಿಲ್ಲ. ಅದಾಗ್ಲೇ ರಕ್ತ ಕೂಡಾ ಹರಿದು ಹೋಗಿ ಹೆಪ್ಪುಗಟ್ಟಿತ್ತು. ಅಂದ್ರೆ ಕೊಲೆಯಾಗಿ ಸಾಕಷ್ಟು ಹೊತ್ತು ಕಳೆದು ಹೋಗಿತ್ತು. ಹೀಗಾಗಿ ಅಲ್ಲಿ ಹೆಣ ನೋಡೋದಕ್ಕೆ ಬಂದಿದ್ದ ಜನ ಪೊಲೀಸ್ರಿಗೆ ವಿಷಯ ತಿಳಿಸಿದ್ರು.ಸಂತೆ ಮಾವತ್ತೂರು ಯುಲಿಯೂರು ದುರ್ಗಾದ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತೆ. ಹೀಗಾಗಿ ಅಲ್ಲಿನ ಪೊಲೀಸ್ರು ಜನ ಹೇಳಿದ ಅಡ್ರೆಸ್ ಹುಡ್ಕೊಂಡು ಬಂದಿದ್ರು. ಅಲ್ಲಿಗೆ ಬಂದು ನೋಡಿದ್ರೆ ಹುಡುಗಿ ಮರ್ಡರ್ ಆಗಿರೋದು ಕನ್ಫರ್ಮ್ ಆಗಿತ್ತು.

ನಂತ್ರ ಆ ಹುಡುಗಿಯ ಗುರುತು ಪತ್ತೆಯಾಗದ ಕಾರಣ ಬಾಡಿಯನ್ನ ಆಸ್ಪತ್ರೆಗೆ ದಾಖಲಿಸಿ ತಮ್ಮ ಠಾಣೆಯಲ್ಲಿ ಒಂದು ಪ್ರಕರಣವನ್ನ ದಾಖಲಿಸಿಕೊಂಡ್ರು. ನಂತ್ರ ಆ ಹುಡುಗಿ ಯಾರು ಅಲ್ಲೇಕೆ ಕೊಲೆ ಮಾಡಲಾಗಿದೆ ಅನ್ನೋದನ್ನ ತನಿಖೆ ಮಾಡೋದಕ್ಕೆ ಶುರುಮಾಡಿದ್ರು. ಅವತ್ತು ಆ ಸ್ಥಳಕ್ಕೆ ಎಸ್ಪಿಯವರೇ ಬಂದು ಖುದ್ದು ಪರಿಶೀಲನೆ ಮಾಡಿದ್ರು. ಅಲ್ಲದೆ ಆ ಕೊಲೆಯ ಆರೋಪಿಗಳನ್ನ ಹಿಡಿಯೋದಕ್ಕಾಗಿ ಒಂದು ಸ್ಪೆಷಲ್ ಟೀಂ ಅನ್ನ ರೆಡಿಮಾಡಿದ್ರು. ಯಾಕಂದ್ರೆ ಆ ಕೊಲೆಯ ಕೇಸ್ ನಲ್ಲಿ ಯಾವುದೇ ಸಾಕ್ಷಿಗಳು ಇರಲಿಲ್ಲ. ಜೊತೆಗೆ ಸತ್ತವಳ ಗುರುತು ಕೂಡಾ ಪತ್ತೆಯಾಗಿರಲಿಲ್ಲ.ನಂತ್ರ ಪೊಲೀಸ್ರು ತಮ್ಮ ತನಿಖೆಯ ಪ್ರಥಮ ಹಂತವಾಗಿ ಆ ಹುಡುಗಿಯ ಫೋಟೋವನ್ನ ಎಲ್ಲಾ ಪೊಲೀಸ್ ಠಾಣೆಗಳಿಗೆ ರವಾನೆ ಮಾಡಿದ್ರು.

ಅಲ್ಲದೆ ತಮಕೂರು ಸುತ್ತಮುತ್ತ ಇರೋ ಎಚ್ ಪಿ ಪೆಟ್ರೋಲ್ ಬಂಕ್ ಗಳು ಮತ್ತು ಬೆಂಗಳೂರಿನ ಎಚ್ ಪಿ ಪೆಟ್ರೋಲ್ ಬಂಕ್ ಗಳಲ್ಲಿ ಯಾರಾದ್ರು ಲೇಡಿ ವರ್ಕರ್ ಗಳು ಕಾಣೆಯಾಗಿದ್ದಾರಾ ಅಂತ ಪರಿಶೀಲನೆ ಮಾಡಿದ್ರು. ತುಮಕೂರಿನ ಸುತ್ತಮುತ್ತ ಯಾವುದೇ ಮಿಸ್ಸಿಂಗ್ ಕೇಸ್ ರಿಜಿಸ್ಟರ್ ಆಗಿರಲಿಲ್ಲ. ಇನ್ನು ಪೊಲೀಸ್ರು ಬೆಂಗಳೂರಲ್ಲಿ ಯಾವುದಾದ್ರು ಮಿಸ್ಸಿಂಗ್ ಕೇಸ್ ರಿಜಿಸ್ಟರ್ ಆಗಿರಬಹುದು ಅಂತ ಅಲ್ಲಿ ಇನ್ಫರ್ಮೇಷನ್ ಕಲೆಕ್ಟ್ ಮಾಡೋದಕ್ಕೆ ಶುರುಮಾಡಿದ್ರು. ಯಾಕಂದ್ರೆ ಬೆಂಗಳೂರಿನಿಂದ ಕರ್ಕೊಂಡು ಬಂದು ಇಲ್ಲಿ ಕೊಲೆ ಮಾಡಿರಬಹುದು ಅನ್ನೋ ಅನುಮಾನವು ಪೊಲೀಸ್ರಿಗೆ ಇತ್ತು.

ಹೀಗಾಗಿ ಪೊಲೀಸ್ರು ಆ ಪ್ರಯತ್ನವನ್ನ ಕೂಡಾ ಮಾಡಿದ್ರು. ಪೊಲೀಸ್ರು ಅವತ್ತು ಆ ಹುಡುಗಿಯ ಮೂಲ ಯಾವುದು ಅನ್ನೋದನ್ನ ಪತ್ತೆ ಹಚ್ಚೋದಕ್ಕೆ ಶುರುಮಾಡಿದ್ರು. ಅವರಿಗೆ ತುಮಕೂರಿನ ಸುತ್ತಮುತ್ತ ಆಕೆಯ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ನಂತ್ರ ಪೊಲೀಸ್ರು ಬೆಂಗಳೂರಿನತ್ತ ಆಕೆಯ ಫೋಟೋ ಹಿಡಿದು ಬಂದಾಗ ಅವರಿಗೆ ಒಂದು ಮಾಹಿತಿ ಸಿಕ್ಕಿತ್ತು. ಅದೇನಂದ್ರೆ ದಾಸರಹಳ್ಳಿಯ ಎಚ್ ಪಿ ಪೆಟ್ರೋಲ್ ಬಂಕ್ ನಲ್ಲಿ ಹುಡುಗಿಯೊಬ್ಬಳು ಮಿಸ್ ಆಗಿದ್ದಾಳೆ ಅಂತ ದೂರು ದಾಖಲಾಗಿತ್ತು. ನಂತ್ರ ಪೊಲೀಸ್ರು ಆ ದೂರು ಕೊಟ್ಟಿದ್ದವರನ್ನ ಕಾಂಟ್ಯಾಕ್ಟ್ ಮಾಡಿ ಹುಲಿಯೂರು ದುರ್ಗಾಕ್ಕೆ ಕರ್ಕೊಂಡು ಬಂದಿದ್ದಾರೆ. ಯಾಕಂದ್ರೆ ಆ ಬಾಡಿಯನ್ನ ಅವ್ರು ಐಡೆಂಟಿಫೈ ಮಾಡಬಹುದ ಅಂತ ಅವರನ್ನ ಕರೆಸಿದ್ರು.

ಹಾಗೆ ಬಂದ ಪೋಷಕರು ಆಕೆಯ ಬಾಡಿಯನ್ನ ನೋಡ್ತಿದ್ದ ಹಾಗೆ ಅಯ್ಯೋ ಸರ್ ಇವಳು ನಮ್ಮ ಮಗಳು ಅರ್ಪಿತಾ ಅಂತ ಗೊಳೋ ಅಂತ ಅಳೋದಕ್ಕೆ ಶುರುಮಾಡಿದ್ರು. ಯಾಕಂದ್ರೆ ಆಕೆಯ ಮುಖ ನೋಡಿದ್ರೆ ಆಕೆಯನ್ನ ಗುರುತು ಹಚ್ಚೋದಕ್ಕೆ ಸಾಧ್ಯವಾಗ್ತಿರಲಿಲ್ಲ. ಆಕೆಯ ಕೈ ಮೇಲಿದ್ದ ಒಂದು ಟ್ಯಾಟು ಅದು ಅರ್ಪಿತಾ ಅನ್ನೋದನ್ನ ಹೇಳಿತ್ತು.ಇಲ್ಲಿಂದಲೇ ನೋಡಿ ಕಥೆ ಆರಂಭವಾಗೋದು. ಈ ಅರ್ಪಿತಾ ಯಾರು ಇಲ್ಯಾಕೆ ಕೊಲೆಯಾದ್ಲು ಅನ್ನೋ ಕಥೆ ಶುರುವಾಗೋದು ಇಲ್ಲಿನೇ. ಆದ್ರೆ ಆ ಕಥೆ ಪೊಲೀಸ್ರಿಗೂ ಗೊತ್ತಿರಲಿಲ್ಲ, ಅತ್ತ ಅವರ ಮನೆಯವರಿಗೂ ಗೊತ್ತಿರಲಿಲ್ಲ. ಅವತ್ತು ಪೊಲೀಸ್ರು ಕೇಳಿದ ಪ್ರಶ್ನೆಗೆ ಅವಳ ಪೋಷಕಕರು ಹೇಳಿದ್ದಿಷ್ಟೇ ಸರ್ ಇವಳು ಎಚ್ ಪಿ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡ್ತಿದ್ಲು.

ಪ್ರತಿ ದಿನ ಕೆಲಸ ಮುಗಿಸಿಕೊಂಡು ಮನೆಗೆ ಬರ್ತಿದ್ಲು. ಆದ್ರೆ ಮೊನ್ನೆ ಮಾತ್ರ ಅವಳು ಮನೆಗೆ ಬಂದಿಲ್ಲ ಅಂತ ಅವರ ಪೋಷಕರು ಹೇಳಿದ್ರು. ಆದ್ರೆ ಪೊಲೀಸ್ರು ಇಷ್ಟೇ ಕಥಯನ್ನ ಕೇಳಿ ಸುಮ್ಮನಾಗ್ತಾರ. ಇಲ್ಲ ಅದಕ್ಕೆ ಪೊಲೀಸ್ರು ಅವರ ಹತ್ತಿರ ಮಗಳ ಪರ್ಸನಲ್ ಲೈಫ್ ಬಗ್ಗೆ ಎನ್ ಕ್ವೈರಿ ಮಾಡೋದಕ್ಕೆ ಶುರುಮಾಡಿದ್ರು. ಆಗ ಅರ್ಪಿತಾಳ ಜನ್ಮಕುಂಡಲಿ ಪೊಲೀಸ್ ಸ್ಟೇಷನ್ ನಲ್ಲಿ ಓಪನ್ನ ಆಗೋದಕ್ಕೆ ಶುರುವಾಗಿತ್ತು.ಈ ಅರ್ಪಿತಾ ಬೆಂಗಳೂರಿನ ಕಮಲಾನಗರದ ನಿವಾಸಿ,  ಪಿಯುಸಿಯವರೆಗೆ ಓದಿಕೊಂಡಿದ್ಲು. ನಂತ್ರ ಬಟ್ಟೆಯಂಗಡಿ ಒಂದರಲ್ಲಿ ಆಕೆ ಕೆಲಸ ಮಾಡಿಕೊಂಡಿದ್ಲು. ಹೀಗೆ ಕೆಲಸ ಮಾಡುವಾಗ ಅಲ್ಲಿಗೆ ಲೋಹಿತ್ ಅನ್ನೋ ಹುಡುಗ ಬಟ್ಟೆ ಪರ್ಚೇಸ್ ಮಾಡೋದಕ್ಕೆ ಅಂತ ಬಂದಿದ್ದ.

ಆಗ ಲೋಹಿತ್ ಮತ್ತು ಅರ್ಪಿತಾ ನಡುವೆ ಸ್ನೇಹ ಬೆಳೆದಿತ್ತು. ನೋಡೋದಕ್ಕೆ ಇಬ್ಬರು ಚೆನ್ನಾಗಿಯೇ ಇದ್ರು. ಹೀಗಾಗಿ ಇವರ ಸ್ನೇಹ ಬಹಳ ಬೇಗ ಪ್ರೀತಿಯಾಗಿ ಅರಳಿತ್ತು. ನಂತ್ರ ಇಬ್ಬರು ಕೆಲವು ಕಾಲ ಪ್ರೀತಿಸಿದ್ದಾರೆ. ಆಗ ಇಬ್ಬರು ಇನ್ನು ಮೈನರ್ ಆಗಿದ್ರು. ಅಲ್ಲಿ ಇಲ್ಲಿ ಓಡಾಡೋದು, ತಿನ್ನೋದು ತಿರುಗೋದು, ಮಾತು ಹರಟೆ ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ಈ ಲೋಹಿತ್ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡ್ತಿದ್ದ. ಅವನಿಗೆ ಕೈ ತುಂಬಾ ಸಂಬಳವು ಬರ್ತಿತ್ತು.  ಹೀಗಾಗಿ ಆಕೆಯನ್ನ ಚೆನ್ನಾಗಿಯೇ ಸುತ್ತಾಡಿಸ್ತಿದ್ದ.ಆದ್ರೆ ಇವರ ಕಣ್ಣಾಮಚ್ಚಾಲೆ ಆಟ ಜಾಸ್ತಿ ದಿನ ಗುಪ್ತವಾಗಿ ಉಳಿಯಲಿಲ್ಲ. ಇದು ಹುಡುಗಿಯ ಮನೆಯವರಿಗೆ ಗೊತ್ತಾಯ್ತು.

ತಕ್ಷಣವೇ ಅವ್ರು ಆ ಹುಡುಗನನ್ನ ಕರೆದು ಅವಾಜ್ ಹಾಕಿದ್ರು. ನಮ್ಮ ಹುಡುಗಿಯ ಹಿಂದೆ ಸುತ್ತಾಡಬೇಡ ಅವಳ ಸಹವಾಸಕ್ಕೆ ಬರಬೇಡ ಅಂತ ಹೇಳಿದ್ರು. ಆದ್ರೆ ಇವನು ಅದನ್ನ ಕೇಳಲೇ ಇಲ್ಲ. ನಂತ್ರ ನಮ್ಮ ಮನೆಯಲ್ಲಿ ನಮ್ಮ ಹುಡುಗಿಯನ್ನ ಹದ್ದುಬಸ್ತಿನಲ್ಲಿ ಇಟ್ಕೊಂಡ್ರೆ ಎಲ್ಲಾ ಸರಿಯಿರುತ್ತೆ ಅಂತ ಅಂದುಕೊಂಡು ಇವಳಿಗೆ ಆ ಹುಡುಗನ ಜೊತೆ ಸೇರದಂತೆ ಬೆದರಿಕೆ ಹಾಕಿದ್ರು. ಯಾವಾಗ ಮನೆಯವರು ಸ್ಟ್ರಾಂಗ್ ಆದ್ರೋ ಆಗ ಆಕೆ ಕೂಡಾ ಅವರ ವಿರುದ್ಧ ನಿಂತು ಬಿಟ್ಲು. ಅರ್ಪಿತಾ ತನ್ನ ಲವ್ವರ್ ಲೋಹಿತ್ ಗೆ ಫೋನ್ ಮಾಡಿ ನಾನು ಮನೆ ಬಿಟ್ಟು ಬರ್ತಾ ಇದ್ದೀನಿ. ನನ್ನನ್ನ ಕರ್ಕೊಂಡು ಹೋಗು ಅಂತ ಹೇಳಿದ್ಲು. ಇವನಿಗೋ ಹುಡುಗಿನೇ ಕರ್ಕೊಂಡು ಹೋಗು ಅಂತಿದ್ದಾಳೆ ಅಂದ ಮೇಲೆ ಇನ್ನೇನು ಇದೆ ಒಂದು ಕೈ ನೋಡೇ ಬಿಡೋಣ ಅಂತ ಆಯ್ತು ರೆಡಿಯಾಗಿರು ಕರ್ಕೊಂಡು ಹೋಗ್ತೀನಿ ಅಂತ ಹೇಳಿದ್ದ.

ನಂತ್ರ ಆಕೆ ಮನೆಯಿಂದ ಗಂಟು ಮೂಟೆ ಕಟ್ಕೊಂಡು ಅವನ ಜೊತೆ ಓಡಿ ಬಂದಿದ್ಲು. ನಂತ್ರ ಲೋಹಿತ್ ಒಂದು ಮನೆಯನ್ನ ಮಾಡಿ ಅಲ್ಲಿ ಆಕೆಯ ಜೊತೆ ಲಿವಿಂಗ್ ಟುಗೆದರ್ ಇದ್ದ. ಇಬ್ಬರಿಗೂ ಗಂಡ ಹೆಂಡತಿ ತರಹ ಇರಬೇಕು ಅಂತ ಅನಿಸಿತ್ತು. ಆದ್ರೆ ಮದುವೆಯಾಗಬೇಕು ಅನ್ನೋದು ತಲೆಗೆ ಬರಲೇ ಇಲ್ಲ. ನಂತ್ರ ಒಂದಷ್ಟ ದಿನ ಇಬ್ಬರು ಒಟ್ಟಿಗೆ ಸಂಸಾರ ನಡೆಸಿದ್ರು. ಎಷ್ಟೇ ಅಂದ್ರು ಇಬ್ಬರದ್ದು ಯೌವ್ವನದ ಪರಾಕಾಷ್ಠೆಯಲ್ಲಿರೋ ವಯಸ್ಸು. ಒಂದಿಷ್ಟು ದಿನ ಕಾಮದ ಕುದುರೆಯನ್ನ ಇಬ್ಬರು ಚೆನ್ನಾಗಿಯೇ ಓಡಿಸಿದ್ದಾರೆ. ಸಣ್ಣ ವಯಸ್ಸಿಗೆ ಎಲ್ಲಾ ಎಕ್ಸ್ ಪೀರಿಯನ್ಸ್ ಆದ ಮೇಲೆ ಅವರಿಗೆ ಈ ಸಂಸಾರ ಸಾಕು ಅನ್ನೋ ಅಷ್ಟು ಜಿಗುಪ್ಸೆ ಬಂದಿತ್ತು. ಅಲ್ಲದೆ ಆ ಹೊತ್ತಿಗೆ ಲೋಹಿತ್ ಮೇಲೆ ಆಕೆಗೆ ತಾತ್ಸಾರ ಬಂದು ಬಿಟ್ಟಿತ್ತು. ಒಟ್ಟಿಗೆ ದೇಹ ಸೇರಿತ್ತೆ ವಿನಃಹ ಅವರಿಬ್ಬರ ಮನಸ್ಸು ಒಂದಾಗೋದಕ್ಕೆ ಆ ಮನೆಯಲ್ಲಿ ಸಾಕಾಗಲೇ ಇಲ್ಲ.

ಅದೇನೋ ಗೊತ್ತಿಲ್ಲ. ಇಬ್ಬರು ಇನ್ನು ನಾವು ಒಟ್ಟಿಗೆ ಇರೋದು ಬೇಡ ಅನ್ನೋ ತೀರ್ಮಾನಕ್ಕೆ ಬಂದು ಬಿಟ್ಟಿದ್ರು. ಲೋಹಿತ್ ಗೆ ಒಟ್ಟಿಗೆ ಇದ್ದು ಬದುಕು ನಡೆಸೋಣ ಅನ್ನೋ ಮನಸ್ಸಿತ್ತಾದ್ರು ಅದಕ್ಕೆ ಅರ್ಪಿತಾಗೆ ಮನಸ್ಸಿರಲಿಲ್ಲ. ಅ ಹೂವಿನಿಂದ ಹೂವಿಗೆ ಹಾರೋ ಚಿಟ್ಟೆ. ಇಲ್ಲಿ ಮಕರಂದ ಖಾಲಿಯಾಗಿದೆ ಅನ್ನೋದು ಗೊತ್ತಾಗ್ತಿದ್ದ ಹಾಗೆ ಪ್ಲೇಸ್ ಚೇಂಜ್ ಮಾಡೋದಕ್ಕೆ ಹೊರಟಿದ್ಲು.ನಂತ್ರ ಇದೇ ಸಿಟ್ಟಿಗೆ ಆಕೆ ತನ್ನ ಅಣ್ಣ ಮತ್ತು ತನ್ನ ಹಳೆಯ ಲವ್ವರ್ ಜೊತೆ ಸೇರಿಕೊಂಡು ಆತನ ಮೇಲೆ ಹಲ್ಲೆ ನಡೆಸಿದ್ಲು. ಅವರಿಬ್ಬರು ಇತನಿಗೆ ಹಲ್ಲೆ ನಡೆಸಿ ಇನ್ನು ಇವನ ಸುದ್ದಿಗೆ ಬರಬಾರದು ಅಂತ ಅವಾಜ್ ಹಾಕಿದ್ರ. ನಂತ್ರ ಆತ ಆಕೆಯ ಸುದ್ದಿಗೆ ಹೋಗ್ತಾನೆ ಇರಲಿಲ್ಲ.

ಅಲ್ಲದೆ ಆಕೆಯಿಂದ ಕಿತ್ತುಕೊಂಡು ಬಂದಿದ್ದ ಮೊಬೈಲ್ ಮೆಮೋರಿಯಲ್ಲಿ ಆತನನ್ನ ಕೆರಳಿಸುವ ಒಂದಷ್ಟು ಫೋಟೋ ಮತ್ತು ವೀಡಿಯೋವನ್ನ ನೋಡಿದ್ದ. ಆ ಮೊಬೈಲ್ ನಲ್ಲಿ ಆಕೆ ಇನ್ನಷ್ಟು ಹುಡುಗರ ಜೊತೆ ಲವ್ ಮಾಡ್ತಿರೋದು ಅವರ ಜೊತೆ ಅಶ್ಲೀಲವಾಗಿ ನಡೆದುಕೊಂಡಿರೋದಕ್ಕೆ ಸಾಕ್ಷಿ ಸಿಕ್ಕಿತ್ತು. ಹೀಗಾಗಿ ಆತನ ಈಕೆಯನ್ನ ನಿಯತ್ತಾಗಿ ಪ್ರೀತಿಸಿ ಆಕೇ ಕೆಳಿದ್ದನ್ನೆಲ್ಲ ಕೊಡಿಸಿ ಚೆನ್ನಾಗಿ ನೋಡಿಕೊಂಡ್ರು ಹೀಗೆ ಮಾಡ್ತಾಳಲ್ಲ ಅಂತ ಅವನಿಗೆ ಅನಿಸಿತ್ತು. ಹೀಗಾಗಿ ಆಕೆಗೆ ಸರಿಯಾಗಿ ಬುದ್ಧಿ ಕಲಿಸಬೇಕು ಅಂತ ಅಂದುಕೊಂಡಿದ್ದ.ಅದಕ್ಕೆ ಆಕೆಯನ್ನ ತನ್ನ ಸ್ನೇಹಿತನ ಮನೆಗೆ ಹೋಗಿ ಬರೋಣ ಹಾಸನಕ್ಕೆ ಅಂತ ಹೇಳಿ ಕರೆದಿದ್ದ. ಅದಕ್ಕೆ ಸರಿ ಬಾ ಅಂತ ಅವಳು ಹೇಳಿದ್ಲು. ಆತ ತನ್ನ ಬೈಕ್ ತಗೊಂಡು ಹೋಗಿ ಆಕೆಯನ್ನ ಅದೇ ಎಚ್ ಪಿ ಪೆಟ್ರೋಲ್ ಬಂಕ್ ನಿಂದ ಪಿಕ್ ಮಾಡಿದ್ದ.

ನಂತ್ರ ಆಕೆಯನ್ನ ಹಾಸಕ್ಕೆ ಅಂತ ಕರ್ಕೊಂಡು ಹೊರಟಿದ್ದ. ಈ ಮಧ್ಯೆ ಆಕೆ ತನ್ನ ಹಳೆ ಲವ್ವರ್ ಮತ್ತು ಅಣ್ಣನಿಗೆ ಫೋನ್ ಮಾಡಿ ನಾನು ಲೋಹಿತ್ ಜೊತೆ ಹಾಸನಕ್ಕೆ ಹೋಗ್ತಿದ್ದೀನಿ ಅಂತ ಹೇಳಿದ್ಲು. ಆ ಮಾತನ್ನ ಕೇಳಿ ಆತನಿಗೆ ಹೆದರಿಕೆಯಾಗಿತ್ತು. ಯಾಕಂದ್ರೆ ಇವರೆಲ್ಲಾ ಸೇರಿ ನನ್ನನ್ನೇ ಮುಗಿಸ್ತಾರೆ ಅಂತ ಅಂದುಕೊಂಡಿದ್ದ. ಹೀಗಾಗಿ ಕುಣಿಗಲ್ ಹತ್ತಿರ ಹೋಗ್ತಿದ್ದ ಹಾಗೆ ಸಂತೆಮಾವತ್ತೂರಿನ ನಿರ್ಜನ ಪ್ರದೇಶಕ್ಕೆ ಕರ್ಕೊಂಡು ಹೋಗಿದ್ದ. ಅಲ್ಲಿ ಆಕೆಯನ್ನ ಮಖದ ಮೇಲೆ ಕಲ್ಲು ಎತ್ತಿಹಾಕಿ ಆಕೆಯನ್ನ ಕೊಲೆ ಮಾಡಿದ್ದ. ನಂತ್ರ ಬಾಡಿಯನ್ನ ಅಲ್ಲೇ ಬಿಟ್ಟು ಪರಾರಿಯಾಗಿದ್ದ.ಅದ್ಯಾವಾಗ ಪೊಲೀಸ್ರಿಗೆ ಪೋಷಕರು ಇತನ ಲವ್ ಸ್ಟೋರಿಯನ್ನ ಹೇಳಿದ್ರೋ ಆಗ ಅವರಿಗೆ ಅನುಮಾನ ಬಂದಿತ್ತು. ಅಲ್ಲದೆ ಏನಕ್ಕೂ ಇರಲಿ ಅಂತ ಪೊಲೀಸ್ರು ಎಚ್ ಪಿ ಬಂಕ್ ನ ಸಿಸಿಟಿವಿಯನ್ನ ವೀಕ್ಷಿಸಿದ್ದಾರೆ.

ಆಗ ಅದ್ರಲ್ಲಿ ಇತ ಅರ್ಪಿತಾಳನ್ನ ಬೈಕ್ ನಲ್ಲಿ ಕೂರಿಸಿಕೊಂಡು ಹೋಗ್ತಿರೋ ದೃಶ್ಯ ಸೆರೆಯಾಗಿತ್ತು. ಹೀಗಾಗಿ ಪೊಲೀಸ್ರಿಗೆ ಇತನೇ ಕೊಲೆ ಮಾಡಿದ್ದು ಅನ್ನೋದು ಕನ್ಫರ್ಮ್ ಆಗಿತ್ತು. ನಂತ್ರ ಪೊಲೀಸ್ರು ಆತನನ್ನ ಎಳ್ಕೊಂಡು ಬಂದು ವಿಚಾರಣೆ ನಡೆಸಿದಾಗ ನಡೆದ ಘಟನೆಯನ್ನೆಲ್ಲಾ ಎಳೆಎಳೆಯಾಗಿ ಬಾಯಿಬಿಟ್ಟಿದ್ದ.ಅವನಿಗೆ ಆಕೆ ಮೋಸ ಮಾಡಿದ್ಲು ಅನ್ನೋದಕ್ಕಿಂತ ಹೆಚ್ಚಾಗಿ ಅವಳೆಲ್ಲಾ ತನ್ನ ಮೇಲೆ ಮುಗಿಬಿದ್ದು ನನ್ನನ್ನೇ ಮುಗಿಸಿಬಿಡ್ತಾಳೆ ಅನ್ನೋ ಚಿಂತೆಯೇ ಜಾಸ್ತಿಯಾಗಿತ್ತು. ಹೀಗಾಗಿ ಆಕೆಯನ್ನ ನಾನೇ ಮೊದಲು ಮುಗಿಸಬೇಕು ಅಂತ ಅಂದುಕೊಂಡಿದ್ದ. ಅದೇ ರೀತಿ ಮಾಡಿದ್ದ ಕೂಡ. ಆಕೆ ಈ ಹಿಂದೆಯೆ ಒಮ್ಮ ಅವನ ಮೇಲೆ ಅಟ್ಯಾಕ್ ಮಾಡಿಸಿದ್ಲು. ಹೀಗಾಗಿ ಮತ್ತೆಲ್ಲಿ ನನ್ನ ಮೇಲೆ ಹಲ್ಲೆ ಮಾಡ್ತಾರೋ ಅನ್ನೋ ಕಾರಣಕ್ಕೆ ಆತ ಕೊಲೆ ಮಾಡಿದ್ದ.

ಪೊಲೀಸ್ರು ವಿಚಾರಣೆ ನಡೆಸಿದಾಗ ಆಕೆಯ ಎಲ್ಲಾ ಕಲರ್ ಕಲರ್ ಸ್ಟೋರಿಯನ್ನ ಪೊಲೀಸ್ರ ಮುಂದೆ ಹೇಳಿದ್ದ. ಅಲ್ಲದೆ ಆಕೆ ಅದ್ಯಾರ್ಯಾರ ಜೊತೆಯೆಲ್ಲಾ ಲವ್ ಡವ್ ಅಂತ ತಿರುಗಾಡ್ತಿದ್ಲೋ  ಅದಕ್ಕೆಲ್ಲಾ ಸಾಕ್ಷಿ ಕೊಟ್ಟಿದ್ದ. ಆದ್ರೆ ಆ ಸಾಕ್ಷಿಯಿಂದ ಪೊಲೀಸ್ರಿಗೆ ಆಗಬೇಕಾದದ್ದು ಏನು ಇರಲಿಲ್ಲ. ಯಾಕಂದ್ರೆ ಆಕೆ ಸತ್ತು ಹೋಗಿ ಆಗಿತ್ತು. ಆಕೆ ಬದುಕಿದ್ರೆ ಇವನಿಗೆ ಅದೆಲ್ಲಾ ಅಸ್ತ್ರವಾಗ್ತಿತ್ತೋ ಏನೋ. ಆದ್ರೆ ಆಕೆಯೇ ಬದುಕಿಲ್ಲದ ಮೇಲೆ ಆ ಸಾಕ್ಷಿಗಳೆಲ್ಲಾ ವ್ಯರ್ಥವಾಗಿತ್ತು. ಇದೇ ಕಾರಣಕ್ಕೆ ನಾನು ಕೊಲೆ ಮಾಡಿದೆ ಅನ್ನೋದನ್ನ ಹೇಳಬಹುದಿತ್ತೇ ವಿನಃ ಬೇರೆನನ್ನು ಸಾಧಿಸೋದಕ್ಕೆ ಅಂದ್ರಿಂದ ಸಾಧ್ಯವಾಗ್ತಿರಲಿಲ್ಲ.

ಲೋಹಿತ್ ತನಗೆ ಲವ್ ನಲ್ಲಿ ಮೋಸವಾಗಿದ್ರೆ ಸುಮ್ಮನಿರ್ತಿದ್ದ ಅಂತ ಅನ್ಸುತ್ತೆ. ಅದರ ಜೊತೆ ಆಕೆ ಆತನ ಮೇಲೆ ದೈಹಿಕವಾಗಿಯು ಹಲ್ಲೆ ನಡೆಸಿದ್ಲು. ಹೀಗಾಗಿ ಆತನ ಹಠಕ್ಕೆ ಬಿದ್ದ. ತನ್ನೊಳಗಿನ ಕ್ರೌರ್ಯವನ್ನ ಎಬ್ಬಿಸಿ ರಾಕ್ಷಸನಂತೆ ಆಗಿಬಿಟ್ಟಿದ್ದ. ಇದೇ ಕಾರಣಕ್ಕೆ ಈಗ ಜೈಲ್ ನಲ್ಲಿ ಲೈಫ್ ಕಳೆಯೋದಕ್ಕೆ ಹೋಗಿದ್ದಾನೆ. ಪ್ರೇಮಿಗಳ ದಿನಕ್ಕೆ ಅಂತ ಕಾದು ಕುಳಿತಿರೋ ಸಾವಿರಾರು ಪ್ರೇಮಿಗಳು ಲವ್ ನಲ್ಲಿ ಲಾಕ್ ಆಗೋ ಮೊದಲು ಒಂದಿಷ್ಟು ಭದ್ರ ಯೋಚನೆ ಮತ್ತು ಯೋಜನೆಗಳೊಂದಿಗೆ ಮುಂದುವರೆದ್ರೆ ಲೈಫ್ ಚೆನ್ನಾಗಿರುತ್ತೆ. ಇಲ್ಲಾ ಅಂದ್ರೆ ಇವರ ರೀತಿ ಒಬ್ರು ಮಣ್ಣು ಸೇರಿದ್ರೆ ಇನ್ನೊಬ್ರು ಜೈಲು ಸೇರಬೇಕಾಗುತ್ತೆ.

LEAVE A REPLY

Please enter your comment!
Please enter your name here