Home Crime ಅವಳು ಮನೆಗೆ ಹೆಂಡ್ತೀ ಅಲ್ಲ ಊರಿಗೇ ಹೆಂಡ್ತಿ..! ಕಾಮವನ್ನ ನೆತ್ತಿಗೇಗಿಸಿಕೊಂಡಿದ್ದ ಇವಳಿಗಾಗಿ ನಿಂತಿರ್ತಿತ್ತು ಗಂಡಸರ ಕ್ಯೂ..!...

ಅವಳು ಮನೆಗೆ ಹೆಂಡ್ತೀ ಅಲ್ಲ ಊರಿಗೇ ಹೆಂಡ್ತಿ..! ಕಾಮವನ್ನ ನೆತ್ತಿಗೇಗಿಸಿಕೊಂಡಿದ್ದ ಇವಳಿಗಾಗಿ ನಿಂತಿರ್ತಿತ್ತು ಗಂಡಸರ ಕ್ಯೂ..! ಗಂಡನೆದುರೇ ನಡೆಸಿದ್ಲು ಶೃಂಗಾರ ಈ ರತಿ..!

5785
0
SHARE

ಹೆಸರು ಶೋಭಾ ವಾಲಿ ಅಂತ. ಕಲರ್ ಡಿಮ್ ಆಗಿದ್ರು ಮೇಡಂ ಲೈಫಲ್ಲಿ ಕಲರ್ ಕಲರ್ ಆಟ ಆಡಿದ್ದಾರೆ. ನಮ್ಮ ಪೊಲೀಸ್ರು ಸುಮ್ಮ ಸುಮ್ಮನೆ ಮನೆಯಲ್ಲಿ ನೆಟ್ಟಗೆ ಸಂಸಾರ ಮಾಡೋರನ್ನ ಕರ್ಕೊಂಡು ಬರ್ತಾರಾ ಹೇಳಿ. ಹೀಗೆ ದಾರಿ ಬಿಟ್ಟವರನ್ನೇ ಅಲ್ವಾ ಅವ್ರು ಪೊಲೀಸ್ ಠಾಣೆ ದಾರಿ ತೋರಿಸೋದು. ಈಕೆಯೂ ಹಾಗೆ ದಾರಿ ಬಿಟ್ಟು ಅಡ್ಡ ದಾರಿ ಹಿಡಿದಿದ್ದಕ್ಕೆ ಖಾಕಿ ಸೊಂಟಕ್ಕೆ ಕೈ ಹಾಕಿ ಅವಳನ್ನ ಎಳ್ಕೊಂಡು ಬಂದಿದ್ದು. ಪೊಲೀಸ್ರು ಹೀಗೆ ಫುಲ್ ಸೆಕ್ಯೂರ್ ಆಗಿ ಕರ್ಕೊಂಡು ಬರೋ ಹಾಗೆ ಇವಳು ಮಾಡಿರೋ ಕೆಲಸ ಅಂದ್ರೆ ತನ್ನ ಗಂಡನನ್ನೇ ಕೊಂದಿರೋದಕ್ಕೆ. ಎರಡು ಮಕ್ಕಳ ತಾಯಿ ಎರಡೆರಡು ಜನರ ಜೊತೆ ಚೆಲ್ಲಾಟವಾಡ್ತಿರೋದನ್ನ ನೋಡಿದ ಗಂಡನನ್ನ ಈಕೆ ಕೊಂದಿದ್ದಾಳೆ.

ಅದಕ್ಕೆ ನೋಡಿ ಪೊಲೀಸ್ರು ಬಾರಮ್ಮ ತಾಯಿ ನಿನ್ನಂತಹವರು ಮರ್ಯಾದಸ್ಥರು ವಾಸ ಮಾಡೋ ಜಾಗದಲ್ಲಿ ಇದ್ರೆ ಊರಿಗೆ ಊರೇ ರೆಡ್ ಲೈಟ್ ಏರಿಯಾ ಆಗುತ್ತೆ , ನಿನಗೆ ಬೇರೆ ಜಾಗ ಇದೆ ಬಾರಮ್ಮ ಅಂತ ಕರ್ಕೊಂಡು ಬಂದಿದ್ದಾರೆ.ಶೋಭಾ ವಾಲಿ ಧಾರವಾಡ ಜಿಲ್ಲೆಯ ನಾವಳ್ಳಿ ಅನ್ನೋ ಸಣ್ಣ ಊರಿನವಳು. ಈಕೆಗೆ 10ವರ್ಷಗಳ ಹಿಂದೆ ಮಂಜುನಾಥ್ ವಾಲಿ ಅನ್ನೋ ವ್ಯಕ್ತಿಯ ಜೊತೆ ಮದುವೆ ಮಾಡಿಕೊಡಲಾಗಿತ್ತು. ಮಂಜುನಾಥ್ ವಾಲಿ ಗದಗದ ಗಜೇಂದ್ರಗಡ ಪಟ್ಟಣದ ಉಣಚಗೇರಿ ಅನ್ನೋ ಊರಿನವನು. ಇಲ್ಲಿಗೆ 10 ವರ್ಷಗಳ ಹಿಂದೆ ಮದುವೆಯಾಗಿ ಬಂದವಳೇ ಈ ಶೋಭಾ. ಅದೇನೋ ಮಾತಿಗೆ ಹೇಳ್ತಾರಲ್ಲ ಇವಳು ನಮ್ಮೂರಿನ ಸೊಸೆ ಅಂತ. ಹಾಗೆ ಇಲ್ಲಿ ಸ್ವಲ್ಪ ಬದಲಾವಣೆ ಮಾಡ್ಕೊಳ್ಳಬೇಕು ನೋಡಿ. ಯಾಕಂದ್ರೆ ಒಂದಿಷ್ಟು ಗಂಡಸರು ಇವಳು ಈ ಊರಿಗೆ ಕಾಲಿಟ್ಟ ನಂತ್ರ ಇವಳು ನಮ್ಮೂರ ಹೆಂಡ್ತಿ ಅನ್ನೋದಕ್ಕೆ ಶುರುಮಾಡಿದ್ರು.

ಅಂದ್ರೆ ನಿಮಗೂ ಅರ್ಥವಾಗಿರಬೇಕು. ಶೋಭಕ್ಕ ಅದ್ಯಾಗೆ ಊರ ತುಂಬಾ ಹೆಸರು ಮಾಡಿದ್ಲು ಅಂತ. ಶೋಭಾ ಮಂಜುನಾಥನ ಮನೆ ತುಂಬೋದಕ್ಕೂ ಮೊದಲು ಮಂಜುನಾಥನಿಗೆ ಒಂದು ಮದುವೆಯಾಗಿತ್ತು. ಅದು ಬಾಲ್ಯವಿವಾಹ. ಆದ್ರೆ ಬಾಲ್ಯವಿವಾಹವಾದ ಬಾಲಕಿ ಬಾಲ್ಯದಲ್ಲೇ ಇವನನ್ನ ಬಿಟ್ಟು ಹೋಗಿದ್ಲು. ನಂತ್ರ ಆತ ವಯಸ್ಸಿಗೆ ಬಂದ ಮೇಲೆ ಇವನ ಮನೆ ಮನ ತುಂಬಿದ್ದೇ ಈ ಶೋಭಾ.ಶೋಭಾ ಈ ಮನೆಗೆ ಕಾಲಿಟ್ಟಾಗ ಮನೆ ಬೆಳಗುವ ನಂದಾದೀಪವಾಗ್ತಾಳೆ ಅಂತ ಎಲ್ಲಾ ಅಂದುಕೊಂಡಿದ್ರು. ಮನೆಯಲ್ಲಿ ದೀಪ ಹಚ್ಚೋ ಹೆಣ್ಣು ಅಂತ ಎಲ್ಲಾ ಅಂದುಕೊಂಡಿದ್ರು. ಒಂದಿಷ್ಟು ಇವಳು ಹಾಗೆ ನಡ್ಕೊಂಡಿದ್ಲು. ಊರು ಹೊಸದಾಗಿದ್ರಿಂದ ಶೋಭಾ ತಾನಾಯ್ತು ತನ್ನ ಗಂಡ ಆಯ್ತು ಅಂತ ಚೆನ್ನಾಗಿಯೇ ಇದ್ಲು. ನಂತ್ರ ನೋಡಿ ಸಂಜೆ ದೀಪ ಹಚ್ಚಬೇಕಾದವಳು ಗಂಡ ಇಲ್ಲದಾಗ ಅದೇ ಮನೆಯ ದೀಪ ಆರಿಸೋದಕ್ಕೆ ಶುರುಮಾಡಿದ್ಲು. ಮಂಜುನಾಥ ಗಜೇಂದ್ರಗಡದ ಎಪಿಎಂಸಿಯಲ್ಲಿ ಒಂದು ದಲ್ಲಾಳಿ ಅಂಗಡಿಯನ್ನ ಇಟ್ಕೊಂಡಿದ್ದ.

ತಂದೆ ಮಾಡ್ತಿದ್ದ ಕೆಲಸವನ್ನೇ ತಾನು ಮುಂದುವರೆಸಿದ್ದ. ಆದ್ರೆ ಅದೇನು ಅವನಿಗೆ ಆ ಕೆಲಸ ಕೈ ಹಿಡಿಯಲಿಲ್ಲ. ಹೀಗಾಗಿ ಅದಕ್ಕೆ ಗುಡ್ ಬೈ ಹೇಳಿ ತನ್ನ ಊರಲ್ಲೇ ಇದ್ದ ಜಮೀನಿನಲ್ಲಿ ವ್ಯವಸಾಯ ಮಾಡ್ಕೊಂಡು ಹೆಂಡ್ತಿ ಜೊತೆ ಚೆನ್ನಾಗಿಯೇ ಇದ್ದ. ಸಂಸಾರ ಚೆನ್ನಾಗಿರೋವಾಗ ಎರಡು ಮಕ್ಕಳು ಆಗಿತ್ತು. ಅಲ್ಲದೆ ಇವನಿಗೆ ತನ್ನ ಮನೆಯ ಹತ್ತಿರವೇ ಮೂರುವರೆ ಎಕರೆ ಜಾಗವಿತ್ತು. ಅದನ್ನ ಅಣ್ಣ ಶಶಿಧರ್ ವಾಲಿ ಜೊತೆ ಮಾತನಾಡಿಕೊಂಡು ಅದನ್ನ ಸೈಟ್ ಮಾಡಿ ಮಾರಾಟ ಮಾಡೋಣ ಅಂತ ಅಂದುಕೊಂಡಿದ್ದ. ಹೀಗೆ ಅಣ್ಣ ತಮ್ಮ ಇಬ್ಬರು ಇರೋ ಭೂಮಿಯಲ್ಲಿ ವ್ಯವಸಾಯ ಮಾಡ್ಕೊಂಡಿದ್ರು. ಇನ್ನೊಂದು ಕಡೆ ಸೈಟ್ ಮಾರಾಟ ಮಾಡೋದಕ್ಕೂ ಯೋಚನೆ ಮಾಡಿದ್ರು. ಅದಲ್ಲದೆ ಸಂಸಾರವೂ ಚೆನ್ನಾಗಿ ನಡೆಯುತ್ತಿತ್ತು. ಹೀಗಾಗಿ ಮಂಜುನಾಥನಿಗೆ ಸ್ವರ್ಗ ಮೂರೇ ಗೇಣು ಅನ್ನೋ ಹಾಗೆ ಇತ್ತು. ಅಲ್ಲದೆ ಮಂಜುನಾಥ್ ನಿಗೆ ಕೃಷಿ ಕೆಲಸ ದಿನ ಇಲ್ಲದೇ ಇರೋದ್ರಿಂದ ದಿನ ಕುಡ್ಕೊಂಡು ಸರಿಯಾದ ಸಮಯಕ್ಕೆ ಮನೆಗೆ ಬರ್ತಿರಲಿಲ್ಲ.

ಹಾಗಂತ ಮನೆಹಾಳು ವ್ಯಕ್ತಿಯೇನು ಆಗಿರಲಿಲ್ಲ. ಕುಡಿಯೋದು ಒಂದು ವೀಕ್ನೇಸ್ ಆಗಿತ್ತು ಅಷ್ಟೇ ಆತನಿಗೆ. ಆದ್ರೆ ಮನೆಯಲ್ಲೇ ಇರ್ತಿದ್ದ ಶೋಭಾ ಆಗ ತನ್ನ ಅಸಲಿ ಬುದ್ಧಿಯನ್ನ ತೋರಿಸೋದಕ್ಕೆ ಶುರುಮಾಡಿದ್ಲು. ಶೋಭಾ ಮದುವೆಗೂ ಮೊದಲು ತನ್ನೂರಿ ಪಡ್ಡೆ ಹೈಕಳ ಪಾಲಿಗೆ ರಾಣಿ ಜೇನಾಗಿದ್ದವಳು. ಆ ಊರಲ್ಲಿ ಶೋಭಾ ಅಂದ್ರೆ ಸಾಕು ಹುಡುಗರು ಶೋಭನಾ ಮಾಡ್ಕೊಳ್ಳೋದಕ್ಕೆ ರೆಡಿ ಮಾಡ್ಕೊಳ್ತಿದ್ರು. ಅಷ್ಟು ಫೇಮಸ್ ಆಗಿದ್ಲು ಶೋಭಾ, ಅಷ್ಟೇ ಅಲ್ಲ ಆ ಊರಿಗೆಲ್ಲಾ ಎಂಟರ್ ಟೈನ್ ಮೆಂಟ್ ಅಂದ್ರೆ ಇವಳೇ ಅನ್ನೋ ಹಾಗೆ ಎಲ್ಲರನ್ನ ರಂಜಿಸಿದ್ಲು. ಎಷ್ಟಾದ್ರೂ ಹೆಣ್ಣು ಹೆತ್ತವರು ಇದನ್ನೆಲ್ಲಾ ತಡೆದುಕೊಳ್ತಾರಾ ಹೇಳಿ. ಅದಕ್ಕೆ ಆಕೆಯನ್ನ ದೂರದ ಊರಿಗೆ ಮದುವೆ ಮಾಡಿಕೊಟ್ಟು ಕಳುಹಿಸಿದರು. ಹತ್ತಿರ ಎಲ್ಲಾದ್ರು ಮದುವೆ ಮಾಡಿಕೊಟ್ರೆ ಇವಳು ಸಂಸಾರ ಮಾಡೋದಕ್ಕಿಂತ ಸರಸ ಮಾಡೋದೆ ಜಾಸ್ತಿಯಾಗುತ್ತೆ ಅಂತ ಆ ಊರಿನಿಂದ ದೂರದ ಊರಿಗೆ ಮದುವೆ ಮಾಡಿಕೊಟ್ಟಿದ್ರು.

ಗಂಡ ಎದೆ ಮೇಲೆ ಕಾಲಿಟ್ಟು ಹೋದ ಮೇಲೆ ಆಕೆಗೆ ನೆನಪಾಗಿದ್ದು  ತನ್ನಿಬ್ಬರು ಪ್ರೇಮಿಗಳು. ತಕ್ಷಣವೇ ಆಕೆ ಅವರಿಬ್ಬರಿಗೂ ಫೋನ್ ಮಾಡಿದ್ದಾಳೆ. ಆಕೆಯಿಂದ ಫೋನ್ ಹೋದ್ರೆ ಅವತ್ತು ಸ್ವರ್ಗ ನೋಡಬಹುದು ಅನ್ನೋದು ಅವರಿಗೂ ಗೊತ್ತಿತ್ತು. ಹೀಗಾಗಿ ಅವರಿಬ್ಬರು ನಾ ಮುಂದು ತಾ ಮುಂದು ಅಂತ ಓಡೋಡಿ ಶೋಭಾನ ಮನೆಗೆ ಬಂದಿದ್ದಾರೆ.ಶೋಭಾ ಫೋನ್ ನಲ್ಲಿ ಯಾವುದೇ ವಿಷಯ ಹೇಳಿರಲಿಲ್ಲ. ಆದ್ರೆ ಇಬ್ಬರಿಗೂ ಫೋನ್ ಮಾಡಿ ಮನೆಗೆ ಬನ್ನಿ ಅಂತ ಹೇಳಿದ್ಲು. ಇವಳು ಫೋನ್ ಮಾಡ್ತಿದ್ದ ಹಾಗೆ ಒಂದೇ ಮೈದಾನದಲ್ಲಿ ಆಟವಾಡಿದ್ದ ಇಬ್ಬರು ಆಟಗಾರರು ಅಲ್ಲಿ ಹಾಜರಿದ್ರು. ಅವ್ರು ಇವತ್ತು ಮತ್ತೆ ಲೈಟಾಗಿ ಸ್ವರ್ಗಕ್ಕೆ ಹೋಗಿ ಬರಬಹುದು ಅಂತ ಅಂದುಕೊಂಡು ಅಲ್ಲಿಗೆ ಬಂದಿದ್ರು. ಆದ್ರೆ ಅಲ್ಲಿ ಹೋಗಿ ನೋಡಿದ್ರೆ ಬೇರೆಯೇ ಆಗಿತ್ತು. ಆಕೆ ತಲೆಯಿಂದ ರಕ್ತ ಹರಿಯುತ್ತಿತ್ತು. ಆಕೆ ತನ್ನ ಗಂಡ ನನಗೆ ಹೊಡೆದು ಮನೆಯಿಂದ ಹೊರಗೆ ಹೋಗಿದ್ದಾನೆ ಅಂತ ಹೇಳಿದ್ಲು. ತಕ್ಷಣವೇ ಇಬ್ಬರು ಆಕೆಯನ್ನ ಕರ್ಕೊಂಡು ಸರ್ಕಾರಿ ಆಸ್ಪತ್ರೆಗೆ ಹೋಗಿದ್ದಾರೆ.

ಆಸ್ಪತ್ರೆಯಲ್ಲಿ ಆಕೆಗೆ ಚಿಕಿತ್ಸೆಯನ್ನು ಕೊಡಿಸಿದ್ದಾರೆ. ಸ್ವಲ್ಪ ಸುಧಾರಿಸಿಕೊಳ್ತಿದ್ದ ಹಾಗೆ ಅವಳು ಗಂಡನ ವಿರುದ್ಧ ಬುಸುಗುಡೋದಕ್ಕೆ ಶುರುಮಾಡಿದ್ಲು.ವಾಚಾಮಗೋಚರ ಗಂಡನಿಗೆ ಬೈಯುತ್ತ ಇವನನ್ನ ಸುಮ್ಮನೆ ಬಿಟ್ರೆ ಆಗೋದಿಲ್ಲ. ನೀವು ನಮ್ಮ ಮನೆಗೆ ಬೇಕಾದ ಬಾಗಿಲು ತಕ್ಕೊಂಡು ಬರಬೇಕು ಅಂತ ಅಂದ್ರೆ ಇವನಿಗೆ ಏನಾದ್ರು ಮಾಡ್ರಲಾ ಅಂತ ಆಜ್ಞೆ ಹೊರಡಿಸಿದ್ಲು. ಇಷ್ಟು ಹೇಳ್ತಿದ್ದ ಹಾಗೆ ಅವ್ರು ಏನಾದ್ರು ಮಾಡಲೇ ಬೇಕು ಅಂತ ಅವ್ರು ಸಾಥ್ ನೀಡಿದ್ರು. ಅಲ್ಲಿಗೆ ಮೂರು ಜನ ಸೇರಿ ಗಂಡ ಮಂಜುನಾಥ್ ನನ್ನ ಮುಗಿಸೋದಕ್ಕೆ ಯೋಚನೆ ಮಾಡ್ತಾರೆ. ಅಲ್ಲದೆ ಶೋಭಾ ನೀವು ನನ್ನ ಗಂಡನ ಮುಗಿಸಿದ್ರೆ ಇಬ್ಬರುಗೂ ಸೈಟ್ ಕೊಡ್ತೀನಿ ಅಂತ ಬೇರೆ ಹೇಳಿದ್ಲು. ಕದ್ದು ಮುಚ್ಚಿ ಎಷ್ಟು ದಿನ ಅಂತ ನಿನ್ನ ಸೆರಗಲ್ಲಿ ಅವಿತುಕೊಳ್ಳೋದು ಇನ್ಮೇಲೆ ನಾವಿಬ್ರು ಡೈರೆಕ್ಟ್ ಆಗೇ ಕದ ತಟ್ತೀವಿ ಅಂತ ಅವ್ರು ತೀರ್ಮಾನಿಸಿದ್ರು.

ಅದಕ್ಕೆ ಮೂವರು ಸೇರಿ ಆಸ್ಪತ್ರೆಯಲ್ಲಿ ಅವನನ್ನ ಮುಗಿಸೋದಕ್ಕೆ ಪ್ಲಾನ್ ಮಾಡ್ತಾರೆ. ನೀನು ಇಲ್ಲಿಂದ ಟ್ರೀಟ್ ಮೆಂಟ್ ತಗೊಂಡು ಮನೆಗೆ ಹೋಗು ನಾವು ಅವನಿಗೆ ಬುದ್ಧಿ ಕಲಿಸಿ ಬರ್ತೀವಿ ಅಂತ ಹೊರಟು ನಿಂತ್ರು. ಜೊತೆಗೆ ಹೋಗುವಾಗ ಇವರ ಸ್ನೇಹಿತರಾದ ಮಲ್ಲೇಶ್ ರಾಥೋಡ್ ಮತ್ತು ಗೋಪಾಲ್ ರಾಥೋಡ್ ಗೆ ಫೋನ್ ಮಾಡಿದ್ದಾರೆ. ಇಬ್ಬರು ಬನ್ನಿ ಇವತ್ತು ನಮ್ಮ ಡಾರ್ಲಿಂಗ್ ಗಂಡನಿಗೆ ಒಂದು ಗತಿ ಕಾಣಿಸೋಣ ಅಂತ ಹೇಳಿ ಹೊರಟಿದ್ದಾರೆ.ಅಷ್ಟೊತ್ತಿಗಾಗ್ಲೇ ಮಂಜುನಾಥ ತಲೆಕೆಡಿಸಿಕೊಂಡು ಕುಡಿಯೋದಕ್ಕೆ ಶುರುಮಾಡಿದ್ದ. ಈ ನಾಲ್ಕುಜನ ಸೇರಿ ಗಂಜೇಂದ್ರಗಢದ ಎಂಎಸ್ ಐಎಲ್ ಗೆ ಹೋಗಿ ಎಣ್ಣೆ ತಗೊಂಡಿದ್ದಾರೆ. ನಂತ್ರ ಅಲ್ಲೇ ಇದ್ದ ಮಂಜುನಾಥನಿಗೆ ಬಾರೋ ಪಾರ್ಟಿ ಮಾಡೋಣ ಅಂತ ಕರೆದಿದ್ದಾರೆ. ಅವನು ನಡಿರಿ ಹೋಗೋಣ ಅಂತ ಇವರ ಜೊತೆ ಹೊರಟಿದ್ದಾನೆ. ಅವನನ್ನ ಕರ್ಕೊಂಡು ಎಲ್ಲಾ ಅಲ್ಲೇ ಹತ್ತಿರದಲ್ಲಿ ಇದ್ದ ಹಳ್ಳದ ತೀರಕ್ಕೆ ಹೋಗಿದ್ದಾರೆ.

ಅಲ್ಲಿ ಅವನಿಗೆ ಸರಿಯಾಗಿ ಕುಡಿಸಿದ್ದಾರೆ. ಎಷ್ಟು ಕುಡಿತಿಯೋ ಕುಡಿ ಅಂತ ಹೇಳಿದ್ದಾರೆ. ಆತ ಕೂಡಾ ಟೆನ್ ಷನ್ ನಲ್ಲಿ ಫುಲ್ ಟೈಟ್ ಆಗಿದ್ದಾನೆ. ಆಗ ಆತನನ್ನ ಅಲ್ಲೇ ಅಡ್ಡ ಮಲಗಿಸಿ ಅವನ ಕಾಲನ್ನ ಮುರಿದಿದ್ದಾರೆ. ನಂತ್ರ ಮನಸೋಇಚ್ಛೆ ಅವನಿಗೆ ಥಳಿಸಿದ್ದಾರೆ. ಬಳಿಕ ಅಲ್ಲೇ ಇದ್ದ ಇಟ್ಟಿಗೆಯಿಂದ ಅವನ ತಲೆ ಮೇಲೆ ಎತ್ತಿ ಹಾಕಿದ್ದಾರೆ. ಅಲ್ಲಿಗೆ ಇವರ ಲೈನ್ ಕ್ಲಿಯರ್ ಆಗಿತ್ತು ಅವನು ಖಲ್ಲಾಸ್ ಆಗಿದ್ದ.ಆ ಹೆಣವನ್ನ ಅವ್ರು ಅಲ್ಲೇ ಬಿಟ್ಟು ಸೀದಾ ಮನೆಗೆ ಬಂದಿದ್ದಾರೆ. ಮಾರನೇ ದಿನ ಮುತ್ತಪ್ಪ ಎಂದಿನಂತೆ ತನ್ನ ಕೆಲಸ ಶುರುಮಾಡಿದ್ದ. ಅಲ್ಲದೆ ಅವತ್ತು ಮುನಿಸಿಪಲ್ ಕಾಲೇಜು ಮೈದಾನದಲ್ಲಿ ನಡೆದಿದ್ದ ಬಿಜೆಪಿ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ. ಅಲ್ಲದೆ ಎಂಪಿ, ಎಂಎಲ್ ಎಗಳ ಜೊತೆ ಫೋಟೋ ತೆಗೆಸಿಕೊಂಡು ಫೇಸ್ ಬುಕ್ ಗೆ ಹಾಕಿಕೊಳ್ತಿದ್ದ. ರಾತ್ರಿ ನಾವೆಲ್ಲಾ ಸೇರಿ ಒಂದು ಕೊಲೆ ಮಾಡಿದ್ದೀವಿ ಅನ್ನೋ ಫೀಲ್ ಅವನಲ್ಲಿ ಇರಲಿಲ್ಲ. ಅಷ್ಟೊತ್ತಿಗೆ ರಾತ್ರಿ ಮನೆಗೆ ಬಾರದ ಮಗ ಎಲ್ಲಿ ಹೋದನೋ ಅಂತ ತಾಯಿ ರತ್ನಮ್ಮ ಹುಡುಕಿದ್ದಾರೆ.

ಆದ್ರೆ ಎಲ್ಲೂ ಮಂಜುನಾಥನ ಬಗ್ಗೆ ಸುಳಿವೇ ಇರಲಿಲ್ಲ. ಹೀಗಾಗಿ ಅವ್ರು ಪೊಲೀಸ್ರಿಗೆ ದೂರನ್ನ ನೀಡಿದ್ರು. ಅಲ್ಲದೆ ತಮ್ಮ ಸೊಸೆ ಜೊತೆ ಜಗಳ ಮಾಡ್ಕೊಂಡು ಹೋಗಿದ್ದಾನೆ ಅನ್ನೋದನ್ನು ತಿಳಿಸಿದ್ರು. ಆಗ ಪೊಲೀಸ್ರು ಹುಡುಕೋದಕ್ಕೆ ಶುರುಮಾಡಿದ್ದಾರೆ. ಮಾರನೇ ದಿನ ಆತನ ಬಾಡಿ ಹಳ್ಳದ ಬಳಿ ಸಿಕ್ಕಿದೆ. ಆಗ ಪೊಲೀಸ್ರು ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಅಲ್ಲದೆ ಪೋಸ್ಟ್ ಮಾರ್ಟಂಗೆ ಡೆಡ್ ಬಾಡಿಯನ್ನ ಕಳುಹಿಸಿ ತಮ್ಮ ತನಿಖೆ ಶುರುಮಾಡಿದ್ರು.ಮೊದಲಿಗೆ ಪೊಲೀಸ್ರಿಗೆ ಅನುಮಾನ ಬಂದಿದ್ದೇ ಈ ಶೋಭಾಳ ಮೇಲೆ. ಆದ್ರೆ ಶೋಭಾ ತಾನು ತಪ್ಪಿಸಿಕೊಳ್ಳೋದಕ್ಕೆ ತನ್ನ ಗಂಡನಿಗೂ ಅವರ ಅಣ್ಣನಿಗೂ ಸೈಟ್ ವಿಚಾರದಲ್ಲಿ ಗಲಾಟೆ ಇತ್ತು ಅಂತ ಅವರ ಗಮನವನ್ನ ಡೈವರ್ಟ್ ಮಾಡಿದ್ಲು. ಪೊಲೀಸ್ರು ಅತ್ತ ಶಶಿಧರ್ ನನ್ನ ವಿಚಾರಿಸೋದಕ್ಕೆ ಹೊರಟ್ಲು. ಆದ್ರೆ ಶಶಿಧರ್ ನಾನು ನನ್ನ ತಮ್ಮ ಚೆನ್ನಾಗಿಯೇ ಇದ್ವಿ. ಆದ್ರೆ ಶೋಭಾಳ ನಡತೆ ಸರಿಯಿಲ್ಲದ ಕಾರಣ ಅವರಿಬ್ಬರು ಕಿತ್ತಾಡ್ತಿದ್ರು ಅಂತ ಹೇಳಿದ್ದಾರೆ.

ಆಗ ಪೊಲೀಸ್ರು ಮತ್ತೆ ಶೋಭಾನ ಮನೆಗೆ ಹುಡ್ಕೊಂಡು ಬಂದಿದ್ರು. ಆದ್ರೆ ಶೋಭಾ ಮೊದಲಿಗೆ ಯಾವುದನ್ನೂ ಹೇಳಲೇ ಇಲ್ಲ. ನಾನಲ್ರೀ, ನಾನಲ್ರೀ ಅಂತ ಪೊಲೀಸ್ರ ಹತ್ತಿರ ಡ್ರಾಮಾ ಮಾಡಿದ್ಲು, ಆದ್ರೆ ಖಾಕಿ ಕಥೆ ಕೇಳಬೇಕಲ್ಲ ಹೇಳಿ. ಸತ್ಯ ಹೇಳದಿದ್ರೆ ಹಾಕಬಾರದ ಜಾಗಕ್ಕೆ ಹೊಗೆ ಹಾಕ್ತೀವಿ ಅಂದ್ರು ನಡೆದ ವಿಷಯವನ್ನೆಲ್ಲಾ ಹೇಳಿ ನಾನೇ ಕೊಲೆ ಮಾಡಿಸಿದೆ ಅಂತ ಹೇಳಿದ್ಲು.ಅಲ್ಲದೆ ತನ್ನ ಗಂಡನನ್ನ ಕೊಲೆ ಮಾಡಿದ್ದು ನನ್ನ ಪ್ರೇಮಿಗಳೇ ಅನ್ನೋ ಸತ್ಯವನ್ನು ಬಾಯಿಬಿಟ್ಟಿದ್ಲು. ಅತ್ತ ಪೊಲಿಟೀಷಿಯನ್ಸ್ ಜೊತೆ ಸೆಲ್ಫಿ ತಗೊಂಡು ಫೋಸ್ ಕೊಡ್ತಿದ್ದ ಮುತ್ತಪ್ಪ ಮತ್ತು ಮಂಜುನಾಥ್ ನನ್ನ ಪೊಲೀಸ್ರು ಎಳ್ಕೊಂಡು ಬಂದಿದ್ರು. ಕೊಲೆಯಾದ ಮೂರೇ ದಿನಕ್ಕೆ ಪೊಲೀಸ್ರು ಐದು ಜನರನ್ನ ಹೆಡೆಮುರಿ ಕಟ್ಟಿದ್ರು. ಸೆರಗು ಮತ್ತು ಸೈಟಿಗಾಗಿ ಮುತ್ತಪ್ಪ ಮಂಜು ಅಮಾಯಕನ್ನ ಕೊಲೆ ಮಾಡಿದ್ರು. ಇತ್ತ ಗಂಡನ ಜೊತೆ ನಿಯತ್ತಾಗಿ ಬದುಕೋದಕ್ಕೆ ಆಗದ ಶೋಭಾ ಗಂಡನನ್ನು ಕಳ್ಕೊಂಡಿದ್ದಾಳೆ. ಇತ್ತ ಅಮಾಯಕ ಮಕ್ಕಳನ್ನೂ ಅನಾಥರನ್ನಾಗಿ ಮಾಡಿದ್ದಾಳೆ. ಒಂದೊಂದು ಮನೆಯಲ್ಲೂ ಇಂತಹ ಹೆಣ್ಣು ಇದ್ದು ಬಿಟ್ರೆ ಜಗತ್ತನ್ನೇ ಜೈಲು ಮಾಡಬೇಕು, ಇಲ್ಲ ಊರನ್ನ ರೆಡ್ ಲೈಟ್ ಏರಿಯಾವನ್ನಾಗಿ ಮಾಡಬೇಕಾಗುತ್ತೆ.

LEAVE A REPLY

Please enter your comment!
Please enter your name here