Home Cinema “ಅವಳೇನು ದೊಡ್ಡ ಬಾಲಿವುಡ್ ಸ್ಟಾರ್ ಹಾ…ಪಿಎಂ ಹಾ.. ಅಥ್ವಾ ಸಿಎಂ ಹಾ”… ಸ್ಯಾಂಡಲ್‌ವುಡ್ “ಪದ್ಮಾವತಿ”...

“ಅವಳೇನು ದೊಡ್ಡ ಬಾಲಿವುಡ್ ಸ್ಟಾರ್ ಹಾ…ಪಿಎಂ ಹಾ.. ಅಥ್ವಾ ಸಿಎಂ ಹಾ”… ಸ್ಯಾಂಡಲ್‌ವುಡ್ “ಪದ್ಮಾವತಿ” ಮತ್ತು ತುಪ್ಪದ ಬೆಡಗಿ ಮಧ್ಯೆ ಟ್ವಿಟರ್ ವಾರ್ ತಾರಕಕ್ಕೆ..?! ಸಖತ್ ಟಾಂಗ್ ಕೊಟ್ಟ ರಮ್ಯಾ..?!

2828
0
SHARE

ತುಪ್ಪದ ಬೆಡಗಿ ಅಂತಾನೆ ಖ್ಯಾತಿ ಗಳಿಸಿರೊ ರಾಗಿಣಿ ದ್ವಿವೇದಿ ಈಗ ಸ್ಯಾಂಡಲ್‌ವುಡ್‌ನ ಟಾಕ್ ಆಫ್ ದಿ ಟೌನ್ ಆಗಿದ್ದಾರೆ..ರಾಗಿಣಿ ಯಾವುದೊ ಸಿನಿಮಾ ವಿಚಾರಕ್ಕೆ ಸದ್ದು ಮಾಡ್ತಿದ್ದಾರೆ ಅಂತ ಅಂದ್ಕೊಬೇಡಿ..ರಾಗಿಣಿ ಈಗ ಸುದ್ದಿಯಲ್ಲಿರೊದು ಸ್ಯಾಂಡಲ್‌ವುಡ್ ಪದ್ಮಾವತಿ ರಮ್ಯಾ ವಿಚಾರವಾಗಿ.. ಅಯ್ಯೋ, ರಮ್ಯಾ ವಿತಚಾರಕ್ಕೂ ರಾಗಿಣಿಗೂ ಏನ್ ಸಂಬಂಧ ಅಂತ ಯೋಚಿಸುತಿದ್ದೀರಾ..

ರಮ್ಯಾ ಮತ್ತೆ ಚಿತ್ರರಂಗಕ್ಕೆ ವಾಪಸ್ ಬರಬೇಕು ಅನ್ನೊ ವಿಚಾರವಾಗಿ ರಾಗಿಣಿ ರಿ ಟ್ವೀಟ್ ಮಾಡುವ ಮೂಲಕ ರಮ್ಯಾರನ್ನ ಮತ್ತೆ ಸ್ಯಾಂಡಲ್‌ವುಡ್ ಕಡೆ ಮುಖ ಮಾಡುವಂತೆ ಹೇಳುವ ಪೋಸ್ಟ್ ಸಖತ್ ವೈರಲ್ ಆಗಿದೆ..ಒಂದು ಕಾಲದಲ್ಲಿ ರಮ್ಯಾ ಅಂದ್ರೆ ಉರಿದು ಬೀಳ್ತಿದ್ದ ರಾಗಿಣಿ ಈಗ ರಮ್ಯಾರನ್ನ ಚಿತ್ರರಂಗಕ್ಕೆ ಆಹ್ವಾನ ಮಾಡುತಿದ್ದಾರೆ…ಮತ್ತೆ ವಾಪಸ್ ಬನ್ನಿ ಅಂತ ಕರೆಯುತಿದ್ದಾರೆ…ಹಾಗಂತ ತುಪ್ಪದ ಸುಂದರಿ ಡೈರೆಕ್ಟಾಗೇನೂ ಪದ್ಮಾಪತಿಗೆ ಆಹ್ವಾನ ನೀಡ್ಲಿಲ್ಲ..

ಆದ್ರೇ ಟ್ವಿಟ್ಟರ್‌ನಲ್ಲಿ ಯಾರೊ ಮತ್ತೆ ವಾಪಸ್ ಬನ್ನಿ ಪದ್ಮಾವತಿ ಅನ್ನೋ ಪೋಸ್ಟರ್ ಹಾಕಿಕೊಂಡಿದ್ರು..ಆ ಪೋಸ್ಟ್‌ನ್ನು ರಾಗಿಣಿ ರಿ ಟ್ವೀಟ್ ಮಾಡುವ ಮೂಲಕ ತಮ್ಮ ಮನದಲ್ಲಿದ್ದ ಬಯಕೆಯನ್ನು ಹೊರಹಾಕಿದ್ದಾರೆ..ತಮ್ಮ ಟ್ಟಿಟ್ಟರ್ ಕಾತೆಯಲ್ಲಿ ರಾಗಿಣಿ ಯಾರೊ ಹಾಕಿದ ಪೋಸ್ಟ್‌ನ್ನ ರಿ ಟ್ವೀಟ್ ಮಾಡಿದ್ದಾರೆ ಅಂದ್ರೆ ಅದೂ ಎಲ್ಲರಿಗೂ ತಲುಪಲಿ ಅಂತನೇ ಅರ್ಥ….ಈ ಮೂಲಕ ಮದಕರಿಯ ನಾಯಕಿ ಸ್ಯಾಂಡಲ್‌ವುಡ್‌ನ ಮೋಹಕ ತಾರೆಯ ಬಗ್ಗೆ ಇದ್ದ ಬಯಕೆಯನ್ನು ಬಹಿರಂಗ ಪಡಿಸಿದ್ದಾರೆ..

ಅಷ್ಟಕ್ಕೂ ರಾಜಕೀಯದಲ್ಲಿ ಬ್ಯುಸಿ ಇರುವ ರಮ್ಯಾರನ್ನ ಏಕಾಏಕಿ ರಾಗಿಣಿ ಮತ್ತೆ ವಾಪಸ್ ಬನ್ನಿ ಅಂತ ರಿ-ಟ್ವೀಟ್ ಮಾಡಿರುವುದು ರಮ್ಯಾ ಅಭಿಮಾನಿಗಳಲ್ಲಿ ಅನುಮಾನ ಮೂಡಿಸಿದೆ..ಯಾಕಂದ್ರೆ ಒಂದು ಕಾಲದಲ್ಲಿ ರಮ್ಯಾ ಕಂಡ್ರೆನೇ ರಾಗಿಣಿಗೆ ಆಗ್ತಿರ್ಲಿಲ್ಲ…, ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಮೆರೆಯುತಿದ್ದ ರಾಗಿಣಿಗೆ ಸ್ಯಾಂಡಲ್‌ವುಡ್‌ನಲ್ಲಿ ಟಾಪ್ ನಟಿಯಾಗಿ ಆಳ್ವಿಕೆ ಮಾಡ್ತಿದ್ದ ರಮ್ಯಾನ ಕಂಡ್ರೆ ಅದ್ಯಾಕೊ ಉರಿ….

ಯಾವುದೊ ಒಂದು ಖಾಸಗಿ ಕಾರ್ಯಕ್ರಮದಲ್ಲಿ ರಮ್ಯಾ ಹೆಸರು ಹೇಳಿದ್ದಕ್ಕೇನೆ ಸಿಡಿದೆಳುವ ಮೂಲಕ ಮೂಲಕ ರಮ್ಯಾ ವಿರುದ್ದ ಇದ್ದ ಅಸಮದಾನವನ್ನು ಬಹಿರಂಗವಾಗಿಯೆ ಹೊರಹಾಕಿದ್ರು..
ರಮ್ಯಾ ಬಗ್ಗೆ ರಾಗಿಣಿ, ಅವಳೇನು ದೊಡ್ಡ ಬಾಲಿವುಡ್ ಸ್ಟಾರ್ ಹಾ…ಪಿಎಂ ಹಾ.. ಅಥ್ವಾ ಸಿಎಂ ಹಾ.. ಅಂತೆಲ್ಲ ಹೇಳುವ ಮೂಲಕ ರಮ್ಯಾ ವಿರುದ್ದ ರೆಗಾಡಿದ್ರು…ಇದಿಲ್ಲಿಗೆ ಮುಗಿಯದೆ. ರಾಗಿಣಿ ಮಾತು ಕೇಳಿ ಶಾಕ್ ಆಗಿದ್ದ ರಮ್ಯಾ, ರಾಗಿಣಿ ವಿರುದ್ದ ಜಾಲತಾಣದಲ್ಲಿ ರೊಚ್ಚಿಗೆದ್ದಿದ್ರು…

ಹೊಟ್ಟೆಕಿಚ್ಚು ಮತ್ತು ಹತಾಶೆಯಿಂದ ಯಾರೊ ಹೆಸರು ಮಾಡದ ನಟಿಯರು ತಾವೆ ನಂಬರ್ ಒನ್ ಎಂದು ಹೇಳಿಕೊಳ್ಳುತಿದ್ದಾರೆ…ಅಂತ ಫೇಸ್ ಬುಕ್‌ನಲ್ಲಿ ದೊಡ್ಡದಾಗಿ ಪೋಸ್ಟ್ ಹಾಕಿ ರಾಗಿಣಿ ಮಾತಿಗೆ ಖಾರವಾಗಿಯೆ ಪ್ರತಿಕ್ರಿಯಿಸಿದ್ರು..ಅವಗಾವಾಗ ಇಬ್ಬರ ನಡುವೆ ಶೀತಲ ಸಮರ ನಡೆಯುತ್ತಲೆ ಇತ್ತು…ಆದ್ರೆ ಅದ್ಯಾವ ಕಾರಣಕ್ಕೆ ಅನ್ನೋದು ಮಾತ್ರ ಯಾರಿಗು ಗೊತ್ತಿರ್ಲಿಲ್ಲ..

ಇದೆಲ್ಲ ಹಳೆ ಮ್ಯಾಟ್ರು..ಈಗ ರಾಗಿಣಿಗೆ ರಮ್ಯಾ ಬಗ್ಗೆ ಇದ್ದ ಭಾವನೆಗಳೆಲ್ಲ ಬದಲಾಗಿರಬಹುದೇನು ಗೊತ್ತಿಲ್ಲ ಆದ್ರೆ ಸಡನ್ನಾಗಿ ರಮ್ಯಾ ಚಿತ್ರರಂಗಕ್ಕೆ ಬರಬೇಕು ಅಂತ ರಿ ಟ್ವೀಟ್ ಮಾಡಿರೋದು ಮಾತ್ರ ಅಚ್ಚರಿಗೆ ಕಾರಣವಾಗಿದೆ…ರಮ್ಯಾ ಬರ್ತಾರೊ ಇಲ್ವೋ ಗೊತ್ತಿಲ್ಲ ಆದ್ರೆ ರಾಗಿಣಿ ರಿ ಟ್ವೀಟ್ ಮಾತ್ರ ಸಿಕ್ಕಾಪಟ್ಟೆ ಸದ್ದು ಮಾಡುತಿದೆ..

LEAVE A REPLY

Please enter your comment!
Please enter your name here