Home Crime “ಅವಳ” ಹಿಂದೆ ಹೋದವರು ಉಳಿದಿಲ್ಲ ಇದುವರೆಗೂ ಯಾರೂ..?! ತಮ್ಮಾ ತಮ್ಮಾ ಅಂತ ಕರಿತಿದ್ದವನ ತಲೆ ಕಡಿದಿದ್ಯಾಕೆ...

“ಅವಳ” ಹಿಂದೆ ಹೋದವರು ಉಳಿದಿಲ್ಲ ಇದುವರೆಗೂ ಯಾರೂ..?! ತಮ್ಮಾ ತಮ್ಮಾ ಅಂತ ಕರಿತಿದ್ದವನ ತಲೆ ಕಡಿದಿದ್ಯಾಕೆ ಗೊತ್ತಾ ಇವನು..? ಆ ಊರಾಚೆ ಬಟಾ ಬಯಲಲ್ಲಿ ಬಿದ್ದಿತ್ತು ರುಂಡವಿಲ್ಲದ ಮುಂಡ

514
0
SHARE

 

ಅವೊತ್ತು ಸೆಪ್ಟಂಬರ್ 11 ನೇ ತಾರೀಖು. ಕಲಬುರಗಿ ಸಿಟಿಯಿಂದ ಸುಮಾರು ಹತ್ತನ್ನೆರಡು ಕಿಲೋ ಮೀಟರ್ ದೂರದಲ್ಲಿರೋ ಅಲಗೋಡು ಅನ್ನೋ ಗ್ರಾಮವದು. ಆದಿನ ಬೆಳಂಬೆಳಗ್ಗೆ ಅಲಗೋಡು ಗ್ರಾಮದಾಚೆ ಬಟಾಬಯಲಿನ ನಿರ್ಜನ ಪ್ರದೇಶದಲ್ಲಿ ಜನವೋ ಜನ. ಜೊತೆಗೆ ಕಲಬುರಗಿ ಗ್ರಾಮಾಂತರ ಪೊಲೀಸರೂ ಕೂಡ ಅಲ್ಲಿ ಜಮಾಯಿಸಿದ್ದರು. ಅಲ್ಲಿ ನೆರೆದಿದ್ದ ಜನರಲ್ಲಿ ಒಂತರಾ ಆತಂಕ. ಒಂತರಾ ಗಾಭರಿ. ಜೊತೆಗೆ ಹಲವು ಪ್ರಶ್ನೆಗಳು ಸುಳಿದಾಡ್ತಿದ್ದದವು. ಆ ಒಂದು ಭೀಭತ್ಸ ದೃಶ್ಯ ಕಂಡು ಬೆಚ್ಚಿಬಿದ್ದಿದ್ದರು.ಇನ್ನಾ ಸ್ಥಳಕ್ಕೆ ದೌಡಾಯಿಸಿದ್ದ ಪೊಲೀಸರಿಗೂ ಅಂತದ್ದೇ ಅನುಭವ. ಯಾಕಂದ್ರೆ ಅಲ್ಲಿ ಒಂದು ಕೊಲೆ ನಡೆದಿತ್ತು. ಆ ಹತ್ಯೆ ಅದೆಷ್ಟು ಭೀಕರವಾಗಿತ್ತೆಂದರೆ ಅಲ್ಲಿ ಬಿದ್ದಿದ್ದ ಮೃತದೇಹಕ್ಕೆ ಮುಂಡ ಇತ್ತೇ ಹೊರತು ರುಂಡವೇ ಇರಲಿಲ್ಲ. ಅಂದ್ರೆ ಆ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದ್ದು ಹೆಡ್ಡೇ ಇಲ್ಲದ ಡೆಡ್ಬಾಡಿ.

ಆ ಬಗ್ಗೆ ವಿಚಾರಿಸ್ತಾ ಇರಬೇಕಾದ್ರೆನೆ..  ಕೇವಲ ಎರಡೇ ಗಂಟೆಗಳಲ್ಲಿ ಕೊಲೆಯಾಗಿದ್ದವನ ತಂದೆ ಆ ಸ್ಪಾಟಿಗೆ ಓಡೋಡಿಬಂದಿದ್ರು.ವಯಸ್ಸಾದ ಈ ಯಜಮಾನನ ಹೆಸರು ಭೀಮರಾವ್ ಸಿದ್ದೋಜಿ ಬೋಸ್ಲೆ. ರಾತ್ರಿಯಿಂದ ಮನೆಗೆ ಬಾರದಿದ್ದ ತನ್ನ ಮಗನನ್ನ ಹುಡುಕಾಡ್ತಿದ್ದ ಭೀಮಾರಾವ್ ಸಿದ್ದೋಜಿ ಗೆ ಬೆಳಾಗುತ್ತಲೇ ಅಲಗೋಡ್ ಗ್ರಾಮದ ಹತ್ರ ಯಾವುದೋ ಹುಡುಗನ ಶವ ಬಿದ್ದಿದೆ ಅನ್ನೋ ವಿಚಾರ ಗೊತ್ತಾಗಿ ಅಲ್ಲಿಗೆ ಹೋಗಿ ನೋಡಿದಾಗ, ಆ ಕ್ಷಣ ಜೀವವೇ ಹೋದಂಗೆ ಆಗಿತ್ತು. ಯಾಕಂದ್ರೆ ಅದು ಈತನ ಮಗನದ್ದೇ ಹೆಣವಾಗಿತ್ತು. ಮೈಮೇಲಿದ್ದ ಬಟ್ಟೆ, ಕೈಮೇಲಿದ್ದ ಅಚ್ಚೆ ಗುರುತಿಂದ ಇದು ನನ್ನ ಮಗನೇ ಅಂತ ಗುರುತು ಪತ್ತೆಹಚ್ಚಿದ್ದರು. ಅಂದ ಹಾಗೆ ಅಲಗೋಡ್ ಗ್ರಾಮದಾಚೆ ತಲೆ ಇಲ್ಲದೆ ಪತ್ತೆಯಾಗಿದ್ದ ಶವ ಈ ಯುವಕನದೇ ನೋಡಿ.

ಇವನ ಹೆಸರು ಸಿದ್ದೋಜಿ ಬೋಸ್ಲೆ.ಬರ್ಬರವಾಗಿದ್ದ ಕೊಲೆಯಾಗಿ ಅಲಗೋಡ್ ಬಳಿ ತಲೆ ಇಲ್ಲದೇ ಪತ್ತೆಯಾಗಿದ್ದು ಸಿದ್ದೋಜಿ ಬೋಸ್ಲೆ ಅನ್ನೋ ಈ ಯುವಕನದು, ಸಿದ್ದೋಜಿ ಕಲಬುರಗಿಯ ಭವಾನಿ ನಗರದ ನಿವಾಸಿ.ಇಲ್ಲಿ ಬಿದ್ದಿರುವ ದೇಹ ತಮ್ಮ ಮಗನದ್ದು ಅಂತ ದೇಹವನ್ನು ನೋಡಿ ಗುರುತಿಸುವಲ್ಲಿ ಯಶಸ್ವಿಯಾಗಿದ್ದರು.   ಹೌದು ಅಲ್ಲಿ ಕೊಲೆಯಾಗಿ ಹೋಗಿದ್ದ ವ್ಯಕ್ತಿಯ ಹೆಸರು ಸಿದ್ದೋಜಿ ಬೋಸ್ಲೆ ಅಂತ. ಆ ಕಲೆ ನೋಡಿದ್ರೆ ಅದೇನು ಅವರ ಆಸ್ತಿಗಾಗಿ ಸಂಬಂಧಿಕರ ಕೊಲೆ ಮಾಡಿದ್ದಾರೆ. ಇಲ್ಲ ಹೆಣ್ಣಿನ ವಿಚಾರಕ್ಕೆ ಕೊಲೆ ನಡಿದಿಯೋ ಅನ್ನೋ ಮಟ್ಟಿಗೆ ಬೀಕರ ಕೊಲೆ ಮಾಡಿದ್ದಾರೆ. ಆದ್ರೆ ಆ ಕೊಲೆ ನಡಿದಿದ್ದು ಮಾತ್ರ ಸಿಲ್ಲಿ ವಿಚಾರಕ್ಕೆ ಸಣ್ಣ ಸಣ್ಣ ವಿಷ್ಯಕ್ಕೆ ಇಷ್ಟೊಂದು ಭಯಾನಕ ವಾಗಿ ಕೊಲೆ ಮಾಡಿದ್ದಾರೆ…ಮಾಡಿದ್ದು ಬೇರಾರು ಅಲ್ಲ ಅವರದ್ದೆ ಸ್ನೇಹಿತರು…

ಅವರದ್ದು ಕಳೇದ 10 ವರ್ಷಗಳ ಸ್ನೇಹ ಮೇಲಾಗಿ ಒಂದೆ ಏರಿದಾವರು¸ಒಟ್ಟೋಗಿ ಆಡಿ ಬೆಳೆದವರು ಅಲ್ಲದೆ ಒಂದೆ ಓಣಿಯಲ್ಲಿದ್ರಿಂದ ಅವರದ್ದು ಗಟ್ಟಿ ಸ್ನೇಹ ಆದ್ರೆ ಅದ್ಯಾವಗ ಅವರ ಮಧ್ಯೆ ಬೀನ್ನಾಭಿಪ್ರಾಯ ಶುವಾಯ್ತೋ ಅವಾಗ್ಲೆ ಒಬ್ಬರನ್ನೊಬ್ಬರು ಕತ್ತಿ ಮಸಿಯಲು ಶುರು ಮಡಿದ್ರು… ಆದ್ರೆ ಅದು ಅಷ್ಟಕ್ಕೆ ಸುಮ್ಮನಾಗ್ಬಹುದು ಇಬ್ಬರು ಮತ್ತೆ ಒಂದಾಗಿ ಸ್ನೇಹಿತರಾಗ್ತಾರೆ ಅಂತ ಅನ್ಕಿಂಡಿದ್ರು ಆದ್ರೆ ಕೊಲೆ ಮಾಡುವ ಮಟ್ಟಕ್ಕೆ ತಲುಪುತ್ತೆ ಅಂತ ಯಾರು ಅನ್ಕೊಂಡಿರಲಿಲ್ಲ… ಆತ ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡಿದ್ದ ಯುವಕ. ಆದ್ರೆ ತಾನು ಕೆಲಸ ಮಾಡಿದ ಮಾಲೀಕನಿಗೆ ಸಹಾಯ  ಮಾಡಿದ್ದೇ ಆತನಿಗೆ ಮುಳುವಾಗಿ ಹೋಗಿದೆ.  ಆತನೊಂದಿಗೆ ಕೆಲಸ ಮಾಡುತ್ತಿದ್ದ ಸ್ನೇಹಿತರೇ ಆತನ ಪಾಲಿಗೆ ಯಮನಾಗಿ ಹೋಗಿದ್ದಾರೆ.  ಪಾಪಿಗಳು ಅದ್ಯಾವ ಮಟ್ಟಿಗೆ ವಿಕೃತಿ ಮೆರದಿದ್ದಾರೆ ಅಂದ್ರೆ, ಯುವಕನನ್ನು ಕೊಲೆ ಮಾಡಿ ರುಂಡವನ್ನು ಕತ್ತರಿಸಿ ತಗೆದುಕೊಂಡು ಹೋಗಿದ್ದಾರೆ.

ಇಪ್ಪತ್ತೆಂಟು ವರ್ಷದ ಸಿದ್ದೋಜಿ ಬೋಸ್ಲೆಯನ್ನ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದರು. ಅಷ್ಟೇ ಅಲ್ಲ ನಿರ್ಜನ ಪ್ರದೇಶದಲ್ಲಿ ಹತ್ಯೆ ಮಾಡಿದ್ದವರು ಅವನ ತಲೆ ಕಡಿದು ಅದರ ಸಮೇತ ಪರಾರಿಯಾಗಿದ್ದರು.  ಕಲಬುರಗಿ ನಗರದ ಭವಾನಿ ನಗರದ ನಿವಾಸಿಯಾಗಿದ್ದ ಸಿದ್ದೋಜಿ ಬೋಸ್ಲೆ, ಕಲಬುರಗಿ ನಗರದಲ್ಲಿರುವ ಕೆಎಂಎಫ್ ನಲ್ಲಿ ಜಗನ್ನಾಥ್ ಹೊನ್ನಳ್ಳಿ ಅನ್ನೋರು  ಬಳಿ ಗೂಡ್ಸ್ ವಾಹನದ ಡ್ರೈವರ್ ನಾಗಿದ್ದ. ಡ್ರೈವರ್ ಜೊತೆ ಸೇಲ್ಸ್ ಮೆನ್ ಆಗಿ ಕೂಡಾ ಕೆಲಸ ಮಾಡ್ತಿದ್ದ.   ಅವೊತ್ತು ಹತ್ತನೇ ತಾರೀಖು ಎಂದಿನಂತೆ ಡೈರಿಗೆ ಹೋಗಿದ್ದ. ರಾತ್ರಿ ಹತ್ತೂವರೆವರೆಗೂ ಕೆಎಂಎಫ್ ನಲ್ಲಿ ಇದ್ದ. ಪ್ರತಿದಿನ ರಾತ್ರಿ 11 ಗಂಟೆಗೆಲ್ಲಾ ಮನೆಗೆ ಬರ್ತಿದ್ದವನು ಆ ರಾತ್ರಿ ಎಷ್ಟೋತ್ತಾದ್ರೂ ಮನೆಗೆ ಪತ್ತೆನೇ ಇರದೆ ನಾಪತ್ತೆಯಾಗಿದ್ದ.

ಸಿದ್ದೋಜಿ ಅಂದು ಮೊಬೈಲ್ ನ್ನು ಕೂಡಾ ಮನೆಯಲ್ಲಿ ಬಿಟ್ಟು ಹೋಗಿದ್ದ. ಹೀಗಾಗಿ ಮನೆಯವರು ಆತಂಕ ಹೆಚ್ಚಾಗಿತ್ತು. ಏನ್ ಕಥೆನೋ ಏನೋ ಅಂತ ಮಧ್ಯರಾತ್ರಿಯೇ ಕೆಎಂಎಫ್ ಡೈರಿಗೆ ಹೋಗಿ ವಿಚಾರಿಸಿದಾಗ  ಸಿದ್ದೋಜಿ ಹೋಗಿ ಬಾಳ ಹೊತ್ತಾಯ್ತು , ಮೂರ್ನಾಲ್ಕು ಜನ ಸೇರಿ ಬೈಕ್ ಮೇಲೆ ಹೋದ್ರು ಅಂತೇಳಿದ್ದರು.  ಹೀಗಾಗಿ ಸಿದ್ದೋಜಿ ಹೆತ್ತವರು ಸುತ್ತಮುತ್ತಲೆಲ್ಲಾ ಹುಡುಕಾಡಿದರೂ ಸಿದ್ದೋಜಿಯ ಸುಳಿವೇ ಇರಲಿಲ್ಲ. ಕತ್ತಲು ಕವಿಒದು ಬೆಳಗಾದಾಗ ಸಿದ್ದೋಜಿಯ ಹೆಣ ಅಲಗೋಡ್ ಬಳಿ ಪತ್ತೆಯಾಗಿತ್ತು.ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಹಂತಕರ ಬೇಟೆಗೆ ತಂಡಗಳಾಗಿ ಫೀಲ್ಡಿಗೆ ಇಳಿದಿದ್ರು. ಆದ್ರೆ ಕೊಲೆಯಾಗಿ ನಾಲ್ಕುದಿನವಾದ್ರು ಕೂಡಾ ಕೊಲೆ ಮಾಡಿದ ಆರೋಪಿಗಳು  ಇನ್ನು ಸಿಕ್ಕಿರಲಿಲ್ಲ.

ಆರೋಪಿಗಳು ಸಿಗದೇ ಇದಿದ್ದದ್ದರಿಂದ ಕೊಲೆಯಾದ ಸಿದ್ದೋಜಿ ರುಂಡ ಕೂಡಾ ಇನ್ನು ಪತ್ತೆಯಾಗಿರಲಿಲ್ಲ. ಮೊದಲೇ ಮಗನ ಬರ್ಬರ ಕೊಲೆ, ಅದರಲ್ಲೂ ತಲೆಯೇ ಇಲ್ಲದ ಶವವನ್ನ ಕಂಡು ಆಕ್ರಂದಿಸಿದ್ದರು. ಏನ್ ಮಾಡೋದು ಅಂತ ರುಂಡವಿಲ್ಲದ ಮುಂಡಕ್ಕೆ ಅಂತ್ಯಸಂಸ್ಕಾರ ನೆರವೇರಿಸಿದ್ದರು. ಯಾವುದೇ ವ್ಯಕ್ತಿ ಸಾವನಪ್ಪಲಿ  ಮೃತ ವ್ಯಕ್ತಿಯ ಮುಖವನ್ನು ಕೊನೆ ಬಾರಿ ನೋಡಿ, ಅಂತಿಮ ವಿದಾಯ ಸಲ್ಲಿಸಲಾಗುತ್ತೆ.  ಆದ್ರೆ ಆ ಭಾಗ್ಯವು ಕೂಡಾ ಸಿದ್ದೋಜಿ ಹೆತ್ತವರಿಗೆ ಮತ್ತು ಸಂಬಂಧಿಗಳಿಗೆ ಸಿಗದಾಗಿತ್ತು.ಇನ್ನೊಂದೆಡೆ ಕೊಲೆ ಮಾಡಿ ರುಂಡವನ್ನು ತಗೆದುಕೊಂಡು ಹೋಗಿರುವ ಆರೋಪಿಗಳು ಕಳೆದ ನಾಲ್ಕು ದಿನದಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ರು.

ಯಾಕಂದರೆ ಕೊಲೆ ಇಂತವರೇ ಮಾಡಿರೋದು ಅಂತ ದೂರು ದಾಖಲಾಗಿದ್ದ ಆಸಾಮಿಗಳು ಅವೊತ್ತಿಂದ ನಾಪತ್ತೆಯಾಗಿದ್ದರುಯ. ಇನ್ನು ಸಿದ್ದೋಜಿ ಕೊಲೆಗೆ ಕಾರಣವೇನು, ರುಂಡವನ್ನು ಕತ್ತರಿಸಿ ತಗೆದುಕೊಂಡು ಹೋಗವಷ್ಟು ಸಿದ್ದೋಜಿ ಮಾಡಿದ್ದಾದರು ಏನು ಅನ್ನೋದನ್ನು ಕೇಳಿದ್ರೆ ನೀವು ಬೆಚ್ಚಿಬೀಳ್ತಿರಾ..ಯಾಕಂದ್ರೆ ಕೊಲೆಯಾಗಿರುವ ಸಿದ್ದೋಜಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದು  ಮತ್ತೊಬ್ಬರಿಗೆ ಸಹಾಯ ಮಾಡಿದ್ದಕ್ಕೆ ಅಂತಿದ್ದಾರೆ ಹೆತ್ತವರು.   ಹೌದು ಸಿದ್ದೋಜಿ ಕೆಲಸ ಮಾಡುತ್ತಿದ್ದ ಜಗನ್ನಾಥ್ ಹೊನ್ನಳ್ಳಿಯವರ ಟ್ರಾನ್ಸಪೋರ್ಟ್ ಕಂಪನಿಯಲ್ಲಿ ಇನ್ನು ಅನೇಕರು ಕೆಲಸ ಮಾಡುತ್ತಿದ್ದರು.  ಇವರೆಲ್ಲಾ ಪ್ರತಿನಿತ್ಯ ಹಾಲನ್ನು ತಗೆದುಕೊಂಡು ಹೋಗಿ ವಿವಿಧ ಅಂಗಡಿಗಳಿಗೆ ಕೊಡುವದು.

ಹೀಗಾಗಿ ಮಾಲೀಕ ನಾಗೇಶನ ಮನೆ ತೋರಿಸು ಅಂದಿದ್ದಕ್ಕೆ ಸಿದ್ದೋಜಿ, ಕಲಬುರಗಿ ನಗರದ ರೇವಣಸಿದ್ದೇಶ್ವರ ಕಾಲೋನಿಯಲ್ಲಿದ್ದ ನಾಗೇಶನ ಬಾಡಿಗೆ  ಮನೆಯನ್ನು ತೋರಿಸಿದ್ದ. ಮನೆಯಲ್ಲಿದ್ದ ನಾಗೇಶ್ ನನ್ನು ಹಿಡಿದು ಮಾಲೀಕ ಜಗನ್ನಾಥ್ ಹಣ ವಸೂಲಿ ಮಾಡಿದ್ದನಂತೆ.   ಇಲ್ಲಿ ಮನೆ ತೋರಿಸಿದ್ದು ಮಾತ್ರ ಸಿದ್ದೋಜಿ.  ಆದ್ರೆ ತಮ್ಮ ಮಾಲೀಕ ಜಗನ್ನಾಥ್ ಗೆ ತನ್ನ ಮನೆಯನ್ನು ಸಿದ್ದೋಜಿ ತೋರಿಸಿದ್ದರಿಂದ ನಾಗೇಶ್, ಸಿದ್ದೋಜಿ ಮೇಲೆ ಸಿಟ್ಟಾಗಿದ್ದನಂತೆ.   ಹೀಗಾಗಿ ನಾಗೇಶ್ ನ ತಮ್ಮ ಮಗನನ್ನು ಕೊಲೆ ಮಾಡಿದ್ದಾನೆ ಅನ್ನೋದು ಸಿದ್ದೋಜಿ ಹೆತ್ತವರ ಆರೋಪಿಸಿದ್ರು. ಇದರ ಜಾಡು ಹಿಡಿದು ಅವರನ್ನು ಬಂಧಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಶಶಿಕುಮಾರ್ ಆರೋಪಿಗಳ ಹೆಡೆ ಮುರಿ ಕಟ್ಟಲು ಮೂರು ತಂಡಗಳ ರಚನೆ ಮಾಡಿದ್ರು ಅದರಂತೆ ಇದೇ ತಿಂಗಳು 15 ರಂದು ಕೊಲೆಯ ರೋಪಿಗಳಾದ ಮಹಾಂತೇಶ್ ಮತ್ತು ಗಣೇಶ್ ಅನ್ನೋರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ರು.

ಆದ್ರೆ ಕೊಲೆಯ ಪ್ರಮುಖ ಆರೋಪಿ ನಾಗೇಶ್ ಮಾತ್ರ ಇನ್ನು ತಲೆ ಮರೆಸಿಕೊಂಡಿದ್ದ ಆದ್ರೆ 16 ರಂದು ನಾಗೇಶ ಕಲಬುರ್ಗಿ ನಗರದ ಹೊರ ವಲಯದಲ್ಲಿರುವ ಭೋಸ್ಗಾ ಕ್ರಾಸ್ ಬಳಿ ಇರುವ ಪಾಳು ಬಿದ್ದಿದ್ದ ಮನೆಗಳಲ್ಲಿ ಇದ್ದಾನೆ ಅನ್ನೋ ಮಾಹಿತಿ ಪಡೇದ ಪೊಲೀಸರು ಅವನನ್ನ ಹಿಡಿಯಲು ಮುಂದಾಗಿದ್ದಾಗ ತ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸುತಿದ್ದ ಆತನ್ನ ಸೆರೆಂಡರ್ ಆಗುವಂತೆ ಹೇಳಿದ್ರು ಕೂಡಾ ತ ಓಡಿ ಹೋಗಲು ಪ್ರಯತ್ನ ಮಾಡಿದ್ದ ನಿಲ್ಲುವಂತೆ ಡೌಕ್ ಠಾಣೆ ಸಿಪಿಐ ಎಸ್ ಎಸ್ ಹಿರೇಮಠ್ ಗಾಳಿಯಲ್ಲಿ ಗುಂಡು ಹಾರಿಸಿದ್ರು ಆತ  ಓಡಿ ಹೋಗ್ತಿದ್ದ ಹಾಗಾಗಿ ಪೊಲೀಸರು ಆತನ ಎಡಗಾಲಿಗೆ ಎರಡು ಸುತ್ತು ಫೈಯರ್ ಮಾಡಿದ್ರು. ಘಟನೆಯಲ್ಲಿ  ರಮೇಶ್ ಮತ್ತು ಸಿದ್ದಯ್ಯ ಇಬ್ಬರು ಪೊಲೀಸ ಪೇದೆ ಗಾಯಗೊಂಡಿದ್ರು…

ಸಿದ್ದೋಜಿ ಈಡಿ ಬಡಾವಣೆಯಲ್ಲೆ ಸರಳ ಜೀವಿ ಯಾರಿಗೂ ಏನು ಅಂದವನಲ್ಲ ಆದ್ರು ಕೂಡಾ ಸಣ್ಣ ವಿಷ್ಯಕ್ಕೆ ಆತನ ರುಂಡ ಕತ್ತಿರಿಸಿ ಪರಾರಿಯಾದ್ರು ಹಂತಕರು, ಆದ್ರೆ ನಾಗೇದ್ರ ಮಾತ್ರ ಇಂಥಹ ಕೃತ್ಯಗಳನ್ನ ನಡೆಸುತ್ತಿದ್ದ ಅಲ್ಲದೆ ರಾತ್ರಿಯಾದ್ರೆ ಸಾಕು ಇವನ ಉಪಟಳ ಜಾಸ್ತಿಯಾಗ್ತಿತ್ತು.. ಎಲ್ಲಿಗೆ ಹೋದ್ರು ಆಟೋ ತೆಗೆದುಕೊಂಡು ಹೋಗಿ ಅವರಿಗೆ ಹಣ ಕೊಡದೆ ಜಗಳ ಮಾಡ್ತಿದ್ದ ಅಲ್ಲದೆ ಬೆಳಂಬೆಳಗ್ಗೆ ರಸ್ತೆಯಲ್ಲಿ ಓಡಾಡೋರನ್ನ ತಡೆದು ದರೋಡೆ ಮಾಡ್ತಿದ್ದ, ಆದ್ರೆ ಇಲ್ಲಿವರೆಗೆ ಮಾತ್ರ ಅವನ ವಿರುದ್ಧ ಪ್ರಕಣ ದಾಖಲಾಗಿರಲಿಲ್ಲ. ಪ್ರಕರಣದ ಮೂವರು ಆರೋಪಿಗಳನ್ನ ಹೆಡೆ ಮುರಿ ಕಟ್ಟಿ ಕೃಷ್ಣನ ಜನ್ಮಸ್ಥಾನಕ್ಕೆ ಕಳುಹಿಸಿದ್ದಾರೆ. ಆದ್ರೆ ಬೇರೆಯವರಿಗೆ ಸಹಾಯ ಮಾಡಿದಕ್ಕೆ ಮಗನನ್ನ ಕಳಕೊಂಡ ಕುಟುಂಬ ಮಾತ್ರ ಕಣ್ಣಿರಲ್ಲಿ ಕೈ ತೊಳೆಯುತ್ತಿದೆ… 

LEAVE A REPLY

Please enter your comment!
Please enter your name here