Home District ಅಶೋಕ್ ಖೇಣಿ ವಿರುದ್ಧ ತೊಡೆ ತಟ್ಟಿ ನಿಂತ ತಮ್ಮ ಸಂಜಯ್ ಖೇಣಿ ..!! ತೆನೆ ಹೊತ್ತ...

ಅಶೋಕ್ ಖೇಣಿ ವಿರುದ್ಧ ತೊಡೆ ತಟ್ಟಿ ನಿಂತ ತಮ್ಮ ಸಂಜಯ್ ಖೇಣಿ ..!! ತೆನೆ ಹೊತ್ತ ಮಹಿಳೆ ಕೈ ಹಿಡಿದು ಅಶೋಕ್ ಖೇಣಿ ಸೋಲಿಸಲು ಅವರ ಕುಟುಂಬವೇ ಪಣ..!

510
0
SHARE

ನೈಸ್ ಮುಖ್ಯಸ್ಥ ಬೀದರ್ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಖೇಣಿ ಸೋಲಿಸಲು ಖೇಣಿ ಕುಟುಂಬವೇ ಪಣ ತೊಟ್ಟಿದೆ…ಬೀದರ್ ದಕ್ಷಿಣ ಕ್ಷೇತ್ರವನ್ನು ಮಿನಿ ಸಿಂಗಾಪೂರ್ ಮಾಡುವುದಾಗಿ ಹೇಳಿ ಜನರಿಗೆ ಉಲ್ಲೂ ಮಾಡಿದ್ದ ಖೇಣಿಗೆ ಚುನಾವಣೆ ಹತ್ತಿರ ಬರುತ್ತಿದ್ದಂತ್ತೆ ಬಿಸಿ ಮುಟ್ಟಿಸುತ್ತಿದ್ದಾರೆ…

ಅಶೋಕ ಖೇಣಿ ಸಹೋದರ ಸಂಬಂಧಿ ಸಂಜಯ ಖೇಣಿ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಬಂಡೆಪ್ಪ ಕಾಶೆಂಪೂರ ಪರ ಮತಯಾಚನೆ ಮಾಡ್ತಿದ್ದು ಅಶೋಕ ಖೇಣಿ ಕಳೆದ ಬಾರಿ ಚುನಾವಣೆಯಲ್ಲಿ ಗೆಲ್ಲಲು ಸಂಜಯ್ ಖೇಣಿ ಬೆನ್ನೆಲುಬಾಗಿ ಕೆಲಸ ಮಾಡಿದ್ದರು…

ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿ ಖೇಣಿಯನ್ನು ಸೊಲಿಸುವುದಾಗಿ ಸಂಜಯ ಖೇಣಿ ಸವಾಲ್ ಹಾಕಿದ್ದಾರೆ…ಬೀದರ್ ಜಿಲ್ಲೆಯ ಮನ್ನಾಖೇಳ್ಳಿ ಗ್ರಾಮದಲ್ಲಿ ಸುದ್ದಿಗೋಷ್ಠಿ ನಡೆಸಿ ಸಂಜಯ ಖೇಣಿ ಆಕ್ರೋಶ ಹೊರ ಹಾಕಿದ್ದಾರೆ…

 

ಇನ್ನು ಮತ ಕೇಳಲು ಹೋದ ಶಾಸಕ ಅಶೋಕ್ ಖೇಣಿಗೆ ಮತ್ತೆ ಮತದಾರ ಪ್ರಭು ಕಾರಿಗೆ ಮುತ್ತಿಗೆ ಹಾಕಿ ಬೆವರಿಳಿಸಿದ ಘಟನೆ ಬೀದರ್ ತಾಲೂಕಿನ ಕಮಠಾಣ ಗ್ರಾಮದಲ್ಲಿ ನಡೆದಿದೆ… ನನಗೆ ಮತ ನೀಡಿ ಎಂದು ಕೇಳಲು ಹೋಗಿಸ್ದ ಖೇಣಿಗೆ ಗ್ರಾಮದಲ್ಲಿ ಯಾವುದೆ ಅಭಿವೃದ್ಧಿ ಕಾಮಗಾರಿ ಮಾಡದಕ್ಕೆ ಖೇಣಿಗೆ ಗ್ರಾಮಸ್ಥರು ಪ್ರಶ್ನೆಗಳ ಸುರಿ ಮಳೆ ಹಾಕಿ ವಿರದ್ದ ಘೋಷಣೆ ಕೂಗಿದ್ರು…

 

LEAVE A REPLY

Please enter your comment!
Please enter your name here