Home Cinema “ಆಂಡಿ ಮಾನಸಿಕವಾಗಿ.. ದೈಹಿಕವಾಗಿ ಕಾಟ ಕೊಟ್ಟಿದ್ದಾನೆ.” ಆಂಡಿಯಿಂದ ಕಾಪಾಡಿ ಹೀಗಂದ್ಳೇಕೆ ಚಿನ್ನು..! “ಮೈ ಮುಟ್ಟುವ...

“ಆಂಡಿ ಮಾನಸಿಕವಾಗಿ.. ದೈಹಿಕವಾಗಿ ಕಾಟ ಕೊಟ್ಟಿದ್ದಾನೆ.” ಆಂಡಿಯಿಂದ ಕಾಪಾಡಿ ಹೀಗಂದ್ಳೇಕೆ ಚಿನ್ನು..! “ಮೈ ಮುಟ್ಟುವ ಹಾಗೂ ಖಾಸಗಿ ಜಾಗಗಳನ್ನೂ ಮುಟ್ಟುವ ಚಪಲವಿದೆಯಂತೆ ಆಂಡಿಗೆ..?

2883
0
SHARE

ಬಿಗ್‌ಬಾಸ್ ಶೋ ಎಂಬುದೇ ಹುಚ್ಚರ ಸಂತೆ. ಹುಚ್ಚಾ ವೆಂಕಟನಂಥವರನ್ನೇ ಜುಟ್ಟು ಕೆದರಿಕೊಂಡು ಬೀದಿಗೆ ಬಿಟ್ಟ ಖ್ಯಾತಿಯೂ ಈ ಶೋಗೇ ಸಲ್ಲುತ್ತೆ. ಮತ್ತೊಬ್ಬರ ಖಾಸಗೀ ಬದುಕಿನ ಮೇಲಿರೋ ಮನುಷ್ಯ ಸಹಜ ಕ್ಯೂರಿಯಾಸಿಟಿಯನ್ನೇ ಬಂಡವಾಳ ಮಾಡಿಕೊಂಡ ಈ ಶೋವನ್ನು ಜನ ಬೈದುಕೊಂಡೂ ನೋಡುತ್ತಾರೆ.

ನೋಡುತ್ತಲೇ ಬೈಯುತ್ತಾರೆ.ಇಂಥಾ ಶೋನಲ್ಲಿ ಪ್ರತೀ ಸೀಜನ್ನಿನಲ್ಲಿಯೂ ಚಿತ್ರ ವಿಚಿತ್ರ ವ್ಯಕ್ತಿತ್ವಗಳನ್ನು ಹುಡುಕಾಡಿ ತುಂಬಿಕೊಳ್ಳೋದು ವಾಡಿಕೆ. ಈ ಬಾರಿಯೂ ಅಂಥಾದ್ದೇ ಒಂದು ದೈತ್ಯಾಕೃತಿಯನ್ನು ಮನೊಯೊಳಗೆ ಬಿಟ್ಟುಕೊಳ್ಳಲಾಗಿತ್ತು. ಆತನೇ ಆಂಡ್ರೀವ್ ಅಲಿಯಾಸ್ ಆಂಡಿ.ನಿಮಗೆ ಗೊತ್ತಿರಲಿ, ಯಾವುದೇ ಮನುಷ್ಯ ಸಹ್ಯವಾಗೋದು, ಅಸಹ್ಯ ಅನ್ನಿಸೋದು ಅಂದ, ಚೆಂದ, ಆಕೃತಿಗಳಿಂದಲ್ಲ. ಆತನ ವರ್ತನೆಗಳಿಂದ. ಇಂಥಾ ಕಾಮನ್‌ಸೆನ್ಸ್ ಕೂಡಾ ಇಲ್ಲದ ಆಂಡಿಯೆಂಬಾತ ಕೇವಲ ಬಿಗ್‌ಬಾಸ್ ಸ್ಪರ್ಧಿಗಳಿಗೆ ಮಾತ್ರವಲ್ಲದೇ ಪ್ರೇಕ್ಷಕರಿಗೂ ಕಿರಿಕಿರಿಯುಂಟು ಮಾಡಿದ್ದ.

ಕಿರಿಕಿರಿಯನ್ನೇ ಗೇಮ್ ಫ್ಲ್ಯಾನ್ ಮಾಡ್ಕೊಂಡಿದ್ದ. ಇದು ನಮ್ಮ ಮಾತಲ್ಲ. ಶೋ ನೋಡಿದ ಪ್ರತಿಯೊಬ್ಬರ ಅಭಿಪ್ರಾಯ.ಉಕ್ಕಿನಂಥಾ ದೇಹ ಹೊಂದಿದ್ದರೂ ಮಗುವಿನಂಥಾ ಮನಸು ಹೊಂದಿರುವ, ಅದನ್ನೇ ಉಳಿಸಿಕೊಂಡು ಹೊರ ಬಂದಿರುವ ಜಿಮ್ ರವಿಯಂಥಾ ರವಿಯೇ ಆಂಡಿಯೊಬ್ಬ ಪರಮ ಕ್ರೂರಿ ಎಂಬರ್ಥದಲ್ಲಿ ಮಾತಾಡಿದ್ದರು ಅಂದ್ರೆ ಈತನ ವ್ಯಕ್ತಿತ್ವ ಎಂಥಾದ್ದೆಂಬುದು ಬಿಗ್‌ಬಾಸ್ ಶೋ ನೋಡದವರಿಗೂ ಗೊತ್ತಾಗಿ ಬಿಡುವಂಥದ್ದೇ. ಹೌದು, ಒಂಟಿ ಮನೆನಿಂದ ಹೊರಬಂದ್ಮೇಲೆ, ಕಿಚ್ಚಾ ಸುದೀಪ ಕೇಳಿದೊಂದು ಪ್ರಶ್ನೆಗೆ ಉತ್ತರಿಸಿದ ಜಿಮ್ ರವಿ ಆಂಡಿ ಒಬ್ಬ ಕ್ರೂರಿ, ಕಿರಿಕಿರಿಯ ಆಸಾಮಿ ಅಂತ ನೇರವಾಗಿಯೇ ಹೇಳಿದ್ದರು.

ಅದು ಪ್ರತಿಯೊಬ್ಬ ಪ್ರೇಕ್ಷಕನಿಗೂ ನೂರಕ್ಕೆ ನೂರರಷ್ಟು ಸತ್ಯವೇ ಅನ್ನಿಸಿತ್ತು ಕೂಡಾ. ಇಂಥ ಆಂಡಿ ವಿರುದ್ಧ ಇದೀಗ ಅದೇ ಒಂಟಿ ಮನೆಯಲ್ಲಿದ್ದ ಇನ್ನೊಬ್ಬ ಕಂಟೆಸ್ಟಂಟ್ ಕವಿತಾ, ಖ್ಯಾತೆ ತೆಗೆದಿದ್ದಾಳೆ. ಇಂಟ್ರೆಸ್ಟಿಂಗ್ ಅಂದ್ರೆ ಖ್ಯಾತೆ ಕಹಾನಿ ಮನೆ ನಿಂದ ಹೊರ ಬಂದ್ಮೇಲೆ ಶುರುವಾಗಿರೋದು.ಹೌದು, ಅಸಲಿಗೆ ಆರಂಭದಲ್ಲಿ ಕವಿತಾ ಗೌಡಳನ್ನು ಪುಟ್ಟ ತಂಗಿ ಅಂತ ಪುಂಗಿದ್ದ ಆಂಡಿ ನಂತರ ಅವಳ ಮೇಲೆಯೇ ಲವ್ವಾದಂಥಾ ಡ್ರಾಮಾ ಶುರು ಮಾಡಿದ್ದ. ಹತ್ತು ನಿಮಿಷ ನನ್ನ ಜೊತೆ ನೀನು ಮಾತನಾಡಲೇಬೇಕೆನ್ನುವಂಥ ಡೀಲ್ ಮಾಡಿಕೊಂಡಿದ್ದ.

ಈ ಹಿಂದಿನ ಸೀಜನ್ನುಗಳಲ್ಲಿ ಇಂಥಾ ಲವ್ ಸ್ಟೋರಿಗಳ ರೂವಾರಿಗಳನ್ನು ಬರಖತ್ತು ಮಾಡಲಾಗಿತ್ತಲ್ಲಾ..? ಅಂಥಾದ್ದೊಂದು ಪ್ಲಾನು ಮಾಡಿಯೇ ಈತ ಕವಿತಾ ಮೇಲೆ ಕ್ರಶ್ ಆದಂತೆ ನಾಟಕ ಶುರುವಿಟ್ಟುಕೊಂಡಿದ್ದು. ಇದು, ಆ ಕ್ಷಣಕ್ಕೆ ಎಲ್ಲರಿಗೂ ಗೊತ್ತಾಗಿತ್ತು. ಅರ್ಥನೂ ಆಗಿತ್ತು. ಇದೀಗ ಅಂದಿನ ಸೋ ಕಾಲ್ಡ್ ಲವ್ ಎಪಿಸೋಡಿನ ಹಿಂದಿನ ಕಥೆಯನ್ನ ಕವಿತಾ ಗೌಡ ಬಿಚ್ಚಿಡಲು ಮುಂದಾಗಿದ್ದಾಳೆ.ಯಸ್, ಆಂಡಿ ವಿರುದ್ಧ ಕವಿತಾ ಗೌಡ, ಮಹಿಳಾ ಆಯೋಗಕ್ಕೆ ದೂರನ್ನ ಕೊಟ್ಟಿದ್ದಾಳೆ. ಕವಿತಾ ಹೇಳುವಂತೆ.. ಆಂಡಿ, ಕವಿತಾಳನ್ನ ಬಿಗ್ ಬಾಸ್ ಮನೆಯಲ್ಲೇ ಸಿಕ್ಕಾಪಟ್ಟೆ ಗೋಳೋಯ್ದುಕೊಂಡಿದ್ದಾನೆ.

ಮಾನಸಿಕವಾಗಿ.. ದೈಹಿಕವಾಗಿ ಕಾಟ ಕೊಟ್ಟಿದ್ದಾನೆ. ಅಷ್ಟೇ ಅಲ್ಲ ಮೈಕನ್ನೂ ಯಾಮಾರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದನಂತೆ ಆಂಡಿ. ಇನ್ನೂ, ಆಂಡಿಯದ್ದು ಬರೀ ಬಾಯ್ಮಾತಿನ ಚಪಲವಲ್ಲ. ಮೈ ಮುಟ್ಟುವ ಹಾಗೂ ಖಾಸಗಿ ಜಾಗಗಳನ್ನೂ ಮುಟ್ಟುವ ಚಪಲವಿದೆಯಂತೆ. ಹೀಗಂತ ಹೇಳುವ ಚಿನ್ನು ಅನೇಕ ಬಾರಿ ಆಂಡಿಗೆ ಮನೆಯೊಳಗೆ ವಾರ್ನ್ ಮಾಡಿದ್ದಳಂತೆ, ಆದ್ರೇ ಪ್ರಯೋಜನ ಮಾತ್ರ ಶೂನ್ಯ. ಇನ್ನೂ ಆಂಡಿಯ ಇದೇ ಕಾಟ ಸಹಿಸಲಾಗ್ದೇ ಕವಿತಾ ಅವತ್ತೇ ಬಿಗ್ ಬಾಸ್ ಮೇಲ್ವಿಚಾರಕ ಗುರುರಾಜ್ ಶಣೈ ಅವ್ರಿಗೂ ಕಂಪ್ಲೇಟ್ ಕೊಟ್ಟರೂ ಯಾವ್ದೇ ಪ್ರಯೋಜನವಾಗಿಲ್ಲ.

ಹೋಗಲಿ.. ಬಿಗ್ ಬಾಸ್ ಮನೆಯಾಚೆ ಬಂದ್ಮೇಲಾದ್ರೂ ಆಂಡಿಯ ಉಪಟಳ ಕಮ್ಮಿಯಾಯ್ತಾ ಅಂದ್ರೆ ಅದು ಇಲ್ಲ. ಕುಂತಲ್ಲಿ ನಿಂತಲ್ಲಿ.. ಕಂಡ ಕಂಡಲ್ಲಿ ಕವಿತಾ ಬಗ್ಗೆ ಆಂಡಿ ಬರೀ ಕೆಟ್ಟಾ ಕೊಳಕು ಮಾತುಗಳನ್ನೇ ಆಡಿದ್ದಾನಂತೆ. ಹಾಗಾಗೇ, ಮನನೊಂದ ಕವಿತಾ ಇದೀಗ ಆಂಡಿ ವಿರುದ್ಧ ಕಂಪ್ಲೇಟ್‌ನ ಪಟ್ಟಿ ಹಿಡಿದು ಮಹಿಳಾ ಆಯೋಗಕ್ಕೆ ದೂರನ್ನ ಕೊಟ್ಟಿದ್ದಾಳೆ.ಬರೀ ಕವಿತಾಗಷ್ಟೇ ಅಲ್ಲ, ಕವಿತಾ ಹೇಳುವಂತೆ ಆಂಡಿ ಬಿಗ್ ಬಾಸ್ ಮನೆಯೊಳಗಿನ ಅನೇಕರಿಗೂ ಆಂಡಿ ಕಾಟ ಕೊಟ್ಟಿದ್ದಾನಂತೆ. ಇನ್ನೂ ಆಂಡಿ ಮುಖಕ್ಕೆ ಬಿಗ್ ಬಾಸ್ ಛೀಮಾರಿ ಹಾಕಿ ಬುದ್ದಿ ಹೇಳಿದ್ರು ಪ್ರಯೋಜವಾಗಿಲ್ಲ.

ಹಾಗಾಗೇ, ಆಂಡಿ ವಿರುದ್ಧ ಮಹಿಳಾ ಆಯೋಗದ ಮೆಟ್ಟಿಲು ಏರಿದ್ದೇನೆ ಅನ್ನುತ್ತಾಳೆ ಕವಿತಾ ಗೌಡ.ಕವಿತಾ ಮಾಡುವ ಇದೇ ಆರೋಪಗಳಿಗೆ, ಆಂಡಿ ಬೇರೆಯದ್ದೇ ಕಥೆಯನ್ನ ಹೇಳುತ್ತಾನೇ. ಕಿತ್ತಾಟಕ್ಕೆ ಧರ್ಮದ ಬಣ್ಣ ಬಳಿಯುತ್ತಾನೇ. ನಾನು ಕ್ರಿಶ್ಚಿಯನ್ ಹಾಗಾಗಿ, ಕವಿತಾ ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನ ಮಾಡ್ತಿದ್ದಾಳೆಂದು ದೇಹ ಕುಲುಕಿಸಿ ನಗುತ್ತಾನೇ ಆಂಡಿ
ಇನ್ನೂ ಕವಿತಾ ಮಾಡಿದ ಆರೋಪ ಆಂಡಿಗೂ ಶಾಕ್ ಕೊಟ್ಟಿದೆಯಂತೆ. ಅಯ್ಯೋ, ನಾನಂಥವನಲ್ಲ.. ನಾನ್ಯಾಕೆ, ಹೋದಲ್ಲಿ ಬಂದಲ್ಲಿ ಕವಿತಾ ಬಗ್ಗೆ ಮಾತನಾಡಲಿ ಅನ್ನುವ ಪ್ರಶ್ನೆ ಕೇಳ್ತಿರುವ ಆಂಡಿ, ಮನೆನಿಂದ ಹೊರಬಂದ್ಮೇಲೆ ಕವಿತಾಳನ್ನ ಭೇಟಿಯಾಗಿದ್ದು ಬರೀ ಒಂದೇ ಒಂದು ಬಾರಿ ಮಾತ್ರ.

ಅಷ್ಟೇ ಅಲ್ಲ ಕವಿತಾ ನಂಬರೇ ನನ್ನ ಬಳಿ ಇಲ್ಲ ಅನ್ನುವ ಆಂಡಿ, ಹುಡುಗರ ಗೋಳು ಕೇಳೋದ್ಯಾರು ಅನ್ನುತ್ತಾನೆ.ಇಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ಸಂಗತಿಯನ್ನೂ ಆಂಡಿ ಹೇಳಿದ್ದಾನೆ. ಅದುವೇ ಕವಿತಾ ಗೌಡ ಅಮ್ಮ ಕೆನ್ನೆ ಊದುವಂತೆ ಹೊಡೆದಿರುವ ಏಟಿನ ವಿಚಾರ. ಹೌದು, ಬಿಗ್ ಬಾಸ್ ಮನೆನಿಂದ ಹೊರಬಂದ್ಮೇಲೆ ಆಂಡಿ ಮನೆಗೆ ಕವಿತಾ ಗೌಡ ಅಮ್ಮ ಭೇಟಿ ಕೊಟ್ಟಿದ್ದರಂತೆ. ಆಗ, ತಮಾಶೆಯಾಗಿ ನಿಮಗೆನಾದ್ರೂ ನೋವಾಗಿದ್ದರೆ ಒಂದೇಟು ಹೊಡೆದು ಬಿಡಿ ಅಂದಿದ್ದನಂತೆ. ಆಂಡಿಯ ಇದೇ ಮಾತನ್ನ ಮೊದಲೇ ಸಿರಿಯಸ್ ಮೂಡಿನಲ್ಲಿದ್ದ ಕವಿತಾ ಅಮ್ಮ ಸಿರಿಯಸ್ ಆಗಿಯೇ ತೆಗೆದುಕೊಂಡು, ಕೆನ್ನೆ ಊದುವಂತೇ ಚಟೀರ್ ಅಂಥ ಹೊಡೆದೇ ಬಿಟ್ಟಿದ್ದರಂತೆ.

ಒಟ್ನಲ್ಲಿ ಎಲ್ಲರನ್ನೂ ಇರಿಟೇಟ್ ಮಾಡುತ್ತಾ, ಪಕ್ಕಾ ನರಿ ಬುದ್ಧಿ ಪ್ರದರ್ಶಿಸುತ್ತಾ ಆಂಡಿಗೆ ಇದೀಗ ಸಣ್ಣಗಾಗಿರೋ ಬುಲೆಟ್ ಪ್ರಕಾಶ್ ಜಾಗದಲ್ಲಿ ತನ್ನ ಅಗಾಧ ದೇಹವನ್ನು ಪ್ರತಿಷ್ಠಾಪಿಸೋ ಬಯಕೆಯನ್ನೊಂದಿರುವ ಆಂಡಿ ವಿರುದ್ಧ ಇದೀಗ, ಕವಿತಾ ಗೌಡ ದೂರು ಕೊಟ್ಟಿದ್ದಾಳೆ. ಮಹಿಳಾ ಆಯೋಗ ಆಂಡಿ ವಿಚಾರಣೆ ನಡೆಸುವ ಮಾತುಗಳನ್ನೂ ಆಡಿದೆ. ಮುಂದಿನ ದಿನಗಳಲ್ಲಿ ಆಂಡಿ ಹಾಗೂ ಕವಿತಾ ನಡುವಿನ ಮಹಾಯುದ್ಧದ ಎಪಿಸೋಡು ಇನ್ನೆಲ್ಲಿ ಹೋಗಿ ಮುಟ್ಟುತ್ತೆ ಕಾದು ನೋಡಬೇಕು.

LEAVE A REPLY

Please enter your comment!
Please enter your name here