Home District ಆಕೆ ತೋಟ, ಹೊಲ-ಗದ್ದೆಗಳ ಕಾವಲು ದೇವತೆ.! ಮಲೆನಾಡ ಮಡಿಲಿನಲ್ಲಿ ನೆಲೆ ನಿಂತಿದ್ದಾಳೆ, ಸಿಗಂದೂರು ಚೌಡೇಶ್ವರಿ.! “ನವಶಕ್ತಿ...

ಆಕೆ ತೋಟ, ಹೊಲ-ಗದ್ದೆಗಳ ಕಾವಲು ದೇವತೆ.! ಮಲೆನಾಡ ಮಡಿಲಿನಲ್ಲಿ ನೆಲೆ ನಿಂತಿದ್ದಾಳೆ, ಸಿಗಂದೂರು ಚೌಡೇಶ್ವರಿ.! “ನವಶಕ್ತಿ ವೈಭವ.!” ನವರಾತ್ರಿ ವಿಶೇಷ…

1888
0
SHARE

ಮಲೆನಾಡಿನ ನಿಸರ್ಗದ ಸೌಂದರ್ಯವೇ ಹಾಗೆ, ಹಸಿರಿನ ಸಿರಿಯನ್ನ ಮೈಯೊಡ್ಡಿ ನಿಂತಿರುವ ನಿಸರ್ಗ ದೇವತೆ ಎಲ್ಲದಕ್ಕೂ ಪ್ರೇರಕ ಶಕ್ತಿಯಾಗಿ ನೆಲೆನಿಂತಿದ್ದಾಳೆ. ಮಲೆನಾಡು ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ, ರಾಜಕೀಯವಾಗಿ, ದೇಶದ ಇತಿಹಾಸದಲ್ಲಿ ತನ್ನದೇ ಛಾಪನ್ನ ಮೂಡಿಸಿದೆ ಎಂದರೆ ಅದಕ್ಕೆ ಕಾರಣ ಇಲ್ಲಿನ ಪರಿಸರ. ಇಂತಹ ಸ್ವರ್ಗ ತಾಣ ಧಾರ್ಮಿಕ ಕ್ಷೇತ್ರಕ್ಕೂ ತನ್ನದೇ ಆದ ಕೊಡುಗೆಯನ್ನ ನೀಡಿದೆ. ರಾಮಾಯಣ ಮಹಾಭಾರತದಲ್ಲಿ ಉಲ್ಲೇಖವಾಗುವ ಧಾರ್ಮಿಕ ಸ್ಥಳಗಳಿಗೆ ಮಲೆನಾಡು ಸಾಕ್ಷಿಭೂತವಾಗಿದೆ. ಅಂಬು ತೀರ್ಥ, ಮಹಿಷಿ ಮೃಗವಧೆ, ಕೊಡಚಾದ್ರಿ ಬೆಟ್ಟ, ಅರುಣಗಿರಿ ಬೆಟ್ಟ, ಈ ಧಾರ್ಮಿಕ ಕ್ಷೇತ್ರಗಳು ಅದನ್ನ ಸಾಕ್ಷೀಕರಿಸುತ್ತವೆ.

ಅದೇ ರೀತಿಯಲ್ಲಿ ನಿಸರ್ಗ ಸೌಂದರ್ಯ ಹೊತ್ತು ಮಲಗಿರುವ ಶರಾವತಿ ದಟ್ಟಡವಿಯ ಕಾನನ ಪ್ರದೇಶ ಸಿಗಂಧೂರು ಧಾರ್ಮಿಕ ಕ್ಷೇತ್ರ ಚೌಡೇಶ್ವರಿ ದೇವಿಯ ನೆಲೆಬೀಡಾಗಿದೆ. ಸಿಗಂಧೂರು ಧಾರ್ಮಿಕ ಕ್ಷೇತ್ರವಾದ್ರು, ಇಲ್ಲಿಗೆ ಬರುವ ಭಕ್ತರು ಪ್ರವಾಸಿಗರಾಗಿಯೂ ಪುಳಕಿತರಾಗ್ತಾರೆ. ಯಾಕಂದ್ರೆ ಇಲ್ಲಿಗೆ ಸಾಗುವ ಹಾದಿ ನಮ್ಮ ಮನಸ್ಸಿಗೆ ಮುದ ನೀಡಿದ್ರೆ, ದೇವಿಯ ದರ್ಶನ ಹೃದಯದ ಭಾರವನ್ನೇ ಇಳಿಸುತ್ತೆ. ಹೌದು, ಸಿಗಂಧೂರು ದೇವಿಯ ದರ್ಶನಕ್ಕೆ ಹೋಗುವ ಪಯಣದ ಹಾದಿಯೇ ಆಗಿದೆ.ದೇವಿ ದರ್ಶನಕ್ಕೆ ಹೋಗುವ ಮಾರ್ಗದ ವಿವಿರ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೊಕ್ಕಿನ ತುಮರಿ ಬಳಿ ಸಿಗಂಧೂರು ಎಂಬ ಪುಟ್ಟ ಗ್ರಾಮವಿದೆ.

ಶ್ರೀ ಕ್ಷೇತ್ರ ಸಿಗಂಧೂರು, ಸಾಗರದಿಂದ ೪೫ ಕಿಲೋ ಮೀಟರ್ ದೂರದಲ್ಲಿದೆ. ಚೌಡೇಶ್ವರಿ ಅಮ್ಮನವರ ದೇವಾಲಯ ಇಲ್ಲಿರುವುದರಿಂದ ಸಿಗಂಧೂರೇಶ್ವರಿ ಎಂದು ಅಮ್ಮನವರನ್ನ ಕರೆಯುತ್ತಾರೆ. ಸಾಗರದಿಂದ ಹಾವಿನಹಳ್ಳಿ ದಾರಿಯಲ್ಲಿ ಹೊಳೆ ಬಾಗಿಲುವರೆಗೆ ರಸ್ತೆ ಮಾರ್ಗವಿದೆ. ಅಲ್ಲಿಂದ ಮುಂದೆ ನಮಗೆ ಎದುರಾಗುವುದು ಲಿಂಗನಮಕ್ಕಿ ಅಣೆಕಟ್ಟೆಯ ಈ ನೀರು. ಇಲ್ಲಿಂದ ಮುಂದೆ ಸೇತುವೆಯಿಲ್ಲ. ಲಾಂಚ್ ಮೂಲಕ ಈ ನೀರು ದಾಟಬೇಕು. ಈ ದಾರಿಯಲ್ಲಿ ಬರುವ ಎಲ್ಲಾ ವಾಹನಗಳಿಗೂ ಲಾಂಚ್ ಒಂದೇ ಪರ್ಯಾಯ ವ್ಯವಸ್ಥೆಯಾಗಿದೆ. ಎರಡು ಕಿಲೋ ಮೀಟರ್‌ವರೆಗಿನ ಈ ನೀರಿನಲ್ಲಿ ಸಾಗಿದ್ರೆ ಪ್ರಕೃತಿಯ ಸೌಂದರ್ಯ ಈ ನೀರಿನ ರಮಣೀಯ ದೃಶ್ಯಗಳು ನಮಗೆ ಪ್ರಕೃತಿಯ ಸೊಬಗನ್ನ ಅನಾವರಣಗೊಳಿಸುತ್ತವೆ.

ಸುಮಾರು ೧೫ ರಿಂದ ೨೦ ನಿಮಿಷಗಳ ಪಯಣ ಮನಸ್ಸಿಗೆ ಮುದ ನೀಡುತ್ತೆ. ಈ ನೀರು ದಾಟಿದ ನಂತರ ಕಾಡಿನ ರಸ್ತೆಯಲ್ಲಿ ೫ ಕಿಲೋ ಮೀಟರ್ ಸಾಗಿದ್ರೆ ಸಿಗಂಧೂರು ಚೌಡಮ್ಮ ದೇವಿಯ ಕ್ಷೇತ್ರದ ದರ್ಶನವಾಗುತ್ತೆ.  ಗ್ರಾಮದ ಹೆಸರಿನಿಂದಲೇ ದೇವಿಯ ಹೆಸರು ಪ್ರಸಿದ್ದಿ ಪಡೆದಿರುವುದು ಇಲ್ಲಿನ ವಿಶೇಷವಾಗಿದೆ. ಆಕೆ ತೋಟ, ಹೊಲ-ಗದ್ದೆಗಳ ಕಾವಲು ದೇವತೆ, ಸಿಗಂಧೂರು ಚೌಡೇಶ್ವರಿ ದೇವಿಗೆ ಸುಮಾರು ೩೦೦ ವರ್ಷಗಳ ಇತಿಹಾಸವಿದೆ. ರಕ್ಷಣೆ ಕೋರಿ ಬರುವ ಭಕ್ತರನ್ನ ಹರಸಿ ರಕ್ಷಿಸುವ ತಾಯಿ ಎಂದು ಜನರು ಚೌಡೇಶ್ವರಿಯನ್ನ ನಂಬಿದ್ದಾರೆ.

ಹೊರ ರಾಜ್ಯಗಳಿಂದ ಇಲ್ಲಿಗೆ ಭಕ್ತರ ಮಹಾಪೂರವೇ ಹರಿದು ಬರುತ್ತೆ. ಶರಾವತಿ ಈ ನೀರಿನ ವಿಶಾಲ ಪ್ರದೇಶದಲ್ಲಿ ಅಲ್ಲಲ್ಲಿ ಸೃಷ್ಠಿಯಾಗಿರುವ ನಡುಗಡ್ಡೆಗಳು ಇಲ್ಲಿನ ಪ್ರಮುಖ  ಆಕರ್ಷಣೆ. ಇವುಗಳ ಜೊತೆಗೆ ಈಗ ಚೌಡೇಶ್ವರಿಯಿಂದ ಸಿಗಂಧೂರು ದೊಡ್ಡ ಧಾರ್ಮಿಕ ಕ್ಷೇತ್ರವಾಗಿ ದೇಶದ ಗಮನ ಸೆಳೆದಿದೆ. ಯಾವ ಧಾರ್ಮಿಕ ಕ್ಷೇತ್ರಗಳಲ್ಲೂ ಇಲ್ಲದ ವಿಶೇಷ ಸಿಗಂಧೂರಿನಲ್ಲಿದೆ. ಕಳ್ಳರಿಂದ ತಮ್ಮ ಮನೆ, ಹೊಲಗಳಿಗೆ ರಕ್ಷಣೆ ಪಡೆಯಲು ಇಲ್ಲಿ ಬೋರ್ಡ್ ಕೊಡುವ ಪದ್ದತಿಯಿದೆ. ಜಮೀನು, ತೋಟ, ಗದ್ದೆ, ಬೇಣ ಮತ್ತು ಹೊಸ ಕಟ್ಟಡಗಳಲ್ಲಿನ ವಸ್ತುಗಳಿಗೆ ದೇವಿಯ ಕಾವಲಿದೆ   ಎಂಬ ಬೋರ್ಡ್ ಹಾಕಿದ್ರೆ, ಅಲ್ಲಿ ಕಳ್ಳತನವಾಗುವುದಿಲ್ಲ ಎಂಬ ಪ್ರತೀತಿಯಿದೆ.

ಹೀಗಾಗಿ ಇಂದಿಗೂ ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಮೂಲೆ-ಮೂಲೆಗಳ ಊರುಗಳಲ್ಲಿ ಸಿಗಂಧೂರು ಚೌಡೇಶ್ವರಿ ದೇವಿಯ ಕಾವಲಿದೆ ಎಂಬ ಬೋರ್ಡ್‌ಗಳನ್ನ ಕಾಣಬಹುದು.ಅದು ತುಮರಿ ಸಮೀಪದ ಸೀಗೆ ಕಣಿವೆಯಲ್ಲಿ ನಡೆದ ಅದ್ಭುತ, ಆಗಿನ ಸಮಾಜದ ನಾಯಕರಾಗಿದ್ದ ಶೇಷಪ್ಪನವರು ತಮ್ಮ ಸಂಗಡಿಗರೊಂದಿಗೆ ಬೇಟೆಯಾಡಲು ಸೀಗೆ ಕಣಿವೆಯ ಕಡೆ ಉತ್ಸುಕರಾಗಿ ಹೊರಟಿದ್ದ ಸಂದರ್ಭ. ದಟ್ಟಡವಿಯಾಗಿದ್ದರಿಂದ ವನ್ಯ ಮೃಗಗಳ ಸಂಖ್ಯೆ ಹೆಚ್ಚೆ ಇತ್ತು, ಅವು ನಿರ್ಭೀತಿಯಿಂದ ವಿಹರಿಸ್ತಾ ಇದ್ವು. ಹುಲಿ, ಚಿರತೆ, ಕೋಣ ಮತ್ತು ಜಿಂಕೆಗಳಿಗೆ ಇಲ್ಲಿ ಕೊರತೆ ಎಂಬುದೇ ಇರಲಿಲ್ಲ.

ಶೇಷಪ್ಪನವರು ಬೇಟೆ ಹರಸಿ ಕಾಡಿನಲ್ಲಿ ಸಂಚರಿಸುವಾಗ ಸಂಗಡಿಗರು ಹಿಂದಾಗ್ತಾರೆ. ಶೇಷಪ್ಪ ನವರಿಗೆ ಭಯ ಶುರುವಾಗುತ್ತೆ, ಯಾವಾಗಲೂ ಬೇಟೆಯಾಡಲು ಬಂದ ಸಂದರ್ಭದಲ್ಲಿ ಈ ರೀತಿಯ ಅನುಭವ ಆಗಿರಲಿಲ್ಲ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ. ಒಂದೆಡೆ ಹುಲಿ ಘರ್ಜನೆಯಾದ್ರೆ, ಮತ್ತೊಂದೆಡೆ ಉಪ್ಪಳಗಳ ಶಬ್ದ, ಈ ಸಂದರ್ಭದಲ್ಲಿ ಮಂದವಾದ ಬೆಳಕು. ಶೇಷಪ್ಪನವರು ಮನದಲ್ಲಿ ತಾಯಿ ದೇವಿಯನ್ನ ನೆನೆದು ಕಾಪಾಡುವಂತೆ ಪಾರ್ಥಿಸುತ್ತಾರೆ.  ಅವರಿಗೆ ನಿದ್ರೆ ಆವರಿಸುತ್ತೆ, ನಿದ್ದೆಯಲ್ಲಿ ಆದಿಶಕ್ತಿ, ಮಹಾಮಾಯೆ, ಲೋಕಮಾತೆ ಸಿಗಂಧೂರೇಶ್ವರಿ ರೂಪದಲ್ಲಿ ನಾನಿಲ್ಲಿ ನೆಲೆಸಿ ಧರ್ಮೊದ್ದಾರ, ಭಕ್ತರ  ಪರಿಪಾಲನೆ ಮಾಡಬೇಕೆಂದು ನಿಶ್ಚಯಿಸಿದ್ದೇನೆ,

ನಾನು ನೆಲೆ ನಿಲ್ಲಲು ಗುಡಿಯೊಂದನ್ನು ಕಟ್ಟಿಸು ನಿತ್ಯ ಪೂಜೆ ನಡೆಯಬೇಕು. ನಾನು ಶಿಲಾರೂಪಿಯಾಗಿ ನೆಲೆಸ್ತೇನೆ ಎಂದು ದೇವಿ ಕನಸ್ಸಿನಲ್ಲಿ ಶೇಷಪ್ಪನವರಿಗೆ ಹೇಳ್ತಾಳೆ.ಶೇಷಪ್ಪನವರಿಗೆ ಎಚ್ಚರವಾದಾಗ ತಾನು ಕಂಡಿದ್ದು ಕನಸು, ಕನಸ್ಸಿನಲ್ಲಿ ದೇವಿ ಪ್ರತ್ಯಕ್ಷ್ಯಳಾಗಿ ಹೇಳಿಕೆ ನೀಡಿದ್ದಾಳೆಂದು ಅರಿಯುತ್ತಾರೆ. ಆಗ ಸುತ್ತ ನೋಡಿದಾಗ ಕತ್ತಲು ಆವರಿಸಿತ್ತು. ಮನೆಯತ್ತ ಹೆಜ್ಜೆ ಹಾಕಿದ್ರು, ದಿನ ಕಳೆದಂತೆ ಶೇಷಪ್ಪ ನವರ ದಿನಚರಿ ಬದಲಾಯಿತು. ಆಧ್ಯಾತ್ಮದ ಕಡೆ ಒಲವು ಅರಿಯಿತು. ದೇವಿ ಶಿಲಾರೂಪಿಯಾಗಿ ಸೀಗೆ ಕಣಿವೆಯಲ್ಲಿ ನಿಂತಿರುವಳು ಎಂಬುದನ್ನ ಸ್ಥಿರಪಡಿಸಿಕೊಂಡರು.

ಆದ್ರೆ ಜನರನ್ನ ನಂಬಿಸುವುದು ಹೇಗೆ.? ನೂರಾರು ವರ್ಷಗಳ ತಪಸ್ಸು ಮಾಡಿದ್ರು ಸಾಧು ಸಂತರಿಗೆ ಒಲಿಯದ ದೇವಿ, ನನಗೆ ಕನಸ್ಸಿನಲ್ಲಿ ಅಪ್ಪಣೆ ಕೊಡಿಸಿದ್ಲು ಎಂದರೆ ಜನ ನಂಬುತ್ತಾರೆಯೇ ಎಂದು ಶೇಷಪ್ಪ ಭಾವಿಸ್ತಾರೆ. ಈ ಚಿಂತೆಯಲ್ಲಿಯೇ ಜಲಾವೃತವಾದ ಕಾಡನ್ನ ದಾಡಿ ಒಂಟಿಯಾಗಿ ತಾನು ಕನಸು ಕಂಡ ಸ್ಥಳವನ್ನ ಪರಿಶೀಲಿಸ್ತಾರೆ. ಅಲ್ಲಿಯೇ ತಾಯಿ ಸಿಗಂಧೂರೇಶ್ವರಿ ವಿಜೃಂಭಿಸ್ತಾ ಇದ್ಲು. ದೇವಿಗೆ ಪೂಜೆ ಸಲ್ಲಿಸಿದ್ರು ಆದರೂ ತೃಪ್ತಿ ಸಮಾಧಾನವಿಲ್ಲ. ಭಾವನಾ ಪ್ರಪಂಚದಲ್ಲಿಯೇ ತೇಲ್ತಾಯಿದ್ದ ಅವರ ಚಿತ್ತಬುತ್ತಿಗೆ ಒಲೆದದ್ದೇ ಆಗಮ ದುಗ್ಗಜ್ಜಪ್ಪ.

ಸಿಗಂಧೂರು ಸಾಗರ ತಾಲ್ಲೊಕ್ಕಿನ ಶರಾವತಿ ಹಿನ್ನೀರಿನ ಮಡಿಲಲ್ಲಿದೆ. ಸಾಗರದಿಂದ ೪೫  ಕಿಲೋ ಮೀಟರ್ ದೂರದಲ್ಲಿರುವ ಕಾಡಿನಿಂದ ಆವೃತವಾಗಿರುವ ಸಿಗಂಧೂರು ಸಣ್ಣ ಊರು. ಗಲಾಟೆ, ಗದ್ದಲಗಳು ಇಲ್ಲದ ಪ್ರಶಾಂತ ಸ್ಥಳ, ಪ್ರಕೃತಿ ಸೌಂದರ್ಯದ ರಮಣೀಯ ಸ್ಥಳದಲ್ಲಿ ಚೌಡೇಶ್ವರಿ ನೆಲೆನಿಂತು ಸಕಲ ಕಷ್ಟ ನಿವಾರಕೆಯಾಗಿದ್ದಾಳೆ. ಶ್ರೀ ಸಿಗಂಧೂರು ಚೌಡೇಶ್ವರಿ ನೀನೆ ಎಲ್ಲಾ ಎನ್ನುವ ಭಾವದಲ್ಲಿ ಭೇಡಿ ಬರುವ ಭಕ್ತರಿಗೆ ಎಂದೂ ಇಲ್ಲ ಎನ್ನದ ಕರುಣಾಕರಿ ಆಕೆ.  ಶಿವಮೊಗ್ಗದ ಜಿಲ್ಲೆಯ ಸಾಗರ ತಾಲೊಕ್ಕಿನ ಶರಾವತಿ ನದಿಯ ಹಿನ್ನೀರ ಪ್ರದೇಶದ ಮೂಲೆಯಲ್ಲಿರುವ ಗೂಗಲ್‌ಗೂ ಸಿಗದ ಸಿಗಂಧೂರಿನ ಕಾನನದಲ್ಲಿ ಕುಳಿತು.

ದೇಶದ ಮೂಲೆ-ಮೂಲೆಯಿಂದ ಶ್ರೀಸಾಮಾನ್ಯನಿಂದ ಹಿಡಿದು, ಉದ್ಯಮಿ, ಸಂತ, ಶ್ರೀಮಂತ ಮುಂತಾದ ಭೇದವಿಲ್ಲದೇ ಲಕ್ಷಾಂತರ ಜನರನ್ನ ತನ್ನಲ್ಲಿಗೆ ಕರೆಸಿಕೊಳ್ಳುತ್ತಾ ಇರುವ ಈಕೆಯ ಪ್ರಭಾವ ವರ್ಣಿಸಲಾಗದು. ಎರಡು ದಶಕಗಳ ಹಿಂದೆ ಕುಗ್ರಾಮವಾಗಿದ್ದ ಸಿಗಂಧೂರು, ಜಗನ್ಮಾತೆಯ ಉಪಸ್ಥಿತಿಯಿಂದ ಇಂದು ದಿವ್ಯ ಕ್ಷೇತ್ರವಾಗಿ ಪರಿಣಮಿಸಿದೆ. ಈ ಕ್ಷೇತ್ರದ ಅದಿ ದೇವತೆಯಾಗಿ ತಾಯಿ ಚೌಡೇಶ್ವರಿ ಲಕ್ಷಾಂತರ ಜನರ ಕಷ್ಟಗಳನ್ನ ನೀಗಿಸುತ್ತಾ ತನ್ನ ಪ್ರಭಾವದ ಅರಿವನ್ನ ರಭಸವನ್ನ ಭಕ್ತರ ಭಾವ-ಬಾಂದಳದಲ್ಲಿ ನಿರಂತರವಾಗಿ ಮೊಳಗಿಸುತ್ತಾ ಇದ್ದಾಳೆ. ಇಪ್ಪತೈದು ವರ್ಷಗಳ ಹಿಂದೆ ಸಿಗಂಧೂರು, ಐತಿಹಾಸಿಕ ಕ್ಷೇತ್ರವಲ್ಲ, ಬದಲಾಗಿ ನಮ್ಮ ಕಣ್ಣೆದುರಿಗೆ ಹುಟ್ಟಿ ಈಗ ಕಣ್ಣ ಅಂದಾಜಿಗು ನಿಲುಕದಷ್ಟು ದೊಡ್ಡದಾಗಿ ಬೆಳೆದಿರುವ ಕ್ಷೇತ್ರವದು.

ಇಪ್ಪತೈದು ವರ್ಷ ಹಿಂದಿನವರೆಗೂ ಇದೇ ಶರಾವತಿ ತೀರದ ಗೂಂಡಾರಣ್ಯದ ಗುಹೆಯೊಂದರಲ್ಲಿ ನೆಲೆಸಿದ್ದಳಾಕೆ. ಇದೀಗ ಸಿಗಂಧೂರು ಚೌಡೇಶ್ವರಿ ಸ್ಥಾಪನೆಗೊಂಡ ಸಂಭ್ರಮದಲ್ಲಿ ೨೦೧೫ನ್ನು ರಜತ ಮಹೋತ್ಸವ ವರ್ಷವನ್ನಾಗಿ ಆಚರಿಸಲಾಗಿದೆ.ಸೀಮಿತ ಭಕ್ತರನ್ನ ಸಲಹುತ್ತಾ, ಅಲ್ಲಿನ ನಿಸರ್ಗಧ ಸೊಬಗಿನ ಭವ್ಯತೆಗೆ ತನ್ನ ದಿವ್ಯತೆಯ ಹರಕೆ ಒಯ್ಯುತ್ತ ತಾನೇ ತಾನಾಗಿ ನೆಲೆನಿಂತಿದ್ದಾಳಾಕೆ. ಅದೊಂದು ಸುದಿನ ದೇವಸ್ಥಾನದ ಹಿಂದಿನ ಧರ್ಮದರ್ಶಿ ರಾಮಪ್ಪ ಹಾಗೂ ಪ್ರಧಾನ ಅರ್ಚಕ ಶೇಷಗಿರಿ ಭಟ್ಟರಿಗೆ ಪ್ರೇರಣೆ ಇತ್ತು. ಆ ಪ್ರೇರಣೆಯ ಫಲ ಶೃತಿಯೇ ಇಂದು ಕಂಗೊಳಿಸುತ್ತಾ ಇರುವ ಚೌಡೇಶ್ವರಿ ದೇವಾಲಯ. ಸಿಗಂಧೂರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೊಕ್ಕಿನಲ್ಲಿರವ ಪ್ರಸಿದ್ದ ಯಾತ್ರಾ ಸ್ಥಳ. ಚೌಡೇಶ್ವರಿ ಅಮ್ಮನವರ ದೇವಾಲಯದಲ್ಲಿರುವ ಈ ಅಮ್ಮನನ್ನ ಸಿಗಂಧೂರೇಶ್ವರಿ ಎಂದು ಕರೆಯುತ್ತಾರೆ.

ಶ್ರೀ ಕ್ಷೇತ್ರಕ್ಕೆ ಬರುವ ಎಷ್ಟೋ ಜನ ಭಕ್ತರು ತಮ್ಮ ವಾಹನಗಳ ಮೇಲೆ ಮತ್ತು ಮನೆಗಳಲ್ಲಿ ಶ್ರೀ ದೇವಿಯ ರಕ್ಷೆಗಾಗಿ ಈ ಬೋರ್ಡ್‌ನ್ನ ಕೊಂಡೊಯ್ದು ತಮ್ಮ ಮನೆಗಳಲ್ಲಿ ತೂಗು ಹಾಕ್ತಾರೆ. ದೇವಸ್ಥಾನದ ಬಲ ಭಾಗದಲ್ಲಿ ಭೂತದ ಕಟ್ಟೆಯಿದ್ದು ಅದರಲ್ಲಿ ಸ್ಥಾಪಿತಗೊಂಡ ವೀರಭದ್ರನು ಸಿಗಂಧೂರನ್ನ ಕಾಯುತ್ತಾನೆ. ದೇವಸ್ಥಾನದ ಎಡ ಭಾಗದಲ್ಲಿ ಶ್ರೀ ಶನೇಶ್ವರ  ಹಾಗೂ ಶ್ರೀ ರಕ್ತೇಶ್ವರಿ ದೇವಾಲಯವಿದೆ. ಸಿಗಂಧೂರು ಚೌಡೇಶ್ವರಿ ಮೂಲತಹ ಸೀಗೇ ಕಣಿವೆಯ ಶಕ್ತಿ ದೇವತೆಯೆಂದು ಆರಾಧಿಸಲ್ಪಟ್ಟ ದೇವತೆ. ಈ ಪ್ರದೇಶವನ್ನ ಈ ಹಿಂದೆ ಸೀಗೆ ಕಣೆವೆಯೆಂದು ಕರೆಯಲಾಗ್ತಾಯಿತ್ತು. ಇಲ್ಲಿ ವನ ದೇವತೆಯ ರೂಪದಲ್ಲಿ ಆಕೆ ಶಕ್ತಿ ರೂಪಿಣಿಯಾಗಿ ನೆಲೆಸಿದ್ದಾಳೆ ಎಂಬುದು ಭಕ್ತರ ನಂಬಿಕೆ. ಚೌಡೇಶ್ವರಿ ದೇವಿ ದೀವರ ಸಮುದಾಯದ ಆರಾಧ್ಯ ದೇವತೆ.

ಕರೂರು ಸೀಮೆಯಲ್ಲಿ ಕಳವು ನಡೆದರೆ ದೇವಿಗೆ ದೂರು ನೀಡಿದ ಕೆಲವೇ ಘಂಟೆಗಳಲ್ಲಿ ಕಳವಾದ ವಸ್ತುವಿನ ಕುರುಹು ತೋರಿಸ್ತಾಳೆ ಎಂಬುದು ಭಕ್ತರ ನಂಬಿಕೆ. ಇನ್ನೂ ೧೯೪೬ ಮತ್ತು ೧೯೬೩ರಲ್ಲಿ ಶರಾವತಿ ನದಿಗೆ ಸರ್ಕಾರ ಕ್ರಮವಾಗಿ ಹಿರೇಭಾಸ್ಕರ ಮತ್ತು ಲಿಂಗನಮಕ್ಕಿ ಅಣೆಕಟ್ಟನ್ನು ನಿರ್ಮಿಸಲು ಮುಂದಾದಾಗ ಶರಾವತಿ ಹಿನ್ನೀರಿನಿಂದ ಸೀಗೆ ಕಣಿವೆಗೂ ಕೂಡ ಬಿಸಿ ತಟ್ಟಿತು. ಆಗ ತಾಯಿ ಚೌಡೇಶ್ವರಿ ನೆಲೆಸಿದ್ದ ದೇವಿಯ ಬನದ ಕುಟೀರ ಮುಳುಗಡೆಯಾಯಿತು.

ದೇವಿ ನೀರಿನಲ್ಲಿ ಮುಳುಗಿದ ನಂತರ ಈಗಿನ ಧರ್ಮದರ್ಶಿ ರಾಮಪ್ಪನ ಪೂರ್ವಜರೆನ್ನಲಾದ ಶೇಷಪ್ಪ ನಾಯಕರು, ಶಿಕಾರಿಗೆ ತೆರಳಿದಾಗ ತಾಯಿ ಪ್ರತ್ಯಕ್ಷಗೊಂಡು ಇಲ್ಲಿ ದೇವಾಲಯ ನಿರ್ಮಾಣ ಮಾಡಲು ತಿಳಿಸಿದ್ದಳು ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಸಿಗಂಧೂರು ರಾಜ್ಯ ಮಟ್ಟದಲ್ಲಿ ಪ್ರಸಿದ್ದಿಗೆ ಬಂದಿದೆ. ಇಲ್ಲಿನ ಲಾಂಚ್ ಪ್ರವಾಸದ ಸೊಬಗು ಅದ್ಭುತವಾಗಿದೆ. ಸಿಗಂಧೂರು ಚೌಡೇಶ್ವರಿಯ ದರ್ಶನಕ್ಕೆ ಬರುವ ಭಕ್ತರಿಗೆ ಇದೊಂದು ಹೊಸ ಅನುಭವ. ಮತ್ತು ಪ್ರಕೃತಿಯ ನಡುವಿನ ಲಾಂಚ್ ಪ್ರಯಾಣ ನಮ್ಮೊಳಗೆ ಕಾಣದ ಶಕ್ತಿಯ ಕೈಯೊಳಗಿರುವ ಅಗಾಧ ಶಕ್ತಿಯ ಅನುಭವವನ್ನ ಮೂಡಿಸುತ್ತದೆ.

LEAVE A REPLY

Please enter your comment!
Please enter your name here