Home Cinema “ಆಗಿದ್ದು ಆಗಲಿ ನೋಡೇ ಬಿಡೋಣ” ಎಂದು ಒಬ್ಬರಿಗೊಬ್ಬರು ಸಮರ ಸಾರಿಕೊಂಡ ಶೃತಿ-ಅರ್ಜುನ್..!? ಕಂಪ್ಲೇಟ್ ಮೇಲೆ ಕಂಪ್ಲೇಟು...

“ಆಗಿದ್ದು ಆಗಲಿ ನೋಡೇ ಬಿಡೋಣ” ಎಂದು ಒಬ್ಬರಿಗೊಬ್ಬರು ಸಮರ ಸಾರಿಕೊಂಡ ಶೃತಿ-ಅರ್ಜುನ್..!? ಕಂಪ್ಲೇಟ್ ಮೇಲೆ ಕಂಪ್ಲೇಟು ಶ್ರುತಿ ಹೈರಾಣು..!

3054
0
SHARE

ಅರ್ಜುನ್ ಸರ್ಜಾ ಹಾಗೂ ಶ್ರುತಿ ಹರಿಹರನ್ ಇಬ್ಬರು, ಒಬ್ಬರ ವಿರುದ್ಧ ಒಬ್ಬರು ಸಮರ ಸಾರಿದ್ದಾರೆ. ಆಗಿದ್ದು ಆಗಲಿ ನೋಡೇ ಬಿಡೋಣ ಅನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಕಾನೂನಾತ್ಮಕವಾಗಿ ಹೋರಾಡಲು ಮುಂದಾಗಿದ್ದಾರೆ. ಒಬ್ಬರ ಮೇಲೊಬ್ಬರು ಕೇಸ್‌ಗಳನ್ನ ದಾಖಲಿಸುತ್ತಿದ್ದಾರೆ. ಹಾಗಾಗಿ, ಫಿಲ್ಮ್ ಚೆಂಬರ್ ಸಂಪೂರ್ಣವಾಗಿ ಪ್ರಕರಣದಿಂದ ಕೈ ತೊಳೆದುಕೊಂಡಿದೆ.ಅರ್ಜುನ್ ಸರ್ಜಾ & ಶ್ರುತಿ ಹರಿಹರನ್ ಕಿತ್ತಾಟ, ಗುದ್ದಾಟವೀಗ ಕಾನೂನಿನ ಅಂಗಳ ತಲುಪಿದೆ.

ಹೌದು, ನಿನ್ನೆ ಸಂಧಾನ ಸಭೆಗೂ ಮುನ್ನ ಅರ್ಜುನ್ ಸರ್ಜಾ ಶ್ರುತಿ ಹರಿಹರನ್ ವಿರುದ್ಧ ಮಾನನಷ್ಟ ಮೂಕದ್ದಮೆ ಹೂಡಿದ್ದರು. ಅದು, ೫ ಕೋಟಿಗೆ. ಬರೀ ಮಾನನಷ್ಟ ಮೂಕದ್ದಮೆಯಷ್ಟೇ ಅಲ್ಲ ತಮ್ಮ ಮ್ಯಾನೇಜರ್ ಶಿವಾರ್ಜುನರಿಂದ ಸೈಬರ್ ಕ್ರೈಂನಲ್ಲೂ ದೂರು ದಾಖಲಿಸಿದ್ದರು ಅರ್ಜುನ್ ಸರ್ಜಾ. ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟರ್, ಇನ್ಸ್‌ಟಾಗ್ರಾಂನಲ್ಲಿ ನಕಲಿ ದಾಖಲೆಗಳ ಮೂಲಕ ಅವಹೇಳನಾಕಾರಿ ಹೇಳಿಕೆಗಳನ್ನ ಶ್ರುತಿ ಹರಿಹರನ್ ಹರಿಬಿಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ಒಳಸಂಚು ರೂಪಿಸಿ ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತಿದ್ದಾರೆ ಅನ್ನುವ ಆರೋಪ ಮಾಡಿದ್ದರು. ಇದೇ ಕಾರಣಕ್ಕೆ ಸೈಬರ್ ಕ್ರೈಂ ಪೊಲೀಸರು ಐಟಿ ಆಕ್ಟ್ ೨೦೦ ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದರು. ತನಿಖೆಯನ್ನೂ ಆರಂಭಿಸಿದ್ದರು.ಇನ್ನೂ ಶ್ರುತಿ ಹರಿಹರನ್ ವಿರುದ್ಧ ಕಾನೂನು ಸಮರ ಸಾರಿರುವ ಅರ್ಜುನ್ ಸರ್ಜಾ, ಇದೇ ವೇಳೆ ಶ್ರುತಿ ಹರಿಹರನ್ ಯಾವದೇ ಹೇಳಿಕೆ ನೀಡದಂತೆ ತಾತ್ಕಾಲಿಕವಾಗಿ ತಡೆಯಾಜ್ಞೆ ನೀಡುವಂತೆ ಮನವಿಯನ್ನೂ ಮಾಡಿದ್ದಾರೆ. ಹೌದು, ಅರ್ಜುನ್ ಸರ್ಜಾ ಪರ ವಕೀಲ ಶ್ಯಾಮ್ ಸುಂದರ್ ನಟಿ ಶ್ರುತಿ ಹರಿಹರನ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ದಾಖಲೆಗಳನ್ನ ಕೋರ್ಟ್‌ಗೆ ಇಂದು ಸಲ್ಲಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ನಟಿ ಶ್ರುತಿ ಹರಿಹರನ್ ಹಲವು ವಿಚಾರಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಇದರಿಂದಾಗಿ ನಟ ಅರ್ಜುನ್ ಸರ್ಜಾ ಅವರ ತೇಜೋವಧೆ ಆಗುತ್ತಿದೆ. ಚಿತ್ರೀಕರಣ ವೇಳೆ ನನ್ನನ್ನು ಮುಟ್ಟಿದರು, ಊಟಕ್ಕೆ ಕರೆದರು ಹೀಗೆ ಹಲವು ಆರೋಪಗಳನ್ನ ಶ್ರುತಿ ಮಾಡಿದ್ದಾರೆ. ಇಂತಹ ಆರೋಪಗಳನ್ನ ಮಾಡಿ ಅವರು ರಾತ್ರೋರಾತ್ರಿ ಫೇಮಸ್ ಆಗಿದ್ದಾರೆ. ಈ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಈ ಹಿನ್ನೆಲೆಯಲ್ಲಿ ಶ್ರುತಿ ಹರಿಹರನ್ ಯಾವುದೇ ಹೇಳಿಕೆ ನೀಡದಂತೆ ತಾತ್ಕಾಲಿಕವಾಗಿ ತಡೆಯಾಜ್ಞೆ ನೀಡುವಂತೆ ಕೋರಿದ್ದಾರೆ.ಇತ್ತ ಅರ್ಜುನ್ ಸರ್ಜಾ ಶ್ರುತಿ ವಿರುದ್ಧ ಕಾನೂನು ಹೋರಾಟ ಮಾಡಲು ಮುಂದಾದ ಬೆನ್ನಲ್ಲೇ, ಶ್ರುತಿನೂ ತೊಡೆ ತಟ್ಟಿ ನಿಂತು ಅರ್ಜುನ್‌ಗೆ ಸವಾಲು ಹಾಕಲು ಶುರುವಿಟ್ಟುಕೊಂಡಿದ್ದಾರೆ.

ಇದ್ರ ಮೊದಲ ಹಂತವೆನ್ನುವಂತೆ ಶ್ರುತಿ ಹರಿಹರನ್ ಅರ್ಜುನ್ ಅತ್ಯಾಪ್ತ ಪ್ರಶಾಂತ್ ಸಿಂಬರಗಿ ವಿರುದ್ಧ ನಿನ್ನೆ ರಾತ್ರಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರನ್ನ ದಾಖಲಿಸಿದ್ದಾರೆ.ಹೌದು, ನಿಮಗೆ ಗೊತ್ತಿರಲಿ ನಿನ್ನೆ ಸಂಧಾನ ಸಭೆ ನಡೆಯುತ್ತಿದ್ದ ಸಮಯದಲ್ಲಿ, ಪ್ರಶಾಂತ್ ಸಿಂಬರಗಿ ಶ್ರುತಿ ಮೇಲೆ ಹರಿ ಹಾಯ್ದಿದ್ದರು. ಶ್ರುತಿ ಹರಿಹರನ್ ಹಿಂದೂ ಧರ್ಮಗಳ ಭಾವನೆಗೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿದ್ದರು. ಇಬ್ಬರು ಖ್ಯಾತ ನಟರ ಸಹಾಯದಿಂದ ಮಾಧ್ಯಮಗಳಿಗೆ ದುಡ್ಡು ಹಂಚಿ, ಮಹಿಳಾ ದೌರ್ಜನ್ಯ ವಿರೋಧಿ ಸುದ್ದಿಗಳನ್ನ ಶ್ರುತಿ ಮಾಡಿಸುತ್ತಿದ್ದಾರೆ ಅನ್ನುವ ಗಂಭೀರ ಆರೋಪ ಮಾಡಿದ್ದರು.ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ನಿನ್ನೆ ರಾತ್ರೋ ರಾತ್ರಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದ ಶ್ರುತಿ ಪ್ರಶಾಂತ್ ಸಿಂಬರಗಿ ವಿರುದ್ಧ ದೂರು ದಾಖಲಿಸಿದ್ದಾರೆ.

ಶ್ರುತಿ ಕೊಟ್ಟ ದೂರಿನ ಅನ್ವಯ ಪೊಲೀಸರು, ಪ್ರಶಾಂತ್ ಸಂಬರಗಿ ಮೇಲೆ ಸೆಕ್ಷನ್ ೫೦೬ ಜೀವ ಬೆದರಿಕೆ ಹಾಗೂ ಸೆಕ್ಷನ್ ೫೦೯ ಅಪಮಾನದ ಅಡಿ ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ.ಇನ್ನೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುವ ಶ್ರುತಿ ಪರ ವಕೀಲ ಅನಂತ್ ನಾಯ್ಕ್, ಶ್ರುತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಪ್ರಕರಣದ ಬಗ್ಗೆ ಮಾತನಾಡಲು ಪ್ರಶಾಂತ್ ಸಂಬರಗಿ ಯಾರು ಅನ್ನುವ ಮಾತುಗಳನ್ನಾಡಿದ್ದಾರೆ. ಅಷ್ಟೇ ಅಲ್ಲ ಶ್ರುತಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸರಿಯಾಗಿ ಬೆಂಬಲ ಕೊಡ್ತಿಲ್ಲ, ಎಲ್ಲರೂ ಶ್ರುತಿಯನ್ನೇ ಟಾರ್ಗೇಟ್ ಮಾಡ್ತಿದ್ದಾರೆ ಅನ್ನುವ ಅನಂತ್ ನಾಯ್ಕ್, ಯಾವದೇ ಕಾರಣಕ್ಕೂ ಶ್ರುತಿ ಹೋರಾಟದಿಂದ ಹಿಂದೆ ಸರಿಯುವ ಮಾತೇ ಇಲ್ಲ ಅಂದಿದ್ದಾರೆ.

ಇದೆಲ್ಲದ್ರ ನಡುವೆ, ಅರ್ಜುನ್ ಸರ್ಜಾ ಶ್ರುತಿ ಹರಿಹರನ್ ವಿರುದ್ಧ ಚೆನ್ನೈನಲ್ಲಿ ದೂರು ದಾಖಲಿಸಲು ನಿರ್ಧರಿಸಿದ್ದಾರೆ ಅನ್ನುವ ಸುದ್ದಿನೂ ಸದ್ದು ಮಾಡ್ತಿದೆ. ಶ್ರುತಿ ಚಿಂತೆಯನ್ನ ಹೆಚ್ಚಿಸಿದೆ. ಹೌದು, ನಿನ್ನೆ ರಾತ್ರಿಯೇ ಚೆನೈಗೆ ತೆರಳಿರುವ ಅರ್ಜುನ್, ಇಂದು ಶ್ರುತಿ ಹರಿಹರನ್ ವಿರುದ್ಧ ದೂರು ನೀಡಲಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ಶ್ರುತಿ ಹರಿಹರನ್ ವಿರುದ್ಧ ಎರಡು ದೂರು ದಾಖಲಿಸಿರುವ ಅವರು, ಇಂದು ಚೆನ್ನೈನಲ್ಲಿ ಮತ್ತೊಂದು ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಅಲ್ಲದೇ ಚೆನೈ, ಮುಂಬೈ, ಬೆಂಗಳೂರು, ಹೈದರಾಬಾದ್‌ಗಳಲ್ಲೂ ಶ್ರುತಿ ವಿರುದ್ಧ ದೂರು ನೀಡಿ ಕಾನೂನಾತ್ಮಕವಾಗಿ ಹೋರಾಟ ಮುಂದುವರೆಸಲು ನಿರ್ಧರಿಸಿದ್ದಾರೆ ಅನ್ನುವ ಸುದ್ದಿ ಗಾಂಧಿನಗರದ ಗಲ್ಲಿಗಳಿಂದ ಹಿಡ್ದು ಹೈದ್ರಾಬಾದ್‌ನ ಅಂಗಳದವರೆಗೂ ಕೇಳಿ ಬರ‍್ತಿದೆ…

LEAVE A REPLY

Please enter your comment!
Please enter your name here