Home Crime ಆಗ ಸಂಧ್ಯಾರಾಣಿ ಮೇಲೆ ‘ವಿಶ್ವಮೋಹನ’ನ ಮೋಹ! 2ನೇ ಮದ್ವೆಗೆ ಮುಂದಾದ ಗಂಡನಿಗೆ ಬಿಡ್ತು ಗ್ರಹಚಾರ..!

ಆಗ ಸಂಧ್ಯಾರಾಣಿ ಮೇಲೆ ‘ವಿಶ್ವಮೋಹನ’ನ ಮೋಹ! 2ನೇ ಮದ್ವೆಗೆ ಮುಂದಾದ ಗಂಡನಿಗೆ ಬಿಡ್ತು ಗ್ರಹಚಾರ..!

666
0
SHARE

ಅಲ್ಲಿ ಭರ್ಜರಿ ಮದುವೆಯ ಆರತಕ್ಷತೆ ನಡೆಯುತ್ತಿತ್ತು. ಹುಡುಗ ಹುಡುಗಿ ಇಬ್ಬರು ಅಲಂಕಾರಗೊಂಡು ಸಿದ್ದವಾಗಿದ್ರು, ಹೀಗಿರುವಾಗಲೇ ಅಲ್ಲಿಗೆ ಎಂಟ್ರಿಕೊಟ್ಟಿದ್ದಾಕೆಯನ್ನು ಕಂಡು ಅಲ್ಲಿದ್ದ ಜನರೆಲ್ಲಾ ಕಕ್ಕಾಬಿಕ್ಕಿಯಾಗಿ ಹೋಗಿದ್ರು.

ಅಷ್ಟೇ ಅಲ್ಲಾ ಅಲ್ಲಿ ನಡೆಯುತ್ತಿದ್ದ ಆರತಕ್ಷತೆ ನಿಂತು ಅಲ್ಲೊಂದು ದೊಡ್ಡ ಗಲಾಟೆಯೇ ನಡೆದು ಹೋಗಿ ಮದುವೆಗೆ ನಿಂತು ಹೋಗಿತ್ತು.ಈ ಪೋಟೋದಲ್ಲಿರೋ ವರನ ಹೆಸ್ರು ವಿಶ್ವಮೋಹನ ಅಂತ. ಇತ ಮೊದಲನೇ ಪತ್ನಿಗೆ ಡೈವರ್ಸ್ ಕೊಟ್ಟು ಮದ್ವೆಯಾಗ್ತಿದ್ರೆ ಸಮಸ್ಯೆಯಾಗ್ತಿರಲಿಲ್ಲ.. ವರ ವಿಶ್ವಮೋಹನ ಮೊಲನೇ ಪತ್ನಿ ಸಂಧ್ಯಾರಾಣಿಗೆ ವಿಚ್ಛೇಧನ ನೀಡದೇ ಬೇರೆ ಯುವತಿ ಜೊತೆ ಹಸೆಮಣೆ ಏರುತ್ತಿದ್ದಾಗಲೇ ದೊಡ್ಡ ಹೊಡೆತ ಬಿದ್ದಂತಾಗಿದೆ.

2015ರಲ್ಲಿ ಮುಳಬಾಗಿಲಿನ ಸಂಧ್ಯಾರಾಣಿಯನ್ನ ಕೋಲಾರದ ಕೈ ಮುಖಂಡ ವೆಂಕಟಪತಿಯವರ ಮಗ ವಿಶ್ವಮೋಹನ್ ವರಿಸಿದ್ದ. ಇಬ್ಬರ ನಡುವೆ ಹೊಂದಾಣಿಕೆ ಹಳಸಿದ್ದರಿಂದ ವಿಚ್ಛೇಧನಕ್ಕಾಗಿ ಕೋರ್ಟ್ ಕದ ತಟ್ಟಿದ್ದರು. ವಿಚ್ಛೇಧನ ಪಡೆಯುವ ಮುನ್ನವೇ ವಿಶ್ವಮೋಹನ ಬೇರೆ ಯುವತಿ ಜೊತೆ 2ನೇ ಮದುವೆ ಸಿದ್ದವಾಗಿದ್ದ.

ನಿನ್ನೆ ಕೋಲಾರದ ಹೊರ ವಲಯದ ಶಾಂತಿ ಕಲ್ಯಾಣ ಮಂಟಪದಲ್ಲಿ ಆರತಕ್ಷತೆ ನಡೆಯುತ್ತಿತ್ತು. ವಿಶ್ವಮೋಹನ್, ಕಾಂಗ್ರೆಸ್ ಮುಖಂಡನ ಮಗನಾಗಿದ್ದರಿಂದ ಶಾಸಕರು, ಸಂಸದರು ಆರತಕ್ಷತೆಗೆ ಬಂದು ಹಾರೈಸಿದ್ರು. ಈ ವೇಳೆ ವಿಶ್ವಮೋಹನನ ಮೊದಲ ಪತ್ನಿ ಸಂಧ್ಯಾರಾಣಿ ಶಾಂತಿ ಕಲ್ಯಾಣ ಮಂಟಪಕ್ಕೆ ಎಂಟ್ರಿ ಕೊಟ್ಟು ಆರತಕ್ಷತೆ ನಿಲ್ಲಿಸುವಂತೆ ತಾಕೀತು ಮಾಡಿದ್ಲು..

ಈ ವೇಳೆ ಸಂಧ್ಯಾರಾಣಿ ಹಾಗೂ ವಿಶ್ವಮೋಹನ ಪೋಷಕರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಸಂಧ್ಯಾರಾಣಿ ಕೋರ್ಟ್‌ನಿಂದ ತಂದಿದ್ದ ಮದುವೆ ತಡೆಯಾಜ್ಞೆ ಕಾಫಿ ತೋರಿಸಿದರು. ಇಷ್ಟಾದ್ರೂ ಸಹ ವಿಶ್ವಮೋಹನ ಕುಟುಂಬಸ್ಥರು ಮದುವೆ ನಡೆಸಲು ಮುಂದಾಗಿದ್ರು. ವಿಶ್ವಮೋಹನ್ ಕುಟುಂಬದವರಿಗೆ ಯಾವಾಗ ತಪ್ಪಿಗೆ ಸಿಕ್ಕಿಕೊಳ್ಳುತ್ತೇವೆ ಎಂಬ ಅರಿವಾಯ್ತೋ ಕೊಡಲೇ ಮದುವೆ ರದ್ಧು ಮಾಡಿದ್ರು.

ವಧುವಿನ ಪೋಷಕರು ಸಂಬಂಧಿಕರು, ಮೊದಲ ಪತ್ನಿ ಸಂಧ್ಯಾರಾಣಿ ಹಾಗೂ ಆಕೆಯ ಪೋಷಕರನ್ನು ಮಂಟಪದಿಂದ ಹೊರ ದಬ್ಬುತ್ತಾರೆ. ಈ ವೇಳೆ ವರದಿಗೆ ತರಳಿದ್ದ ಮಾಧ್ಯಮದವರ ಮೇಲೂ ಹಲ್ಲೆ ಮಾಡುತ್ತಾರೆ. ಈ ಬಗ್ಗೆ ಕೋಲಾರ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.

ಒಟ್ಟಾರೆ ಮೊದಲ ಪತ್ನಿಯಿಂದ ಮುಕ್ತಿ ಪಡೆಯದೆ 2ನೇ ಪತ್ನಿಯ ಕೈ ಹಿಡಿಯಲು ಹೋದ ಮೋಹನಾಂಗನ ಪ್ಲಾನ್ ಠುಸ್ ಆಗಿದೆ. ಮದುವೆಗೆ ಬಂದಿದ್ದ ಬಂಧುಗಳು ಕಕ್ಕಾಬಿಕ್ಕಿಯಾಗಿ ಒಬ್ಬೊರಾಗಿಯೇ ಮಂಟಪದಿಂದ ಹೊರ ನಡೆದ್ರು. ಮಂಟಪವೇ ಖಾಲಿ ಖಾಲಿ ಆಯ್ತು. ಆರತಕ್ಷತೆ ನಿಂತು ಹೋಯ್ತು. ಮದುಗೆ ಮಾಡಿದ್ದ ಊಟವೆಲ್ಲವೂ ಹಳಸಿ ಹೋಯ್ತು. ಮಧುಮಗನ ಅಲಸಿಯತ್ತಯ ಬಯಲಾಯ್ತು.

LEAVE A REPLY

Please enter your comment!
Please enter your name here