Home Crime ಆನಂದ್ ಸಿಂಗ್‌ಗೆ ಉಸಿರಾಟ ತೊಂದರೆ..!? ಗಣೇಶ್‌ಗೆ ಬಂಧನದ ಭೀತಿ..? ಸಸ್ಪೆಂಡ್ ಆದ ಬಳಿಕ ತಲೆಮರೆಸಿಕೊಂಡಿರುವ ಗಣೇಶ್..!?

ಆನಂದ್ ಸಿಂಗ್‌ಗೆ ಉಸಿರಾಟ ತೊಂದರೆ..!? ಗಣೇಶ್‌ಗೆ ಬಂಧನದ ಭೀತಿ..? ಸಸ್ಪೆಂಡ್ ಆದ ಬಳಿಕ ತಲೆಮರೆಸಿಕೊಂಡಿರುವ ಗಣೇಶ್..!?

609
0
SHARE

ಕಂಪ್ಲಿ ಶಾಸಕ ಜೆ.ಎನ್. ಗಣೇಶ್‌ರಿಂದ ಹಲ್ಲೆಗೊಳಗಾದ ಬಳ್ಳಾರಿ ಜಿಲ್ಲೆಯ ವಿಜಯನಗರ ಶಾಸಕ ಆನಂದ್ ಸಿಂಗ್‌ಗೆ ಚಿಕಿತ್ಸೆ ಮುಂದುವರಿದಿದೆ. ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಮೂರ್ನಾಲ್ಕು ದಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಅಗತ್ಯವಿದೆ ಎಂದು ಪುತ್ರ ಸಿದ್ಧಾರ್ಥ್ ಸಿಂಗ್ ಹೇಳಿದ್ದಾರೆ.

ನಿನ್ನೆಯಿಂದ ನಡೆಯಲು ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ. ಕೆಮ್ಮಿದಾಗ ಸ್ವಲ್ಪ ಉಸಿರಾಟ ತೊಂದರೆ ಆಗುತ್ತಿದೆ ಎಂದು ತಿಳಿಸಿದ್ದಾರೆ. ಎಫ್ಐಆರ್ ದಾಖಲಿಸಿದ್ದು, ಪೊಲೀಸರ ಕ್ರಮ ಬಗ್ಗೆ ಮಾಹಿತಿ ಇಲ್ಲ. ರಾಜಿ ಸಂಧಾನಕ್ಕೆ ಬಂದ್ರೆ ನೋಡೋಣ. ಈವರೆಗೂ ರಾಜಿ ಬಗ್ಗೆ ಯಾವ ನಾಯಕರೂ ಸಂಪರ್ಕ ಮಾಡಿಲ್ಲ ಎಂದು ವಿಜಯನಗರ ಶಾಸಕ ಪುತ್ರ ಸ್ಪಷ್ಟಪಡಿಸಿದ್ದಾರೆ.

ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಕಂಪ್ಲಿ ಗಣೇಶ್‌ಗೆ ಬಂಧನ ಭೀತಿ ಶುರುವಾಗಿದೆ. ಆನಂದ್ ಸಿಂಗ್ ಕುಟುಂಬಸ್ಥರೊಂದಿಗೆ ಸಂಧಾನ ಮಾಡಲು ಶಾಸಕ ಗಣೇಶ್ ಪ್ರಯತ್ನಿಸುತ್ತಿದ್ದು, ಆದ್ರೆ ಸಂಧಾನಕ್ಕೆ ಆನಂದ್ ಸಿಂಗ್ ಕುಟುಂಬಸ್ಥರು ಒಪ್ಪುತ್ತಿಲ್ಲ. ಗಣೇಶ್ಗೆ ಜಾಮೀನು ಸಿಗಬಾರದೆಂದು ಆಸ್ಪತ್ರೆಯಲ್ಲೇ ಆನಂದ್ ಸಿಂಗ್‌ಗೆ ಚಿಕಿತ್ಸೆ ಮುಂದುವರೆಯುತ್ತಿದೆ ಎಂದು ಹೇಳಲಾಗಿದೆ. ಇನ್ನೊಂದೆಡೆ ಬಂಧನಕ್ಕೂ ಮುನ್ನು ಗಣೇಶ್ ಜಾಮೀನು ಪಡೆಯಲು ಯತ್ನಿಸುತ್ತಿದ್ದಾರೆ.

ಇಂದು ಕಂಪ್ಲಿ ಗಣೇಶ್ ಬಂಧನ ಮಾಡುವ ಸಾಧ್ಯತೆ ಇದೆ. ಪಕ್ಷದಿಂದ ಅಮಾನತು ಆದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆಂದು ಎನ್ನಲಾಗಿದೆ. ಪಕ್ಷದಿಂದ ಅಮಾನತು ಆದ ಬಳಿಕ ಗಣೇಶ್ ಮೊಬೈಲ್ ನಾಟ್ ರಿಚ್ಬಲ್ ಅಂತ ಬರುತ್ತಿದೆ. ಅತ್ತ ಬಳ್ಳಾರಿಯಲ್ಲಿ ಸಹೋದರರಂತಿದ್ದ ಆನಂದ್ ಸಿಂಗ್, ಗಣೇಶ್ ಬೆಂಬಲಿಗರ ನಡುವೆ ಇರುಸು ಮುರಿಸು ಉಂಟಾಗಿದೆ.

LEAVE A REPLY

Please enter your comment!
Please enter your name here