Home Elections 2019 ಆಪರೇಷನ್​ ಆಡಿಯೋ ರಿಲೀಸ್ ಮಾಡಿ ಸಂಚಲನ ಸೃಷ್ಠಿಸಿದ HDK..! ಆಪರೇಷನ್ ಕಮಲ ಆಡಿಯೋ ಬಾಂಬ್ ಸ್ಫೋಟ!...

ಆಪರೇಷನ್​ ಆಡಿಯೋ ರಿಲೀಸ್ ಮಾಡಿ ಸಂಚಲನ ಸೃಷ್ಠಿಸಿದ HDK..! ಆಪರೇಷನ್ ಕಮಲ ಆಡಿಯೋ ಬಾಂಬ್ ಸ್ಫೋಟ! ಬಿಎಸ್ವೈ ಅವರ ಸಂಭಾಷಣೆ ಇರುವ ಆಡಿಯೋ ಬಿಡುಗಡೆ..!

469
0
SHARE

ಗುರುಮಿಟ್ಕಲ್ ಶಾಸಕ ನಾಗನಗೌಡರಿಗೆ ಅವರ ಮಗ ಶರಣಗೌಡರ ಮೂಲಕ ಆಮಿಷ ಒಡ್ಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಿಜೆಪಿಗೆ ಆಹ್ವಾನ ನೀಡಿದ್ದಾರೆ ಎನ್ನಲಾದ ಆಡಿಯೋವನ್ನು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ.. ಈ ಆಡಿಯೋ ಇದೀಗ ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬಜೆಟ್ ಮಂಡನೆಗೂ ಮುನ್ನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಡಿಸಿಎಂ ಪರಮೇಶ್ವರ್ ಜೊತೆ ದಿಢೀರ್ ಪತ್ರಿಕಾಗೋಷ್ಠಿ ನಡೆಸಿ ಆಪರೇಷನ್ ಡೀಲ್ ಕುರಿತ 40 ನಿಮಿಷದ ಆಡಿಯೋ ಬಾಂಬ್ ಸಿಡಿಸಿದ್ದಾರೆ. ದೇವದುರ್ಗದ ಐಬಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವೈ, ಶಾಸಕರ ಪುತ್ರನಿಗೆ ಆಮಿಷವೊಡ್ಡಿರುವುದು ಜಗಜ್ಜಾಹೀರಾಗಿದೆ.

ಇನ್ನು ನಾಲ್ಕೈದು ದಿನಗಳಲ್ಲಿ ಎಲ್ಲವೂ ಮುಗಿದು ಹೋಗಲಿದೆ… ನೀನು ಬಾಂಬೆಗೆ ಹೋಗು, ಈಗಾಗಲೇ ಶಾಸಕ ಸುಧಾಕರ್ ಹೋಗಿದ್ದಾರೆ.. ಇನ್ನಿಬ್ಬರು ಅಸೆಂಬ್ಲಿ ಮುಗಿದ ಕೂಡಲೇ ಬಾಂಬೆಗೆ ತೆರಳುತ್ತಾರೆ.. ಅಲ್ಲಿಗೆ 13 ರಿಂದ 14 ಶಾಸಕರಾಗುತ್ತಾರೆ.. ನನಗೆ ನನ್ನ ಮಗ ಬೇರೆ ಅಲ್ಲ ನೀನು ಬೇರೆ ಅಲ್ಲ.. ಜೀವನದಲ್ಲಿ ನಾನು ಒಮ್ಮೆ ಮಾತು ಕೊಟ್ರೆ ಅದನ್ನು ಮೀರುವ ಮಾತೇ ಇಲ್ಲ ಎಂದು ಯಡಿಯೂರಪ್ಪ ಆಡಿಯೋದಲ್ಲಿ ಭರವಸೆ ನೀಡಿದ್ದಾರೆ..

ಜೊತೆಗೆ ಚುನಾವಣೆ ಖರ್ಚಿಗೆ ಅಂತಾ 10 ಕೋಟಿ ಕೂಡ ಕೊಡ್ತೀವಿ.. ನಮ್ದೇ ಸರ್ಕಾರ ಇರುತ್ತೆ, ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡ.. ಎಂದು ಯಡಿಯೂರಪ್ಪ ಶರಣಗೌಡನಿಗೆ ಆಮಿಷವೊಡ್ಡಿದ್ದಾರೆ.ಸಿದ್ದರಾಮಯ್ಯ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ… ವಿಪ್ ಕೊಡ್ತೀವಿ, ಮೆಂಬರ್ ಶಿಪ್ ಹೋಗುತ್ತೆ ಅಂದ್ರೂ ಯಾರು ಕೇರ್ ಮಾಡಿಲ್ಲ…ನಿಮಗೂ ಏನೂ ಆಗಲ್ಲ ಬಂದ್ಬಿಡಿ ಅಂತಾ ಯಡಿಯೂರಪ್ಪ ಹೇಳುವ ಆಡಿಯೋ ಸಂಚಲನ ಸೃಷ್ಟಿಸಿದೆ..

ಗೃಹ ಕಚೇರಿ ಕೃಷ್ಣಾದಲ್ಲಿ ಶಾಸಕ ನಾಗನಗೌಡರ ಮಗ ಶರಣಗೌಡ ಅವರಿಗೆ ಎಲ್ಲ ಆಮಿಷ‌ ಒಡ್ಡಿದ್ದಾರೆ, ವಿಜಯೇಂದ್ರ, ರಾಘವೇಂದ್ರ ಜೊತೆ ನೀನೂ ಒಬ್ಬ ಎಂದು ಯಡಿಯೂರಪ್ಪ ಮಾತಾಡಿದ್ದಾರೆ ಎನ್ನಲಾದ ಆಡಿಯೋ ರಿಲೀಸ್ ಮಾಡಿದ ಕುಮಾರಸ್ವಾಮಿ, ಇದು ಮೊದಲ ಎಪಿಸೋಡ್​ನ ಟ್ರೈಲರ್, ನಾನೇ ಮಾಡಿಸಿದ ರೆಕಾರ್ಡ್. ಕಾಂಗ್ರೆಸ್ ಶಾಸಕ ನಾಗನಗೌಡರ ಮಗ ಶರಣಗೌಡಗೆ ಯಡಿಯೂರಪ್ಪ ಆಮಿಷ ಒಡ್ಡಿದ್ದಾರೆ, ನನ್ನ ಮಕ್ಕಳಂತೆ ನೀನು ಎಂದು ಮಾತುಕತೆ ನಡೆಸಿದ್ದಾರೆ, ಮುಂಬೈನಲ್ಲಿ ಹಣ ನೀಡುವ ಆಮಿಷ ಕೂಡ ಆಡಿಯೋದಲ್ಲಿ ಇದೆ ಎಂದರು.

ಕಳೆದ ರಾತ್ರಿ 12 ಗಂಟೆಗೆ ನಮ್ಮ ಪಕ್ಷದ ಕಾರ್ಯಕರ್ತ ನನಗೆ ಮಾಹಿತಿ ನೀಡಿದರು. ಯಡಿಯೂರಪ್ಪ ದೇವದುರ್ಗಕ್ಕೆ ಹೋಗಿದ್ದು ಯಾರೋ ನಿಧನ ಹೊಂದಿದ ವ್ಯಕ್ತಿಯ ದರ್ಶನಕ್ಕ ಅಂದುಕೊಂಡಿದ್ದೆ, ಆದರೆ ರಾತ್ರಿ12 ಕ್ಕೆ ನಮ್ಮ ಪಕ್ಷದವರಿಗೆ ಕರೆ ಮಾಡಿದ್ದಾರೆ, ಮಹಾರಾಷ್ಟ್ರ ಸಿಎಂ ಹೆಸರು ತಂದಿದ್ದಾರೆ, ಹಲವಾರು ಪ್ರಮುಖ ಸಂಸ್ಥೆಗಳನ್ನು ನಡೆಸುವ ಮುಖ್ಯಸ್ಥರ ಹೆಸರು ತಂದಿದ್ದಾರೆ. ರಾತ್ರಿ 2 ಗಂಟೆಗೆ ದೇವದುರ್ಗಕ್ಕೆ ಬರುವಂತೆ ಯಾದಗಿರಿ ಬರುವಂತೆ ಶಾಸಕರ ಪುತ್ರನಿಗೆ ತಿಳಿಸಿದ್ದಾರೆ. ಮಾಧ್ಯಮದ ಒಬ್ಬರು ಇದರಲ್ಲಿ ಇದ್ದಾರೆ, ಇವರು ಈ ದೇಶದ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಸಿಎಂ ದೂರಿದರು.

2008 ರಲ್ಲಿ 20 ಶಾಸಕರ ರಾಜೀನಾಮೆ ಕೊಡಿಸಿದ್ದರು, ಆ ಚಾಳಿ ಎಲ್ಲಿ ಬಿಟ್ಟಿದ್ದಾರೆ, ಅದು ಅವರ ಹುಟ್ಟು ಗುಣ. ನರೇಂದ್ರ ಮೋದಿ ಬಂದ ನಂತರ ಇದನ್ನೆಲ್ಲಾ ಬದಲು ಮಾಡಿದ್ದಾರೆ ಎಂದುಕೊಂಡಿದ್ದೆ, ಕಪ್ಪುಹಣ ಅಳಿಸಿ ನೀತಿಪಾಠ ಹೇಳಿ ಪಕ್ಷ ಕಟ್ಟಲು ತಿಳಿಸಿದ್ದಾರೆ ಎಂದುಕೊಂಡಿದ್ದೆ, ಆದರೆ ಅವರದ್ದು ಇಬ್ಬಗೆ ನೀತಿ ಅಂತಾ ಯಡಿಯೂರಪ್ಪ ಅವರಿಂದಲೇ ಗೊತ್ತಾಗಿದೆ ಎಂದು ಟೀಕಿಸಿದರು.

LEAVE A REPLY

Please enter your comment!
Please enter your name here