Home District “ಆಪರೇಷನ್ ಕಮಲಕ್ಕೆ” ಕೈ ಹಾಕಿದ್ರೆ “ಆಪರೇಷನ್ ಜೆಡಿಎಸ್” ಆರಂಭ..!? ನರೇಂದ್ರ ಮೋದಿಗೆ ಟಾಂಗ್ ಕೊಟ್ಟ ಕುಮಾರಸ್ವಾಮಿ..!?

“ಆಪರೇಷನ್ ಕಮಲಕ್ಕೆ” ಕೈ ಹಾಕಿದ್ರೆ “ಆಪರೇಷನ್ ಜೆಡಿಎಸ್” ಆರಂಭ..!? ನರೇಂದ್ರ ಮೋದಿಗೆ ಟಾಂಗ್ ಕೊಟ್ಟ ಕುಮಾರಸ್ವಾಮಿ..!?

4076
0
SHARE

ಜೆಡಿಎಸ್ ಪಕ್ಷದ ಶಾಸಕರಿಗೆ ಬಿಜೆಪಿ 100 ಕೋಟಿ ಆಫರ್ ನೀಡಿತ್ತು ಎಂದು ಹೆಚ್‌ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಶಾಸಕಾಂಗ ಸಭೆಯ ಬಳಿಕ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರ್‌ಸ್ವಾಮಿ ಬಿಜೆಪಿ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.

ಕೈಪಾಳಯದೊಂದಿಗಿನ ಮೈತ್ರಿಯನ್ನ ಸಮರ್ಥಿಸಿಕೊಂಡು ಮಾತನಾಡಿದ ಅವರು, ನನ್ನ ಶಾಸಕರನ್ನು ಕೊಂಡುಕೊಳ್ಳಲು ಬಿಜೆಪಿಗೆ ಇಷ್ಟೊಂದು ಹಣ ಎಲ್ಲಿಂದ ಬಂತು ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನು, ಇದೇ ವೇಳೆ ಮಾತನಾಡಿದ ಹೆಚ್ಡಿಕೆ ಆಪರೇಷನ್ ಕಮಲಕ್ಕೆ ಕೈ ಹಾಕಿದ್ರೆ ಬಾರಿ ಗಂಡಾಂತರ ಕಾದಿದೆ ಎಂದ ಹೆಚ್ಡಿಕೆ, ಬಿಜೆಪಿಯಿಂದಲೂ 15 ಶಾಸಕರು ಜೆಡಿಎಸ್‌ಗೆ ಬರಲು ಸಿದ್ಧರಿರುವುದರಿಂದ ಆಪರೇಷನ್ ಕಮಲಕ್ಕೆ ಕೈ ಹಾಕಿದ್ರೆ ಆಪರೇಷನ್ ಜೆಡಿಎಸ್‌ಗೆ ಚಾಲನೆ ನೀಡುವುದಾಗಿ ಕುಮಾರ್‌ಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಜಾತ್ಯಾತೀತ ಮತಗಳ ವಿಭಜನೆಯಿಂದ ಬಿಜೆಪಿಗೆ 104 ಸ್ಥಾನ ದೊರೆತಿದೆ ಹೊರೆತು ಪ್ರಧಾನಿ ಮೋದಿ ವರ್ಛಸ್ಸಿನಿಂದಲ್ಲ ಎಂದು ನಮೋರನ್ನು ಟೀಕಿಸಿದ್ದಾರೆ. ಗೋವಾ, ಮಣಿಪುರದಲ್ಲಿ ಬಿಜೆಪಿ ಮಾಡಿದ್ದೇನು..? ಕರ್ನಾಟಕದಲ್ಲಿ ಮಾತ್ರ ಬಹುದೊಡ್ಡ ಪಕ್ಷವೆಂಬ ನಾಟಕಮಾಡುತ್ತಿದೆ ಎಂದು ಗುಡುಗಿದ್ದಾರೆ.

LEAVE A REPLY

Please enter your comment!
Please enter your name here