Home District “ಆಪರೇಷನ್ ಕಮಲ”ಕ್ಕೆ ಹೆದರಿ ಸಚಿವ ಸ್ಥಾನ ಕೊಟ್ಟ ಕಾಂಗ್ರೆಸ್.?! BJP ಗಾಳ ಹಾಕಿದ್ದ ಶಾಸಕರಿಗೆಲ್ಲಾ ಮಂತ್ರಿಗಿರಿ..!!

“ಆಪರೇಷನ್ ಕಮಲ”ಕ್ಕೆ ಹೆದರಿ ಸಚಿವ ಸ್ಥಾನ ಕೊಟ್ಟ ಕಾಂಗ್ರೆಸ್.?! BJP ಗಾಳ ಹಾಕಿದ್ದ ಶಾಸಕರಿಗೆಲ್ಲಾ ಮಂತ್ರಿಗಿರಿ..!!

1615
0
SHARE

ಐದಾರು ಸಾರಿ ಗೆದ್ದೋರು ಇದ್ರು ಕಾಂಗ್ರೆಸ್ ನಲ್ಲಿ ಎರಡು ಸಾರಿ ಗೆದ್ದೋರೆಲ್ಲಾ ಹೆಂಗ್ ಮಿನಿಸ್ಟ್ರು ಆದ್ರು ಅನ್ನೋ ಡೌಟ್ ಗೆ ಉತ್ತರ ಸಿಕ್ಕಿದೆ ಕಾಂಗ್ರೆಸ್ ಪಡಸಾಲೆಯಲ್ಲಿ. 104 ಶಾಸಕರನ್ನಾ ಇಟ್ಕೊಂಡು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಕಾಂಗ್ರೆಸ್ ನ ಹತ್ತು ಶಾಸಕರಿಗೆ ಗಾಳ ಹಾಕಿದ್ರು. ಲಿಂಗಾಯತ ಟ್ರಂಪ್ ಕಾರ್ಡ್ ಬಿಟ್ಟಿದ್ದ ಯಡಿಯೂರಪ್ಪ ಮಿನಿಸ್ಟ್ರುಗಿರಿಯ ಆಮಿಷ ಒಡ್ಡಿದ್ರು…

ಕಾಂಗ್ರೆಸ್ ನಿಂದ ಗೆದ್ದಿದ್ರು ರಿಸೈನ್ ಮಾಡಿ ಬಿಜೆಪಿಗೆ ಜಿಗಿಯೋದಕ್ಕೆ ಕಾಂಗ್ರೆಸ್ ನ 12 ಮಂದಿ ತುದಿಗಾಲಲ್ಲಿ ನಿಂತಿದ್ರು. ಅದ್ರಲ್ಲೂ ಹುಮ್ನಾಬಾದ್ ನ ರಾಜಶೇಖರ್ ಪಾಟೀಲ್, ಬಸವನಬಾಗೇವಾಡಿಯ ಶಿವಾನಂದ ಪಾಟೀಲ್, ಪಾವಗಡದ ವೆಂಕಟರಮಣ್ಣಪ್ಪ, ಚಾಮರಾಜನಗರದ ಪುಟ್ಟರಂಗಶೆಟ್ಟಿ, ಪಕ್ಷೇತರ ಶಂಕರ್ ಬಿಜೆಪಿಗೆ ಜಿಗಿಯಲು ಡೀಲ್ ಮಾತಾನಾಡಿ ಮುಗ್ಸಿದ್ರು…

ಕಾಂಗ್ರೆಸ್ ಕಪಿಮುಷ್ಟಿಯಲ್ಲೇ ಇದ್ರು ಇವರೆಲ್ಲಾ ಕದ್ದು ಮುಚ್ಚಿ ಬಿಜೆಪಿಯವರ ಜೊತೆ ಲಿಂಕ್ ನಲ್ಲೇ ಇದ್ರು. ಈ ವಿಚಾರ ತಿಳಿದ ಕಾಂಗ್ರೆಸ್ ಹೈಕಮಾಂಡ್ ಮೈತ್ರಿ ಸರ್ಕಾರದಲ್ಲೇ ಸಚಿವ ಸ್ಥಾನದ ಭರವಸೆ ಕೊಟ್ರು. ಅದರಂತೆಯೇ ಆಪರೇಷನ್ ಕಮಲಕ್ಕೆ ಒಳಗಾಗುವವರಿದ್ದ ರಾಜಶೇಖರ್ ಪಾಟೀಲ್, ಶಿವಾನಂದ ಪಾಟೀಲ್, ಶಂಕರ್, ವೆಂಕಟರಮಣಪ್ಪ, ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ಸಿಕ್ಕಿದೆ…

ರಾಮಲಿಂಗಾರೆಡ್ಡಿ, ರೋಷನ್ ಬೇಗ್, ಎಂಬಿ ಪಾಟೀಲ್ ರಂತ ಹಿರಿಯರಿದ್ರೂ ಬಿಜೆಪಿಯ ಭೀತಿಯಿಂದ ಕಾಂಗ್ರೆಸ್ ಹೈಕಮಾಂಡ್ ಹೊಸಬರಿಗೆ ಮಣೆ ಹಾಕಿದೆ. ಇನ್ನೂ 6 ಸ್ಥಾನಗಳನ್ನು ಉಳಿಸಿಕೊಂಡಿರುವ ಕಾಂಗ್ರೆಸ್ ಇದ್ರಲ್ಲಿ ಮೂರು ಸ್ಥಾನಗಳನ್ನಾ ಬಿಜೆಪಿ ಗಾಳಕ್ಕೆ ಸಿಕ್ಕಿರೋ ಶಾಸಕರಿಗೆ ಕೊಡಲು ತೀರ್ಮಾನಿಸಿದೆ…

LEAVE A REPLY

Please enter your comment!
Please enter your name here