Home District ಆಪರೇಷನ್ ಕಮಲದ ಬಗ್ಗೆ ಬಾಂಬ್ ಸಿಡಿಸಿದ ಕೋಲಾರ ಶಾಸಕ..?! 3 ತಿಂಗಳ ಹಿಂದೆ ಬಿಜೆಪಿಯಿಂದ 30...

ಆಪರೇಷನ್ ಕಮಲದ ಬಗ್ಗೆ ಬಾಂಬ್ ಸಿಡಿಸಿದ ಕೋಲಾರ ಶಾಸಕ..?! 3 ತಿಂಗಳ ಹಿಂದೆ ಬಿಜೆಪಿಯಿಂದ 30 ಕೋಟಿ ಆಫರ್..!?

537
0
SHARE

ಆಪರೇಷನ್ ಕಮಲದ ಕಡೆಯಿಂದ ಕಳೆದ ಮೂರು ತಿಂಗಳ ಹಿಂದೆ ಮೂವತ್ತು ಕೋಟಿ ಆಫರ್ ಬಂದಿತ್ತು ಎಂದು ಕೋಲಾರ ಶಾಸಕ ಶ್ರೀನಿವಾಸಗೌಡ ಅವರು ಕೋಲಾರದಲ್ಲಿ ಹೇಳಿಕೆ ನೀಡಿದ್ರು. ಕಳೆದ ಮುರು ತಿಂಗಳ ಹಿಂದೆ ನನಗೂ ಆಫರ್ ಬಂದಿತ್ತು,

ಉಸ್ತುವಾರಿ ಸ್ಥಾನ ನಿಡುವುದಾಗಿ ಮೂವತ್ತು ಕೋಟಿಗಳ ಆಫರ್ ಬಿಜೆಪಿ ಅವರು ನೀಡಿದ್ದರು ಎಂದು ಬಾಂಬ್ ಸಿಡಿಸಿದ್ರು. ಚನ್ನಪಟ್ಟಣ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್, ಯಲಹಂಕ ಶಾಸಕ ವಿಶ್ವನಾಥ್ ಹಾಗೂ ಮಾಜಿ ಶಾಸಕ ಅಶ್ವಥ್ ನಾರಾಯಣ ಅವರು, ಬೆಂಗಳೂರಿನ ತಮ್ಮ ನಿವಾಸದಲ್ಲಿ ಮೊದಲು ಐದು ಕೋಟಿ ನೀಡಿದ್ದರು,

ನಂತರ ಇಪ್ಪತ್ತೈದು ಕೋಟಿ ನೀಡುವುದಾಗಿ ಆಫರ್ ನೀಡಿದ್ದಾಗಿ ತಿಳಿಸಿದ್ರು. ಅಲ್ಲದೆ ಅವರು ನೇರವಾಗಿ ನಮ್ಮ ಮನೆಯಲ್ಲಿ ತಂದು ಇಟ್ಟು ಹೋಗಿದ್ದರು, ಅದರಲ್ಲಿ ದುಡ್ಡು ಇದೆ ಎಂದು ನನಗೆ ತಿಳಿದಿರಲಿಲ್ಲ, ನಂತರ ಅದು ದುಡ್ಡು ಎಂದು ಗೊತ್ತಾಯಿತು, ಎರಡು ತಿಂಗಳ ಕಾಲ ನಮ್ಮ ಮನೆಯಲ್ಲಿಯೆ ಇತ್ತು ಎಂದ ಹೇಳಿದ್ರು.

ಇನ್ನು ಈ ಕುರಿತು ಕುಮರಸ್ವಾಮಿ ಅವರಿಗೂ ವಿಷಯ ತಿಳಿಸಿದ್ದೆ, ಅಗ ಅವರು ವಾಪಸ್ ಕೊಟ್ಟು ಕಳಿಸು, ಇದನ್ನ ದೊಡ್ಡದು ಮಾಡುವುದು ಬೇಡ ಎಂದು ಸೂಚನೆ ನೀಡಿದ್ದರು ಎಂದು ಶಾಸಕ ಶ್ರೀನಿವಾಸಗೌಡ ತಿಳಿಸಿದ್ರು.ರಮೇಶ್ ಕುಮಾರ್ ಅವರು ಮೇದಾವಿ ಸ್ಪೀಕರ್, ಒಂದು ವೇಳೆ ಯಡಿಯೂರಪ್ಪ ಅವರು ಆ ರೀತಿ ಮಾತನಾಡಿದ್ದರೆ ಅದು ತಪ್ಪು ಎಂದು ಹೇಳಿದ್ರು.

ಅಲ್ಲದೆ ರಮೇಶ್ ಕುಮಾರ್ ಅವರು ಅಂತಹ ಕೆಳ ಮಟ್ಟಕ್ಕೆ ಇಳಿಯುವ ರಾಜಕಾರಣಿ ಅಲ್ಲ, ಜೊತೆಗೆ ಅವರು ಡೀಲ್ ಅಗುವಂತಹ ಮನಷ್ಯ ಅಲ್ಲ, ಡೀಲ್ ಮಾಡುವಂತಹ ಮನುಷ್ಯ ಎಂದರು.

LEAVE A REPLY

Please enter your comment!
Please enter your name here