Home District ಆಪರೇಷನ್ ಕಮಲ ಫೇಲ್.! “ಬಿಜೆಪಿಯವ್ರು ಅತ್ಯಂತ ಮಾನಗೆಟ್ಟವರು, ಲಜ್ಜೆಗೆಟ್ಟವರು” ಆಪರೇಷನ್‌ಗೆ ಕೈಹಾಕಿದ ಬಿಜೆಪಿ ಮೇಲೆ ಸಿದ್ದು...

ಆಪರೇಷನ್ ಕಮಲ ಫೇಲ್.! “ಬಿಜೆಪಿಯವ್ರು ಅತ್ಯಂತ ಮಾನಗೆಟ್ಟವರು, ಲಜ್ಜೆಗೆಟ್ಟವರು” ಆಪರೇಷನ್‌ಗೆ ಕೈಹಾಕಿದ ಬಿಜೆಪಿ ಮೇಲೆ ಸಿದ್ದು ಕೆಂಡಾಮಂಡಲ..!

672
0
SHARE

ಬಿಜೆಪಿಯವ್ರು ಮಾನಗೆಟ್ಟವರು, ಲಜ್ಜೆಗೆಟ್ಟವರು, ಆ ಯಡಿಯೂರಪ್ಪಂಗೆ 76-77 ವರ್ಷ ವಯಸ್ಸಾಗಿದೆ ಇನ್ನೂ ಬುದ್ದಿ ಬಂದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರಿನಲ್ಲಿ ಮಾತನಾಡಿದ ಅವ್ರು, ಬಿಜೆಪಿಯವ್ರು ನಮ್ಮ ಶಾಸಕರಿಗೆ ಕೊಟ್ಯಾಂತರ ರೂಪಾಯಿ ಆಫರ್ ನೀಡಿದ್ದಾರೆ, ಅವ್ರ ಶಾಸಕರನ್ನ ರೆಸಾರ್ಟ್‍ನಲ್ಲಿ ಕೂಡಿ ಹಾಕಿದ್ದಾರೆ. ನಾಳೆ ಸರ್ಕಾರ ಮಾಡ್ತೀವಿ,

ನಾಡಿದ್ದು ಸರ್ಕಾರ ಮಾಡ್ತೀವಿ ಅಂತಾರೆ ಎಲ್ಲಾ ಬರೀ ಸುಳ್ಳು, ದಯವಿಟ್ಟು ಅವರು ಏನೇ ಹೇಳಿದ್ರು ಅದೆಲ್ಲಾ ಸುಳ್ಳೆಂದು ಪ್ರಚಾರ ಮಾಡಿಬೇಡಿ ಎಂದ್ರು. ಬಿಜೆಪಿಯವ್ರಿಗೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನದಲ್ಲಿ ನಂಬಿಕೆ ಇಲ್ಲ. ಜನ ವಿರೋಧ ಪಕ್ಷದಲ್ಲಿ ಕೂರುವಂತೆ ಹೇಳಿದ್ದಾರೆ. ಅಧಿಕಾರ ಮಾಡಲು ತೀರ್ಪು ನೀಡಿಲ್ಲ. ಆದ್ರೆ, ವಾಮಮಾರ್ಗದಲ್ಲಿ ಅಧಿಕಾರ ಹಿಡಿಯಲು ಬರ್ತಿದ್ದಾರೆ, ನಿಮಗೆ ಸುದ್ದಿ ನೀಡುವವರು ಅವರೇ, ಆರು ತಿಂಗಳಿಂದ ಸರ್ಕಾರ ಮಾಡ್ತೀವಿ, ಸರ್ಕಾರ ಮಾಡ್ತೀವಿ ಅಂತ ಸರ್ಕಾರವನ್ನ ಅಭದ್ರಗೊಳಿಸಲು ಪ್ರಯತ್ನಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ರು.

ತೀವ್ರ ಕುತೂಹಲ ಕೆರಳಿಸಿದ್ದ ಆಪರೇಷನ್ ಕಮಲ ಫೇಲ್ ಆಗಿದೆ… ಇದರೊಂದಿಗೆ ಮೂರು ದಿನಗಳ ರಾಜಕೀಯ ನಾಟಕಗಳಿಗೆ ಬಹುತೇಕ ತೆರೆ ಬಿದ್ದಂತಾಗಿದೆ… ದೋಸ್ತಿ ಸರ್ಕಾರದಲ್ಲಿರೋ ಅತೃಪ್ತ ಶಾಸಕರನ್ನು ಸೆಳೆದುಕೊಂಡು ಸರ್ಕಾರ ರಚನೆ ಮಾಡೋ ಬಿಜೆಪಿ ನಾಯಕರ ಕನಸು ಭಗ್ನವಾಗಿದೆ.. ಶುಕ್ರವಾರ ರಾಷ್ಟ್ರೀಯ ಮಟ್ಟದ ಬಿಜೆಪಿ ಪರಿಷತ್ ನಲ್ಲಿ ಪಾಲ್ಗೊಳ್ಳಲು ರಾಜ್ಯದ 104 ಶಾಸಕರು ದೆಹಲಿಗೆ ತೆರಳಿದ್ದರು…

ಆನಂತರ ಎಲ್ಲಾ ಶಾಸಕರು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಗುರುಗ್ರಾಮ್ ನ ಐಷಾರಾಮಿ ಹೋಟೆಲ್ ಗೆ ಸ್ಥಳಾಂತರಗೊಂಡಿದ್ದರು.. ಆಪರೇಷನ್ ಕಮಲ ಬಹುತೇಕ ಸಕ್ಸಸ್ ಆಗುತ್ತೆ, ಎಲ್ಲವೂ ಪ್ಲಾನ್ ಪ್ರಕಾರ ನಡೆಯುತ್ತಿದೆ ಎಂದು ಬಿಜೆಪಿ ನಾಯಕರು ಭಾವಿಸಿದ್ದರು.. ಅವರ ಲೆಕ್ಕಾಚಾರದಂತೆ ಪ್ಲಾನ್ ಎ ಯಶಸ್ವಿಯಾಗಿ ಇಬ್ಬರು ಪಕ್ಷೇತರ ಶಾಸಕರಾದ ಶಂಕರ್ ಮತ್ತು ನಾಗೇಶ್, ದೋಸ್ತಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದ್ರು..

ಇನ್ನೇನು ಕಾಂಗ್ರೆಸ್ ಶಾಸಕರು ಕೂಡ ಬಿಜೆಪಿ ಸೇರುವ ಮೂಲಕ ಸರ್ಕಾರ ಪತನವಾಗಲಿದೆ ಎಂದು ಹೇಳಲಾಗಿತ್ತು.. ಆದ್ರೆ ದಿನಕ್ಕೊಂದು ತಿರುವು ಪಡೆಯುತ್ತಾ ಸಾಗಿದ ರಾಜ್ಯ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ… ಅತೃಪ್ತ ಶಾಸಕರನ್ನು ಮನವೊಲಿಸುವಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಯಶಸ್ವಿಯಾಗಿದ್ದಾರೆ.. ಈ ಹಿನ್ನೆಲೆಯಲ್ಲಿ ಬಿಜೆಪಿ ಸೇರ್ಪಡೆಯಾಗಬೇಕಿದ್ದ ಶಾಸಕರು ಉಲ್ಟಾ ಹೊಡೆದಿದ್ದು, ದೋಸ್ತಿ ಸರ್ಕಾರಕ್ಕೆ ತಮ್ಮ ಬೆಂಬಲ ಎಂದು ಘೋಷಿಸಿದ್ದಾರೆ..

ಈ ಬೆಳವಣಿಗೆಯಿಂದ ಬಿಜೆಪಿ ನಾಯಕರ ಮೇಲೆ ನಿರಾಸೆಯ ಕಾರ್ಮೋಡ ಆವರಿಸಿದೆ… ನಿನ್ನೆ ಸಂಭ್ರಮದಿಂದ ಸಂಕ್ರಾಂತಿ ಆಚರಿಸಿದ್ದ ಯಡಿಯೂರಪ್ಪ ಅಂಡ್ ಟೀಮ್ ಇಂದು ನಿರಾಸೆಯಿಂದ ದಿನದೂಡಿದ್ದಾರೆ.. ಇದೇ ವೇಳೆ ತಾವು ಆಪರೇಷನ್ ಕಮಲ ನಡೆಸಲು ಮುಂದಾಗಿರಲಿಲ್ಲ ಎಂದು ಹಿರಿಯ ಶಾಸಕ ಸಿಟಿ ರವಿ ಹೇಳಿದ್ದಾರೆ..

ರಾಜ್ಯ ರಾಜ್ಯಕಾರಣದಲ್ಲಿ ಅಸ್ಥಿರತೆ ಇದ್ದ ಕಾರಣ ಪರಿಸ್ಥಿತಿ ಲಾಭ ಪಡೆಯಲು ನಾವು ಹೈ ಅಲರ್ಟ್ ಆಗಿದ್ದೇವು ಎಂದು ಅವರು ಹೇಳಿದ್ದಾರೆ.. ಇದೇ ವೇಳೆ ಯಡಿಯೂರಪ್ಪ ಇಂದು ಸಂಜೆ ಬೆಂಗಳೂರಿಗೆ ಆಗಮಿಸೋ ಸಾಧ್ಯತೆ ಇದೆ.. ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಏರುಪೇರು ಆಗಿರೋ ಹಿನ್ನೆಲೆಯಲ್ಲಿ ಯಡಿಯೂರಪ್ಪ ದೆಹಲಿಯಿಂದ ವಾಪಸ್ ಬರುತ್ತಿದ್ದಾರೆ ಎಂದು ಹೇಳಲಾಗಿದೆ..

LEAVE A REPLY

Please enter your comment!
Please enter your name here