Home District ಆಪರೇಷನ್ ಕಮಲ ವಿರುದ್ಧ ಸಿಡಿದೆದ್ದ ಸಿದ್ದರಾಮಯ್ಯ..?! ಸಿದ್ದರಾಮಯ್ಯ ಹೆಗಲಿಗೆ ಸರ್ಕಾರ ಉಳಿಸಿಕೊಳ್ಳುವ ಜವಾಬ್ದಾರಿ.?! ಸರ್ಕಾರಕ್ಕೆ ತಪ್ಪುತ್ತಿಲ್ಲ...

ಆಪರೇಷನ್ ಕಮಲ ವಿರುದ್ಧ ಸಿಡಿದೆದ್ದ ಸಿದ್ದರಾಮಯ್ಯ..?! ಸಿದ್ದರಾಮಯ್ಯ ಹೆಗಲಿಗೆ ಸರ್ಕಾರ ಉಳಿಸಿಕೊಳ್ಳುವ ಜವಾಬ್ದಾರಿ.?! ಸರ್ಕಾರಕ್ಕೆ ತಪ್ಪುತ್ತಿಲ್ಲ “ಆಪರೇಷನ್ ಕಮಲ”ದ ಭೀತಿ.?!

594
0
SHARE

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಹೀನ ಕೆಲಸ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಸಮ್ಮಿಶ್ರ ಸರ್ಕಾರದ ಪರವಾಗಿ ಮತ್ತು ಬಿಜೆಪಿಯ ವಿರುದ್ಧ ಅವರು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. ಸಿದ್ಧಾಂತ ಮಾತನಾಡುವ ಬಿಜೆಪಿಯವರು ಅಧಿಕಾರಕ್ಕಾಗಿ ಹೀನ ಮಟ್ಟದ ರಾಜಕೀಯಕ್ಕೆ ಇಳಿದಿದ್ದಾರೆ.

ಚುನಾವಣೆಯಲ್ಲಿ ಸೋತವರು ವಿರೋಧ ಪಕ್ಷವಾಗಿ ಕೆಲಸ ಮಾಡಬೇಕು. ಅದನ್ನು ಬಿಟ್ಟು ಸರ್ಕಾರವನ್ನು ಅಸ್ಥಿರಗೊಳಿಸುವ ಅನೀತಿಯುತ ಪ್ರಯತ್ನ ಮಾಡಬಾರದು. ರಾಜ್ಯದ ಜನ ಇದನ್ನು ಗಮನಿಸುತ್ತಾ ಇದ್ದಾರೆ.

ಅವರೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಸಿದ್ದರಾಮಯ್ಯ ಒಂದು ಟ್ವೀಟ್‌ನಲ್ಲಿ ಹೇಳಿದ್ದಾರೆ. ಇನ್ನು ಸಿದ್ದರಾಮಯ್ಯ ಟ್ವೀಟ್‌ಗೆ ಬಿಜೆಪಿ ಟಾಂಗ್ ಕೊಟ್ಟಿದೆ.. ನಿಮ್ಮ ಕೊಳಕು ಆಡಳಿತದಿಂದ ನಿಮ್ಮ ಶಾಸಕರೇ ಅಸಮಾಧಾನಗೊಂಡಿದ್ದಾರೆ ಅಂತಾ ಬಿಜೆಪಿ ಟ್ವೀಟ್ ಮಾಡಿದೆ..

ಆಪರೇಷನ್ ಕಮಲದ ಭೀತಿ ದೂರವಾಗುತ್ತಿಲ್ಲ ಕೈ ನಾಯಕರಿಗೆ.ಸಿಎಂ, ಡಿಸಿಎಂ, ಡಿಕೆಶಿ, ಸಿದ್ದರಾಮಯ್ಯ ಗೆ ನಿದ್ದೆಗೆಡಿಸಿದೆ ಆಪರೇಷನ್ ಕಮಲ.ರಾಜ್ಯ ನಾಯಕರಿಗೆ ರಾಹುಲ್ ಗಾಂಧಿ ಯಿಂದ ಸ್ಪಷ್ಟ ಸೂಚನೆ ರವಾನೆ..ಏನೇ ಸಮಸ್ಯೆಗಳಾದರೂ ಸಮ್ವನಯ ಸಮಿತಿಯಲ್ಲಿ ಸಭೆಯಲ್ಲಿ ತೀರ್ಮಾನ ತೆಗದುಕೊಳ್ಳಿ.ಎರಡು ಪಕ್ಷಗಳು ವಿಶ್ವಾಸದಿಂದ ಇದ್ದು ಸರ್ಕಾರ ಮುನ್ನಡೆಸಿ…

ಬಿಜೆಪಿ ಆಪರೇಷನ್ ಕಮಲವನ್ನ ವಿಫಲಗೊಳಿಸಿ.ಸದ್ಯ ಲೋಕಸಭಾ ಚುನಾವಣೆವರೆಗೂ ಯಾವುದೇ ಸಮಸ್ಯೆ ಆಗಬಾರದು.ಸಮ್ಮಿಶ್ರ ಸರ್ಕಾರ ಮುಂದುವರೆಸಿಕೊಂಡು ಹೋಗಿ .ಸಿದ್ದರಾಮಯ್ಯಗೆ ಈಗ ಸರ್ಕಾರ ಉಳಿಸಿಕೊಳ್ಳುವ ಕೆಲಸ.ಸರ್ಕಾರ ಉಳಿಸುವ ಕೊಳ್ಳುವ ಜವಾಬ್ದಾರಿ ಸಿದ್ದರಾಮಯ್ಯ ಹೆಗಲಿಗೆ.

LEAVE A REPLY

Please enter your comment!
Please enter your name here