Home Crime ಆರು ಮಂದಿ ಬಲಿ ಪಡೆದ ಭೀಕರ ಅಪಘಾತ…! ಮದುವೆಗೆ ಬಂದವರು ಸೇರಿದರು ದೇವರಪಾದ..!

ಆರು ಮಂದಿ ಬಲಿ ಪಡೆದ ಭೀಕರ ಅಪಘಾತ…! ಮದುವೆಗೆ ಬಂದವರು ಸೇರಿದರು ದೇವರಪಾದ..!

1101
0
SHARE

ಅವರು ಖುಷಿಯಿಂದ ಮದುವೆಗೆ ಹೊರಟಿದ್ರು. ಮದುವೆ ಮನೆ ಮುಟ್ಟುವ ಮುನ್ನವೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಹೌದು, ಗದಗ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 6 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಐ 20 ಕಾರು ಹಾರಿ ಎದುರಿನಿಂದ ಬರುತ್ತಿದ್ದ ಐ 10 ಕಾರಿಗೆ ಅಪ್ಪಳಿಸಿದ್ದರಿಂದ ಈ ದುರಂತ ಸಭವಿಸಿದೆ. ಮೃತರ ಸಂಬಂಧಿಕರ ಅಕ್ರಂದನ ಮುಗಿಲು ಮುಟ್ಟಿತ್ತು.

ನಜ್ಜುಗುಜ್ಜಾಗಿರೋ ಐ 10 ಕಾರು. ಕಾರು ಓಡಿಸುತ್ತಲೇ ಸಾವಿನ ಮನೆ ಸೇರಿದ ಯುವಕ. ಈ ಭೀಕರ ರಸ್ತೆ ಅಪಘಾತಕ್ಕೆ ಗದಗ ಸಾಕ್ಷಿಯಾಗಿದೆ.ಅಂದಹಾಗೆ ಧಾರವಾಡ ನಗರದ ಹೆಬ್ಬಳ್ಳಿ ಅಗಸಿಯ ಯುವಕರು ಗೆಳೆಯನ ಮದುವೆಗೆಂದು ಗದಗ ನಗರಕ್ಕೆ ಐ 10 ಕಾರಿನಲ್ಲಿ ಬರುತ್ತಿದ್ದರು. ಬೆಳಗಿನ ಜಾವ 3 ಗಂಟೆ ವೇಳೆಯಲ್ಲಿ ಇನ್ನೇನು ಮದುವೆ ಮಂಟಪ ಸೇರಬೇಕು ಅಷ್ಟರಲ್ಲಿಯೇ ಅವರಿಗೆ ಆಘಾತ ಕಾದಿತ್ತು.

ಅಡವಿಸೋಮಾಪುರ ಗ್ರಾಮ ಬಳಿ ಎದುರಿನಿಂದ ಬರುತ್ತಿದ್ದ ಯಮಸ್ವರೂಪಿ ಐ20 ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಮೇಲಕ್ಕೆ ಹಾರಿ ಎದುರಿನಿಂದ ಬರುತ್ತಿದ್ದ ಐ 10 ಕಾರಿನ ಮೇಲೆ ಅಪ್ಪಳಿಸಿದೆ. ಇದ್ರಿಂದ ಐ 10 ಕಾರು ಸಂಪೂರ್ಣ ಅಪ್ಪಚ್ಚಿಯಾಗಿದ್ದು, ಪ್ರಯಾಣಿಸುತ್ತಿದ್ದ 6 ಮಂದಿ ಸಾವನ್ನಪ್ಪಿದ್ದಾರೆ.ಮೃತಪಟ್ಟವರನ್ನು ಆನಂದ ಬೆಟಗೇರಿ, ಅರುಣ ಬೆಟಗೇರಿ, ಸಿದ್ದು, ಮನೋಜಕುಮಾರ್, ಚನ್ನು, ಅಮೃತ್ ಎಂದು ಗುರುತಿಸಲಾಗಿದೆ.

ಈ ಎಲ್ಲ ಯುವಕರು ಗದಗ ನಗರದ ನರಸಾಪೂರ ಸರ್ಕಾರಿ ಡಿಪ್ಲೊಮೋ ಕಾಲೇಜ್ ನಲ್ಲಿ ಓದುತ್ತಿದ್ದರು‌ ಪಡೆಯುತ್ತಿದ್ದರು. ಇಂಜಿನಿಯರ್ ಕೋರ್ಸ್ ಪದವಿ ಆಗಿ ವಿವಿಧ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವರು. ನಿನ್ನೆ ಗದಗನಲ್ಲಿ ಗೆಳೆಯನ ಮದುವೆಯಿದ್ದ ಕಾರಣ ರಾತ್ರಿ 10 ಗಂಟೆಗೆ ಧಾರವಾಡದಿಂದ ಹೊರಟ್ಟಿದ್ದರು.

ಕಾರಿನಲ್ಲಿ ಏರ್ ಬ್ಯಾಗ್ ಇದ್ದರೂ ಇವರು ಯಾರೂ ಕೂಡ ಬದುಕುಳಿಯಲಿಲ್ಲ. ನಜ್ಜು-ಗುಜ್ಜಾದ ಕಾರಿನಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹೊರ ತೆಗೆಯಲು ಪೊಲೀಸರು ಹರಸಾಹಸ ಪಟ್ಟರು.ಜಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯ್ತು.

ಸಂಬಂಧಿಕ ಆಕ್ರಂದನವಂತೂ ಮುಗಿಲು ಮುಟ್ಟಿತ್ತು.ಐ20 ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಕೂಡ ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಯಾವುದೇ ತಪ್ಪು ಮಾಡದ ಯುವಕರು ತಮ್ಮ ಪಾಡಿಗೆ ತಾವು ಹೊರಟ್ರೆ, ಜವರಾಯ i20 ಕಾರಿನ ರೂಪದಲ್ಲಿ ಬಂದು ಅವರ ಬಲಿ ಪಡೆದಿದ್ದು ಮಾತ್ರ ವಿರ್ಯಾಸವೇ ಸರಿ.

LEAVE A REPLY

Please enter your comment!
Please enter your name here