Home Crime ಆರೇ ತಿಂಗಳಲ್ಲಿ ಪತ್ನಿಗೆ ತೋರಿಸಿದ ಮಸಣದ ದಾರಿ.. ಹೊಸ ಕತೆ ಕಟ್ಟಿ ತಾನೇ ತೋಡಿದ ಹಳ್ಳಕ್ಕೆ...

ಆರೇ ತಿಂಗಳಲ್ಲಿ ಪತ್ನಿಗೆ ತೋರಿಸಿದ ಮಸಣದ ದಾರಿ.. ಹೊಸ ಕತೆ ಕಟ್ಟಿ ತಾನೇ ತೋಡಿದ ಹಳ್ಳಕ್ಕೆ ಬಿದ್ದ ಯಾಮಾರಿ….

786
0
SHARE

ಹೀಗೆ ಹಣವಾಗಿ ಮಲಗಿರೋ ಹೆಣ್ಣುಮಗಳು, ಹೆತ್ತಮಗಳನ್ನು ಕಳೆದುಕೊಂಡು ಕರುಳು ಕಿತ್ತೋ ಬರೋ ಹಾಗೆ ಅಳುತ್ತಿರುವ ಪೋಷಕರು, ಈ ಘಟನೆ ನಡೆದ್ದು ಬಳ್ಳಾರಿ ತಾಲೂಕಿನ ಗಡಿಭಾಗದ ಆಂಧ್ರಕ್ಕೆ ಹೊಂದಿಕೊಂಡಿರುವ ಶಿಡಿಗಿನಮೊಳ ಗ್ರಾಮದಲ್ಲಿ…ಹೌದು, ನಿನ್ನೆ ರಾತ್ರಿ ನಡೆದ ಕೊಲೆಯೊಂದು ಬೆಳಗಾಗದ್ರೊಳಗೆ ಹಲವು ಆಯಾಮವನನ್ನು ಪಡೆದುಕೊಂಡಿತ್ತು.

ಅಸುಂಡಿ ಮೂಲದ ಸುನೀತಳನ್ನು ಶಿಡಿಗಿನಮೊಳ ಗ್ರಾಮದ ರಾಮಚಂದ್ರನಿಗೆ ಕೊಟ್ಟು ಕಳೆದ ಆರು ತಿಂಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಕೆಲಸವಿಲ್ಲದೇ ಖಾಲಿ ಇದ್ದ ರಾಮಚಂದ್ರ ಅಂಗವಿಕಲೆಯಾದ ಸುನೀತಾಳಿಗೆ ಬಾಳು ನೀಡಿದ್ದಾನೆಂದು ಎಲ್ಲರೂ ಸಂತಸದಿಂದ ಇದ್ದರು. ಆದ್ರೇ, ಮದುವೆಯಾದ ಎರಡೇ ತಿಂಗಳು ಚೆನ್ನಾಗಿದ್ದ ರಾಮಚಂದ್ರ ನಂತರ ನಿತ್ಯ ಕುಡಿದು ಬಂದು ಹೆಂಡತಿಗೆ ಕಿರುಕುಳ ನೀಡ್ತಿದ್ದ.

ಅಲ್ಲದೇ ಮದುವೆಯಲ್ಲಿ ಮಾತುಕೊಟ್ಟಂತೆ ಬೈಕ್ ಕೊಡಿಸುವಂತೆ ಪೀಡಿಸ್ತಿದ್ದ. ನಿನ್ನೆ ರಾತ್ರಿಯೂ ಕೂಡ ಇದೇ ವಿಚಾರವಾಗಿ ಗಲಾಟೆ ನಡೆದು ಹೆಂಡತಿಯನ್ನು ಕೊಂದಿದ್ದಾನೆ. ತಾನೇ ಕೊಲೆ ಮಾಡಿದ್ರು. ಪೊಲೀಸರಿಗೆ ಮತ್ತು ಜನರಿಗೆ ಮುಸುಕುಧಾರಿ ಕಥೆ ಹೇಳಿ ಕೊನೆಗೆ ತಾನೇ ತಗ್ಲಾಕೊಂಡಿದ್ದಾನೆ.ಈಗ ರಾಜ್ಯದಲ್ಲೆಡೆ ಮಕ್ಕಳ ಕಳ್ಳರ ಭೀತಿ ಇರೋದ್ರಿಂದ ಇದರ ಲಾಭ ಪಡೆಯಲು ಮುಂದಾದ ಪಾಪಿ ಪತಿ, ಸುನಿತಾಳನ್ನು ಕೊಲೆ ಮಾಡಿ, ರಾತ್ರಿ ಮನೆಗೆ ನುಗ್ಗಿದ ಮೂವರು ಮುಸುಕುಧಾರಿಗಳ ಬಂದು ನನ್ನ ಹೆಂಡತಿ ಕೊಲೆ ಮಾಡಿದ್ದಾರೆಂದು ಕಥೆ ಕಟ್ಟಿದ್ದಾನೆ.

ಕೊಲೆ ಮಾಡಿ ನೇರವಾಗಿ ತಾನೇ ಪಿ.ಡಿ. ಹಳ್ಳಿ ಪೊಲೀಸ್ ಠಾಣೆಗೆ ಬಂದು ನಡೆದ ಘಟನೆ ವಿವರಿಸಿದ್ದಾನೆ. ಒಂದು ಸ್ವಲ್ಪ ಗಾಬರಿಯಾದ ಪೊಲೀಸರು. ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದಾರೆ. ಕೆಲ ಕಾಲ ದಾರಿ ತಪ್ಪಿಸಿದ ರಾಮಚಂದ್ರ ವಿಚಾರಣೆ ತೀವ್ರಗೊಳಿಸುತ್ತಿದ್ದಂತೆ ಕೊನೆಗೆ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮೇಲ್ನೋಟಕ್ಕೆ ವರದಕ್ಷಣೆ ಕಿರುಕುಳ ಎನ್ನಲಾಗುತ್ತಿದೆಯಾದರೂ, ರಾಮಚಂದ್ರ ತನ್ನ ಹೆಂಡತಿ ಬಗ್ಗೆ ಅನುಮಾನಪಡುತ್ತಿದ್ದನು ಎಂದೂ ಕೂಡ ಮಾಹಿತಿ ಇದೆ.

ಒಟ್ಟಾರೆ ನಿಮ್ಮ ಮಗಳನ್ನು ಬೇರೊಂದು ಮನೆಗೆ ಸೊಸೆಯಾಗಿ ಕಳಿಸೋ ಮುನ್ನ ಚಿಂತಿಸಿ, ಬರೋ ಅಳಿಯ ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ತಾನಾ ಇಲ್ವಾ ಎಂಬುದನ್ನು ಸರಿಯಾಗಿ ಅರಿತು ಹೆಣ್ಣುಮಕ್ಕಳನ್ನು ಧಾರೆ ಎರೆದುಕೊಡಿ. ಇಲ್ಲವಾದಲ್ಲಿ ಈ ಹೆತ್ತವರಿಗೆ ಬಂದಂತಹ ಸ್ಥಿತಿ ನಾಳೆ ನಿಮಗೆ ಬರಬಾರದೆಂಬುದೇ ನಮ್ಮ ಆಶಯ

LEAVE A REPLY

Please enter your comment!
Please enter your name here