Home KARNATAKA ಆಸೀಸ್‌ಗೆ ಬೆಂಡೆತ್ತಿದ ಧೋನಿ..! ಮಾಹಿ ಅಬ್ಬರಕ್ಕೆ ನೆಲ ಕಚ್ಚಿದ ಕಾಂಗರೂ ಪಡೆ..! ಮತ್ತೊಂದು ದಾಖಲೆ ಬರೆದ...

ಆಸೀಸ್‌ಗೆ ಬೆಂಡೆತ್ತಿದ ಧೋನಿ..! ಮಾಹಿ ಅಬ್ಬರಕ್ಕೆ ನೆಲ ಕಚ್ಚಿದ ಕಾಂಗರೂ ಪಡೆ..! ಮತ್ತೊಂದು ದಾಖಲೆ ಬರೆದ ಭಾರತ ತಂಡ…

2554
0
SHARE

ಮೆಲ್ಬೋರ್ನ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ರೋಚಕ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ ಕಾಂಗರೂಗಳ ನಾಡಲ್ಲಿ ಟೆಸ್ಟ್ ಸರಣಿ ಜೊತೆ ಚೊಚ್ಚಲ ಬಾರಿಗೆ ದ್ವಿಪಕ್ಷೀಯ ಏಕದಿನ ಸರಣಿ ಗೆದ್ದು ಸಂಭ್ರಮಾಚರಣೆ ಮಾಡಿಕೊಂಡಿತು. ಮೆಲ್ಬೋರ್ನ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ 7 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತು.

ಕೊನೆಯ ಕ್ಷಣದವರೆಗೂ ಭಾರೀ ಕುತೂಹಲ ಮೂಡಿಸಿದ್ದ ಫೈನಲ್ ಫೈಟ್ ನಲ್ಲಿ ಕಾಂಗರೂಪಡೆಯನ್ನ ಬಗ್ಗುಬಡಿದ ಕೊಹ್ಲಿಬಾಯ್ಸ್, 2-1ರಲ್ಲಿ ಏಕದಿನ ಸರಣಿ ಗೆದ್ದು ದಾಖಲೆ ಬರೆಯಿತು.ಆಸ್ಟ್ರೇಲಿಯಾ ನೀಡಿದ್ದ 231 ರನ್ ಗಳ ಅಲ್ಪಮೊತ್ತದ ಗುರಿ ಬೆನ್ನಟ್ಟಿದ ಭಾರತ ಪರ ರೋಹಿತ್ ಶರ್ಮಾ 09 ಮತ್ತು ಶಿಖರ್ ಧವನ್ 23 ಗಳಿಸಿ ಔಟಾದ್ರು. ಬಳಿಕ ಒಂದಾದ ಎಂ.ಎಸ್.ಧೋನಿ ಮತ್ತು ವಿರಾಟ್ ಕೊಹ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ್ರು. ಆದ್ರೆ ಕೊಹ್ಲಿ 46 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡ್ರು.

ಚಹಲ್ ಸ್ಪಿನ್ ಮೋಡಿ ; ಆಪತ್ಬಾಂಧವ ಧೋನಿ:ಇನ್ನು ಮೊದಲೆರಡು ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ತೋರಿದ ಧೋನಿ, ಫೈನಲ್ ಪಂದ್ಯದಲ್ಲೂ ಮಿಂಚು ಹರಿಸಿದ್ರು. ಕೇದಾರ್ ಜಾಧವ್ ಜೊತೆ ಇನ್ನಿಂಗ್ಸ್ ಕಟ್ಟಿದ ಮಾಹಿ ಕಾಂಗರೂಪಡೆಯ ಬೌಲರ್ ಗಳ ಬೆಂಡತ್ತಿದ್ರು. ಅಲ್ಲದೇ ಸರಣಿಯಲ್ಲಿ ಸತತ 3ನೇ ಮತ್ತು ಏಕದಿನ ಕ್ರಿಕೆಟ್ ನಲ್ಲಿ 70ನೇ ಅರ್ಧಶತಕ ದಾಖಲಿಸಿದ್ರು.ಅಂತಿಮವಾಗಿ ಭಾರತ 49.2 ಓವರಗಳಲ್ಲಿ 3 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿತು. ಧೋನಿ ಅಜೇಯ 87 ರನ್ ಸಿಡಿಸಿದ್ರೆ, ಜಾಧವ್ ಅಜೇಯ 61 ರನ್ ಬಾರಿಸಿದ್ರು.

ಅಲ್ಲದೇ 4ನೇ ವಿಕೆಟ್ ಗೆ ಈ ಜೋಡಿ 121 ರನ್ ಕಲೆಹಾಕಿ ತಂಡದ ಗೆಲುವಿನ ರೂವಾರಿಗಳಾದ್ರು.ಇದಕ್ಕೂ ಮೊದ್ಲು ಟಾಸ್ ಸೋತು ಬ್ಯಾಟಿಂಗ್ ನಡೆಸಿದ್ದ ಆಸ್ಟ್ರೇಲಿಯಾ, ಯುಜ್ವಿಂದರ್ ಚಹಲ್ ಸ್ಪಿನ್ ಮೋಡಿಗೆ ಗಿರಗಿಟ್ಲೆ ಹೊಡೆಯಿತು. ಅದ್ಭುತವಾದ ದಾಳಿ ನಡೆಸಿದ ಚಹಲ್ ಏಕದಿನ ಕ್ರಿಕೆಟ್ ನಲ್ಲಿ 6 ವಿಕೆಟ್ ಪಡೆದು ಜೀವನಶ್ರೇಷ್ಠ ಸಾಧನೆ ಮಾಡಿದ್ರು. ಚಹಲ್ ದಾಳಿಗೆ ತತ್ತರಿಸಿದ ಕಾಂಗರೂಪಡೆ 48.4 ಓವರ್ ಗಳಲ್ಲಿ 230 ರನ್ ಗಳಿಗೆ ಸರ್ವಪತನವಾಯ್ತು.

ಆಸ್ಟ್ರೇಲಿಯಾದಲ್ಲಿ ಭಾರತಕ್ಕೆ ಚೊಚ್ಚಲ ಏಕದಿನ ಸರಣಿ ಗೆಲುವು-ಅಂತಿಮ ಏಕದಿನ ಪಂದ್ಯದಲ್ಲಿ ಭಾರತಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ­2-1ಅಂತರದಲ್ಲಿ ಟೀಂ ಇಂಡಿಯಾ ಸರಣಿ ಕೈವಶ-ಭಾರತ 49.2 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 234 ರನ್ -ಭಾರತ ಪರ ಎಂ.ಎಸ್.ಧೋನಿ ಅಜೇಯ 87, ಜಾಧವ್ ಅಜೇಯ 61 ರನ್-ಭಾರತ ಪರ ರೋಹಿತ್-9, ಧವನ್-23, ಕೊಹ್ಲಿ-46 ರನ್-ಟೀಂ ಇಂಡಿಯಾ ಗೆಲುವಿಗೆ 231 ರನ್ ಗುರಿ ನೀಡಿದ್ದ ಆಸೀಸ್-ಕಾಂಗರೂಗಳ ನಾಡಲ್ಲಿ ಭಾರತಕ್ಕೆ ಮೊದಲ ದ್ವಿಪಕ್ಷೀಯ ಸರಣಿ ಜಯ-ಆಸ್ಟ್ರೇಲಿಯಾ 48.4 ಓವರ್‌ಗಳಲ್ಲಿ 230 ರನ್‌ಗೆ ಸರ್ವಪತನ-ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಅಂತಿಮ ಏಕದಿನ ಪಂದ್ಯ.

 

LEAVE A REPLY

Please enter your comment!
Please enter your name here