ಆಡಿಲೇಡ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಟೀಂ ಇಂಡಿಯಾ 31 ರನ್ ಗಳ ಭರ್ಜರಿ ಗೆಲುವು ಸಾಧಿಸಿತು. ಪ್ರತಿಯೊಂದು ಹಂತದಲ್ಲೂ ರೋಚಕ ಘಟ್ಟ ತಲುಪಿದ್ದ ಪಂದ್ಯದಲ್ಲಿ ಗೆಲುವು ಯಾರಿಗೆ ಸಿಗುತ್ತೆ ಅನ್ನೋ ಕುತೂಹಲ ಉಂಟಾಗಿತ್ತು.
ಆದ್ರೆ ವ್ಯವಸ್ಥಿತ ಬೌಲಿಂಗ್ ದಾಳಿ ನಡೆಸಿದ ಟೀಂ ಇಂಡಿಯಾ ಆಡಿಲೇಡ್ ನಲ್ಲಿ ಗೆಲುವಿನ ಕೇಕೆ ಹಾಕಿತು. ಈ ಮೂಲಕ 15 ವರ್ಷಗಳ ಬಳಿಕ ಆಡಿಲೇಡ್ ನಲ್ಲಿ ಹಾಗೂ ಇದೇ ಮೊದಲ ಬಾರಿಗೆ ಆಸೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಗೆದ್ದ ಸಾಧನೆ ಮಾಡಿತು. ಭಾರತ ನೀಡಿದ್ದ 323 ರನ್ ಗಳು ಗುರಿ ಬೆನ್ನಟ್ಟಿದ್ದ ಆಸೀಸ್ 4ನೇ ದಿನದಾಟದಲ್ಲಿ 4 ವಿಕೆಟ್ ಕಳೆದುಕೊಂಡು 104 ರನ್ ಗಳಿಸಿತ್ತು. ಇನ್ನು 5ನೇ ದಿನದಾಟದಲ್ಲಿ ಬ್ಯಾಟ್ ಬೀಸಿದ ಶಾನ್ ಮಾರ್ಷ್ 60 ರನ್ ಗಳಿಸಿದ್ರೆ, ಟಿಮ್ ಪೈನ್ 41 ರನ್ ಗಳಿಸಿದ್ರು.
ಅಲ್ಲದೇ ತಂಡದ ಬಾಲಂಗೋಚಿಗಳು ರಕ್ಷಣಾತ್ಮಕ ಬ್ಯಾಟಿಂಗ್ ಮೂಲಕ ಕೊಹ್ಲಿಪಡೆಯಲ್ಲಿ ಸೋಲಿನ ಆತಂಕ ಮೂಡಿಸಿದ್ರು. ಪ್ಯಾಟ್ ಕಮಿನ್ಸ್ ಹಾಗೂ ಮಿಚೇಲ್ ಸ್ಟಾರ್ ತಲಾ 28, ನಥಾನ್ ಲಿಯೋನ್ ಅಜೇಯ 38 ರನ್ ಗಳಿಸಿ ತಂಡದ ಗೆಲುವಿಗಾಗಿ ಹೋರಾಟ ನಡೆಸಿದ್ರು. ಆದ್ರೆ ಅಶ್ವಿನ್ ಹೇಜಲ್ ವುಡ್ ವಿಕೆಟ್ ಉರುಳಿಸುವ ಮೂಲಕ ತಂಡಕ್ಕೆ ಗೆಲುವು ಖಚಿತಮಾಡಿದ್ರು. ಅಂತಿಮವಾಗಿ ಆಸೀಸ್ 291 ರನ್ ಗಳಿಗೆ ಸರ್ವಪತನವಾಯ್ತು. ಟೀಂ ಇಂಡಿಯಾ ಪರ ಅಶ್ವಿನ್ ಹಾಗೂ ಬೂಮ್ರಾ ತಲಾ 3 ವಿಕೆಟ್ ಪಡೆದು ಮಿಂಚಿದ್ರು.
ಭಾರತದ ಪರ ಪರಿಣಾಮಕಾರಿ ದಾಳಿ ಸಂಘಟಿಸಿದ ಇಶಾಂತ್ ಶರ್ಮಾ ಹಾಗೂ ಮೊಹಮ್ಮದ ಶಮಿ ತಲಾ ಎರಡು ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ ಮತ್ತು ರವಿಚಂದ್ರನ್ ಅಶ್ವಿನ್ ತಲಾ ಮೂರು ವಿಕೆಟ್ ಪಡೆದು ಮಿಂಚಿದರು.ಪ್ರತಿಯೊಂದು ದಿನದಲ್ಲೂ ರೋಚಕತೆಗೆ ಸಾಕ್ಷಿಯಾದ ಪಂದ್ಯದಲ್ಲಿ ಕೊನೆಗೂ ಗೆಲುವು ದಾಖಲಿಸುವಲ್ಲಿ ವಿರಾಟ್ ಕೊಹ್ಲಿ ಪಡೆ ಯಶಸ್ವಿಯಾಗಿದೆ. ಈ ಮೂಲಕ ಆಸೀಸ್ ನೆಲದಲ್ಲಿ ಹೊಸ ಇತಿಹಾಸ ರಚಿಸಿದೆ.
ಅಂತಿಮ ದಿನದಾಟ ಆರಂಭಿಸಿದ ಆಸೀಸ್ಗೆ ಆರಂಭದಲ್ಲೇ ಇಶಾಂತ್ ಶರ್ಮಾ ತಿರುಗೇಟು ನೀಡಿದರು. ಮೊದಲ ಇನ್ನಿಂಗ್ಸ್ನಲ್ಲಿ ಅರ್ಧಶತಕ ಬಾರಿಸಿದ ಟ್ರಾವಿಸ್ ಹೆಡ್ (14) ಹೆಚ್ಚು ಹೊತ್ತು ನಿಲ್ಲಲಿಲ್ಲ.ಇನ್ನೊಂದೆಡೆ ಅತೀವ ಒತ್ತಡದ ಪಂದ್ಯದಲ್ಲೂ ಎಚ್ಚರಿಕೆಯ ಇನ್ನಿಂಗ್ಸ್ ಕಟ್ಟಿದ ಶಾನ್ ಮಾರ್ಶ್ ಆಕರ್ಷಕ ಅರ್ಧಶತಕ ಸಾಧನೆ ಮಾಡಿದರು. ಈ ಮೂಲಕ ಆಸೀಸ್ ತನ್ನ ಹೋರಾಟವನ್ನು ಮುಂದುವರಿಸಿತು. ಈ ಮೊದಲು ಚೇತೇಶ್ವರ ಪೂಜಾರ (71) ಹಾಗೂ ಅಜಿಂಕ್ಯ ರಹಾನೆ (70) ಕಲಾತ್ಮಕ ಇನ್ನಿಂಗ್ಸ್ಗಳ ನೆರವಿನಿಂದ ಭಾರತ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ 307 ರನ್ಗಳನ್ನು ಪೇರಿಸಿತು.
ಈ ಮೂಲಕ ಎದುರಾಳಿ ತಂಡದ ಗೆಲುವಿಗೆ 323 ರನ್ ನಿಗದಿಪಡಿಸಿತು. ಆಸೀಸ್ ಪರ ನಥನ್ ಲಯನ್ ಆರು ವಿಕೆಟುಗಳನ್ನು ಕಬಳಿಸಿದ್ದರು.ಭಾರತದ ಕರಾರುವಕ್ ದಾಳಿಗೆ ಕುಸಿದ ಕಂಡಿದ್ದ ಆಸೀಸ್ ಟ್ರಾವಿಸ್ ಹೆಡ್ ಅರ್ಧಶತಕದ (72) ಹೊರತಾಗಿಯೂ ತನ್ನ ಪ್ರಥಮ ಇನ್ನಿಂಗ್ಸ್ನಲ್ಲಿ 235 ರನ್ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು.