Home Crime ಆಸ್ತಿಗಾಗಿ ಜೀವನ ಕೊಟ್ಟ ತಂದೆಗೇ ಚಿತ್ರಹಿಂಸೆ,ಮಕ್ಕಳಿಗೆ ಸಹಕರಿಸಿದ ತಾಯಿ..?! ತಂದೆಯನ್ನೇ ಕಿಡ್ನಾಪ್ ಮಾಡಿ ಖಾಲಿ ಪೇಪರ್‌ಗಳಿಗೆ...

ಆಸ್ತಿಗಾಗಿ ಜೀವನ ಕೊಟ್ಟ ತಂದೆಗೇ ಚಿತ್ರಹಿಂಸೆ,ಮಕ್ಕಳಿಗೆ ಸಹಕರಿಸಿದ ತಾಯಿ..?! ತಂದೆಯನ್ನೇ ಕಿಡ್ನಾಪ್ ಮಾಡಿ ಖಾಲಿ ಪೇಪರ್‌ಗಳಿಗೆ ಸಹಿ ಹಾಕುವಂತೆ ಮಕ್ಕಳು ಮಾಡಿದ್ರು ಟಾರ್ಚರ್…

367
0
SHARE

ಆಸ್ತಿ ತಮ್ಮ ಹೆಸರಿಗೆ ಆದ ಕೂಡಲೇ ಮಕ್ಕಳು ವಯಸ್ಸಾದ ತಂದೆ ತಾಯಿಗಳನ್ನ ವೃದ್ದಾಶ್ರಮಕ್ಕೆ ಸೇರಿಸುವವರನ್ನ ನೋಡಿದ್ದೀರಾ ಅಂತದೇ ಸ್ಟೋರಿಯೊಂದು ಇಲ್ಲಿ ನಡೆದಿದೆ.. ಆದ್ರೆ ಈ ಸ್ಟೋರಿಯಲ್ಲಿ ಮಕ್ಕಳು ವೃದ್ಧಾಶ್ರಮಕ್ಕೆ ಸೇರಿಸುವ ಬದಲು, ತಂದೆಯನ್ನ ಕಿಡ್ನ್ಯಾಪ್ ಮಾಡಿ ಆಸ್ತಿಗಾಗಿ ಸಾಯೋಹಾಗೆ ಹಲ್ಲೆ ಮಾಡಿದ್ದಾರೆ.

ಮಕ್ಕಳ ಈ ಕೃತ್ಯಕ್ಕೆ ಆತನ ಹೆಂಡತಿಯೂ ಸಹ ಕೈ ಜೋಡಿಸಿದ್ದಾಳೆ.ರಕ್ತದಿಂದ ಹೆಪ್ಪುಗಟ್ಟಿದ ಕಣ್ಣುಗಳು, ಮೈ ತುಂಬಾ ಕೆಂಪು‌ ಕೆಂಪಾದ ಬಾಸುಂಡೆಗಳು ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಆಸ್ಪತ್ರೆ ‌ಪಾಲಾಗಿರೋ ಈತನ ಹೆಸ್ರು ರಾಮಚಂದ್ರ. ವೃತ್ತಿಯಲ್ಲಿ ಲಗೇಜ್ ಆಟೊ ಡ್ರೈವರ್. ಇಷ್ಟಕ್ಕೂ ಈತನ ಮೇಲೆ ಈ ರೀತಿ ಅಮಾನವೀಯವಾಗಿ ಹಲ್ಲೆ ಮಾಡಿರೋರು ಬೇರೆ ಯಾರು ಅಲ್ಲ, ಸ್ವಂತ ಈತನ ರಕ್ತ ಹಂಚಿಕೊಂಡು ಹುಟ್ಟಿದ ಈತನ ಮಕ್ಕಳು.

ಈ ಅಮಾನವೀಯ ಕೃತ್ಯಕ್ಕೆ ಈತನ ಪತ್ನಿಯೂ ಸಹ ಸಹಕರಿಸಿದ್ದಾಳೆ. ಕಿತ್ತಗಾನಹಳ್ಳಿಯಲ್ಲಿ ರಾಮಚಂದ್ರರಿಗೆ ಸೇರಿದ ಕಟ್ಟಡವೊಂದಿದೆ. ಪ್ರತಿ ತಿಂಗಳು ಐವತ್ತು ಸಾವಿರ ಬಾಡಿಗೆ ಬರುತ್ತಿತ್ತು. ಈ ಬಾಡಿಗೆ ಹಣವನ್ನ ರಾಂಚಂದ್ರನ ಮಕ್ಕಳಾದ ಅಭಿಷೇಕ್ ಹಾಗೂ ಚೇತನ್ ಇಷ್ಟ ಬಂದಂಗೆ ಖರ್ಚು ಮಾಡಿ ಮಜಾ ಮಾಡುತ್ತಿದ್ರಂತೆ. ಇನ್ನ ಪತ್ನಿ ಮುನಿರತ್ನಮ್ಮ ಜೊತೆ ಕೆಲ ವರ್ಷಗಳ ಹಿಂದೆ ಕೌಟುಂಬಿಕ ಕಲಹ ಉಂಟಾಗಿ, ರಾಮಚಂದ್ರ ಪ್ರತ್ಯೇಕವಾಗಿ ವಾಸಮಾಡ್ತಿದ್ರು.

ಇದರಿಂದಾಗಿ ಮಕ್ಕಳಿಗೆ ಮನೆ ಬಾಡಿಗೆ ಬರೋದು ಸಹ ನಿಂತಿತ್ತು. ಇದೇ ಕೋಪಕ್ಕೆ ಕಳೆದ 5ನೇ ತಾರೀಖು ರಾಮಚಂದ್ರನ ಮಕ್ಕಳು ಅವರದೇ ಆಟೋದಲ್ಲಿ ಕಿಡ್ನ್ಯಾಪ್ ಮಾಡಿದ್ದಾರೆ. ನಂತರ ಬೊಮ್ಮಸಂದ್ರದ ಬಳಿಯಿರುವ, ಕಿತ್ತಗಾನಹಳ್ಳಿಯ ರೂಮ್ ಒಂದರಲ್ಲಿ ಮೂರು ದಿನಗಳ ಕಾಲ ಕೂಡಿ ಆಸ್ತಿಪತ್ರಕ್ಕೆ ಸಹಿ ಸಹಿಹಾಕು ಇಲ್ಲದೇ ಹೋದಲ್ಲಿ ಸಾಯಿಸಿಬಿಡುವುದಾಗಿ ಹೇಳಿ ರಾಡ್ ನಿಂದ ಮನಸ್ಸೊ ಇಚ್ಚೆ ಥಳಿಸಿದ್ದಾರೆ.

ಇನ್ನ ಕಿಡ್ನಾಪ್ ಮಾಡಿ ಹಲ್ಲೆ ಮಾಡೋ ಕೃತ್ಯಕ್ಕೆ ರಾಮಚಂದ್ರರ ಹೆಂಡತಿ ಹಾಗೂ ಬಾಮೈದ ಶಿವಕುಮಾರ್ ಸಹ ಕೈ ಜೋಡಿಸಿದ್ದಾನೆ. ರಾಮಚಂದ್ರು ತಪ್ಪಿಸಿಕೊಂಡು ಹೊರಹೋಗದಂತೆ ನೋಡಿಕೊಂಡಿದ್ದಾನೆ. ಹಲ್ಲೆಗೊಳಗಾದ ರಾಮಚಂದ್ರರ ಆಟೋ ಕಿತ್ತಗಾನಹಳ್ಳಿಯ ಮನೆಯೊಂದರ ಮುಂದೆ ನಿಂತಿದ್ದು, ವ್ಯಕ್ತಿಯೊಬ್ಬ ಕಿರುಚಾಡೋ ಶಬ್ದ ಕೇಳಿ ಬಂದಿದೆ. ಇದನ್ನ ಗಮನಿಸಿದ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಎಚ್ಚೆತ್ತುಕೊಂಡ ಪೊಲೀಸ್ರು ರಾಮಚಂದ್ರರನ್ನ ರಕ್ಷಿಸಿ, ಪತ್ನಿ ಮುನಿರತ್ನಮ್ಮ ಮಕ್ಕಳಾದ ಅಭಿಷೇಕ್, ಚೇತನ್ ಸೇರಿ ಕೃತ್ಯಕ್ಕೆ ಸಹಕರಿಸಿದ ಆತನ ಬಾಮೈದ ಶಿವಕುಮಾರ ನನ್ನ ಬಂಧಿಸಿದ್ದಾರೆ.ಸದ್ಯ ರಾಮಚಂದ್ರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದ್ರೆ ಆಸ್ತಿಯ ಆಸೆಗೆ ಬಿದ್ದ ಹೆಂಡತಿ ಮಕ್ಕಳು ಕುಟುಂಬದ ಬೆನ್ನೆಲುಬಾಗಿದ್ದ‌ ತಂದೆ‌ಯ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿರುವುದು ವಿಪರ್ಯಾಸವೇ ಸರಿ.

LEAVE A REPLY

Please enter your comment!
Please enter your name here