Home Crime ಆಸ್ತಿ ವಿಚಾರಕ್ಕಾಗಿ ತಂದೆ ಕಣ್ಣನ್ನೇ ಕಿತ್ತ ಕೀಚಕ ಮಗ..!? ಹಣ, ಆಸ್ತಿ, ಎಂಥ ಕೆಲಸವನ್ನಾದ್ರೂ ಮಾಡಿಸುತ್ತದೆ...

ಆಸ್ತಿ ವಿಚಾರಕ್ಕಾಗಿ ತಂದೆ ಕಣ್ಣನ್ನೇ ಕಿತ್ತ ಕೀಚಕ ಮಗ..!? ಹಣ, ಆಸ್ತಿ, ಎಂಥ ಕೆಲಸವನ್ನಾದ್ರೂ ಮಾಡಿಸುತ್ತದೆ ಎಂಬುದಕ್ಕೆ ಈ ಸ್ಟೋರಿ ನಿದರ್ಶನ..!!

2250
0
SHARE

ಆ ದಂಪತಿದೆ ಅವ್ನು ಮುದ್ದಾದ ಮಗ. ಆತನ ಬಗ್ಗೆ ಅವ್ರು ಮಹದಾಸೆ ಕಂಡಿದ್ರು. ಆದ್ರೆ, ಅದಕ್ಕೆ ಎಳ್ಳುನೀರ್ ಬಿಟ್ಟ ಆ ಕುಡಿ ಹುಡುಗಿಯರ ಶೋಕಿಗೆ ಬಿದ್ದು ಹಾಳಾಗಿದ್ದ. ಶೋಕಿಗಾಗಿ ಇರೋ ಬರೋ ಆಸ್ತಿಯನ್ನ ಬಡೆದು ಬಾಯಿಗೆ ಹಾಕಿಕೊಂಡಿದ್ದಲ್ಲದೇ ಮತ್ತಷ್ಟು ಆಸ್ತಿ ಬೇಕು ಅಂತ ಅಪ್ಪನ ಹೆಗಲೇರಿದ್ದ ಆ ಪಾಪಿ ಪುತ್ರ ಇಂದು ಜನ್ಮಕೊಟ್ಟ ತಂದೆಯ ಕಣ್ಣುಗಳನ್ನೆ ಕಿತ್ತಾಕಿ ಕ್ರೌರ್ಯ ಮೆರೆದಿದ್ದಾನೆ…

ಆಸ್ತಿ, ಹಣಕ್ಕಾಗಿ ದಾಯಾದಿಗಳವು ಕಿತ್ತಾಡೋದನ್ನ ನೋಡಿದ್ದೀವಿ. ಸೋದರ ಸೋದರಿಯರು ಕಿತ್ತಾಡೋದನ್ನು ನೋಡಿದ್ದೀವಿ. ಅವೆಲ್ಲವು ತಂದೆ ಸತ್ತ ನಂತರ ನಡೆಯೋ ಕಾಮನ್ ಕಿತ್ತಾಟ. ಆದ್ರೆ, ಇಲ್ಲೊಬ್ಬ ಗಾಂಜಾ ನಿಶೆಯಲ್ಲಿ ಜನ್ಮ ಕೊಟ್ಟ ಅಪ್ಪನ ಕಣ್ಣನ್ನೇ ಕಿತ್ತು ಶಾಶ್ವತವಾಗಿ ಕುರುಡನನ್ನಾಗಿ ಮಾಡಿದ್ದಾನೆ. ಅವ್ನೇ ಈ ಪಾಪಿ ಪುತ್ರ ಚೇತನ್ ಅಭಿಷೇಕ್…

ಪುತ್ರನ ಹೇಯ ಕೃತ್ಯಕ್ಕೆ ಕಣ್ಣುಗಳನ್ನ ಕಳೆದುಕೊಂಡ್ ರಕ್ತ ಸೋರಿಸುತ್ತ ಹೆಜ್ಜೆ ಹಾಕ್ತಿರೋ ಈತಚನ ಹೆಸ್ರು ಪರಮೇಶ್. ಶಾಕಾಂಬರಿನಗರದ ನಿವಾಸಿ. ಇವ್ರಿಗೆ ಚೇತನ್ ಅಭಿಷೇಕ್ ಎರಡನೇ ಮುದ್ದು ಬಿಡ್ಡ. ಚೆನ್ನಾಗಿ ಓದಿಸಿ, ಒಳ್ಳೆ ಸ್ಥಾನಕ್ಕೆ ಕರೆದೊಯ್ಬೇಕೆಂದುಕೊಂಡಿದ್ದ ಪರಮೇಶ್ ದಂಪತಿಯ ಆಸೆಗೆ ಎಳ್ಳುನೀರು ಬಿಟ್ಟಿದ್ದ ಈ ಚೇತನ್ ಹುಡುಗಿಯರ ಶೋಕಿಗೆ ಬಿದ್ದಿದ್ದ…

ಕೆಲ್ಸಕ್ಕೊಗಿಕೊಂಡ್ ಪಬ್, ಡಿಸ್ಕೋತೆಕ್ ಅಂತ ಫಾರಿನ್ ಫಿಗರ್ ಗಳಿಂದ ಬಿದ್ದಿದ್ದ ಈ ಶೋಕಿಲಾಲ ಚೇತನ್ ನ್ ಟಾರ್ಚರ್ ತಡೆಯಲಾಗದೇ ಹಾಸಿಗೆ ಹಿಡಿದಿದ್ದ ಆತನ ತಾಯಿ ಒಂದ್ ತಿಂಗಳ ಹಿಂದೆಯಷ್ಟೇ ಇಹಲೋಕ ತ್ಯಜಿಸಿದ್ಲು. ನಾಳೆ ಆಕೆಯ ತಿಂಗಳ ಕಾರ್ಯವು ಇತ್ತು. ಅದ್ರ ಬಗ್ಗೆ ತಲೆಕೆಡಿಸಿಕೊಳ್ಳದೇ ಸದಾ ಗಾಂಜಾ ಗಮ್ಮತ್ತಿನಲ್ಲೆ ಇರ್ತಿದ್ದ ಚೇತನ್ ಇವತ್ತು ಅದ್ಯಾವ್ ಹುಡುಗಿಗೆ ಅಪಾಂಟ್ಮೆಂಟ್ ಕೊಟ್ಟಿದ್ನೋ ಗೊತ್ತಿಲ್ಲ…

ಹುಡುಗಿಯನ್ನ ಮಿಟ್ ಮಾಡ್ಬೇಕು ನನಗೆ ದುಡ್ ಬೇಕು ಅಂತ ನಿಶೆಯಲ್ಲಿ ಮನೆಗೆ ಬಂದು ತಂದೆ ಪರಮೇಶ್ ರೊಂದಿಗೆ ಜಗಳ ತೆಗೆದಿದ್ದಾನೆ. ಆ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ನಿಶೆಯಲ್ಲಿದ್ದ ಚೇತನ್ ಏಕಾಏಕಿ ಪರಮೇಶ್ ಮೇಲೆ ಎರಗಿ ತನ್ನ ಬಳಿ ಇದ್ದ ಕಾರ್ ಕೀಯಲ್ಲಿ ಕಣ್ಣುಗಳನ್ನ ಮೀಟಿ ಕಿತ್ತೆಸೆದಿದ್ದಾನೆ…

ಆ ವೇಳೆ ಮನೆಯಿಂದ ಕೇಳಿ ಬಂದ ಕೀರಾಟ ಕೇಳಿ ಪರಮೇಶ್ ಪುತ್ರಿ, ಅಳಿಯ ಓಡಿ ಬಂದಿದ್ದು ಚೇತನ್ ನನ್ನ ಹಿಡಿದು ಪೊಲೀಸ್ರಿಗೆ ಮಾಹಿತಿ ನೀಡಿದ್ದಾರೆ.ಸದ್ಯ ಆರೋಪಿ ಚೇತನ್ ಅಭಿಷೇಕ್ ನನ್ನ ವಶಕ್ಕೆ ಪಡೆದಿರೋ ಜೆ.ಪಿ.ನಗರ ಚೇತನ್ ತಲೆ ಏರಿದ್ದ ನಶೆ ಇಳಿಸಿದ್ದು, ತನಿಖೆ ಕೈಗೊಂಡಿದ್ದಾರೆ. ಆದ್ರೆ, ಜನ್ಮ ನೀಡಿ ಜಗತ್ತನ್ನ ನೋಡೋದಕ್ಕೆ ತನ್ನ ಸರ್ವಸ್ವವನ್ನೆ ಧಾರೆಯರೆದಿದ್ದ ತಂದೆಯ ಕಣ್ಣು ಕಿತ್ತ ಇಂತಹ ಮಕ್ಕಳು ಬೇಕಾ ಅನ್ನೋದೆ ನಮ್ಮ ಪ್ರಶ್ನೇ…

LEAVE A REPLY

Please enter your comment!
Please enter your name here