Home Cinema ಆ್ಯಂಡಿ ವಿರುದ್ದ ಕವಿತಾಗೌಡ ಮಹಿಳಾ ಆಯೋಗಕ್ಕೆ ದೂರು..! ಆ್ಯಂಡಿಗೆ ಬಿಗ್ ಪ್ರಾಬ್ಲಂ ಆಗುತ್ತಾ ಕವಿತಾ ಮಾಡಿರುವ...

ಆ್ಯಂಡಿ ವಿರುದ್ದ ಕವಿತಾಗೌಡ ಮಹಿಳಾ ಆಯೋಗಕ್ಕೆ ದೂರು..! ಆ್ಯಂಡಿಗೆ ಬಿಗ್ ಪ್ರಾಬ್ಲಂ ಆಗುತ್ತಾ ಕವಿತಾ ಮಾಡಿರುವ ದೂರು..!

915
0
SHARE

ಬಿಗ್‌ಬಾಸ್ ಕಿರುತೆರೆಯ ಜಗತ್ತಿನ ಫೇಮಸ್ ರಿಯಾಲಿಟಿ ಶೋ. ಕಾರ್ಯಕ್ರಮದ ಮೂಲಕ ಭರಫೂರ ಮನೋರಂಜನೆ ನೀಡುವ ಬಿಗ್‌ಬಾಸ್ ಸದ್ಯ ಶೋ ಹೊರತಾಗಿ ಮತ್ತೆ ಸುದ್ದಿ ಅಂಗಳಕ್ಕೆ ಬಂದಿದೆ.

ಬಿಗ್‌ಮನೆಯಲ್ಲಿ ಆ್ಯಂಡಿ ಹಾಡಿದ್ದ ಮಾತಿನ ಪ್ರಹಾರಕ್ಕೆ ಕವಿತಾ ಬೇಸತ್ತಿದ್ದಾರೆ. ಅದೇನಪ್ಪ ಮತ್ತೆ ಬಿಗ್‌ಬಾಸ್ ರಂಪಾಟ ಅಂತೀರಾ….? ಬಿಗ್ ಬಾಸ್ 6ನೇ ಆವೃತ್ತಿ ಮುಗಿದು ಎಲ್ಲರೂ ಮನೇಲಿ ಮೋಜು ಮಸ್ತಿ ಮಾಡಿದ್ರೆ ಇವ್ರು ಮಾತ್ರ ದೂರು ದುಮ್ಮಾನ ಅಂತಾ ಓಡಾಡುತ್ತಿದ್ದಾರೆ. ಬಿಗ್ ಬಾಸ್‌ನಲ್ಲಿ ಸ್ಪರ್ಧಿಯಾಗಿದ್ದ ಕವಿತಾ ಇದೀಗ ಪ್ರತಿಸ್ಪರ್ಧಿ ಆ್ಯಂಡಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನನ್ನನ್ನು ವೈಯಕ್ತಿಕವಾಗಿ ಟಾರ್ಗೇಟ್ ಮಾಡಿದ್ದಾರೆ.

ಅಲ್ಲದೇ, ದೈಹಿಕವಾಗಿ ಮತ್ತು ಮಾನಸಿಕವಾಗಿ ನನಗೆ ತೊಂದರೆ ನೀಡಿದ್ದಾರೆ ಎಂದು ಆರೋಪಿಸಿ ಮಹಿಳಾ ಆಯೋಗಕ್ಕೆ ದೂರು ನೀಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ಬಿಗ್ ಬಾಸ್ ಆಯೋಜಕರಾಗಿದ್ದ ಗುರುದಾಸ್ ಶಣೈರನ್ನು ಕರೆದು ವಿಚಾರಿಸುವಂತೆ ಮನವಿಮಾಡಿದ್ದಾರೆ.ಈ ಬಗ್ಗೆ ಪ್ರತ್ರಿಕ್ರಿಯಿಸಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ, ಕವಿತಾ ನೀಡಿರುವ ದೂರನ್ನ ಪರಿಗಣಿಸಿದ್ದೇನೆ. ಬಿಗ್ ಬಾಸ್ ಮನೆಯಲ್ಲಿ ನಡೆದ ಘಟನೆಯನ್ನ ವಿವರಿಸಿದ್ದಾರೆ.

ಇಬ್ಬರನ್ನ ಕರೆದು ಸಮಾಲೋಚನೆ ನಡೆಸುತ್ತೇನೆ ಎಂದರು. ಘಟನೆ ಬಗ್ಗೆ ಸಂಪೂರ್ಣವಾಗಿ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ರು.. ಇದೇ ವಿಚಾರವಾಗಿ ಬಿಗ್ ಬಾಸ್ ಪ್ರತಿ ಸ್ಪರ್ಧಿ ಮುರುಳಿ ಮಾತನಾಡಿ, ಆ್ಯಂಡಿ ಪರ ಬ್ಯಾಟಿಂಗ್ ಬೀಸಿದ್ದಾರೆ. ಆ್ಯಂಡಿ ಗೆಲ್ಲೋ ಆಕಾಂಕ್ಷಿಯಾಗಿ ಆಟ ಆಡಿದ್ದಾರೆ. ಆತ ಓದಿರುವ ಹುಡುಗ, ಬುದ್ಧಿವಂತ ಜೀವನದಲ್ಲಿ ಹಲವು ಕಷ್ಟ -ಸುಖಃಗಳನ್ನ ನೋಡಿದ್ದಾರೆ. ಯಾರನ್ನು ಟಾರ್ಗೇಟ್ ಉದ್ದೇಶ ಆ್ಯಂಡಿಗಿಲ್ಲ ಎಂದು ತಿಳಿಸಿದ್ರು..

ಅದೇನೇ ಇದ್ರು.. ಬಿಗ್‌ಬಾಸ್ ಕಾರ್ಯಕ್ರಮ ಮುಗಿದ ನಂತರ ಜಾಲಿ ಮೂಡಲ್ಲಿ ಇರಬೇಕಿದ್ದ ಸ್ಪರ್ಧಿಗಳು ಟೆನ್ಷನ್‌ನಲ್ಲಿ ಕಾಲ ಕಳೆಯುತ್ತಿರುವುದು ಬಿಗ್‌ಬಾಸ್ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.

LEAVE A REPLY

Please enter your comment!
Please enter your name here