Home Crime ಆ ಉದ್ಯಮಿಗೆ ಆಗಾಗ ಕಾಡ್ತಿತ್ತು ಸಣ್ಣ ಗ್ಯಾಸ್ಟ್ರಿಕ್ .. ಚಿಕಿತ್ಸೆಗೆ ಹೋದವನಿಗೆ ಹಣಕ್ಕಾಗಿ ಆವೈದ್ಯ ಹಾಕಿದ್ದ...

ಆ ಉದ್ಯಮಿಗೆ ಆಗಾಗ ಕಾಡ್ತಿತ್ತು ಸಣ್ಣ ಗ್ಯಾಸ್ಟ್ರಿಕ್ .. ಚಿಕಿತ್ಸೆಗೆ ಹೋದವನಿಗೆ ಹಣಕ್ಕಾಗಿ ಆವೈದ್ಯ ಹಾಕಿದ್ದ ಹೊಟ್ಟೆಗೆ ಕತ್ತರಿ.. ಕಾಸಿಗಾಗಿ ವೈದ್ಯ ಧರ್ಮವನ್ನೇ ಮರೆತ ನರರಾಕ್ಷಸ..! ಡಾಕ್ಟರ್ ಸರ್ಜರಿ AND ಭರ್ಜರಿ..!

4964
0
SHARE

ಮನುಷ್ಯ ಇವತ್ತು ಎರಡೇ ಸ್ಥಳಕ್ಕೆ ಮತ್ತೆ ಮತ್ತೆ ಹೋಗ್ತಿರೋದು. ಒಂದು ಆಸ್ಪತ್ರೆ, ಇನ್ನೊಂದು ದೇವಸ್ಥಾನ ಇಲ್ಲಿಗೆ ಹೋದ್ರೆ ನಮ್ಮ ಸಮಸ್ಯೆಗಳು ಕಡಿಮೆಯಾಗುತ್ತೆ ಬದುಕೋದಕ್ಕೆ ಒಂದು ಭರವಸೆ ಸಿಗುತ್ತೆ ಅನ್ನೋದು ನಂಬಿಕೆ. ಹೀಗಾಗಿಯೇ ಆಸ್ಪತ್ರೆ  ಮತ್ತು ದೇವಸ್ಥಾನದಲ್ಲಿ ಜನ ತುಂಬಿ ತುಳುಕೋದನ್ನ ನಾವು ನೋಡಬಹುದು.

ಆದ್ರೆ ಇವತ್ತಿನ ಪರಿಸ್ಥಿತಿ ಸ್ಥಿತಿಯೇ ಬೇರೆಯಾಗಿದೆ. ಆಸ್ಪತ್ರೆಗಳು ಆಸ್ಪತ್ರೆಗಳಾಗಿ ಉಳಿದಿಲ್ಲ. ಡಾಕ್ಟರ್ ಗಳು ಯಾರ ಕಣ್ಣಿಗೂ ದೇವರಾಗಿ ಕಾಣಿಸೋದಿಲ್ಲ. ಯಾಕಂದ್ರೆ ವೈದ್ಯ ಧರ್ಮ ಅನ್ನೋದು ಕಮರ್ಷಿಯಲ್ ಆಗಿ ಹೋಗಿರೋದು. ಅದ್ರಲ್ಲೂ ಭಾರತದಂತಹ ದೇಶದಲ್ಲಿ ವೈದ್ಯ ವೃತ್ತಿ ಮತ್ತು ಪರಂಪರೆ ಇರೋ ದೇಶದಲ್ಲಿ ಇದೊಂದು ವೈತ್ತಿ  ಬೇರೆಲ್ಲದಕ್ಕಿಂತ ಭಿನ್ನವಾಗಿರಬೇಕಿತ್ತು. ಆಸ್ಪತ್ರೆ ಮತ್ತು ವೈದ್ಯರು ಇವತ್ತಿಗೂ ಪೂಜ್ಯನೀಯ ಸ್ಥಾನದಲ್ಲಿರಬೇಕಿತ್ತು. ಆದ್ರೆ ಇವತ್ತು ಹಾಗೆ ಆಗ್ತಿಲ್ಲ. ಯಾಕಂದ್ರೆ ಎಲ್ಲವೂ ಪಕ್ಕ ಕಮರ್ಷಿಯಲ್. ಇವತ್ತು ನಮ್ಮ ಬೆಂಗಳೂರಲ್ಲೇ ಖಾಸಗಿ ಆಸ್ಪತ್ರೆಗಳು ನಾಯಿಕೊಡೆಗಳಂತೆ ಎಲ್ಲಿ ಬೇಕಂದ್ರೆ ಅಲ್ಲಿ ಸಿಗುತ್ತವೆ. ನಮ್ಮ ಸರ್ಕಾರಿ ಆಸ್ಪತ್ರೆಗಳಲ್ಲಿ ವಿಕ್ಸ್ ಆಕ್ಷನ್ 500,ಪ್ಯಾರಸೆಟಮಲ್ ಮಾತ್ರೆಗಳು ಬಿಟ್ರೆ ಬೇರೆ ಸಿಗೋದಿಲ್ಲ. ಆದ್ರೆ ಇದೇ ರಾಜಕಾರಣಿಗಳ ಆಸ್ಪತ್ರೆಗಳಲ್ಲಿ ಎಲ್ಲವೂ ಸಿಗುತ್ತೆ.

ಜ್ವರ ಅಂತ ಇವತ್ತು ಆಸ್ಪತ್ರೆಗೆ ಹೋದ್ರು ಇಡೀ ದೇಹವನ್ನ ಸ್ಕ್ಯಾನ್ ಮಾಡಿಸಿ, ಎಕ್ಸ್ ರೇ ತೆಗೆಸಿ ಅಂತ ಹೇಳ್ತಾರೆ. ಅಂದ್ರೆ ಅವರೆಷ್ಟು ಕಮರ್ಷಿಯಲ್ ಆಗಿದ್ದಾರೆ ಅನ್ನೋದು ಗೊತ್ತಲ್ವಾ. ಇನ್ನು ವೈದ್ಯರು ಜನರ ದುಡ್ಡು ಖಾಲಿಯಾಗೋವರೆಗೂ ಅವರನ್ನ ಬಿಡೋದೆ ಇಲ್ಲ. ಯಾಕೆ ನಾವಿಷ್ಟು ಡಾಕ್ಟರ್ ಮತ್ತು ಆಸ್ಪತ್ರೆಗಳ ಬಗ್ಗೆ ಇಷ್ಟೊಂದು ಹೇಳ್ತಿದ್ದೀವಿ ಅಂದ್ರೆ ಇಲ್ಲೊಬ್ಬ ವ್ಯಕ್ತಿಯ ಜೊತೆ ಡಾಕ್ಟರ್ ರಾಕ್ಷಸನಂತೆ ವರ್ತಿಸಿದ್ದಾನೆ. ಸಣ್ಣ ಸಮಸ್ಯೆಯಂತ ವೈದ್ಯನ ಹತ್ತಿರ ಹೋಗಿದ್ದಕ್ಕೆ ಇವತ್ತು ಬದುಕೋದಕ್ಕೆ ಆಗದೆ ಅತ್ತ ಸಾಯೋದಕ್ಕೆ ಆಗದೆ ಒದ್ದಾಡ್ತಿದ್ದಾರೆ. ಹಣದ ಆಸೆಗಾಗಿ ಆತ ಉದ್ಯಮಿಗೆ ಜೀವದ ಮೇಲೆಯೇ ಜಿಗುಪ್ಸೆ ಬರೆಸಿದ್ದಾನೆ.

ಇವ್ರು ಥಾಮಸ್ ಅಂತ, ಬೆಂಗಳೂರಿನಲ್ಲಿ ಒಂದಷ್ಟು ಉದ್ಯಮವನ್ನ ನಡೆಸ್ತಿದ್ದಾರೆ. ಇವ್ರಿಗೆ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸಣ್ಣದಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಂಡಿತ್ತು. ಬ್ಯುಸಿನೆಸ್ ಅನ್ನೋ ಕಾರಣಕ್ಕೆ ನಾಲ್ಕಾರು ದೇಶ ಸುತ್ತುತ್ತಿದ್ರು. ಈ ವೇಳೆ ಊಟದ ವಿಚಾರದಲ್ಲಿ ಹೆಚ್ಚು ಕಡಿಮೆಯಾದ ಕಾರಣ ಅವ್ರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಇವ್ರು ತಿಲಕ್ ನಗರದಲ್ಲಿರೋ ಸಾಗರ್ ಆಸ್ಪತ್ರೆಗೆ ಹೋಗಿ ಅಲ್ಲಿ ರವಿಶಂಕರ್ ಅನ್ನೋ ವ್ಯಕ್ತಿಯನ್ನ ಮೀಟ್ ಮಾಡಿದ್ರು. ಡಾಕ್ಟ್ರೇ ನನಗೆ ಸಣ್ಣದಾಗಿ ಗ್ಯಾಸ್ಟ್ರಿಕ್ ಪ್ರಾಬ್ಲಂ ಇದೆ ಅಂತ ತಮಗಿರೋ ಖಾಯಿಲೆಯ ಬಗ್ಗೆ ಹೇಳಿದ್ರು. ಥಾಮಸ್ ಹೇಳಿದ ಖಾಯಿಲೆಯನ್ನ ಕೇಳಿ ಡಾ.ರವಿಶಂಕರ್ ಒಮ್ಮೆ ಚೆಕ್ ಮಾಡಿದ್ರು. ನಂತ್ರ ಇದಕ್ಕೆ ನೀವು ಸಣ್ಣದಾಗಿ ಆಪರೇಷನ್ ಮಾಡಿಸಿಕೊಳ್ಳಬೇಕು ಅಂತ ಹೇಳಿದ್ರು. ಇದನ್ನ ಕೇಳಿ ಅವ್ರು ಶಾಕ್ ಆಗಿದ್ರು. ಗ್ಯಾಸ್ಟ್ರಿಕ್ ಗೆ ಯಾಕೆ ಆಪರೇಷನ್ ಅನ್ನೋದು ಅವರಿಗೆ ಅರ್ಥವಾಗಲಿಲ್ಲ.

ಅಲ್ಲದೆ ಮಾತ್ರೆಯಲ್ಲಿ ಹೋಗುವ ಸಮಸ್ಯೆಗೆ ಯಾಕೆ ಇಷ್ಟು ದೊಡ್ಡು ಮಾತು ಹೇಳ್ತಿದ್ದಾರೆ ಅಂತಾನು ಅವ್ರು ಕನ್ ಫ್ಯೂಸ್ ಆಗಿದ್ರ. ಅಲ್ಲದೆ ಹೊಟ್ಟೆಯಲ್ಲಿರೋ ಗ್ಯಾಸ್ಟ್ರಿಕ್ ಗೆ ತಲೆಯಿಂದ ಕಾಲಿನವರೆಗೆ ಅವ್ರು ಸ್ಕ್ಯಾನ್ ಮಾಡಿಸಿ ರಿಪೋರ್ಟ್ ತಗೊಂಡು ಬನ್ನಿ ಅಂತ ಹೇಳಿದ್ರು. ಆ ಡಾಕ್ಟರ್ ಹೇಳಿದ ಮಾತನ್ನ ಕೇಳಿ ಅವ್ರು ಶಾಕ್ ಆಗಿದ್ರು. ಆದ್ರೆ ದೊಡ್ಡ ಡಾಕ್ಟರ್ ಅಲ್ಲದೆ ಸಾಗರ್ ಆಸ್ಪತ್ರೆಯಂತಹ ದೊಡ್ಡ ಆಸ್ಪತ್ರೆಯಲ್ಲಿರೋ ಸರ್ಜರ್ ಆಗಿರೋದ್ರಿಂದ ಅವ್ರು ಹೇಳಿದ ಹಾಗೆ ಕೇಳೋಣ ಅಂತ ಅನಿಸಿತ್ತು. ಅಲ್ಲದೆ ಆರೋಗ್ಯದ ವಿಷಯದಲ್ಲಿ ಯಾಕೆ ನೆಗ್ಲೆಟ್ ಮಾಡೋದು ಅಂತಾನು ಅಂದುಕೊಂಡಿದ್ರು. ಹೀಗಾಗಿ ಡಾಕ್ಟರ್ ಹೇಳಿದ ಹಾಗೆ ಅವ್ರು ಎಲ್ಲಾ ಸ್ಕ್ಯಾನಿಂಗ್ ಅನ್ನ ಮಾಡಿಸಿಕೊಂಡು ಬಂದಿದ್ರು. ಅಲ್ಲದೆ ಸಾಗರ್ ಆಸ್ಪತ್ರೆಯಲ್ಲಿರೋ ಸುಸಜ್ಜಿತ ಲ್ಯಾಬ್ ನಲ್ಲಿ ಸ್ಕ್ಯಾನ್ ಮಾಡಿಸಬೇಡಿ ಅಲ್ಲಿ ರೀಡಿಂಗ್ ಅಕ್ಯುರೇಟ್ ಆಗಿ ಇರೋದಿಲ್ಲ. ನೀನು ನಾನು ಹೇಳಿದ ಲ್ಯಾಬ್ ಗೆ ಅಲ್ಲಿನ ರೀಡಿಂಗ್ ತುಂಬಾನೆ ಅಕ್ಯೂರೇಟ್ ಆಗಿರುತ್ತೆ ಅಂತ ಹೇಳಿ ಕಳುಹಿಸಿದ್ರು. ಹೀಗೆ ಡಾಕ್ಟರ್ ಪೇಶೆಂಟ್ ಒಬ್ಬರ ಜೀವನದ ಜೊತೆ ಚೆಲ್ಲಾಟವಾಡೋದಕ್ಕೆ ಫಸ್ಟ್ ಸ್ಟೆಪ್ ಇಟ್ಟಿದ್ರು.

ಡಾ ರವಿಶಂಕರ್ ನಿಜಕ್ಕೂ ಒಬ್ಬ ಒಳ್ಳೇ ವೈದ್ಯನೇ ಆಗಿದ್ರೆ. ಆತ ತನ್ನ ವೃತ್ತಿ ಧರ್ಮವನ್ನ ಪಾಲನೆ ಮಾಡುವ ಅಧಿಕಾರಿಯೇ ಆಗಿದ್ರೆ ಅವತ್ತು ಅವನು ಥಾಮಸ್ ಅವರಿಗೆ ಒಳ್ಳೇ ಟ್ರೀಟ್ ಮೆಂಟ್ ಕೊಡ್ತಿದ್ದ. ಆದ್ರೆ ಅವರ ಹತ್ತಿರ ದುಡ್ಡು ಕಿತ್ಕೋಬೇಕು ತನ್ನ ಜೇಬು ತುಂಬಿಸಿಕೊಳ್ಳಬೇಕು ಅನ್ನೋ ಕಾರಣಕ್ಕೆ ಆತ ಅವರ ಮೇಲೆ ಪ್ರಯೋಗಗಳನ್ನ ಮಾಡೋದಕ್ಕೆ ಮುಂದಾದ. ಹಾಗೆ ಗ್ಯಾಸ್ಟ್ರಿಕ್ ಅನ್ನೋ ಕಾರಣಕ್ಕೆ ಆತ ಚಿಕ್ಕದೊಂದು ಆಪರೇಷನ್ ಮಾಡಬೇಕು ಅಂತ ಹೇಳಿದ್ದ. ಅದಕ್ಕೆ ಮೊದಲಿಗೆ ಥಾಮಸ್ ಬೇಡ ಅಂತ ಹೇಳಿದ್ರು ಅವ್ರು ಇಲ್ಲಿ ಮಾಡಿಸಿಕೊಳ್ಳಿ ಎಲ್ಲಾ ಒಳ್ಳೆಯದಾಗುತ್ತೆ ಅಂತ ಹೇಳಿದ್ದ. ಅದಕ್ಕೆ ಥಾಮಸ್ ಕೂಡಾ ಒಪ್ಪಿದ್ರು. ಆತ ನಮ್ಮ ಹಾಸ್ಪಿಟಲ್ ನಲ್ಲಿ ಓಟಿ ಫುಲ್ ಆಗಿದೆ ಅದಕ್ಕೆ ನನಗೆ ಗೊತ್ತಿರೋ ಆಸ್ಪತ್ರೆಯಲ್ಲಿ ಓಟಿ ಫ್ರೀಯಿರುತ್ತೆ ಅಲ್ಲೇ ಸರ್ಜರಿ ಮಾಡಿದ್ರೆ ಮುಗಿಯಿತು ಅಂತ ಹೇಳಿದ್ದ.

ಅದಕ್ಕೆ ಥಾಮಸ್ ಕೂಡಾ ಒಪ್ಪಿಕೊಂಡಿದ್ರು. ಅಲ್ಲದೆ ಕೇವಲ 45 ನಿಮಿಷದ ಆಪರೇಷನ್ ಅದು ನಂತ್ರ ಮಾರನೇ ದಿನವೇ ನೀವು ಡಿಸ್ಚಾರ್ಜ್ ಮಾಡ್ಕೊಂಡು ಮನೆಗೆ ಹೋಗಬಹುದು ಅಂತ ಹೇಳಿದ್ದ. ಅಲ್ಲದೆ ಯಾವುದೇ ನೋವು ಕೂಡಾ ಇರೋದಿಲ್ಲ ಅಂತ ಹೇಳಿದ್ದ. ಹೀಗಾಗಿ ಥಾಮಸ್ ಆಪರೇಷನ್ ಮುಗಿಸಿಕೊಂಡು ದುಬೈಗೆ ಬ್ಯುಸಿನೆಸ್ ಮೀಟಿಂಗ್ ಹೋಗುವ ಪ್ಲಾನ್ ಮಾಡ್ಕೊಂಡಿದ್ರು. ಇಷ್ಟಾಗ್ತಿದ್ದ ಹಾಗೆ ಶಾಂತಿ ಆಸ್ಪತ್ರೆಯಲ್ಲಿ ರವಿಶಂಕರ್ ಆತನಿಗೆ ಆರಪೇಷನ್ ಗೆ ರೆಡಿ ಮಾಡ್ಕೊಂಡಿದ್ದ. ಅಲ್ಲದೆ ಇನ್ ಶ್ಯೂರೆನ್ಸ್ ಕ್ಲೈಮ್ ಮಾಡೋದಕ್ಕೆ ಹೋದ್ರೆ ಅದರ ಅಗತ್ಯವಿಲ್ಲ, ಕೇವಲ ಒಂದುವರೆ ಲಕ್ಷ ರೂಪಾಯಿಗೆ ಎಲ್ಲಾ ಮುಗಿದು ಹೋಗುತ್ತೆ ಅಂತ ಹೇಳಿದ್ದ. ಹೀಗಾಗಿ ಇವ್ರು ಧೈರ್ಯ ಮಾಡ್ಕೊಂಡು ಆಪರೇಷನ್ ಗೆ ರೆಡಿಯಾಗಿದ್ರು.

ಇಷ್ಟಾದ ಮೇಲೆ ರವಿಶಂಕರ್ ಮುಕ್ಕಾಲುಗಂಟೆ ಆಪರೇಷನ್ ಅಂತ ಹೇಳಿ ಆತ 4 ಗಂಟೆಯ ಸುದೀರ್ಘ ಆಪರೇಷನ್ ಮಾಡಿದ್ದ. ಅನಸ್ತೇಷಿಯಾ ಕೊಟ್ಟಿದ್ದ ಕಾರಣ ಅವರಿಗೆ ಅದರ ಬಗ್ಗೆ ಗೊತ್ತಾಗಲೇ ಇಲ್ಲ. ಆಪರೇಷನ್ ಮಾಡ್ತಿದ್ದ ಹಾಗೆ ಥಾಮಸ್ ತುಂಬಾನೆ ಬಳಸಿ ಹೋಗಿದ್ರು. ಮಾರನೇ ದಿನ ಅವರನ್ನ ಡಿಸ್ಚಾರ್ಜ್ ಕೂಡಾ ಮಾಡಿದ್ದ. ಆದ್ರೆ ಮನೆಗೆ ಹೋಗ್ತಿದ್ದ ಹಾಗೆ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಅಲ್ಲದೆ ವಿಪರೀತ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ತಮ್ಮ ವ್ಯವಹಾರ ಸಂಬಂಧದ ಎಲ್ಲಾ ಕಾರ್ಯಗಳನ್ನ ಬಿಟ್ಟು ರೆಸ್ಟ್ ಮಾಡೋದಕ್ಕೆ ಶುರುಮಾಡಿದ್ರು. ಆದ್ರೆ ಎರಡು ದಿನಕ್ಕೆ ಅದು ಕಡಿಮೆಯಾಗಲೇ ಇಲ್ಲ. ಹೀಗಾಗಿ ಮತ್ತೆ ಅವ್ರು ಅದೇ ಡಾಕ್ಟರ್ ಅನ್ನ ಮತ್ತೆ ಭೇಟಿ ಮಾಡಿದ್ರು. ಆಗ ಆತನಿಗೆ ತಾನು ಆಪರೇಷನ್ ವೇಳೆ ತಪ್ಪು ಮಾಡಿರೋದು ಇವನಿಗೆ ಗೊತ್ತಾಗಿದೆ ಅಂದುಕೊಂಡಿದ್ದ.

ಅಲ್ಲದೆ ಆಪರೇಷನ್ ವೇಳೆ ನಿಮ್ಮ ಮಗನ ಆಪರೇಷನ್ ತುಂಬಾನೇ ಕಾಂಪ್ಲಿಕೇಟ್ ಆಗಿತ್ತು ಅಂತಾನು ಹೇಳಿದ್ದ. ಹೀಗಾಗಿ ಅವರಿಗೆ ಅನುಮಾನ ಬಂದೆ ಮತ್ತೆ ಆಸ್ಪತ್ರೆಗೆ ಬಂದಿದ್ರು. ಆಸ್ಪತ್ರೆಗೆ ಬಂದು ನೋಡಿದ್ರೆ ಆಪರೇಷನ್ ಮಾಡಿದ ಜಾಗದಲ್ಲಿ ಪಸ್ ತುಂಬಿತ್ತು. ಹೀಗಾಗಿ ಆತ ಅದನ್ನ ಸಿರಿಂಜ್ ನಿಂದ ಕ್ಲೀನ್ ಮಾಡಿ ರೆಡಿ ಮಾಡ್ತೀನಿ ಅಂತ ಹೇಳಿದ್ದ. ಅಲ್ಲದೆ  ಅವರಿಗೆ ಮತ್ತೆ ಅನಸ್ತೇಷಿಯಾ ಕೊಟ್ಟು ಹೊಟ್ಟೆಯ ಕೆಳಭಾಗದಲ್ಲಿ ಮತ್ತೆ ಕೊಯ್ದು ಆಪರೇಷನ್ ಮಾಡಿದ್ದ. ಅಲ್ಲಿಗೆ ಥಾಮಸ್ ಅವರಿಗೆ ಮೊದಲ ಆಪರೇಷನ್ ನಲ್ಲಿ ಯಡವಟ್ಟು ಮಾಡಿದ್ದ ಆತ ಮತ್ತೆ ಇನ್ನೊಂದು ಗಂಡಾಂತರ ತಂದಿಟ್ಟಿದ್ದ. ಎರಡನೇ ಬಾರಿ ಆತ ಏನೋ ಸರಿ ಮಾಡ್ತೀನಿ ಅಂತ ಹೇಳಿದವನು ಅವರ ಪ್ರಾಣ ಹೋಗುವ ಹಂತಕ್ಕೆ ತಂದಿಟ್ಟಿದ್ದ.

ಗ್ಯಾಸ್ಟ್ರಿಕ್ ಗಾಗಿ ರವಿಶಂಕರ್ ಎರಡೆರಡು ಬಾರಿ ಹೊಟ್ಟೆ ಕೊಯ್ದು ಅವ್ರು ಮೇಲೆಳದ ಹಾಗೆ ಮಾಡಿದ್ದ. ನಂತ್ರ ಥಾಮಸ್ ಯುಬಿ ಸಿಟಿಗೆ ಕೆಲಸಕ್ಕೆ ಅಂತ ಬಂದಾಗ ಪ್ರಜ್ಞೆ ತಪ್ಪಿ ಬಿದ್ದಿದ್ರು. ಈ ವೇಳೆ ಅವರ ಸ್ನೇಹಿತರು ಮಲ್ಯ ಆಸ್ಪತ್ರೆಗೆ ದಾಖಲಿಸಿದ್ರು. ಆಗ ಮಲ್ಯ ಆಸ್ಪತ್ರೆಯ ವೈದ್ಯರು ಏನಾಗಿದೆ ಅಂತ ಚೆಕ್ ಮಾಡಿದಾಗ ಅವರಿಗೆ ಆಘಾತ ಕಾದಿತ್ತು. ಯಾಕಂದ್ರೆ ಡಾ ರವಿಶಂಕರ್ ಥಾಮಸ್ ಅವರ ಹೊಟ್ಟೆಯಲ್ಲಿನ ಸೂಕ್ಷ್ಮ ನರಗಳನ್ನ, ರಕ್ತನಾಳಗಳನ್ನ ಕಟ್ ಮಾಡಿ ಹಾಕಿದ್ದ. ಹೀಗಾಗಿ ಒಳಗಡೆಯೇ ರಕ್ತ ಹರಿಯೋದಕ್ಕೆ ಶುರುವಾಗಿತ್ತು. ಅಲ್ಲದೆ ಹೊಟ್ಟೆಯಲ್ಲಿ ಪಸ್ ತುಂಬಿಕೊಂಡಿತ್ತು. ಇದನ್ನ ಪರೀಕ್ಷೆ ಮಾಡಿದ ವೈದ್ಯರು ಇಲ್ಲಿ ಟ್ರೀಟ್ ಮೆಂಟ್ ಕಂಟಿನ್ಯೂ ಮಾಡೋದಕ್ಕೆ ಸಾಧ್ಯವಾಗೋದಿಲ್ಲ. ಹೀಗಾಗಿ ನೀವು ಆಪರೇಷನ್ ಮಾಡಿಸಿದ ಡಾಕ್ಟರ್ ಅನ್ನೇ ಕಾಂಟ್ಯಾಕ್ಟ್ ಮಾಡಿ ಅಂತ ಹೇಳಿದ್ರು.

ಅಲ್ಲದೆ ಅವರ ಬಾಡಿಯಲ್ಲಿ ಏನಾಗಿದೆ ಅನ್ನೋ ರಿಪೋರ್ಟ್ ಕೂಡಾ ಕೊಟ್ಟಿದ್ರು. ತಕ್ಷಣವೇ ಥಾಮಸ್ ಅವರ ತಾಯಿ ಅವರನ್ನ ಕರ್ಕೊಂಡು ನೇರವಾಗಿ ಡಾ ರವಿಶಂಕರ್ ಹತ್ತಿರ ಹೋಗಿದ್ರು. ಅಲ್ಲದೆ ಮಲ್ಯ ಆಸ್ಪತ್ರೆಯ ವೈದ್ಯರು ನೀಡಿದ್ದ ರಿಪೋರ್ಟ್ ಅನ್ನ ಕೂಡಾ ತೋರಿಸಿದ್ರು. ಅದ್ಯಾವಾಗ ಆ ರಿಪೋರ್ಟ್ ನೋಡಿದ್ನೋ ಆಗ ಬೆವರೋದಕ್ಕೆ ಶುರುಮಾಡಿದ. ಯಾಕಂದ್ರೆ ಅವನ ಮಾಡಿದ್ದ ಅವಾಂತರ ಆ ರಿಪೋರ್ಟ್ ನಲ್ಲಿ ಬಯಲಾಗಿ ಹೋಗಿತ್ತು. ಹೀಗಾಗಿ ಈಗ ಏನು ಮಾಡಬೇಕು ಅನ್ನೋದು ಗೊತ್ತಾಗದೆ ತಲೆ ಬಗ್ಗಿಸಿ ನಿಂತಿದ್ದ. ನಂತ್ರ ಆತ ನಮ್ಮ ಸಾಗರ್ ಆಸ್ಪತ್ರೆಯಲ್ಲಿ ನಿಮಗೆ ಟ್ರೀಟ್ ಮೆಂಟ್ ಕೊಡ್ತೀನಿ ಅಂತ ಹೇಳಿ ಅವರಿಗೆ ಸಮಾಧಾನ ಮಾಡಿದ್ದ. ಆದ್ರೆ ಆತ ಮಾಡಿರೋ ಆಪರೇಷನ್ ಅದಾಗ್ಲೇ ಬೇರೆಯದ್ದೇ ತಿರುವು ಪಡೆದುಕೊಂಡಿತ್ತು. ಯಾಕಂದ್ರೆ ಥಾಮಸ್ ಅವರಿಗೆ ಮಲ್ಟಿ ಆರ್ಗನ್ ಫೆಲ್ಯೂರ್ ಆಗಿತ್ತು.

ಅಲ್ಲದೆ ಅಷ್ಟರಲ್ಲಿ 5 ಲಕ್ಷಕ್ಕೂ ಹೆಚ್ಚು ಹಣವನ್ನ ಆತ ಇವ್ರಿಂದ ವಸೂಲಿ ಮಾಡಿಯಾಗಿತ್ತು. ಆದ್ರೆ ಇವನೇ ಮತ್ತೆ ಟ್ರೀಟ್ ಮೆಂಟ್ ಕೊಡ್ತೀನಿ ಅಂತ ಹೇಳಿದಾಗ ಅವ್ರು ಅದಕ್ಕೆ ಒಪ್ಪಲಿಲ್ಲ. ಆರೋಗ್ಯವಾಗಿದ್ದ ಮನುಷ್ಯನನ್ನ ಈಗ ಮತ್ತೆಂದು ಸುಧಾರಿಸಿಕೊಳ್ಳಲಾಗದ ಹಾಗೆ ಮಾಡಿಬಿಟ್ಟಿದ್ದ . ಥಾಮಸ್ ಅವರಿಗೆ ಜೀವ ಉಳಿಸಿಕೊಳ್ಳುವ ಅನಿವಾರ್ಯ ಈಗ ಎದುರಾಗಿತ್ತು. ಆದ್ರೆ ರವಿಶಂಕರ್ ಗೆ ಮಾತ್ರ ಹಣ ಬಂದಾಗಿದೆ ಇನ್ನು ಇವ್ರು ಎಲ್ಲಾದ್ರು ಹೋಗಿ  ಟ್ರೀಟ್ ಮೆಂಟ್ ತೆಗೆದುಕೊಳ್ಳಲಿ ಅಂತ ಉಡಾಫೆಯಾಗಿ ಮಾತನಾಡಿ ಕಳುಹಿಸಿದ್ದ. ಯಾಕಂದ್ರೆ ಅವನಿಗೆ ಸೇರಬೇಕಿದ್ದ ಹಣ ಸೇರಿಯಾಗಿತ್ತು. ಈಗ ಅವ್ರು ಬದುಕಿದ್ರೆ ಎಷ್ಟು ಬಿಟ್ರ ಎಷ್ಟು ಅನ್ನೋದು ಅವನ ನಿಲುವಾಗಿತ್ತು.

ಥಾಮಸ್ ಗೆ ಇನ್ನು ರವಿಶಂಕರ್ ಹತ್ತಿರ ಟ್ರೀಟ್ ಮೆಂಟ್ ತಗೊಂಡ್ರೆ ಬದುಕೋದಿಲ್ಲ ಅಂತ ಗೊತ್ತಾಗಿ ಹೋಗಿತ್ತು. ಅಲ್ಲದೆ ಅವನು ಹೊಟ್ಟೆ ತುಂಬಾ ಕೊಯ್ದು ಹೊಲಿಗೆ ಹಾಕಿ ಇನ್ನು ರಿಪೇರಿ ಮಾಡೋದಕ್ಕೆ ಆಗದಷ್ಟು ಅದ್ವಾನ ಮಾಡಿ ಹಾಕಿದ್ದ. ಹೀಗಾಗಿ ಥಾಮಸ್ ಬೇರೆ ಕಡೆ ಟ್ರೀಟ್ ಮೆಂಟ್ ಗೆ ಟ್ರೈ ಮಾಡಿದ್ರು. ಆದ್ರೆ ಥಾಮಸ್ ಯಾವುದೇ ಆಸ್ಪತ್ರೆಗೆ ಹೋದ್ರು ಅವರ ಸ್ಥಿತಿಯನ್ನ ನೋಡಿ ಟ್ರೀಟ್ ಮೆಂಟ್ ಕಂಟಿನ್ಯೂ ಮಾಡೋ ಮನಸ್ಸನ್ನ ಯಾರು ಮಾಡಲೇ ಇಲ್ಲ. ಯಾಕಂದ್ರೆ ಅವರನ್ನ ಉಳಿಸಿಕೊಳ್ಳೋದು ಈ ಹಂತದಲ್ಲಿ ಸಾಧ್ಯವಿಲ್ಲ ಅನ್ನೋದು ವೈದ್ಯರಿಗೆ ಅನಿಸಿತ್ತು. ಹೀಗಾಗ ಅವ್ರಿಗೆ ಥಾಮಸ್ ಗೆ ಟ್ರೀಟ್ ಮೆಂಟ್ ಕೊಡೋದಕ್ಕೆ ಸಾಧ್ಯವಾಗಲಿಲ್ಲ. ಇತ್ತ ಥಾಮಸ್ ಗೆ ಕೂಡಾ ಏನು ಮಾಡಬೇಕು ಅನ್ನೋದು ಗೊತ್ತಾಗಲಿಲ್ಲ.

ನಂತ್ರ ಥಾಮಸ್ ಮನೆಯವರೆಲ್ಲಾ ಸೇರಿ ಅವರಿಗೆ ವಿದೇಶದಲ್ಲಿ ಚಿಕಿತ್ಸೆ ಕೊಡಿಸೋ ಬಗ್ಗೆ ಯೋಚಿಸಿದ್ರು. ಆದ್ರು ಏನಕ್ಕೂ ಬೆಂಗಳೂರಲ್ಲಿ ಒಮ್ಮೆ ಟ್ರೈ ಮಾಡೋಣ ಅಂತ ತಮ್ಮ ಕಾಂಟ್ಯಾಕ್ಟ್ ಗಳನ್ನ ಉಪಯೋಗಿಸಿ ಅವ್ರು ಒಬ್ಬ ವೈದ್ಯರನ್ನ ಹುಡುಕಿದ್ರು. ಅವ್ರೇ ನಾರಾಯಣ ಆಸ್ಪತ್ರೆಯ ರಾಬೋಟಿಕ್ ಸರ್ಜನ್ ಅಶ್ವಿನ್ ಕುಮಾರ್. ಅವರಿಗೆ ಥಾಮಸ್ ಅವರ ಫೈಲ್ ಅನ್ನ ಕಳಿಸಿ ಚೆಕ್ ಮಾಡಿಸಿದಾಗ ಅವ್ರು ಕೂಡಾ ಬೆಚ್ಚಿ ಬಿದ್ದಿದ್ರು. ಯಾಕಂದ್ರೆ ಅಶ್ವಿನ್ ಗೆ ಟ್ರೀಟ್ ಮೆಂಟ್ ಅನ್ನ ಮತ್ತೆ ಹೊಸದಾಗಿ ಪ್ರಾರಂಭಿಸೋದು ಕಷ್ಟ. ಅಲ್ಲದೆ ಅದು ಲೈಫ್ ರಿಸ್ಕ್ ಅನ್ನೋದು ಗೊತ್ತಾಗಿತ್ತು. ಹೀಗಾಗಿ ಅಶ್ವಿನ್ ಕುಮಾರ್ ಅವರು ಆ ರಿಸ್ಕ್ ಅನ್ನ ತೆಗೆದುಕೊಳ್ಳೋದಕ್ಕೆ ಮುಂದಾಗಲಿಲ್ಲ. ಕೊನೆಗೂ ಥಾಮಸ್ ಅವರ ಮನವಿ ಮೇರೆಗೆ ಅವರನ್ನ ಬದುಕಿಸೋ ಜವಾಬ್ದಾರಿಯನ್ನ ತೆಗೆದುಕೊಂಡ್ರು.

ಅಶ್ವಿನ್ ಕುಮಾರ್ ಅವ್ರು ಸುಮಾರು ಒಂದು ತಿಂಗಳು ಅವರನ್ನ ಐಸಿಯುನಲ್ಲಿ ಇಟ್ಕೊಂಡು ಟ್ರೀಟ್ ಮೆಂಟ್ ಕೊಟ್ಟಿದ್ರು. ಅಲ್ಲದೆ ಅವರು ಮೊದಲಿಗಿಂತ ಸ್ವಲ್ಪ ರಿಕವರಿ ಆಗುವಂತೆ ಮಾಡಿದ್ರು. ಒಂದು ಕಡೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬರ್ತಿದ್ರೆ ಇನ್ನೊಂದು ಕಡೆ ಅವರ ಸಂಪಾದನೆಯಲ್ಲಾ ಕರಗಿ ಹೋಗಿತ್ತು. ಯಾಕಂದ್ರೆ ಅವ್ರು ತಮ್ಮ ಆರೋಗ್ಯಕ್ಕಾಗಿ ಅದಾಗ್ಲೇ 40ಲಕ್ಷ ರೂಪಾಯಿ ಅನ್ನ ಖರ್ಚು ಮಾಡಿದ್ರು. ಆದ್ರೆ ಅವರಿಗೆ ಈಗಲೂ ನಾನು ಮೊದಲಿನಂತೆ ನೆಮ್ಮದಿಯಾಗಿ ಬದುಕ್ತೀನಿ ಅನ್ನೋ ಭರವಸೆಯಿಲ್ಲ. ಅಥವಾ ನಾನು ಬದುಕಿದ್ರು ಇನ್ನು ಕೆಲವೇ ದಿನ ಮಾತ್ರ ಅನ್ನೋದು ಅವರಿಗೆ ಗೊತ್ತಾಗಿ ಹೋಗಿದೆ. ಯಾಕಂದ್ರೆ ರವಿಶಂಕರ್ ಅವರ ನೆಮ್ಮದಿಯ ಬದುಕನ್ನ ಈಗಾಗ್ಲೇ ಕಿತ್ಕೊಂಡಿದ್ದಾರೆ.  ಇನ್ನೇನಿದ್ರು ಅವರು ವೈದ್ಯರು ನೀಡೋ ಟ್ರೀಟ್ ಮೆಂಟ್ ಮೇಲಷ್ಟೇ ದಿನ ಕಳೆಯಬೇಕಿದೆ.

ಇನ್ನೊಂದು ಕಡೆ ಥಾಮಸ್ ವೈದ್ಯ ರವಿಶಂಕರ್ ವಿರುದ್ಧ ಕಾನೂನು ಹೋರಾಟ ಶುರು ಮಾಡಿದ್ದಾರೆ. ಯಾಕಂದ್ರೆ ತನಗಾದ ಅನ್ಯಾಯ ಇನ್ಯಾರಿಗೂ ಆಗಬಾರದು ಅನ್ನೋದು ಅವರ ಅಭಿಪ್ರಾಯ. ಅದಕ್ಕೆ ಥಾಮಸ್ ರವಿಶಂಕರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಠಾಣೆಗೆ ಹೋಗಿ ದೂರು ನೀಡೋದಕ್ಕೆ ಹೋದ್ರೆ ಅಲ್ಲಿ ಪೊಲೀಸ್ರಿಗು ಅಚ್ಚರಿಯಾಗಿತ್ತು. ಯಾಕಂದ್ರೆ ಆತನ ವಿರುದ್ಧ ಈಗಾಲೇ ನಾಲ್ಕು ಕೇಸ್ ಗಳು ದಾಖಲಾಗಿತ್ತು. ಆತ ಇದೇ ರೀತಿಯಾಗಿ ಹಣಕ್ಕಾಗಿ ನಾಲ್ಕು ಜನರ ಪ್ರಾಣದ ಜೊತೆ ಚೆಲ್ಲಾಟವಾಡಿದ್ದ. ಇನ್ನೊಂದು ಕಡೆ ಸಾಗರ್ ಆಸ್ಪತ್ರೆ ಇಂತಹ ನರರೂಪದ ರಾಕ್ಷಸನನ್ನ ಯಮನ ಏಜೆಂಟ್ ನನ್ನ ತನ್ನ ಆಸ್ಪತ್ರೆಯಲ್ಲಿ ಇಟ್ಕೊಂಡು ಸಾಕ್ತಿದೆ.ಆತನ ವಿರುದ್ಧ ಮೊದಲೇ ದೂರು ದಾಖಲಾದಾಗ ಸೂಕ್ತ ಕ್ರಮಕೈಗೊಂಡು ಸಾಗರ್ ಆಸ್ಪತ್ರೆ ಒದ್ದು ಹೊರಗೆ ಹಾಕಬೇಕಿತ್ತು. ಆದ್ರೆ ಸಾಗರ್ ಆಸ್ಪತ್ರೆಯ ಆಡಳಿತ ಮಂಡಳಿಗೆ ಈ ಫೇಕ್ ಡಾಕ್ಟರ್ ಬಗ್ಗೆ ಅದೇನು ಮಮಕಾರವೋ ಗೊತ್ತಿಲ್ಲ. ಅವನನ್ನ ತಂದು ಮತ್ತೆ ಮತ್ತೆ ಕೂರಿಸಿಕೊಳ್ತಾರೆ. ಅಥವಾ ಇವ್ರಿಗೆ ಇವನನ್ನ ಬಿಟ್ರೆ ಮತ್ಯಾರು ವೈದ್ಯರೇ ಸಿಗೋದಿಲ್ವಾ ಅನ್ನೋ ಅನುಮಾನವು ಬರುತ್ತೆ.

LEAVE A REPLY

Please enter your comment!
Please enter your name here