Home Crime ಆ ಮನೆಯಲ್ಲಿ ಸಮಸ್ಯೆಯದ್ದೇ ಸಾಮ್ರಾಜ್ಯ..! ಇಬ್ಬರ ಸಾವಿಗೆ ಕಾರಣವಾಯ್ತಾ ಅನಾರೋಗ್ಯ? ತಾಯಿ, ತಂಗಿ ಕೊಂದ ವೈದ್ಯನಿಗಿಲ್ಲ...

ಆ ಮನೆಯಲ್ಲಿ ಸಮಸ್ಯೆಯದ್ದೇ ಸಾಮ್ರಾಜ್ಯ..! ಇಬ್ಬರ ಸಾವಿಗೆ ಕಾರಣವಾಯ್ತಾ ಅನಾರೋಗ್ಯ? ತಾಯಿ, ತಂಗಿ ಕೊಂದ ವೈದ್ಯನಿಗಿಲ್ಲ ಅಪಾಯ..!

412
0
SHARE

ಆರೋಗ್ಯವೇ ಭಾಗ್ಯ ಅಂತಾರೆ. ಆದ್ರೆ ಆ ಕುಟುಂಬಕ್ಕೆ ಆರೋಗ್ಯವೇ ದೌರ್ಭಾಗ್ಯವಾಗಿತ್ತು. ಮನೆಯಲ್ಲೇ ವೈದ್ಯರಿದ್ರು ಖಾಯಿಲೆ ಮಾತ್ರ ವಾಸಿಯಾಗಲೇ ಇಲ್ಲಿ. ಹಣ ಅಂತಸ್ತು ಎಲ್ಲಾ ಅವರಿಗಿದ್ರು ಆ ಮನೆಯಲ್ಲಿ ಸಮಸ್ಯೆ ಕಾಡುತ್ತಿತ್ತು. ಹೀಗಾಗಿ ಆ ಕುಟುಂಬ ಆತ್ಮಹತ್ಯೆಗೆ ನಿರ್ಧರಿಯೇ ಬಿಡ್ತು. ಆ ಮನೆಯ ಮಗ ತಾಯಿ, ತಂಗಿಗೆ ಮಧುಮೇಹ ಚುಚ್ಚುಮದ್ದು ನೀಡಿ ಕೊಂಡು ಕೊನೆಗೆ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಈ ಹೃದಯ ವಿದ್ರಾವಕ ಘಟನೆಗೆ ಬೆಂಗಳೂರಿನ ಆರ್.ಆರ್.ನಗರ ಸಾಕ್ಷಿಯಾಗಿದೆ.ಈ ಮನೆಯಲ್ಲಿ ಹಣ, ಅಂತಸ್ತು ಎಲ್ಲವೂ ಇತ್ತು. ಆದ್ರೆ ಮುಖ್ಯವಾಗಿ ಬೇಕಾಗಿದ್ದ ನೆಮ್ಮದಿ, ಆರೋಗ್ಯ, ಮನಃಶಾಂತಿ ಇದ್ಯಾವುದು ಇರಲಿಲ್ಲ. ಇದ್ರಿಂದ ಬೇಸತ್ತ ಮನೆ ಮಗ ತಾಯಿ, ತಂಗಿಯನ್ನು ಪರಲೋಕಕ್ಕೆ ಕಳುಹಿಸಿ ಈಗ ಆಸ್ಪತ್ರೆಯಲ್ಲಿ ಜೀವನ್ಮರಣ ನಡುವೆ ಹೋರಾಟ ನಡೆಸುತ್ತಿದ್ದಾನೆ.ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ನೆಲಸಿರೋ ಗೋವಿಂದ ಪ್ರಕಾಶ್‌ ಅವಿವಾಹಿತ. ವಿಜಯನಗರದಲ್ಲಿ ತಮ್ಮದೇ ಕ್ಲಿನಿಕ್ ಇಟ್ಟುಕೊಂಡಿದ್ರು.

ಅಷ್ಟೇ ಅಲ್ಲ ಪ್ರತಿಷ್ಟಿತ ಆಸ್ಪತ್ರೆಗಳಲ್ಲಿ ಡಯಾಬಿಟಿಸ್ ಸ್ಪೆಷಲಿಸ್ಟ್ ಆಗಿ ಕೆಲಸ ಮಾಡ್ತಿದ್ರು. ಇತ್ತೀಚಿಗಷ್ಟೇ ಕ್ಲಿನಿಕ್ ಮುಚ್ಚಿದ್ದರಿಂದ ಖಿನ್ನತಗೆ ಒಳಗಾಗಿದ್ದರು. ತಂಗಿ ಶ್ಯಾಮಲಾ ಕೂಡ ವಕೀಲೆ. ಗಂಡ ವಿಚ್ಛೇದನ ನೀಡಿದ್ದರಿಂದ ಅಪ್ಪನ ಮನೆಯಲ್ಲಿಯೇ ವಾಸವಾಗಿದ್ರು. ಇತ್ತೀಚೆಗೆ 2ನೇ ಮದುವೆ ನಿಶ್ಚಿತಾರ್ಥ ಕೂಡ ಆಗಿತ್ತು. ಆದ್ರೆ, ಆ ಮದುವೆ ಮುರಿದು ಬಿದ್ದಿತ್ತು.ಇದ್ರಿಂದ ಶ್ಯಾಮಲಾ ಕೂಡ ಖಿನ್ನರಾಗಿದ್ದರು. ತಾಯಿ ಮುಕಾಂಬಿಕಾ, ತಂಗಿ ಶ್ಯಾಮಲಾ ಹಾಗೂ ವೈದ್ಯ ಗೋವಿಂದ ಪ್ರಕಾಶ್‌ಗೆ ಮೈಗ್ರೇನ್ ಸಮಸ್ಯೆ ಗಾಢವಾಗಿ ಕಾಡುತ್ತಿತ್ತು.

ಹೀಗಾಗಿಯೇ ಮೂವರು ಸೂಸೈಡ್ ಮಾಡಿಕೊಳ್ಳಲು ತೀರ್ಮಾನಿಸಿಯೇ ಬಿಟ್ಟರು.ನಿನ್ನೆ ರಾತ್ರಿ ಮೂವರು ಒಟ್ಟಿಗೆ ಕುಳಿತು ಆತ್ಮಹತ್ಯೆ ಮಾಡಿಕೊಳ್ಳಲು ಚರ್ಚೆ ನಡೆಸಿದರು. ನಮ್ಮ ಆತ್ಮಹತ್ಯೆಗೆ ತಂದೆ ಸುಬ್ಬರಾಯ ಭಟ್ ಅಡ್ಡಿಪಡಿಸಬಹುದೆಂದು ಪುತ್ರ ಗೋವಿಂದ ಪ್ರಕಾಶ್ ಒಂದು ಪ್ಲ್ಯಾನ್ ಮಾಡಿ ನಿದ್ರೆ ಮಾತ್ರೆ ಕೊಟ್ಟ. ರಾತ್ರಿ 1 ಗಂಟೆ ವೇಳೆಗೆ ರೂಂನಲ್ಲಿದ್ದ ತಾಯಿ ಮೂಕಾಂಬಿಕಾ ಹಾಗೂ ತಂಗಿ ಶ್ಯಾಮಲಾಗೆ ಮಧುಮೇಹದ ಓವರ್ ಡೋಸ್ ಇಂಜಕ್ಷನ್ ನೀಡಿದ್ದಾನೆ.

ನಂತರ ತಾನೂ ಕೂಡ ಇಂಜೆಕ್ಷನ್ ತೆಗೆದುಕೊಂಡಿದ್ದಾನೆ.ಬೆಳಗ್ಗೆ 7 ಗಂಟೆಗೆ ಏಳಬೇಕಾಗಿದ್ದ ಗೋವಿಂದ ಪ್ರಕಾಶ್ ತಂದೆ ಸುಬ್ಬರಾಯ ಭಟ್‌ಗೆ ಬೆಳಗ್ಗೆ 7.30ಕ್ಕೆ ಎಚ್ಚರವಾಗಿದೆ. ಮೂವರ ದೇಹದಲ್ಲಿ ಯಾವುದೇ ಚಲನೆ ಇಲ್ಲದ ಕಾರಣ ಗಾಬರಿಗೊಂಡ ಸುಬ್ಬರಾಯ ಭಟ್ ವಿಷಯವನ್ನು ನೆರೆಹೊರೆಯವರಿಗೆ ತಿಳಿಸಿದ್ದಾರೆ. ನರೆಹೊರೆಯವರು ಬರುವಷ್ಟರಲ್ಲಿ ಮೂಕಾಂಬಿಕಾ ಹಾಗೂ ಶ್ಯಾಮಲಾ ಅವರ ಪ್ರಾಣ ಪಕ್ಷಿ ಹಾರಿ ಹಾಕಿತ್ತು.

ಇನ್ನೂ ಉಸಿರಾಡುತ್ತಿದ್ದ ಗೋವಿಂದ ಪ್ರಕಾಶ್ ಅವ್ರನ್ನ ಎಸ್.ಎಸ್ ಆಸ್ಪತ್ರೆಗೆ ದಾಖಲಿಸಲಾಯ್ತು. ಗೋವಿಂದ ಪ್ರಕಾಶ್ ಅಪಾಯದಿಂದ ಪಾರಾಗಿದ್ದಾರೆ.ಇನ್ನು, ಅನಾರೋಗ್ಯ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖ ಮಾಡಲಾಗಿದೆ.ಈಗಾಗಲೇ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ರಾಜರಾಜೇಶ್ವರಿ ನಗರ ಠಾಣಾ ಪೊಲೀಸರು ತನಿಖೆ ಕೈ ಗೊಂಡಿದ್ದಾರೆ.

LEAVE A REPLY

Please enter your comment!
Please enter your name here