Home Crime ಆ ಮೂರೇ ಕಾರಣಕ್ಕೆ ನಡೆದಿತ್ತು ರೌಡಿ ಲಕ್ಷ್ಮಣನ ಕೊಲೆ..! ಒಂದು ಹೆಣ್ಣು, ಹೊನ್ನು, ಮಣ್ಣಿಗಾಗಿ ಮಣ್ಣಾದ...

ಆ ಮೂರೇ ಕಾರಣಕ್ಕೆ ನಡೆದಿತ್ತು ರೌಡಿ ಲಕ್ಷ್ಮಣನ ಕೊಲೆ..! ಒಂದು ಹೆಣ್ಣು, ಹೊನ್ನು, ಮಣ್ಣಿಗಾಗಿ ಮಣ್ಣಾದ ಲಕ್ಷ್ಮಣ..!

1026
0
SHARE

ರೌಡಿ ಲಕ್ಷ್ಮಣನ ಹತ್ಯೆಯ ಹಿಂದಿನ ಮಸಲತ್ತೇನು ಅನ್ನೊದನ್ನ ಖಚಿತ ಪಡಿಸಿಕೊಂಡ ಸಿಸಿಬಿ ಪೊಲೀಸರು.. ಲಕ್ಷ್ಮಣ ಮರ್ಡರ್ ಹಿಂದೆ ಇದ್ದದ್ದು ಆ ಮೂರೇ ಮೂರು ಕಾರಣಗಳಂತೆ.

ಸಿಲಿಕಾನ್ ಸಿಟಿಯಲ್ಲಿ ಬರ್ಬವಾಗಿ ಹತ್ಯೆಯಾದ ರೌಡಿಶೀಟರ್ ಲಕ್ಷ್ಮಣನ ಮರ್ಡರ್ ಮಿಸ್ಟ್ರಿ ಬೆನ್ನತ್ತಿರೋ ಸಿಸಿಬಿ ಪೋಲೀಸರಿಗೆ ಸದ್ಯ ಮೂರು ಪ್ರಮುಖ ಕಾರಣಗಳಿಂದ ಹತ್ಯೆ ನೆಡೆಸಲಾಗಿದೆ ಅನ್ನೋ ಸತ್ಯಾಂಶ ತಿಳಿದಿದ್ದು, ತನಿಖಾಧಿಕಾರಿಗಳ ಮುಂದೆ ವರ್ಷಿಣಿ ಹಾಗೂ ರೂಪೇಶನ ಲವ್, ಹೇಮಿ ಅಲಿಯಾಸ್ ಹೇಮಂತನ ಸೇಡು ಮತ್ತು ಕ್ಯಾಟ್ ರಾಜ ಅನ್ನೋನ ಹೆಸರಿನ ದಾಹದ ಕಾರಣಗಳಿಂದಲೇ ಲಕ್ಷ್ಮಣನನ್ನು ಮುಗಿಸಲಾಯ್ತು ಅನ್ನೋ ಸತ್ಯವನ್ನ ಪಾತಕಿಗಳು ಬಾಯ್ಬಿಟ್ಟಿದ್ದಾರೆ.

ನಾಲ್ಕು ವರ್ಷಗಳಿಂದ ಲಕ್ಷ್ಮಣನೂ ವರ್ಷಿಣಿ ಜೊತೆ ಸಂಬಂಧ ಹೊಂದಿದ್ದ ಲಕ್ಷ್ಮಣ. ಇತ್ತ ರೂಪೇಶನ ತೆಕ್ಕೆಗೆ ಜಾರಿದ್ದ ವರ್ಷಿಣಿಗೆ ಮುಂದಿನ ಬದುಕು ಕಷ್ಟವಾಗಿತ್ತು. ರೂಪೇಶ ಮತ್ತು ವರ್ಷಿಣಿ ಮದುವೆಯಾಗಲು ಬಯಸಿದ್ದರು. ಆದ್ದರಿಂದ ಲಕ್ಷ್ಮಣನ ಕೊಲೆ ಅನಿವಾರ್ಯಗಿತ್ತು. ಮತ್ತೊಂದೆಡೆ ಆರೋಪಿ ಹೇಮಂತ ಅಲಿಯಾಸ್ ಹೇಮಿಗೆ ಲಕ್ಷ್ಮಣ ನ ಮೇಲೆ ಕೋಪ ಇತ್ತು. 2015 ರ ಜೂನ್ 05 ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಟಿ.ಸಿ ರಾಜನ ಶಿಷ್ಯನಾಗಿದ್ದ ಹೇಮಿ 2015 ರಿಂದಲೂ ಕೊಲೆಯಾದ ಟಿ.ಸಿ ರಾಜನ ಮಚ್ಚು ಇಟ್ಟುಕೊಂಡು ಲಕ್ಷ್ಮಣನ ಕೊಲೆಗೆ ಸ್ಕೆಚ್ ಹಾಕಿದ್ದ.

ಯಾರಾದ್ರೂ ಲಕ್ಷ್ಮಣ ಒಂಟಿಯಾಗಿರುವ ಇನ್ಫಾರ್ಮೇಶನ್ ಕೊಟ್ರೆ ಸಾಕು ತಾನೇ ಐದು ಲಕ್ಷ ಹಣ ಕೊಡ್ತಿನಿ ಅಂತಿದ್ದ. ಅದೇ ಸಮಯದಲ್ಲಿ ಸರಿಯಾಗಿ ಜೈಲಿನಲ್ಲಿ ರೂಪೇಶ ಪರಿಚಯವಾಗಿದ್ದ.ಹೀಗೆ…ಕ್ಯಾಟ್ ಗೆ ರೌಡಿಸಂ ಫೀಲ್ಡ್ ನಲ್ಲಿ ದೊಡ್ಡ ಹೆಸರು ಮಾಡೊ ಹುಚ್ಚಿತ್ತು. ಸದ್ಯ ಫೀಲ್ಡ್ ನಲ್ಲಿದ್ದ ಲಕ್ಷ್ಮಣನ್ನ ಕೊಂದ್ರೆ ತನ್ನ ಬಜಾರ್ ಏರುತ್ತೆ ಅನ್ನೋ ಲೆಕ್ಕಾಚಾರ ಹಾಕಿದ್ದ ಕ್ಯಾಟ್ ಜಸ್ಟ್ ಹಣದ ಆಸೆಗೆ ಕೊಲೆಗೆ ಒಪ್ಪಿದ್ದ. ಕೊನೆಗೆ ಪ್ಲ್ಯಾನ್ ಮಾಡಿದಂತೆ ಒಂದು ವಾರದ ಹಿಂದೆ ಲಕ್ಷ್ಮಣನ ಕೊಲೆ ಮಾಡಿ‌ ಮುಗಿಸಿದ್ದ ಆರೋಪಿಗಳು.

ನಂತರ ಎಲ್ಲರೂ ಬೇರೆ ಬೇರೆ ಹಾದಿಯಲ್ಲಿ ಪರಾರಿಯಾಗಿದ್ದರು. ಆದ್ರೆ ಜಾಡು ಹಿಡಿದ ಸಿಸಿಬಿ ಕೊನೆಗೂ ಆರೋಪಿಗಳನ್ನ ತಂದು ಇಂಚಿಂಚೂ ಅಸಲಿ ಸತ್ಯ ಬಾಯ್ಬಿಡಿಸಿದೆ. ಒಟ್ನಲ್ಲಿ.. ಹೆಣ್ಣಿನ ಮೇಲಿನ ವ್ಯಾಮೋಹ , ಹಳೆ ದ್ವೇಷ, ಮತ್ತು ರೌಡಿಸಂನಲ್ಲಿ ಹೆಸರು ಮಾಡೋ ಗೀಳು ಈ ಮೂರು ಕಾರಣಕ್ಕೆ ಲಕ್ಷ್ಮಣ ಅನ್ನೋ ನಟೋರಿಯಸ್ ರೌಡಿ ಬೀದಿಯಲ್ಲಿ ಹೆಣವಾಗಿ ಹೋದ ಅನ್ನೋ ಸತ್ಯ ಕೊನೆಗೂ ಬಯಲಾಗಿದೆ.

LEAVE A REPLY

Please enter your comment!
Please enter your name here