Home Crime ಆ ರಾತ್ರಿ ನಟ್ಟನಡು ರಸ್ತೆಯಲ್ಲಿ ಬಿದ್ದಿತ್ತೊಂದು ರುಂಡವಿಲ್ಲದ ಮುಂಡ..!!! ಕುರಿ ಕಡಿದಂಗೆ ಕತ್ತರಿಸೋವಷ್ಟು ದ್ವೇಷವೇನಿತ್ತು ದುಶ್ಮನ್...

ಆ ರಾತ್ರಿ ನಟ್ಟನಡು ರಸ್ತೆಯಲ್ಲಿ ಬಿದ್ದಿತ್ತೊಂದು ರುಂಡವಿಲ್ಲದ ಮುಂಡ..!!! ಕುರಿ ಕಡಿದಂಗೆ ಕತ್ತರಿಸೋವಷ್ಟು ದ್ವೇಷವೇನಿತ್ತು ದುಶ್ಮನ್ ಗಳಿಗೆ..?

1408
0
SHARE

ಅಲ್ಲಿ ಬಾರಿ ಮಳೆ ಸುರಿಯುತ್ತಿತ್ತು. ಆ ಮಳೆಯಲ್ಲಿ ನೆನೆಯುತ್ತ ಮನೆ ಸೇರೋ ತವಕದಲ್ಲಿ ಬೈಕ್ ಸವಾರನೊಬ್ಬ ಸ್ಪೀಡಾಗಿ ಹೋಗ್ತಿದ್ದ. ಆದ್ರೆ, ಮಾರ್ಗಮಧ್ಯೆ ಎದುರಾದ ಹಂತಕರು ಆತನ ಮೇಲೆ ದಾಳಿ ಮಾಡಿ ರುಂಡಮುಂಡ ಬೇರ್ಪಡಿಸಿ ಹತ್ಯೆಗೈದಿದ್ರು. ಅಷ್ಚೇ ಅಲ್ಲದೇ ತಲೆಯನ್ನ ತೆಗೆದುಕೊಂಡೋಗಿ ಆತನ ಏರಿಯಾದಲ್ಲಿ ಬಿಸಾಡಿದ್ರು. ಹಾಗಾದ್ರೆ ಅಷ್ಟು ಭೀಕರವಾಗಿ ಹತ್ಯೆಯಾದವ ಯಾರು, ಯಾಕೆ ಹತ್ಯೆಯಾದ..!???

ಸಮಯ- ರಾತ್ರಿ 9 ಗಂಟೆ.ಸ್ಥಳ- ರಾಮಚಂದ್ರಾಪುರ ಬಸ್ ಸ್ಟ್ಯಾಂಡ್,ಗುಡುಗು ಸಿಡಿಲಿನೊಂದಿಗೆ ವರುಣ ಜೋರಾಗಿಯೇ ಆರ್ಭಟ ಮಾಡ್ತ ಧರೆಗಿಳಿದಿದ್ದ. ಇನ್ನು ಆ ಆರ್ಭಟಕ್ಕೆ ಬೆಂಗಳೂರಿನ ದೊಡ್ಡಬೊಮ್ಮಸಂದ್ರ ಏರಿಯಾದಲ್ಲಿ ಕೆಲ ವಿದ್ಯುತ್ ಕಂಬಗಳು ಧರೆಗುರುಳಿ ವಿದ್ಯುತ್ ಸಂಪರ್ಕ್ ಕಟ್ ಆಗಿತ್ತು. ಅದೇ ಟೈಮ್ ಗೆ ಬ್ಲಾಕ್ ಪಲ್ಸರ್ ಸವಾರನೊಬ್ಬ ಬಿಇಎಲ್ ಸರ್ಕಲ್ ಕಡೆಯಿಂದ ರಾಮಚಂದ್ರಪುರ ಮೈನ್ ರೋಡ್ ನಲ್ಲಿ ಸ್ಪೀಡಾಗಿ ಹೊರಟಿದ್ದ. ಹಾಗೆ ಹೊರಟಿದ್ದವನಿಗೆ ಏಕಾಏಕಿ ಹಂತಕರು ಎದುರಾಗಿದ್ದು, ಮಚ್ಚು ಬೀಸಿದ್ದಾರೆ. ಮಚ್ಚು ಬೀಸಿದ ರಭಸಕ್ಕೆ ಬೈಕ್ ರೈಡರ್ ರುಂಡ ಮುಂಡ ಬೇರ್ಪಟ್ಟಿತ್ತು…

ಅಷ್ಟಕ್ಕೆ ಸುಮ್ಮನಾಗದ ಹಂತಕರು ತಲೆ ತೆಗೆದುಕೊಂಡು ಸಮೀಪದ ಚಂದ್ರಪ್ಪ ಲೇಔಟ್ ನ ರಸ್ತೆಬದಿ ಬೀಸಾಡಿ ಎಸ್ಕೇಪ್ ಆಗಿದ್ದಾರೆ. ಅಷ್ಟಕ್ಕು ಅಲ್ಲಿ ಭೀಕರವಾಗಿ ಕೊಲೆಯಾಗಿದ್ದಿದ್ದು ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ 20ಕ್ಕು ಹೆಚ್ಚು ಕ್ರಿಮಿನಲ್ ಕೇಸ್ ಗಳಲ್ಲಿ ಭಾಗಿಯಾಗಿದ್ದ ಮುನೇಶ್ವರ ಲೇಔಟ್ ನ ಈ ಡೇವಿಡ್ ಅಲಿಯಾಸ್ ಕಿರಣ್…

ಡೇವಿಡ್, ಸದ್ಯ ಹೆಚ್ಎಂಟಿ ಆಸ್ಪತ್ರೆಯಲ್ಲಿ ಆಂಬ್ಯೂಲೆನ್ಸ್ ಡ್ರೈವರ್ ಆಗಿ ಕೆಲ್ಸ ಮಾಡ್ತಿದ್ದ. ಕೆಲ್ಸದ ನೆಪದಲ್ಲಿ ಸರಿಯಾಗಿ ಮನೆಗೆ ಹೋಗದೇ ಕಾಲ ಕಳೆಯುತ್ತಿದ್ದ. ನಾಲ್ಕು ದಿನಗಳಿಂದ ಕೆಲ್ಸಕ್ಕು ಹೋಗದೇ, ಮನೆಗೂ ಹೋಗ್ದೇ, ಹೆಚ್ಎಂಟಿ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ರೂಂ ನಲ್ಲಿ ತಂಗಿದ್ದ ಡೇವಿಡ್, ಹೊರಗೋಗೋದು, ಎಣ್ಣೆ ನಿಶೆಯಲ್ಲಿ ವಾಪಸ್ಸು ಬಂದು ಮಲಗ್ತಿದ್ನಂತೆ. ಆದ್ರೆ, ನಿನ್ನೆ ಅಮ್ಮನ ನೆನಪಾಗಿ ಮನೆ ಕಡೆ ಹೊರಟಿದ್ದ…

ಆದ್ರೆ, ಮಾರ್ಗ ಮಧ್ಯೆ ಎದುರಾದ ಹಂತಕರು, ಆ ತಾಯಿಗೆ ಮಗನ ಮುಖ ನೋಡೋ ಭಾಗ್ಯವನ್ನು ಕರುಣಿಸದೇ ಭೀಕರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ. ಇಷ್ಟೊಂದು ಕ್ರೂರವಾಗಿ ಹತ್ಯೆ ಮಾಡ್ಬೇಕಾದ್ರೆ ಬಲವಾದ ರೀಸನ್ ಇರ್ಲೇಬೇಕಲ್ವೆ…

ಆ ಕಾರಣ ಹಾಗೂ ಕೊಲೆಗಡುಕರನ್ನ ಪತ್ತೆಯಚ್ಚೋ ಸಲುವಾಗಿ ಪ್ರಕರಣ ದಾಖಲಿಸಿಕೊಂಡಿರೋ ಗಂಗಮ್ಮನಗುಡಿ ಪೊಲೀಸ್ರು ಹಂತಕರ ಬಂಧನಕ್ಕೆ ಬಲೆ ಬೀಸಿದ್ದಾರೆ…

 

LEAVE A REPLY

Please enter your comment!
Please enter your name here