Home Crime ಇಂಗ್ಲಿಷ್ ಪದ್ಯ ಹೇಳದ 1ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಥಳಿತ..! ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಗಾಯಗೊಂಡ...

ಇಂಗ್ಲಿಷ್ ಪದ್ಯ ಹೇಳದ 1ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಥಳಿತ..! ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಗಾಯಗೊಂಡ ಬಾಲಕ..!

832
0
SHARE

ಆ ಶಿಕ್ಷಕಿ ಶಾಲೆಯಲ್ಲಿ ಮಗುವಿಗೆ ಇಂಗ್ಲೀಷ್ ರೈಮ್ಸ್ ಕೇಳಿದ್ದಾಳೆ..ಮೊದಲೇ ಒಂದನೇ ತರಗತಿಯ ಆ ಬಾಲಕ ರೈಮ್ಸ್ ಹೇಳದೇ ತಡಕಾಡಿದ್ದಾನೆ..ಪುಟ್ಟ ಬಾಲಕನ ಬಾಯಲ್ಲಿ ರೈಮ್ಸ್ ಬಾರದಿದ್ದಕ್ಕೆ ಆ ಪಾಪಿ ಶಿಕ್ಷಕಿ ಮಾಡಿದ್ದೇನು ಗೊತ್ತಾ..? ರೈಮ್ಸ್ ಹೇಳಿಲ್ಲಾ ಅನ್ನೋ‌ ಕಾರಣಕ್ಕೆ ಇದೀಗ ಆ ಬಾಲಕ ಶಾಲೆಗೇ ಹೋಗದ ಪರಿಸ್ಥಿತಿಯನ್ನಾ ಆ ಶಿಕ್ಷಕಿ ತಂದೊಡ್ಡಿದ್ದಾಳೆ..

ಹೀಗೆ ಮೈತುಂಬಾ ಬಾಸುಂಡೆಗಳು,,ಮೇಲಿಂದ ಕೆಳಗಡೆವರೆಗೂ ದೊಣ್ಣೆಯ ಪೆಟ್ಟು ಎದ್ದು ಕಾಣ್ತಿರೋದು..ಮುಖದಲ್ಲಿ ಏನೋ ಭಯದಿಂದ ಹಾಸಿಗೆ ಹಿಡಿದಿರೋ ಈ ಪುಟ್ಟ ಬಾಲಕ..ಹೀಗೆ ಈ ಬಾಲಕ ಮಲಗಿರೋದಕ್ಕೆ ಕಾರಣ ಆತನ ಶಾಲೆಯ ಶಿಕ್ಷಕಿ..ಶಾಲೆಯಲ್ಲಿ ರೈಮ್ಸ್ ಹೇಳಿಲ್ಲ ಅನ್ನೋ ಕಾರಣಕ್ಕೆ ಆ ಪಾಪಿ ಶಿಕ್ಷಕಿ ಈ ಬಾಲಕನಿಗೆ ಮನಬಂದಂತೆ ಥಳಿಸಿದ್ದಾಳೆ.

ಹೌದು,ಇಂಗ್ಲಿಷ್ ಪದ್ಯ ಹೇಳದ ವಿದ್ಯಾರ್ಥಿಗೆ ಶಿಕ್ಷಕಿಯೋರ್ವಳು ಬೆತ್ತದಿಂದ‌ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ. ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಬ್ಯಾಲ್ಯ ದ ಸರ್ಕಾರಿ ಶಾಲೆಯ ಶಿಕ್ಷಕಿ ಲಲಿತಾ ರಾಕ್ಷಸಿ ಪ್ರವೃತ್ತಿ ತೋರಿದ್ದಾಳೆ. ಒಂದನೇ ತರಗತಿ ವಿದ್ಯಾರ್ಥಿ ನಂದೀಶ್ ಇಂಗ್ಲಿಷ್ ಪದ್ಯ ಹೇಳಲು ಹಾಗೂ ಇಂಗ್ಲಿಷ್ ಅಕ್ಷರ ಬರೆಯಲು ತಡವರಿಸಿದ್ದಾನೆ..ಇದರಿಂದ ಕೋಪಗೊಂಡ ಶಿಕ್ಷಕಿ ಮನಸೋ ಇಚ್ಛೆ ಥಳಿಸಿದ್ದಾಳೆ.

ಶಿಕ್ಷಕಿ ಸೌಮ್ಯಾಳ ಕೃತ್ಯವನ್ನು ಪೋಷಕರು ಖಂಡಿಸಿದ್ದಾರೆ..ಗಾಯಗೊಂಡ ಬಾಲಕಿನಿಗೆ ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ..ಶಿಕ್ಷಕಿ ಲಲಿತಾಳಿಗೆ ಭಯಪಟ್ಟು ಇದೀಗ ಶಾಲೆಯ ಅನೇಕ‌ ಮಕ್ಕಳು ಶಾಲೆಗೆ ಹೋಗೋಕೆ ಹಿಂಜರಿದಿದ್ದಾರೆ..ಘಟನೆ ಬಳಿಕ ಶಿಕ್ಷಕಿ ಗ್ರಾಮದಿಂದ ಪರಾರಿಯಾಗಿದ್ದಾಳೆ.ಯಾರ ಸಂಪರ್ಕಕ್ಕೂ ಸಿಗದೇ ಮೋಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾಳೆ..

ಬಾಲಕ ತರಗತಿಯಿಂದ ರಸ್ತೆ ಕಡೆ ಓಡುತ್ತಿದ್ದು, ಆ ಹಿನ್ನೆಲೆ‌ ವಾಪಸ್ ಕರೆದುಕೊಂಡು ಬಂದು ಹೊಡೆದು ಎಚ್ಚರಿಸಿದ್ದಾರೆ ಅಂತಾ ಶಿಕ್ಷಕಿಯ ಪತಿ ಹೇಳಿಕೊಂಡಿದ್ದಾರೆ‌.ಏನೇ ಆದ್ರೂ ಶಿಕ್ಷಕಿ ಲಲಿತಾ ಪುಟ್ಟ ಮಗುವಿನ ಮೇಲೆ‌ ಹೀಗೆ ರೌದ್ರಾವತಾರ ತೋರಿರೋದು ಅಕ್ಷಮ್ಯ ಅಪರಾಧವೇ ಸರಿ,ಇಡೀ ಘಟನೆ‌ ಹಿಂದೆ ರಾಜಕೀಯ ಪ್ರಭಾವವೂ ಇರೋದು ಮೇಲ್ನೋಟಕ್ಕೆ‌ ಕಂಡುಬಂದಿದೆ..ಶಿಕ್ಷಣ ಇಲಾಖೆ ಈ ಕೂಡಲೇ ಮಧ್ಯಪ್ರವೇಶಿಸಿ ತಪ್ಪಿತಸ್ಥ ಶಿಕ್ಷಕಿ ವಿರುದ್ದ ಕ್ರಮ ಕೈಗೊಳ್ಳಬೇಕಿದೆ…

LEAVE A REPLY

Please enter your comment!
Please enter your name here