Home Latest ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ- 18 ಸದಸ್ಯರ ತಂಡದಲ್ಲಿ ಸ್ಪಿನ್ನರ್‌ ಕುಲದೀಪ್...

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ- 18 ಸದಸ್ಯರ ತಂಡದಲ್ಲಿ ಸ್ಪಿನ್ನರ್‌ ಕುಲದೀಪ್ ಯಾದವ್‌ಗೆ ಸ್ಥಾನ- ಕರ್ನಾಟಕದ ಕೆ.ಎಲ್.ರಾಹುಲ್, ಕರುಣ್ ನಾಯರ್‌ಗೆ ಅವಕಾಶ.

5281
0
SHARE

ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಬಹುನಿರೀಕ್ಷಿತ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಮೂರು ಪಂದ್ಯಗಳಿಗಾಗಿನ ಟೀಮ್ ಇಂಡಿಯಾವನ್ನು ಘೋಷಣೆ ಮಾಡಲಾಗಿದೆ.18 ಮಂದಿಯ ಸದಸ್ಯರನ್ನೊಳಗೊಂಡ ತಂಡವನ್ನ ಎಂ.ಎಸ್.ಕೆ. ಪ್ರಸಾದ್ ಅವರನ್ನೊಳಗೊಂಡ ಆಯ್ಕೆ ಸಮಿತಿ ತಂಡವನ್ನ ಘೋಷಿಸಿದೆ. ಆಗಸ್ಟ್ 1 ರಿಂದ ಆರಂಭಗೊಳ್ಳಲಿರುವ ಟೆಸ್ಟ್ ಸರಣಿಗೆ ಬಲಿಷ್ಠ ತಂಡವನ್ನ ಪ್ರಕಟಿಸಲಾಗಿದೆ.

ಇಂಗ್ಲೆಂಡ್ ನಾಡಲ್ಲಿ ಭಾರತ 5 ಟೆಸ್ಟ್ ಪಂದ್ಯಗಳ ಸರಣಿಯನ್ನ ಆಡಲಿದೆ. ಆದ್ರೆ ಆಯ್ಕೆ ಸಮಿತಿ ಮೊದಲ 3 ಟೆಸ್ಟ್ ಪಂದ್ಯಗಳಿಗೆ ತಂಡವನ್ನ ಹೆಸರಿಸಿದೆ. ಇಂಗ್ಲೆಂಡ್ ವಿರುದ್ಧದ ಟ್ವೆಂಟಿ-20 ಹಾಗೂ ಏಕದಿನ ಸರಣಿಯಲ್ಲಿ ಐದು ವಿಕೆಟುಗಳ ಸಾಧನೆ ಮಾಡಿರುವ ಚೈನಾಮನ್ ಖ್ಯಾತಿಯ ಮಣಿಕಟ್ಟಿನ ಸ್ಪಿನ್ನರ್ ಕುಲ್‌ದೀಪ್ ಯಾದವ್ ಟೆಸ್ಟ್ ತಂಡದಲ್ಲೂ ಸ್ಥಾನ ಪಡೆದಿದ್ದಾರೆ.ಗಾಯದ ಭೀತಿಯಲ್ಲಿರುವ ಭುವನೇಶ್ವರ್ ಕುಮಾರ್ ಅವರನ್ನು ಹೆಸರಿಸಿಲ್ಲ.

ಅವರ ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕವಷ್ಟೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂಬುದನ್ನು ಬಿಸಿಸಿಐ ಸ್ಪಷ್ಟಪಡಿಸಿದೆ. ಇನ್ನೊಂದೆಡೆ ಗಾಯದ ಸಮಸ್ಯೆಯಿಂದಾಗಿ ಟ್ವೆಂಟಿ-20 ಹಾಗೂ ಏಕದಿನ ಸರಣಿಗೆ ಅಲಭ್ಯವಾಗಿರುವ ಜಸ್ಪ್ರೀತ್ ಬುಮ್ರಾ ತಂಡವನ್ನು ಸೇರಿಕೊಂಡಿದ್ದಾರೆ. ಟೆಸ್ಟ್ ಸ್ಪೆಷಲಿಸ್ಟ್‌ಗಳಾದ ಮುರಳಿ ವಿಜಯ್, ಚೇತೇಶ್ವರ ಪೂಜಾರ, ಉಪ ನಾಯಕ ಅಜಿಂಕ್ಯ ರಹಾನೆ,

ಆರ್ ಅಶ್ವಿನ್, ರವೀಂದ್ರ ಜಡೇಜಾ, ಇಶಾಂತ್ ಶರ್ಮಾ ಸಹ ತಂಡಕ್ಕೆ ಮರಳಿದ್ದಾರೆ. ಗಾಯಾಳು ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಇನ್ನು ಗಾಯದಿಂದ ಚೇತರಿಸಿಕೊಂಡಿಲ್ಲ. ಹೀಗಾಗಿ ಸಹಾ ಬದಲಿಗೆ. ದಿನೇಶ್ ಕಾರ್ತಿಕ್ ಸ್ಥಾನ ನೀಡಲಾಗಿದೆ. ಹೆಚ್ಚುವರಿ ವಿಕೆಟ್ ಕೀಪರ್ ಆಗಿ ರಿಷಭ್ ಪಂತ್ ಅವರಿಗೂ ಅವಕಾಶ ಕಲ್ಪಿಸಿಕೊಡಲಾಗಿದೆ. ಇನ್ನು ತ್ರಿಶತಕ ವೀರ ಕನ್ನಡಿಗ ಕರುಣ್ ನಾಯರ್ ಸಹ ತಂಡದಲ್ಲಿದ್ದಾರೆ.

ಮೊದಲ ಮೂರು ಟೆಸ್ಟ್ ಪಂದ್ಯಗಳಿಗೆ ಟೀಮ್ ಇಂಡಿಯಾ ಇಂತಿದೆ:1. ವಿರಾಟ್ ಕೊಹ್ಲಿ (ನಾಯಕ) 2. ಶಿಖರ್ ಧವನ್, 3. ಕೆಎಲ್ ರಾಹುಲ್, 4. ಮುರಳಿ ವಿಜಯ್, 5. ಚೇತೇಶ್ವರ ಪೂಜಾರ, 6. ಅಜಿಂಕ್ಯ ರಹಾನೆ (ಉಪ ನಾಯಕ), 7. ಕರುಣ್ ನಾಯರ್, 8. ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), 9. ರಿಷಬ್ ಪಂತ್ (ವಿಕೆಟ್ ಕೀಪರ್), 10. ಆರ್ ಅಶ್ವಿನ್, 11. ರವೀಂದ್ರ ಜಡೇಜಾ, 12. ಕುಲ್‌ದೀಪ್ ಯಾದವ್,13. ಹಾರ್ದಿಕ್ ಪಾಂಡ್ಯ. 14. ಇಶಾಂತ್ ಶರ್ಮಾ. 15. ಮೊಹಮ್ಮದ್ ಶಮಿ,16. ಉಮೇಶ್ ಯಾದವ್,17. ಜಸ್ಪ್ರೀತ್ ಬುಮ್ರಾ,18. ಶಾರ್ದೂಲ್ ಠಾಕೂರ್…

LEAVE A REPLY

Please enter your comment!
Please enter your name here