Home KARNATAKA ಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಂಡ ಭಾರತ | ಸಂಭಾವನೆಯನ್ನು ಕೇರಳ ಸಂತ್ರಸ್ಥರಿಗೆ ಅರ್ಪಿಸಿದ ಭಾರತ ಆಟಗಾರರು…

ಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಂಡ ಭಾರತ | ಸಂಭಾವನೆಯನ್ನು ಕೇರಳ ಸಂತ್ರಸ್ಥರಿಗೆ ಅರ್ಪಿಸಿದ ಭಾರತ ಆಟಗಾರರು…

731
0
SHARE

ಟ್ರೆಂಟ್ ಬ್ರೀಡ್ಜ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಜಯಭೇರಿಯನ್ನ ಬಾರಿಸಿದೆ. 203ರನ್ ಭರ್ಜರಿ ಗೆಲುವು ಸಾಧಿಸಿದೆ. ಗೆಲುವಿಗೆ 521ರನ್ ಬೆನ್ನತ್ತಿದ ಇಂಗ್ಲೆಂಡ್ 317ರನ್‌ಗೆ ಸರ್ವಪತನವಾಯ್ತು.

ಇಂದು ಆಂಡರ್ಸನ್ ವಿಕೆಟನ್ನ ಅಶ್ವಿನ್ ಕಬಳಿಸುವ ಮೂಲಕ ಭಾರತ ಗೆಲುವಿನ ನಗೆ ಬೀರಿತು.,ನಾಲ್ಕನೇ ದಿನದಾಟದಲ್ಲಿಯೇ ಭಾರತ, ಆತಿಥೇಯ ಇಂಗ್ಲೆಂಡ್ ತಂಡದ 9 ವಿಕೆಟ್ ಪಡೆದು ಗೆಲುವಿನ ಸನಿಹ ಬಂದು ನಿಂತಿತ್ತು. ಆದ್ರೆ ಇಂಗ್ಲೆಂಡ್ ತಂಡದ ಆಟಗಾರರು ದಿಟ್ಟತನದಿಂದ ಹೋರಾಟವನ್ನ ನಡೆಸಿ ಐದನೇ ದಿನಕ್ಕೆ ಪಂದ್ಯವನ್ನ ಕೊಂಡೊಯ್ದಿದ್ದರು.

ಆದ್ರೆ ಐದನೇ ದಿನದಾಟದ ಆರಂಭದಲ್ಲಿಯೇ ಜಿಮ್ಮಿ ಆಂಡರ್ಸನ್ ಔಟ್ ಆಗುವ ಮೂಲಕ317ರನ್ನಿಗೆ ಆಲೌಟ್ ಆಯ್ತು.ಈ ಮೂಲಕ ಭಾರತ 3ನೇ ಟೆಸ್ಟ್ ಪಂದ್ಯದಲ್ಲಿ 203 ರನ್ ಗಳ ಬೃಹತ್ ಮೊತ್ತದ ಜಯವನ್ನ ದಾಖಲಿಸಿತು. 5 ಪಂದ್ಯಗಳ ಸರಣಿಯಲ್ಲಿ ಭಾರತ 1-2 ಅಂತರದ ಹಿನ್ನಡೆಯನ್ನ ಪಡೆಯಿತು.

ಆದ್ರೆ ಮೊದಲೆರಡು ಟೆಸ್ಟ್ ಪಂದ್ಯದಲ್ಲಿ ಆಘಾತಕಾರಿ ಸೋಲನ್ನ ಪಡೆದಿದ್ದ ಟೀಂ ಇಂಡಿಯಾ, ಟ್ರೆಂಟ್ ಬ್ರೀಡ್ಜ್ ಮೈದಾನದಲ್ಲಿ ಆಂಗ್ಲರಿಗೆ ತಿರುಗೇಟನ್ನ ನೀಡಿತು. ಭಾರತ ಪರ ಬುಮ್ರಾ 5 , ಶಮಿ 2 ಇಶಾಂತ್, ಹಾರ್ದಿಕ್ ಪಾಂಡ್ಯಾ, ಅಶ್ವಿನ್ ತಲಾ 1 ವಿಕೆಟ್ ಪಡೆದ್ರು. ಇಂಗ್ಲೆಂಡ್ ಪರ ಜೋಸ್ ಬಟ್ಲರ್ 106 , ಬೆನ್ ಸ್ಟೋಕ್ಸ್ 62 ಹಾಗೂ ರಶೀದ್ ಔಟಾಗದೇ 33 ರನ್ ಬಾರಿಸಿ ಮಿಂಚಿದ್ರು.

LEAVE A REPLY

Please enter your comment!
Please enter your name here