Home KARNATAKA ಇಂಡಿಯಾ ಸ್ಟ್ರೋಕ್‌ಗೆ ಕಿವೀಸ್ ಉಡೀಸ್..! “ಅವರಿವರನ್ನು ಗೆದ್ದ ಮಾತ್ರಕ್ಕೆ ನೀವು ವಿಶ್ವಚಾಂಪಿಯನ್ನರಲ್ಲ” ಎಂದು ಸರಣಿಗೂ ಮುನ್ನ...

ಇಂಡಿಯಾ ಸ್ಟ್ರೋಕ್‌ಗೆ ಕಿವೀಸ್ ಉಡೀಸ್..! “ಅವರಿವರನ್ನು ಗೆದ್ದ ಮಾತ್ರಕ್ಕೆ ನೀವು ವಿಶ್ವಚಾಂಪಿಯನ್ನರಲ್ಲ” ಎಂದು ಸರಣಿಗೂ ಮುನ್ನ ಕುಟುಕಿದ್ದ ಕಿವೀಸ್ ತಂಡವನ್ನ ಚೆಂಡಾಡಿದ ಕೊಹ್ಲಿ ಪಡೆ..!

730
0
SHARE

ಬೇ ಓವಲ್ ಮೈದಾನದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ 90 ರನ್ ಗಳ ಭರ್ಜರಿ ಗೆಲುವು ಸಾಧಿಸಿತು.ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಬ್ಲೂಬಾಯ್ಸ್ ಪಂದ್ಯ ಗೆದ್ದು, ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ್ರು.

ಟೀಂ ಇಂಡಿಯಾ ಗೆಲುವಿನ ನಾಗಲೋಟವನ್ನ ತಡೆಯುವವರು ಯಾರು ಇಲ್ಲ.ಅವರಿವರನ್ನು ಗೆದ್ದ ಮಾತ್ರಕ್ಕೆ ನೀವು ವಿಶ್ವಚಾಂಪಿಯನ್ನರಲ್ಲ ಎಂದು ಸರಣಿಗೂ ಮುನ್ನ ಕುಟುಕಿದ್ದ ಕಿವೀಸ್ ತಂಡವನ್ನ ಕೊಹ್ಲಿ ಪಡೆ ಚೆಂಡಾಡಿದ್ದಾರೆ..ನ್ಯೂಜಿಲೆಂಡ್ ತಂಡವನ್ನು ಎರಡನೇ ಏಕದಿನ ಪಂದ್ಯದಲ್ಲೂ ಮಣ್ಣುಮುಕ್ಕಿಸಿ ಜಯಭೇರಿ ಬಾರಿಸಿದೆ.

ಬೇ ಓವಲ್ ಮೈದಾನದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ 90 ರನ್ ಗಳ ಜಯಭೇರಿ ಬಾರಿಸಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು.ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಭಾರತಕ್ಕೆ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಸಾಲಿಡ್ ಓಪನಿಂಗ್ ನೀಡಿದ್ರು.

ಕಿವೀಸ್ ಬೌಲರ್ ಗಳ ಮೇಲೆ ಸವಾರಿ ಮಾಡಿದ ಈ ಜೋಡಿ ಮೊದಲ ವಿಕೆಟ್ ಗೆ 154 ರನ್ ಕಲೆಹಾಕಿದ್ರು.ಧವನ್ 66 ರನ್ ಗಳಿಸಿದ್ರೆ, ರೋಹಿತ್ 87 ರನ್ ಸಿಡಿಸಿದ್ದಾಗ ಔಟಾಗಿ ಶತಕ ವಂಚಿತರಾದ್ರು.ವಿರಾಟ್ 43 ರನ್ ಸಿಡಿಸಿ ಔಟಾದ್ರೆ, ರಾಯುಡು 47 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡ್ರು.

ಇನ್ನು ಸ್ಲಾಗ್ ಓವರ್ ಗಳಲ್ಲಿ ಅಬ್ಬರಿಸಿದ ಎಂ.ಎಸ್.ಧೋನಿ ಅಜೇಯ 48 ಮತ್ತು ಕೇದಾರ್ ಜಾಧವ್ ಅಜೇಯ 22 ರನ್ ನೆರವಿನೊಂದಿಗೆ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 324 ರನ್ ಗಳಿಸಿತು.325 ರನ್ ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಬ್ಯಾಟಿಂಗ್ ವೈಫಲ್ಯಕ್ಕೆ ತುತ್ತಾಯ್ತು.ಮಾರ್ಟಿನ್ ಗಪ್ಟಿಲ್ 15, ಕಾಲಿನ್ ಮನ್ರೋ 31, ವಿಲಿಯಂಸನ್ 20 ರನ್ ಗಳಿಸಿ ನಿರ್ಗಮಿಸಿದ್ರು.

ಇನ್ನು 22 ರನ್ ಗಳಿಸಿದ್ದ ರಾಸ್ ಟೇಲರ್, ಧೋನಿಯ ಮಿಂಚಿನ ಸ್ಟಂಪಿಂಗ್‌ಗೆ ಆವಾಕ್ಕಾಗಿ ಗೂಡು ಸೇರಿಕೊಂಡ್ರು.ಮೊದಲ ಪಂದ್ಯದಲ್ಲಿ ಕಿವೀಸ್ ಗೆ ಮಾರಕವಾಗಿದ್ದ ಕುಲ್ದೀಪ್ ಯಾದವ್, 2ನೇ ಪಂದ್ಯದಲ್ಲೂ ಖೆಡ್ಡಾ ತೋಡಿದ್ರು.

ಚೈನಾಮನ್ ಬೌಲರ್ ದಾಳಿಗೆ ತತ್ತರಿಸಿದ ಟಾಮ್ ಲಥಾಮ್ 34, ಹೆನ್ರಿ ನಿಕೋಲ್ಸ್ 28, ಗ್ರ್ಯಾಂಡ್ ಹೋಮ್ 03 ಮತ್ತು ಐಶ್ ಸೋಧಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ರು. 234 ರನ್ ಗಳಿಗೆ ಆಲ್ಔಟ್ ಆಗಿ 90 ರನ್ ಗಳ ಹೀನಾಯ ಸೋಲು ಅನುಭವಿಸಿತು ನ್ಯೂಜಿಲೆಂಡ್. ಕುಲ್ದೀಪ್ 4, ಭುವಿ ಮತ್ತು ಶಮಿ ತಲಾ 2 ವಿಕೆಟ್ ಪಡೆದ್ರು.

LEAVE A REPLY

Please enter your comment!
Please enter your name here