Home Crime ಇಟ್ಕೊಂಡೋಳಿಗಾಗಿ ಕಟ್ಕೊಂಡೋಳನ್ನ ಮುಗಿಸಲು ಸ್ಕೆಚ್ ಹಾಕಿದ್ದ ಪೊಲೀಸಪ್ಪ..!? ಕೃತ್ಯ ತಿಳಿದರೂ ನನಗೆ ಗಂಡ ಬೇಕೆಂದ ಸತಿ…

ಇಟ್ಕೊಂಡೋಳಿಗಾಗಿ ಕಟ್ಕೊಂಡೋಳನ್ನ ಮುಗಿಸಲು ಸ್ಕೆಚ್ ಹಾಕಿದ್ದ ಪೊಲೀಸಪ್ಪ..!? ಕೃತ್ಯ ತಿಳಿದರೂ ನನಗೆ ಗಂಡ ಬೇಕೆಂದ ಸತಿ…

701
0
SHARE

ಪ್ರೇಯಸಿಯೊಂದಿಗೆ ಮದುವೆಯಾಗಲು ಕಟ್ಟಿಕೊಂಡ ಪತ್ನಿಗೆ ಐದು ಲಕ್ಷಕ್ಕೆ ಸುಪಾರಿ ಕೊಟ್ಟಿದ್ದ ಕಿರಾತಕ ಪೊಲೀಸ್ ಹೆಡ್ ಕಾನ್ಸ್ ಸ್ಟೆಬಲ್ ಅಂದರ್ ಆಗಿದ್ದಾನೆ.. ಸುಪಾರಿ ಪಡೆದ ಕೊಲೆಗಡುಕರು ಹಲವು ಬಾರಿ ಪೊಲೀಸಪ್ಪನ ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದರೂ, ಅದು ಅವರಿಂದ ಸಾಧ್ಯವಾಗಲಿಲ್ಲ. ಕೊಲೆ ಗಡುಕರಲ್ಲಿದ್ದ ಅಂತಃಕರಣ ಈ ಪಾಪಿ ಪೊಲೀಸ್ ಗೆ ಇರಲಿಲ್ಲ.

ಪತ್ನಿಯನ್ನು ಮುಗಿಸಿ ಇಟಲಿಯಲ್ಲಿ ಪ್ರೇಯಸಿಯೊಂದಿಗೆ ಸೆಟಲ್ ಆಗಲು ಹೊರಟವನು ಆಗ ಜೈಲಿನಲ್ಲಿ ಸೆಟಲ್ ಆಗಿದ್ದಾನೆ..ಖಾಕಿತೊಟ್ಟು ಸಮಾಜದಲ್ಲಿರುವ ಕ್ರಿಮಿನಲ್ ಗಳನ್ನು ಹಿಡಿದು ಸರಿದಾರಿಗೆ ತರಬೇಕಾದ ಪೊಲೀಸ್ ಹೆಡ್ ಕಾನ್ಸ್ ಸ್ಟೆಬಲ್ ಒಬ್ಬ ಅನೈತಿಕ ಸಂಬಂಧದ ತೆಕ್ಕೆಗೆ ಬಿದ್ದು, ಪತ್ನಿಯನ್ನು ಮುಗಿಸುವಷ್ಟರ ಮಟ್ಟಿಗೆ ಕ್ರಿಮಿನಲ್ ಆಗಿ ಈಗ ಅಂದರ್ ಆಗುವಂತಾಗಿದೆ.

ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ ಸ್ಟೆಬಲ್ ಆಗಿರುವ ರವಿಂದ್ರಗಿರಿ ಪತ್ನಿ ಅನಿತಾರನ್ನು ಕೊಲೆ ಮಾಡಲು ಸೋಹಿಲ್ ಎಂಬ ಕುಖ್ಯಾತ ಪಾತಕಿಗೆ ಐದು ಲಕ್ಷಕ್ಕೆ ಸುಪಾರಿ ನೀಡಿದ್ದ. ಇದಕ್ಕೆ ಕಾರಣ ತಾನು ಪ್ರೀತಿಸುತ್ತಿದ್ದ ನರ್ಸ್ ಎಲಿಜಬೇತ್ ಜೊತೆ ಇಟ್ಟುಕೊಂಡ ಅನೈತಿಕ ಸಂಬಂಧ.ಭದ್ರಾವತಿಯ ಕೂಲಿಶೆಡ್ ಬ್ಲಾಕ್ ನ ನಿವಾಸಿಯಾಗಿರುವ ಎಲಿಜಬೆತ್ ನರ್ಸಿಂಗ್ ಓದಿಕೊಂಡು ಫಾರಿನ್ ಗೆ ಹೋಗುವ ಸಲುವಾಗಿ ಪಾಸ್ ಪೋರ್ಟ್ ಮಾಡಿಸಲು ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಗೆ ಬಂದಾಗ ಇಬ್ಬರ ಪರಿಯಚವಾಗಿ ಬಳಿಕ ಅದು ಪ್ರೀತಿಗೆ ತಿರುಗಿತ್ತು,

ದಿನಾ ಎಲಿಜಬೆತ್‌ಳೊಂದಿಗೆ ಮಾತನಾಡುತ್ತಿದ್ದ ರವೀಂದ್ರಗಿರಿ ಮೇಲೆ ಪತ್ನಿ ಸಂಶಯ ಪಟ್ಟಿದ್ದಾಳೆ, ಈ ಬಗ್ಗೆ ಅನಿತಾ, ಎಸ್ಪಿ ಅಭಿನವ್ ಖರೆಗೆ ಕೂಡ ದೂರು ನೀಡಿದ್ದರು.ಇನ್ನೂ ಈ ರೀತಿಯಾಗುತ್ತಿದ್ದಂತೆ ಏನಾದ್ರೂ ಮಾಡಿ ಪತ್ನಿಯನ್ನು ಮುಗಿಸಿ ಪ್ರೇಯಸಿಯೊಂದಿಗೆ ಹೋಗಿ ಸೆಟಲ್ ಆಗೋಣ ಎಂದು ಪ್ಲಾನ್ ಮಾಡಿದ ರವೀಂದ್ರ ಶಿವಮೊಗ್ಗದ ಎಲಿಯಾಸ್ ನಗರದ ಸೋಹಿಲ್,ಫಿರೋಜ್ ಅಲಿಯಾಸ್ ಜೆಟ್ಲಿ,ವಾಷರ್,ಸೈಪುಲ್ಲಾ ಎಂಬುರವರ ಗ್ಯಾಂಗ್ ಗೆ ರವಿಂದ್ರಗಿರಿ ಐದು ಲಕ್ಷಕ್ಕೆ ಡೀಲ್ ಫಿಕ್ಸ್ ಮಾಡ್ತಾನೆ.

ರವಿಂದ್ರಗಿರಿ ನೀಡಿದ ಮಾರ್ಗದರ್ಶನದಂತೆ ಸುಹೇಲ್ ಸೈಪುಲ್ ಟೀಂ ಎರಡು ಮೂರು ಬಾರಿ ಅನಿತಾ ಮಗುವನ್ನು ಕರ್ಕೊಂಡು ಬರೋವಾಗ ನೇರವಾಗಿ ಎದುರಾಗಿದೆ.ಆದರೆ ಮಗುವನ್ನು ನೋಡಿ, ಕೊಲೆಗಡುಕರ ಮನಸ್ಸು ಕೊಲೆ ಮಾಡಲು ಹಿಂದೇಟು ಹಾಕಿದ್ದಾರೆ.ಆದ್ರೆ ಮೊದಲ ಪತ್ನಿ ಅನಿತಾ ಮಾತ್ರ ಘಟನೆಯಿಂದ ಕಂಗಾಲಾಗಿದ್ದರೂ, ನನ್ನ ಪತಿ ನನಗೆ ಬೇಕು ಎಂದು ಮನವಿ ಮಾಡಿದ್ದಾರೆ.

ರವಿಂದ್ರ ಹಾಕಿದ ಸ್ಕೆಚ್ ದೂರದ ಇಟಲಿಯಲ್ಲಿರುವ ಎಲಿಜಬೇತ್ ಗೆ ಗೊತ್ತಿದಿಯೋ ಇಲ್ಲವೋ.. ಇನ್ನು ಸ್ಪಷ್ಟವಾಗಿಲ್ಲ. ಒಟ್ಟಾರೆ ಕೊಲೆಗಡುಕರಂತ ಕಲ್ಲು ಮನಸ್ಸುಗಳೇ ಕರಗುತ್ತವೇ ಎನ್ನುವುದಾದರೆ. ಕಟ್ಟಿಕೊಂಡ ಗಂಡನೇ ಮತ್ತೊಬ್ಬಳಿಗಾಗಿ ಕಲ್ಲುಹೃದಯಿಯಾಗಿದ್ದು ನಿಜಕ್ಕೂ ವಿಪರ್ಯಾಸ.

LEAVE A REPLY

Please enter your comment!
Please enter your name here