Home Crime ಇಡೀ ಪ್ರಪಂಚವನ್ನೇ ಬೆಚ್ಚಿಬೀಳಿಸಿತ್ತು ಐರ್ಲೆಂಡ್ ನಲ್ಲಿ ಕನ್ನಡತಿಯ ಆ ಸಾವು..?! ಸತತ 6 ವರ್ಷಗಳ ಸುದೀರ್ಘ...

ಇಡೀ ಪ್ರಪಂಚವನ್ನೇ ಬೆಚ್ಚಿಬೀಳಿಸಿತ್ತು ಐರ್ಲೆಂಡ್ ನಲ್ಲಿ ಕನ್ನಡತಿಯ ಆ ಸಾವು..?! ಸತತ 6 ವರ್ಷಗಳ ಸುದೀರ್ಘ ಹೋರಾಟ..! ಅನಿಷ್ಠ ಕಟ್ಟುಪಾಡಿಗೆ ಬ್ರೇಕ್ ಬೀಳುತ್ತಾ..?!!

760
0
SHARE

ಬೆಳಗಾವಿ ಮೂಲದ ದಂತ ವೈದ್ಯೆ ಡಾ.ಸವಿತಾ ಹಾಲಪ್ಪನವರ ಸಾವು ಇಡೀ ಪ್ರಪಂಚವನ್ನೇ ಬೆಚ್ಚಿಬೀಳಿಸಿತ್ತು. ಐರ್ಲೆಂಡ್ ದೇಶದ ಕ್ಯಾಥೋಲಿಕ್ ಕಟ್ಟುಪಾಡಿನಿಂದ ವೈದ್ಯೆ ಸವಿತಾ ಗರ್ಭಪಾತ ಮಾಡದ ಕಾರಣ ಅಸುನೀಗಿದ್ದಳು. ಸವಿತಾಳ ಸಾವಿನ ವಿರುದ್ಧ ಸಿಡಿದೆದ್ದ ಜನಾಕ್ರೋಶಕ್ಕೆ ಸ್ವಯಂ ಐರ್ಲೆಂಡ್ ಸರ್ಕಾರವೇ ತಬ್ಬಿಬ್ಬಾಗಿತ್ತು…

ಸವಿತಾ ಕುಟುಂಬಸ್ಥರ ಸತತ 6 ವರ್ಷಗಳ ಸುದೀರ್ಘ ಹೋರಾಟದ ಫಲವಾಗಿ ಇವತ್ತು ಐರ್ಲೆಂಡ್ ದೇಶದಲ್ಲಿ ಗರ್ಭಪಾತ ಬೇಕಾ… ಬೇಡವಾ ಎಂಬ ಜನಾಭಿಪ್ರಾಯವನ್ನ ಸಂಗ್ರಹಿಸುತ್ತಿದ್ದು, ಜನಾದೇಶ ಸವಿತಾ ಪರ ಬಂದ್ರೆ ಕ್ಯಾಥೋಲಿಕ ಧರ್ಮದ ಅನಿಷ್ಠ ಕಟ್ಟುಪಾಡಿಗೆ ಬ್ರೇಕ್ ಬೀಳಲಿದೆ…

ಇಷೊಂದು ಚೆಂದವಾಗಿ ಕಾಣ್ತಿರೋ ಈ ಕನ್ನಡತಿ ಹೆಸ್ರು. ಡಾ. ಸವಿತಾ ಅಂತ. ಈ ಸವಿತಾ ಹಾವೇರಿ ಮೂಲದ ಪ್ರವೀಣ ಹಾಲಪ್ಪ ಎಂಬಾತನನ್ನು ಮದುವೆಯಾಗಿ 2008ರಲ್ಲಿ ಐರ್ಲೆಂಡ್ ದೇಶದಲ್ಲಿ ವಾಸವಾಗಿದ್ದರು. 2012ರಲ್ಲಿ ಡಾ. ಸವಿತಾ ಗರ್ಭದಲ್ಲಿ ರಕ್ತ ಸಾವ್ರವಾಗಿದ್ದರಿಂದ ಐರ್ಲೆಂಡಿನ ಗ್ಲಾಲ್ವೇ ಯುನಿವರ್ಸಿಟಿ ಆಸ್ಪತ್ರೆ ವೈದ್ಯರ ಬಳಿ ಗರ್ಭಪಾತ ಮಾಡಿಸುವಂತೆ ಬೇಡಿಕೊಂಡ್ರೂ ವೈದ್ಯರು ಮಾತ್ರ ಗರ್ಭಪಾತ ಮಾಡಲಿಲ್ಲ….

ಐರ್ಲೆಂಡಿನ ಕ್ಯಾಥೋಲಿಕ್ ಧರ್ಮದ ಕಟ್ಟುಪಾಡಿನಂತೆ ಗರ್ಭಪಾತ ನಿಷೇಧ ಕಾಯ್ದೆ ಜಾರಿಗೊಳಿಸಿದ್ದರಿಂದ ಕನ್ನಡತಿ ಡಾ.ಸವಿತಾ ನರಕಯಾತನೆ ಅನುಭವಿಸಿ ಕೊನೆಯುಸಿರು ಎಳೆದಳು. ಇದು ಇಡೀ ಐರ್ಲೆಂಡ್, ಭಾರತ ಸೇರಿ ವಿವಿಧ ದೇಶದಲ್ಲಿ ಜನಾಕ್ರೋಶಕ್ಕೆ ಕಾರಣವಾಯಿತು.  ಅಂದಾನಪ್ಪಾ ಯಾಳಗಿ, ಮೃತ ಸವಿತಾ ತಂದೆಡಾ…

ಸವಿತಾ ಸಾವು ಆಕೆಯ ಕುಟುಂಬಸ್ಥರಲ್ಲಿ ಐರ್ಲೆಂಡಿನ ಕ್ಯಾಥೋಲಿಕ ಧರ್ಮದ ಅನಿಷ್ಠ ಕಟ್ಟುಪಾಡಿನ ವಿರುದ್ಧ ಸಿಡಿದೇಳುವಂತೆ ಮಾಡಿತು. ಸತತ 6ವರ್ಷಗಳಿಂದ ಐರ್ಲೆಂಡಿನಲ್ಲಿರುವ ಗರ್ಭಪಾತ ನಿಷೇಧ ಕಾಯ್ದೆಯನ್ನ ತೆಗೆದು ಹಾಕಬೇಕೆಂದು ಹೋರಾಟ ಆರಂಭಿಸಿದ್ರು. ಸವಿತಾ ಪಾಲಪ್ಪನವರ ಕುಟುಂಬಸ್ಥರ ಹೋರಾಟಕ್ಕೆ ಪ್ರಪಂಚದಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಯಿತು…

ಅದರ ಫಲವಾಗಿ ಇಂದು ಐರ್ಲೆಂಡ್ ಸರ್ಕಾರ 6 ವರ್ಷಗಳ ಬಳಿಕ ಗರ್ಭಪಾತ ಬೇಕಾ ಅಥವಾ ಬೇಡವಾ ಎಂದು… ಜನಾದೇಶ ಸಂಗ್ರಹಿಸುತ್ತಿದೆ. ಇವತ್ತು ಐರ್ಲೆಂಡ್ ದೇಶದ ಜನತೆ ಗರ್ಭಪಾತ ಬೇಕು ಎಂದು ಸಂದೇಶ ನೀಡ್ತಿದ್ದಾರೆ…

ಅಂದಾನಪ್ಪಾ ಯಾಳಗಿ. ಮೃತ ಸವಿತಾ ತಂದೆಒಟ್ನಲ್ಲಿ ಐರ್ಲೆಂಡನಲ್ಲಿ ನಡೆಯುತ್ತಿರುವ ಜನಾದೇಶ ಸವಿತಾ ಹಾಲಪ್ಪನವರ ಪರವಾಗಿ ಬರಲಿ.  ಐರ್ಲೆಂಡ್ ದೇಶ ಗರ್ಭಪಾತ ನಿಷೇಧ ತೆಗೆದು ಹಾಕಿ ರಚಿಸುವ ಹೊಸ ಕಾನೂನಿಗೆ ಡಾ. ಸವಿತಾ ಹಾಲಪ್ಪನವರ ಹೆಸರನ್ನ ಇಡ್ಬೇಕೆಂದು ಸವಿತಾ ಕುಟುಂಬಸ್ಥರ ಒತ್ತಾಸೆಯಾಗಿದೆ… 

LEAVE A REPLY

Please enter your comment!
Please enter your name here