Home District ಇದು ಆಭರಣ, ವೊಡವೆಯಲ್ಲಾ, “ಆಭರಣದ ಹಾವು”..!! ನೆಲಮಂಗಲದಲ್ಲಿ ಪತ್ತೆಯಾದ ವಿಶಿಷ್ಟ ಹಾವಿಗೆ ಜನತೆ ಸೆಳೆತ..?!

ಇದು ಆಭರಣ, ವೊಡವೆಯಲ್ಲಾ, “ಆಭರಣದ ಹಾವು”..!! ನೆಲಮಂಗಲದಲ್ಲಿ ಪತ್ತೆಯಾದ ವಿಶಿಷ್ಟ ಹಾವಿಗೆ ಜನತೆ ಸೆಳೆತ..?!

1021
0
SHARE

ಪ್ರಕೃತಿ ಮಡಿಲಿನಲ್ಲಿ ಜನಸಾಮಾನ್ಯರು ಸೇರಿದಂತೆ ಅದೆಷ್ಟೋ ಜೀವ ಸಂಕುಲ ಗಳಿವೆ, ಅದೇ ರೀತಿ ಜನಸಾಮಾನ್ಯರ ಕಾಣದಂತಿರುವ ವಿಶಿಷ್ಟ ಜೀವರಾಶಿಯಂತಿರುವ ಈ ಆಭರಣದ ಹಾವು ಮತ್ತದರ ಮೊಟ್ಟೆಗಳನ್ನ ವನ್ಯಜೀವಿ ಸಂರಕ್ಷಕ ಸ್ನೇಕ್ ಲೋಕೇಶ್ ರಕ್ಷಿಸಿರುವ ಘಟನೆ ಬೆಂಗಳೂರು ಗ್ರಾ. ಜಿಲ್ಲೆ ನೆಲಮಂಗಲ ಪಟ್ಟಣದಲ್ಲಿ ನೆಡೆದಿದೆ.

ಕಳೆದ ರಾತ್ರಿ ತುಮಕೂರು ರಸ್ತೆಯ ಕುಣಿಗಲ್ ಬೈಪಾಸ್ ಸಮೀಪದ ವೇಬ್ರಿಡ್ಜ್ ಬಳಿ ಈ ಹಾವನ್ನ ಹಿಡಿದು ಸಂರಕ್ಷಿಸಿದ್ದಾರೆ. ಬೆಳಿಗ್ಗೆ ಎದ್ದು ನೋಡಿದ ಲೋಕೇಶ್ ಈ ಹಾವು ರಾತ್ರಿ 9 ಮೊಟ್ಟೆ ಗಳನ್ನಿಟ್ಟಿರುವುದು ಕಂಡು ಬಂದಿದ್ದು, ಹೀಗಾಗಿ ಆ ಆಭರಣದೊಂದಿಗೆ ಈ ವಿಶಿಷ್ಟ ಪ್ರಬೇಧದ ಹಾವಿನ ಮೊಟ್ಟೆಗಳನ್ನು ಸಂರಕ್ಷಿಸುವ ಸಲುವಾಗಿ ಕೃತಕವಾಗಿ ಮರಳು ಮತ್ತು ನೀರಿನ ಸಹಾಯದಿಂದ ಅದಕ್ಕೆ ಬೇಕಾದ ಉಷ್ಣಾಂಶದಲ್ಲಿ ಸಂಗ್ರಹ ಹಾರೈಕೆ ಮಾಡುತ್ತಿದ್ದಾರೆ.

ಇನ್ನೂ ಯಾವುದೇ ರೀತಿಯ ವಿಷಕಾರಿ ಪ್ರಬೇಧದ ಹಾವಲ್ಲದ ಈ ಹಾವು ಬಿಸಿನಲ್ಲಿ ಚಲಿಸುವ ವೇಳೆ ಮೈಮೇಲಿನ ಅರ್ಧಭಾಗ ಆಭರಣದ ಚಿನ್ಹೆಹೊಂದಿದ್ದು, ಇನ್ನುಳಿದ ಉಳಿದ ಅರ್ಧ ಭಾಗ ಸಾಮಾನ್ಯ ರೀತಿಯಲ್ಲಿದೆ. ಇದು ಬಿಸಿಲಿಗೆ ಹೆಚ್ಚು ತಡೆಯದೇ ಬಹುತೇಕ ಹೆಚ್ಚಾಗಿ ಹಸಿರು, ನೀರು ಹರಿಯುವ ತ್ಯಾವಾಂಶದ ಪ್ರದೇಶಗಳಲ್ಲಿ ಕಾಣಿಸುತ್ತದೆ.

ಹೀಗಾಗಿ ಈ ಆಭರಣದ ತಾಯಿ ಹಾವನ್ನು ಇಂದು ಸುರಕ್ಷಿತವಾಗಿ ಅರಣ್ಯ ಪ್ರದೇಶದಲ್ಲಿ ಬಿಟ್ಟು, ಮತ್ತದರ ಮೊಟ್ಟೆಗಳನ್ನು 90 ದಿನಗಳ ಕಾಲ ಹಾರೈಕೆ ಮಾಡಿ ಮೊಟ್ಟೆಗಳಿಂದ ಮರಿಗಳು ಹೊರ ಬಂದ ಬಳಿಕ ಯಾವುದೇ ತೊಂದರೆ ಯಾಗದಂತೆ ಸಂರಕ್ಷಿಸಿ, ಮರಿಹಾವುಗಳನ್ನ ಪ್ರಕೃತಿ ಮಡಿಲಿಗೆ ಸೇರಿಸುವುದಾಗಿ ವನ್ಯಜೀವಿ ಸಂರಕ್ಷಕ ಸ್ನೇಕ್ ಲೋಕೇಶ್ ತಿಳಿಸುದ್ರು.

LEAVE A REPLY

Please enter your comment!
Please enter your name here