Home Latest ಇದು ಇಂಡಿಯನ್ ಎಣ್ಣೆ ಪ್ರಿಯರೆಲ್ಲಾ ಹೆಮ್ಮೆ ಪಡುವಂತಹ ಕಿಕ್ಕೇರಿಸೋ ಖಡಕ್ ಮ್ಯಾಟರ್.!? ನೋಡಲು ಮರೆಯದಿರಿ ಮರೆತು...

ಇದು ಇಂಡಿಯನ್ ಎಣ್ಣೆ ಪ್ರಿಯರೆಲ್ಲಾ ಹೆಮ್ಮೆ ಪಡುವಂತಹ ಕಿಕ್ಕೇರಿಸೋ ಖಡಕ್ ಮ್ಯಾಟರ್.!? ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ, ಕಾಸು ಕೊಡದೇ ಇದ್ರು ಕಿಕ್ಕೇರೋದು ಗ್ಯಾರೆಂಟಿ.!?

2311
0
SHARE

ದೂರದ ಕೇರಳದಲ್ಲಿ ಎರಡು ದಿನಗಳ ಕಾಲ ಬಾರ್ ಗಳಿಗೆ ರಜೆಯಿದ್ದ ಕಾರಣ ಅಲ್ಲಿನ ಬಾರ್ ಗಳು ತೆರೆದಿರಲಿಲ್ಲ, ಕುಡಿಯದೇ ಬರಗೆಟ್ಟಿದ್ದ ಆ ಮಂದಿಯ ನಾಲಿಗೆಗಳು ಅವರನ್ನು ಹೈ ಸ್ಪೀಡ್ ಓಟಕ್ಕೆ ಎನ್ ಕರೇಜ್ ಮಾಡಿಬಿಟ್ಟಿವೆ. ಗೇಟು ತೆರೆಯುವುದನ್ನೂ ಕಾಯಲಾಗದೇ ಮುಗಿ ಬಿದ್ದು ಗೇಟು ತೆರೆಯುತ್ತಿದ್ದಂತೆ ಯಾವುದೇ ಓಟದ ಕಾಂಪಿಟೆಷನ್ ನಲ್ಲಿ ಪಾಲ್ಗೊಂಡಿದ್ದಾರೇನೋ ಅನ್ನುವ ಮಟ್ಟಕ್ಕೆ ಓಡಿಬಿಟ್ಟರಲ್ಲಾ, ಶಿವ ಶಿವ ಭಾರತದಲ್ಲಿ ಎಣ್ಣೆಗೆ ಈ ಮಟ್ಟಿಗಿನ ಕ್ರೇಜ್ ಇದೆಯಾ.? ಅದು ಕ್ರೇಜಾ ಇಲ್ಲಾ ಅಡಿಕ್ಷನ್ನಾ.? ಈ ದೃಶ್ಯ ಕೇವಲ ಕೇರಳದ ಆ ಮಂದಿಯ ಮನಸ್ಥಿತಿಯನ್ನಲ್ಲಾ ಇಡೀ ಭಾರತದ ಎಣ್ಣೆ ಪ್ರಿಯರ ಮನಸ್ಸಿನ ಪ್ರತಿರೂಪಲ್ಲದೇ ಮತ್ತೇನು ಅಲ್ಲ.!

ಆಲ್ಕೋಹಾಲ್ ಇಂದು ನೆನ್ನೆಯದಲ್ಲಾ ಪಿಜಾ ಬರ್ಗರ್ ರೀತಿಯ ನೆನ್ನೆ ಮೊನ್ನೆಯ ವಸ್ತುವಲ್ಲ.! ಅನಾದಿ ಕಾಲದಲ್ಲಿದಿಂದಲೂ ಒಂದಲ್ಲಾ ಒಂದು ರೂಪದಲ್ಲಿ ಮನುಷ್ಯನ ಅವಿಭಾಜ್ಯ ಅಗವಾಗಿದೆ. ದೇವಾನು ದೇವತೆಗಳೇ ಈ ಪಾನಕ್ಕೆ ಫಿದಾ ಆಗಿದ್ದವು ಎಂಬ ವಿಚಾರ ನಿಮಗೆ ಗೊತ್ತಿರಲಿ.ಅಸಲಿಗೆ ದೇವಾನು ದೇವತೆಗಳು ಪ್ರತಿನಿತ್ಯ ಈ ಆಲ್ಕೋಹಾಲ್ ಗೆ ದಾಸರಾಗಿದ್ದರು ಎಂಬ ವಿಚಾರಕ್ಕೆ ಸಾಕ್ಷಿಗಳಿಲ್ಲ. ಆದರೆ ನಾವೀಗ ಹೇಳಹೊರಟಿರುವ ಮನುಷ್ಯ ಮತ್ತು ಆಲ್ಕೋಹಾಲ್ ನ ಸಂಬಂಧಕ್ಕೆ ಪಕ್ಕಾ ಸಾಕ್ಷಿಗಳಿವೆ. ಅಸಲಿಗೆ ಈ ಆಲ್ಕೋಹಾಲ್ ನ ಹುಟ್ಟು ಶುರುವಾಗುವುದು ಸಾವಿರಾರು ವರ್ಷಗಳಾಚೆಯಿಂದ.

ಬರೊಬ್ಬರಿ ಕ್ರಿಸ್ತ ಪೂರ್ವ 7000 ದಿಂದ 6600 ರವರೆಗಿನ ಸಮಯದಲ್ಲಿ ಉತ್ತರ ಚೀನಾದ ಆದಿ ಮಾನವ ಪುಟ್ಟ ಪುಟ್ಟ ಜಾರ್ ಗಳಲ್ಲಿ ದ್ರಾಕ್ಷಿ ಮತ್ತಿತರ ಹಣ್ಣುಗಳನ್ನು ಕೊಳೆಯಿಸಿ ಇಟ್ಟು ಅದರಿಂದ ಆಲ್ಕೋಹಾಲ್ ಪಡೆದು ಸೇವಿಸುತ್ತಿದ್ದ ಸಂಗತಿ ಸಂಶೋಧನೆಯಿಂದ ಬೆಳಕಿಗೆ ಬಂದಿತ್ತು. ಅದಾದಾ ನಂತರದಲ್ಲಿ ಅಂದರೆ  ಮೆಸಪಟೋಮಿಯಾದ ಸಮ್ಮೇರಿಯನ್ ಗಳು ಕ್ರಿಸ್ತ ಪೂರ್ವ 3000 ದ ಸಮಯದಲ್ಲಿ ಆಲ್ಕೋಹಾಲ್ ನ ಮತ್ತೊಂದು ರೂಪವಾದ ಬಿಯರ್ ಅನ್ನು ಶೋಧಿಸೊಕೊಂಡು ಆಸ್ವಾದಿಸುತ್ತಾ ಬಂದರು.ಕಿಕ್ಕಿನ ಜೊತೆ ಶಕ್ತಿಯನ್ನೂ ಕೊಡುತ್ತದೆ ಎಂದು ನಂಬಿದ್ದ ಮೆಸಪಟೋಮಿಯನ್ನರ ಸ್ಥಳದಲ್ಲಿ ನಡೆಸಲಾದ ಶೋಧದಲ್ಲಿ ಇಪ್ಪತ್ತಕ್ಕೂ ಹೆಚ್ಚು ಮಣ್ಣಿನ ಜಾರ್ ಗಳಲ್ಲಿ ಅಷ್ಟೇ ವೆರೈಟಿ ಬಿಯರ್ ಸಂಗ್ರಹಿಸಿಲಾಡಗಿರುವುದನ್ನು ಶೋಧಿಸಿದ್ದರು.

ದೂರದ ಮೆಸಪಟೋಮಿಯಾದ ಸಮ್ಮೇರಿಯನ್ನರು ಬಿಯರ್ ಅನ್ನು ಶೋಧಸಿ ಸವಿದರು ಅದಾದ ನಂತರದಲ್ಲಿ ಆಲ್ಕೋಹಾಲ್ ಟ್ರೆಂಡ್ ಸುತ್ತಮುತ್ತ ಪಸರಿಸತೊಡಗಿತು. ಪಕ್ಕದಲ್ಲೇ ಇರುವ ಈಜಿಪ್ಟ್ ನಲ್ಲಿದ್ದ ಮಂದಿ ಸ್ವಲ್ಪ ಫಾರ್ವಡ್ ಆಗಿ ಆ ಬಿಯರ್ ಜೊತೆ ಬ್ರೆಡ್ ಅನ್ನು ಮೆಲ್ಲಲು ಶುರುಮಾಡಿದರು. ತಮ್ಮ ದೈನಂದಿನ ಉಪಹಾರವಾಗಿ ಈ ಬಿಯರ್ ಮತ್ತು ಬ್ರೆಡ್ ಅನ್ನೇ ಬಳಸುತ್ತಿದ್ದರು ಆ ಈಜಿಪ್ಟಿಯನ್ನರು. ಇಷ್ಟೇ ಅಲ್ಲದೆ ಈ ಈಜಿಪ್ಟಿಯನ್ನರು ಈ ಬಿಯರ್ ಅನ್ನು ತಮ್ಮ ದೇವರ ಆಹಾರ ಅಂತಲೇ ನಂಬಿದ್ದರು. ಆ ಈಜಿಪ್ಟಿಯನ್ನರ ಬಿಯರ್ ಗೊಧಿ,ಬಾರ್ಲಿ,ಮತ್ತಿತರ ಪದಾರ್ಥಗಳಿಂದ ತಯಾರಾಗುತ್ತಿತ್ತು.

ಈಜಿಪ್ಟಿಯನ್ನರು ಬಿಯರ್ ಜೊತೆ ಬ್ರೆಡ್ ಸೇವಿಸುವುದನ್ನು ರೂಢಿಸಿಕೊಂಡ ಮೇಲೆ, ಆ ಗಮಲು ಗ್ರೀಸ್ ದೇಶಕ್ಕೆ ಬಡಿಯತೊಡಗಿದಾಗ ಗ್ರೀಸ್ ದೇಶದ ಮಂದಿ ತಾವೇ ತಮ್ಮದೇ ಆದ ಒಂದು ಆಲ್ಕೋಹಾಲ್ ಅನ್ನು ಕಂಡುಕೊಳ್ಳಲು ನಿರ್ಧರಿಸಿ ವೈನ್ ತಯಾರಿಸಿಬಿಟ್ಟರು. ಅದಾದ ನಂತರದಲ್ಲಿ ರೋಮನ್ ಸಾಮ್ರಾಜ್ಯದಲ್ಲಿ ವೈನ್ ಕ್ರೇಜ್ ಹುಟ್ಟಿತು. ಗ್ರೀಕರ ವೈನ್ ತಯಾರಿಸುವ ಶೈಲಿಯನ್ನೇ ಅನುಸರಿಸಿದ ರೋಮ್ ಮಂದಿ ವೈನ್ ಅನ್ನು ತಮ್ಮ ಪ್ರಿಯವಾದ ಪಾನೀಯವನ್ನಾಗಿಸಿಕೊಂಡರು.ದೊಡ್ಡ ಪ್ರಮಾಣದಲ್ಲಿ ವೈನ್ ಯಾರ್ಡ್ ಗಳಲ್ಲಿ ಭಾರೀ ಪ್ರಮಾಣದ ವೈನ್ ಅನ್ನು ತಯಾರಿಸಲು ಶುರುಮಾಡಿದರು.

1525 ರ ಹೊತ್ತಿಗೆ ನಮ್ಮನ್ನು ಬಾಚಿ ಎಸ್ಕೇಪ್ ಆದ ಬ್ರಿಟೀಷರು ಬೆಲೆಬಾಳುವ ಸ್ಪಿರಿಟ್ ಗಳನ್ನು ಉತ್ಪಾದಿಸಲು ಶುರುಮಾಡಿದರು. ಅಷ್ಟೇ ಅಲ್ಲದೆ ಬ್ರಿಟೀಷರು ತಮ್ಮ ಸೈನ್ಯದಲ್ಲೂ ಈ ಸ್ಪಿರಿಟ್ ಗಳನ್ನು ಉಪಯೋಗಿಸಲು ಶುರುಮಾಡಿಬಿಟ್ಟರು.ಅಲ್ಲಿಗೆ ಬ್ರಿಟೀಷರು ಆಲ್ಕೋಹಾಲ್ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲನ್ನು ದಾಟಿಬಿಟ್ಟರು. ಬ್ರಿಟೀಷರ ವಿಸ್ಕಿ ಜಿನ್ ಗಳನ್ನೊಳಗೊಂಡ ಅನೇಕ ಸ್ಪಿರಿಟ್ ಗಳ ಸೆಳೆತಕ್ಕೆ ಒಳಗಾದ ಆ ದೇಶದ ಪಕ್ಕದ ಐರ್ಲ್ಯಾಂಡ್ ಮತ್ತು ಸ್ಕಾಟ್ ಲ್ಯಾಂಡ್ ದೇಶಗಳು ಆ ಸ್ಪಿರಿಟ್ ಗಳ ಅಮಲಿನಲ್ಲಿ ತೇಲತೊಡಗಿದರು.

ಹೌದು ಎನ್ನುತ್ತಿದೆ, ಇತ್ತೀಚೆಗೆ ನಡೆಯ ಸಂಶೋಧನೆಯ ರಿಪೋರ್ಟ್.! ಅಸಲಿಗೆ ಬ್ರಿಟೀಷರು ಕದ್ದೊಯ್ದ ಆ ಸೀಕ್ರೇಟ್ ಏನು ಗೊತ್ತಾ.? ನಮ್ಮ ಭಾರತೀಯರು ಬ್ರಿಟೀಷರಿಗಿಂತ ಮೊದಲೇ ಕಂಡುಕೊಂಡಿದ್ದ ಆಲ್ಕೋಹಾಲ್ ನಲ್ಲಿ ಬೆರೆಸಲಾಗುವ ಆ ಸೀಕ್ರೇಟ್ ಪರಿಕರಗಳು. ಹೌದು ಬ್ರಿಟೀಷರು ನಮ್ಮ ಭಾರತೀಯರು ಕಂಡುಕೊಂಡಿದ್ದ ಆಲ್ಕೋಹಾಲ್ ನ ಅದ್ಬುತ ಟೇಸ್ಟ್ ಅನ್ನು ಕದ್ದು, ಅದು ತಮ್ಮದೇ ಎಂದು ಬಿಲ್ಡಪ್ ತೆಗೆಡುಕೊಳ್ಳುವುದರ ಜೊತೆಗೇ ಚೆನ್ನಾಗಿ ಕಮಾಯಿಯನ್ನು ಮಾಡಿಕೊಂಡರು…

ಇಂದು ಅನೇಕ ಮಂದಿ ಇಂಪೋರ್ಟೆಡ್ ಎಣ್ಣೆ ಅನ್ನೋ ಗುಂಗಿನಲ್ಲಿ ಲಕ್ಷಾಂತರ ರೂಪಾಯಿಗಳನ್ನು ತೆತ್ತು ತರಿಸಿಕೊಳ್ಳುತ್ತಿರುವ ಆ ಪ್ರತಿ ಇಂಪೋರ್ಟೆಡ್ ಬಾಟಲ್ ಗಳ ಒಳಗಿನ ಹನಿ ಹನಿ ಎಣ್ಣೆಯಲ್ಲೂ ನಮ್ಮ ಭಾರತೀಯರ ಗಮಲಿದೆ, ಆದರೆ ಈ ವಿಚಾರ ಮಾತ್ರ ಅದನ್ನು ಸೇವಿಸುತ್ತಾ ವಾವ್ ಫಾರಿನ್ ಮಾಲ್ ಅಂತಿರುವವರಿಗೆ ಗೊತ್ತೇ ಆಗುತ್ತಿಲ್ಲ. ಅದರೆ ಭಾರತೀಯ ಲೋಕಲ್ ಬ್ರ್ಯಾಂಡ್ ಗಳನ್ನು ಸೇವಿಸುವ ಮಂದಿಗೆ ಮಾತ್ರ ಇದು ಹೆಮ್ಮೆಯ ವಿಚಾರವೇ ಅಲ್ವಾ,.? ಜಗತ್ತಿನಾದ್ಯಂತ ಫೇಮಸ್ ಆಗಿರುವ ಅಷ್ಟೂ ಎಣ್ಣೆ ಬ್ರಾಂಡ್ ಗಳ ರಿಚ್ ಟೇಸ್ಟ್ ನಮ್ಮ ಭಾರತದ್ದೇ.!

LEAVE A REPLY

Please enter your comment!
Please enter your name here