Home Cinema ಇದು ನನಗೆ ಬಯಸದೆ ಬಂದ ಭಾಗ್ಯ.. ಟಕೆಟ್ ವಿಚಾರಕ್ಕೆ ನನಗೇ ಶಾಕ್ ಆಯ್ತು ಎಂದ ಜಗ್ಗೇಶ್..!!

ಇದು ನನಗೆ ಬಯಸದೆ ಬಂದ ಭಾಗ್ಯ.. ಟಕೆಟ್ ವಿಚಾರಕ್ಕೆ ನನಗೇ ಶಾಕ್ ಆಯ್ತು ಎಂದ ಜಗ್ಗೇಶ್..!!

3231
0
SHARE

ಅಚ್ಚರಿಯ ಬೆಳವಣಿಗೆಯಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ, ಚಿತ್ರನಟ ಜಗ್ಗೇಶ್ ಗೆ ಟಿಕೆಟ್ ನೀಡಿದೆ. ಭಾನುವಾರ ರಾತ್ರಿಯವರೆಗೂ ಸ್ವತಹಾ ಜಗ್ಗೇಶ್ ಗೆ ಟಿಕೆಟ್ ನೀಡುವ ಸುಳಿವು ಇರಲಿಲ್ಲ. ಇಂದು ಬೆಳಗ್ಗೆ ಬಿಜೆಪಿ ಪ್ರಮುಖರು ಜಗ್ಗೇಶ್ ರನ್ನು ಬಿಜೆಪಿ ಕಚೇರಿಗೆ ಕರೆಸಿಕೊಂಡು, ಯಶವಂತಪುರದಿಂದ ಸ್ವರ್ಧಿಸುವಂತೆ ಸೂಚನೆ ನೀಡಿದ್ರಂತೆ…

ಇದಕ್ಕೂ ಮೊದಲು ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಯಶವಂತಪುರದ ಟಿಕೆಟ್ ನೀಡಬೇಕು ಎಂದು ಬಿಜೆಪಿ ನಾಯಕರು ಉದ್ದೇಶಿಸಿದ್ದರು.ಯಶವಂತಪುರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗರ ಮತಗಳಿವೆ. ಮೇಲಾಗಿ ಶೋಭಾ ಕರಂದ್ಲಾಜೆ ಅಲ್ಲಿ ಮೊದಲು ಶಾಸಕರಾಗಿದ್ದವರು. ಹಾಗಾಗಿ ಯಶವಂತಪುರ ಕ್ಷೇತ್ರಕ್ಕೆ ಶೋಭಾ ಕರಂದ್ಲಾಜೆಯವರೇ ಸೂಕ್ತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೂಡ ನಿರ್ಧರಿಸಿದ್ದರು. ಆದರೆ, ಸಂಸದರಿಗೆ ಟಿಕೆಟ್ ನೀಡುವುದಿಲ್ಲ ಎಂಬ ನಿರ್ಧಾರಕ್ಕೆ ಬಿಜೆಪಿ ಹೈ ಕಮಾಂಡ್ ಅಂಟಿಕೊಂಡ ಕಾರಣ ಶೋಭಾ ಕರಂದ್ಲಾಜೆ ಸ್ಪರ್ಧೆಯಿಂದ ಹಿಂದೆ ಸರಿಯುವುದು ಅನಿವಾರ್ಯವಾಗಿತ್ತು…

ಹಾಗಾಗಿ ದಿಢೀರ್ ಆಗಿ ಜಗ್ಗೇಶ್ ಹೆಸರು ಮುಂಚೂಣಿಗೆ ಬಂದು, ಕೇವಲ 12 ಗಂಟೆಗಳ ಒಳಗಾಗಿ ಜಗ್ಗೇಶ್ ಉಮೇದುವಾರಿಕೆ ನಿರ್ಧಾರವಾಯ್ತು. ಈ ಟಿಕೆಟ್ ತಮಗೆ ಬಯಸದೆ ಬಂದ ಭಾಗ್ಯ. ಕಳೆದ ಏಕಾದಶಿ ಸಂದರ್ಭದಲ್ಲಿ ತಮಗೆ ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ ಅನುಗ್ರಹವಾಯ್ತು. ಅದರ ಫಲವಾಗಿಯೇ ತಮಗೆ ಈ ಟಿಕೆಟ್ ಸಿಕ್ಕಿದೆ. ಹಾಗಾಗಿ ಸಮಯ ಕಡಿಮೆ ಇದ್ದರೂ ಜಯ ತಮ್ಮದೇ ಎಂದು ಜಗ್ಗೇಶ್ ಕೂಡ ಅಭಿಪ್ರಾಯಪಟ್ಟಿದ್ದಾರೆ…

LEAVE A REPLY

Please enter your comment!
Please enter your name here