Home Cinema ಇದ್ದಕ್ಕಿದ್ದಂತೆ ಹೆಸರು ಬದಲಿಸಿಕೊಂಡಿದ್ದೇಕೆ ಟಗರು ಪುಟ್ಟಿ ಮಾನ್ವಿತಾ ಹರೀಶ್..?! ಮಾಸ್ವಿತಾ ಹೊಸ ಹಾಟ್ ಲುಕ್ ಹೇಗಿದೆ...

ಇದ್ದಕ್ಕಿದ್ದಂತೆ ಹೆಸರು ಬದಲಿಸಿಕೊಂಡಿದ್ದೇಕೆ ಟಗರು ಪುಟ್ಟಿ ಮಾನ್ವಿತಾ ಹರೀಶ್..?! ಮಾಸ್ವಿತಾ ಹೊಸ ಹಾಟ್ ಲುಕ್ ಹೇಗಿದೆ ಗೊತ್ತಾ..??

2255
0
SHARE

ಟಗರು ಸಿನಿಮಾದ ಮೆಂಟಲ್ ಹಾಡಿನಲ್ಲಿ ಸೆಂಚುರಿ ಸ್ಟಾರ್ ಶಿವಣ್ಣನ ಜೊತೆಗೆ ವಿಭಿನ್ನ ಲುಕ್‌ನಲ್ಲಿ, ಟಪ್ಪಾಂಗುಚ್ಚಿ ಸ್ಟೆಪ್ ಹಾಕಿ ಪಡ್ಡೆ ಹುಡುಗರನ್ನು ಮೆಂಟಲ್ ಮಾಡಿದ್ದ ಮಾನ್ವಿತಾ, ಸದ್ಯ ಅಭಿಮಾನಿಗಳಿಗೆ ಒಂದು ಶಾಕ್ ನ್ಯೂಸ್ ನೀಡಿದ್ದಾರೆ. ಹಾಗಾಗಿನೇ ದಯವಿಟ್ಟು ಗಮನಿಸಿ ಅಂತ ತಮ್ಮ ಹೆಸರಿನ ಕಡೆಗೆ ಬೆರಳು ಮಾಡಿ ತೋರ‍್ತಿದ್ದಾರೆ.

ಕನ್ನಡ ಸಿನಿಮಾ ಇಂಡಸ್ಟ್ರೀಗೆ ಮಾನ್ವಿತಾ ಪರಿಚಯ ಆಗಿದ್ದೇ ಮಾನ್ವಿತಾ ಹರೀಶ್ ಅಂತ, ಎಲ್ಲರಿಗೂ ಮಾನ್ವಿತಾರನ್ನು ಮಾನ್ವಿತಾ ಹರೀಶ್ ಅಂತಾನೇ ಕರೆಸಿಕೊಳ್ಳಲ್ಚಿಸುವ ಮುದ್ದು ಮುದ್ದಾದ ನಟಿ ಈಕೆ. ಇತ್ತೀಚೆಗೆ ಮಾನ್ವಿತಾ ಹರೀಶ್ ತಮ್ಮ ಹೆಸರನ್ನು ಮಾನ್ವಿತಾ ಕಾಮತ್ ಎಂದು ಬದಲಾಯಿಸಿಕೊಂಡಿದ್ದಾರೆ.

ಕೆಂಡಸಂಪಿಗೆ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದ ಈ ಟಗರು ಪುಟ್ಟಿ ಈಗ ತಮ್ಮ ಹೆಸರನ್ನು ದಿಢೀರ್ ಅಂತ ಬದಲಿಸಿಕೊಳ್ಳುವ ಮೂಲಕ ಅಭಿಮಾನಿಗಳು ದಂಗಾಗುವಂತೆ ಮಾಡಿದ್ದಾರೆ. ಅರೇ.. ಮಾನ್ವಿತಾ ಮದುವೆ ಏನಾದ್ರು ಆದ್ರಾ..? ಹರೀಶ್ ಅಂತ ಇದ್ದ ಹೆಸರು ಕಾಮಂತ್ ಯಾಕೆ ಆಯ್ತು..? ಅಂತ ಮಾನ್ವಿತಾ ಭಕ್ತರು ಬೇಜಾನ್ ತಲೆ ಕೆಡಿಸಿಕೊಳ್ಳುವಂತೆ ಮಾಡಿದ್ದಾರೆ.ಹೀಗೆ ಅಭಿಮಾನಿಗಳು ತಲೆಕೆಡಿಸಿಕೊಳ್ಳೊಕೆ ಕಾರಣ ಇದೆ.

ಸಾಮಾನ್ಯವಾಗಿ ಹೆಣ್ಣು ಮಕ್ಕಳು ತಮ್ಮ ಹೆಸರಿನ ಜೊತೆಗೆ ಸರ್ ನೇಮ್ ಮತ್ತು ಅಪ್ಪನ ಹೆಸರು ಇಟ್ಟುಕೊಳ್ಳೊದು ಕಾಮನ್. ಮದುವೆಯ ಬಳಿಕ ಗಂಡನ ಹೆಸರನ್ನು ಬದಲಾಯಿಸಿಕೊಳ್ತಾರೆ. ಆದ್ರೆ ಮಾನ್ವಿತಾ ವಿಷಯದಲ್ಲಿ ಹಾಗಲ್ಲ.. ಮಾನ್ವಿತಾ ಚಿತ್ರರಂಗಕ್ಕೆ ಎಂಟ್ರಿಕೊಡುವ ಟೈಂನಲ್ಲಿ ಮಾನ್ವಿತಾ ಅಟ್ರಾರ್ಲಜಿ ಪ್ರಕಾರ.

ಅಪ್ಪನ ಹೆಸರನ್ನು ತಮ್ಮ ಹೆಸರಿಗೆ ಸೇರಿಸಿಕೊಂಡು ಇಂಡಸ್ಟ್ರೀಗೆ ಬಂದಿದ್ರು. ಆದ್ರೆ ಈಗ ನ್ಯೂಮರಾಲರ್ಜಿ ಪ್ರಕಾರ ಮತ್ತು ತಮ್ಮ ಸ್ನೇಹಿತರ ಸಲಹೆಯಂತೆ ಮಾನ್ವಿತಾ ಕಾಮತ್ ಆಗಿ ಬದಲಾಗಿದ್ದಾರೆ. ಈಗೆ ತಮ್ಮ ಹೆಸರನ್ನು ದಿಢೀರ್ ಅಂತ ಬದಲಿಸಿಕೊಂಡ ಬಗ್ಗೆ ಮಾನ್ವಿತಾ ಪ್ರಜಾಟಿವಿಯ ಜೊತೆಗೆ ಮಾತು ಹಂಚಿಕೊಂಡಿದ್ದು.

ಇತ್ತೀಚೆಗಷ್ಟೇ ದುಬೈನ ಸೈಮಾದಲ್ಲಿ ಹಾಟ್ ಹಾಟ್ ಲುಕ್‌ನಲ್ಲಿ ಮಾನ್ವಿತಾ ಕಾಣಿಸಿಕೊಂಡಿದ್ರು. ಅಲ್ಲಿಂದ ಪ್ರಶಸ್ತಿ ಕೈಯಲ್ಲಿಡಿದು ಬೇಜಾನ್ ಪೋಸ್ ಕೊಟ್ಟಿದ್ದ ಮಾನ್ವಿತಾ. ಸೋಷಿಯಲ್ ಮೀಡಿಯಾದಲ್ಲಿ ಪೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದನ್ನೆಲ್ಲಾ ನೋಡಿದ ಅಭಿಮಾನಿಗಳು ಕೂಡ ಸಂತಸಗೊಂಡಿದ್ರು. ಮಾನ್ವಿತಾ ದಿನದಿಂದ ದಿನಕ್ಕೆ ತಮ್ಮ ಸ್ಟೈಲಿಂಗ್ ಬದಲಾಯಿಸಿ ಕೊಳ್ತಿದ್ದಾರೆ.

ನ್ಯೂ ಲುಕ್‌ನಲ್ಲಿ ಮಾನ್ವಿತಾ ಪರಿ ಕಂಡು ಅಭಿಮಾನಿಗಳು ಬೆರಗಾಗಿ ಬಿಟ್ಟ ಕಣ್ಣು ಬಿಟ್ಟಂತೆ ನೋಡಿದ್ರು.ಸದ್ಯ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯೂಸಿಯಾಗಿರೋ ಮಾನ್ವಿತಾ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಚಿತ್ರದ ಚಿತ್ರೀಕರಣದಲ್ಲಿ ಬಿಝೀಯಾಗಿದ್ದಾರೆ. ಈ ಚಿತ್ರದಲ್ಲಿ ಮಾನ್ವಿತಾಗೆ ಜೋಡಿಯಾಗಿ ಕಂಚಿನ ಕಂಠದ ನಾಯಕ ವಸಿಷ್ಠ ಸಿಂಹ ನಟಿಸುತ್ತಿದ್ದಾರೆ.

ಸದ್ಯ ಬ್ಯಾಕ್ ಟು ಬ್ಯಾಕ್ ನಾಲ್ಕು ಚಿತ್ರಕ್ಕೆ ಸೈನ್ ಮಾಡಿದ್ದು, ರವಿವರ್ಮ ಚಿತ್ರದ ಚಿತ್ರೀಕರಣಕ್ಕೆ ತೆರಳಲು ಸಜ್ಜಾಗಿತ್ತಾರೆ.ಅದೇನೇ ಇದ್ರೂ.. ಒಂದಿಲ್ಲೊಂದು ಸಿನಿಮಾ ವಿಷಯದಿಂದ ಸಿಕ್ಕಾಪಟ್ಟೆ ಸದ್ದು ಮಾಡುವ ಟಗರು ಪುಟ್ಟಿ, ಈ ಸದ್ಯ ಹೆಸರು ಬದಲಿಸಿಕೊಂಡು ಸ್ಯಾಂಡಲ್‌ವುಡ್‌ನಲ್ಲಿ ಬೇಜಾನ್ ಸುದ್ದಿಯಾಗ್ತಿದ್ದು. ಈಗೆ ಹೆಸರು ಬದಲಿಸಿಕೊಂಡಿರುವ ಮಾನ್ವಿತಾ ಲಕ್ ಮತ್ತು ಕ್ರೇಜ್ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಿ ಅನ್ನೋದು ನಮ್ಮ ಆಶಯ.

 

LEAVE A REPLY

Please enter your comment!
Please enter your name here