Home Crime ಇನ್ಮುಂದೆ ವಾಹನ ಸವಾರ ನಿಯಮ ಉಲ್ಲಂಘಿಸಿದ್ರೆ ಜೋಕೆ, ಕುಡಿದು ವಾಹನ ಚಲಾಯಿಸಿದ್ರೆ 6 ತಿಂಗಳ ಜೈಲು...

ಇನ್ಮುಂದೆ ವಾಹನ ಸವಾರ ನಿಯಮ ಉಲ್ಲಂಘಿಸಿದ್ರೆ ಜೋಕೆ, ಕುಡಿದು ವಾಹನ ಚಲಾಯಿಸಿದ್ರೆ 6 ತಿಂಗಳ ಜೈಲು ಶಿಕ್ಷೆ..!

3725
0
SHARE

ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದ ಮೋಟಾರು ವಾಹನ ತಿದ್ದುಪಡಿ ಮಸೂದೆಗೆ ಮೇಲ್ಮನೆ ಹಾಗೂ ಕೆಳಮನೆಯಲ್ಲಿ ಸದ್ಯ ಅನುಮೋದನೆ ಸಿಕ್ಕಿದ್ದು. ಇನ್ನೇನು ರಾಷ್ಟ್ರಪತಿ ಅಂಕಿತ ಒಂದೇ ಬಾಕಿ ಇದ್ದು, ಮುಂದಿನ ದಿನಗಳಲ್ಲಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಫೈನ್ ಹೇಗಿರಲಿದೆ ನೀವೇ ನೋಡಿ.

ರಸ್ತೆ ಅಪಘಾತಗಳು ಹಾಗು ಭ್ರಷ್ಟಾಚಾರ ತಡೆ ಮಸೂದೆಗೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅನುಮೋದನೆ ಸಿಕ್ಕಿದೆ, ಪರಿಷ್ಕ್ರತ ಮಸೂದೆಯಲ್ಲಿ ಹಲವಾರು ಕಠಿಣ ನಿಬಂಧನೆಗಳನ್ನ ಒಳಗೊಂಡಿದೆ ಅಲ್ಲದೆ, ದಂಡದ ಮೊತ್ತ ಕೂಡ ದುಪ್ಪಟ್ಟಾಗಿದೆ, ಹೋಸ ರೂಲ್ಸ್ ಗಳು ಜಾರಿಯಾದ್ರೆ ತಪ್ಪು ಮಾಡಿದವರ ಜೇಬಿಗೆ ಕತ್ತರಿ ಜೋರಾಗಿ ಬೀಳಲಿದೆ. ರಾಷ್ಟ್ರಪತಿ ಅಂಕಿತ ನಂತರ ದಂಡದ ಪ್ರಮಾಣದ ಲಿಸ್ಟ್ ಇಲ್ಲಿದೆ ನೋಡಿ.

ನಿಯಮ ಉಲ್ಲಂಘನೆ, ಹಿಂದಿನ ದಂಡ, ಈಗಿನ ದಂಡ ಹೀಗಿದೆ, ತುರ್ತು ವಾಹನಗಳಿಗೆ ದಾರಿ ಬಿಡದಿದ್ದರೆ ಹಿಂದಿನ ದಂಡ 194 ರೂಪಾಯಿ, ಈಗಿನ ದಂಡ 10,000 ರೂಪಾಯಿ ಹಾಗೂ 6 ತಿಂಗಳು ಜೈಲು. ಅಪ್ರಾಪ್ತರಿಂದ ವಾಹನ ಚಾಲನೆ ಹಿಂದಿನ ದಂಡ 100 ರೂಪಾಯಿ, ಈಗಿನ ದಂಡ 25,000 ರೂಪಾಯಿ ದಂಡ ಪೋಷಕರಿಗೆ 3 ವರ್ಷ ಜೈಲು. ಕುಡಿದು ವಾಹನ ಚಾಲನೆ ಹಿಂದಿನ ದಂಡ 2000 ರೂಪಾಯಿ, ಈಗಿನ ದಂಡ 10,000 ರೂಪಾಯಿ ಹಾಗೂ 6 ತಿಂಗಳು ಜೈಲು. ವಿಮೆ ರಹಿತ ವಾಹನ ಹಿಂದಿನ ದಂಡ 100 ರೂಪಾಯಿ, ಈಗಿನ ದಂಡ 2000 ರೂಪಾಯಿ ಗರಿಷ್ಠ ದಂಡ. ಸೀಟ್ ಬೆಲ್ಟ್ ರಹಿತ ಚಾಲನೆ ಹಿಂದಿನ ದಂಡ 100 ರೂಪಾಯಿ, 1000 ರೂಪಾಯಿ ದಂಡ. ಸಿಗ್ನಲ್ ಜಂಪ್,ಮೋಬೈಲ್ ಬಳಕೆ,ಇತ್ಯಾಧಿ ಹಿಂದಿನ ದಂಡ 100 ರೂಪಾಯಿ, ಈಗಿನ ದಂಡ 5000 ರೂಪಾಯಿ ಹಾಗೂ 6 ರಿಂದ 12 ತಿಂಗಳು ಜೈಲು.

ಇನ್ನು ಮುಂದೆ ಬೇಕಾಬಿಟ್ಟಿ ರಸ್ತೆಯಲ್ಲಿ ನಿಯಮ ಪಾಲಿಸದೆ ಸಂಚರಿಸಿದ್ರೆ ಇವೆಲ್ಲಾ ಕಾನೂನುಗಳು ನಿಮಗೆ ಬಿಸಿ ಮುಟ್ಟಿಸಲಿವೆ,ಹೊಸ ಕಾನೂನುಗಳಿಗೆ ಸಾರ್ವಜನಿಕರು ಬಿನ್ನವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ,ಚಾಲನಾ ಕಾಯಕ ನಡೆಸುವರಿಗಗೆ ಹೊಸ ಮಸೂದೆ ಶಾಕ್ ಕೂಡ ನಿಡಿದೆ.ಇನ್ನು ರಸ್ತೆ ಅಪಘಾತಗಳನ್ನ ಕಡಿಮೆ ಮಡುವ ದೃಷ್ಟಿಯಿಂದ ಮಸೂದೆಯಲ್ಲಿ ಕಟ್ಟುನಿಟ್ಟಿನ ನಿಬಂಧನೆಗಳನ್ನ ನೀಡಿದೆ,ಹೊಸ ಕಾಯಿದೆ ಸಂಪೂರ್ಣವಾಗಿ ರಾಷ್ಟ್ರವ್ಯಾಪಿ ಜಾರಿಯಾದರೆ ಸುಗಮ ಸಂಚಾರ ನೋಡಬಹುದು ಅಲ್ಲದೆ ಅಪಘಾತಗಳನ್ನ ಕೂಡ ನಿಯಂತ್ರಿಸಬಹುದಾಗಿದೆ ಎಂದು ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here