Home Crime ಇಬ್ಬರು ಸೊಸೆಯಂದಿರನ್ನ ಗಂಡನ ಎದುರಲ್ಲೇ ಚುಚ್ಚಿದ್ದ ಮಾವ..! ಗಂಡನ ಕಣ್ಣೆದುರು ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಿದ್ಲು...

ಇಬ್ಬರು ಸೊಸೆಯಂದಿರನ್ನ ಗಂಡನ ಎದುರಲ್ಲೇ ಚುಚ್ಚಿದ್ದ ಮಾವ..! ಗಂಡನ ಕಣ್ಣೆದುರು ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಿದ್ಲು ಮೊದಲ ಸತಿ.!

1969
0
SHARE

ನಿನ್ನೆ ಮಟ ಮಟ ಮಧ್ಯಾಹ್ನ 3ಗಂಡೆ ಶಿಡ್ಲಘಟ್ಟದ ಶೆಟ್ಟಿಹಳ್ಳಿ ಗ್ರಾಮದ ಹೊಲವೊಂದರ ಬಳಿ ಜನರೆಲ್ಲಾ ಓಡಿ ಹೋಗ್ತಿದ್ರು, ಅಲ್ಲ್ಯಾರೋ ಸಹಾಯಕ್ಕೆ ಕೂಗಿದ್ರು ಅನ್ಸುತ್ತೆ. ಅದಕ್ಕೆ ಗ್ರಾಮದ ಜನರೆಲ್ಲಾ ಸೇರಿ ಆ ಹೊಲದತ್ತ ಓಡಿ ಹೋಗಿದ್ರು. ಅಲ್ಲಿಗೆ ಹೋಗಿ ನೋಡಿದ್ರೆ ಹೋದವರೆಲ್ಲಾ ಒಂದು ಸಾರಿ ಶಾಕ್ ಆಗಿ ಹೋಗಿದ್ರು.

ಅವ್ರು ಆ ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ತಲೆ ಸುತ್ತು ಬೀಳೋದೊಂದು ಮಾತ್ರವೇ ಬಾಕಿಯಾಗಿತ್ತು. ಯಾಕಂದ್ರೆ ಅವ್ರು ಇಬ್ಬರು ಮಹಿಳೆಯರು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡ್ತಿದ್ದದ್ದನ್ನ ನೋಡಿದ್ರು. ಆ ಕ್ಷಣಕ್ಕೆ ಆ ದೃಶ್ಯವನ್ನ ನೋಡಿ ಅವರಿಗೆ ಏನು ಮಾಡಬೇಕು ಅನ್ನೋದು ತೋಚಲೇ ಇಲ್ಲ. ಯಾರನ್ನ ಎತ್ತಬೇಕು ಯಾರನ್ನ ಬಿಡಬೇಕು ಅನ್ನೋದು ಕೂಡಾ ಗೊತ್ತಾಗಲಿಲ್ಲ. ನಂತ್ರ ಅಲ್ಲಿ ಇನ್ನು ಜೀವ ಹಿಡ್ಕೊಂಡು ಉಸಿರಾಡ್ತಿದ್ದ ಮಹಿಳೆಯನ್ನ ಎತ್ತಿ ಬೈಕ್ ಗೆ ಕೂರಿಸಿ ಆಸ್ಪತ್ರೆಗೆ ಕರ್ಕೊಂಡು ಹೋಗಿ ಅಂತ ಹೇಳಿ ಕಳುಹಿಸಿದ್ರು.

ಇತ್ತ ಇನ್ನೊಬ್ಬರನ್ನ ಆಸ್ಪತ್ರೆಗೆ ಕರ್ಕೊಂಡು ಹೋಗೋಣ ಅಂತ ಅಂದ್ರೆ ಅಲ್ಲೇ ಆ ಮಹಿಳೆ ಮೃತಪಟ್ಟು ಬಿಟ್ಟಿದ್ರು.ಬೆಳಗ್ಗೆಯಿಂದಲೂ ಅವ್ರು ತಮ್ಮ ಹೊಲದಲ್ಲಿ ಕೆಲಸ ಮಾಡ್ತಿದ್ರು. ಮಧ್ಯಾಹ್ನ ಊಟ ಮಾಡಿಕೊಂಡು ಮತ್ತೆ ಕೆಲಸವನ್ನ ಮುಂದುವರೆಸಿದ್ರು. ಗ್ರಾಮದ ಸುಮಾರು ಜನ ನಾಲ್ಕು ಜನ ಹೊಲದಲ್ಲಿ ಕೆಲಸ ಮಾಡ್ತಿರೋದನ್ನ ನೋಡಿದ್ರು. ಆದ್ರೆ ಇದ್ದಕ್ಕಿದ್ದ ಹಾಗೆ ಇಲ್ಲಿ ಇಂತಹ ಘಟನೆ ಹೇಗೆ ನಡೆಯಿತು ಅನ್ನೋದು ಅವರಿಗೆ ಗೊತ್ತಾಗಲಿಲ್ಲ. ಅಲ್ಲದೆ ಅಲ್ಲಿದ್ದವರಿಗೆ ಈ ಕೃತ್ಯವನ್ನ ಯಾರು ಮಾಡಿದ್ದು ಅನ್ನೋದು ಕೂಡಾ ಗೊತ್ತಾಗಲಿಲ್ಲ.

ಯಾಕಂದ್ರೆ ಘಟನೆ ನಡೆಯುವಾಗ ಯಾರು ಕೂಡಾ ಅಲ್ಲಿ ಇರಲಿಲ್ಲ. ಹೀಗಾಗಿ ಅವ್ರಿಗೆ ಇಂತಹವರೆ ಈ ಕೃತ್ಯ ಮಾಡಿದ್ದಾರೆ ಅನ್ನೋದು ಗೊತ್ತಾಗಲಿಲ್ಲ. ಆದ್ರು ಆ ಗ್ರಾಮದ ಜನರಿಗೆ ಒಬ್ಬರ ಬಗ್ಗೆ ಅನುಮಾನವಿತ್ತು. ಅದನ್ನ ಪೊಲೀಸ್ರಿಗೆ ಹೇಳಿದ್ರು.ಚಂದ್ರಕಲಾ ಅವರ ಪತಿ ನಾಗರಾಜ್ ಗು ಹಾಗೂ ಅವರ ಸಂಬಂಧಿ ಗೋವಿಂದರಾಜು ಅನ್ನೋರಿಗೆ ಆಗಾಗ ಜಮೀನಿನ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು. ಇದೇ ವಿಚಾರಕ್ಕೆ ಈ ಕೊಲೆ ನಡೆದಿರಬಹುದು ಅಂತ ಅನಿಸಿದೆ ಅಂತ ಹೇಳಿದ್ರು. ಯಾಕಂದ್ರೆ ನಾಗರಾಜು ಯಾವ ಮಾಹಿತಿಯನ್ನ ಕೊಡೋದಕ್ಕು ಅಲ್ಲಿರಲಿಲ್ಲ. ಅವ್ರು ಗಿರಿಜಾರನ್ನ ಕರ್ಕೊಂಡು ಆಸ್ಪತ್ರೆಗೆ ತೆರಳಿದ್ರು.

ಹೀಗಾಗಿ ಅಲ್ಲಿ ಆಗಿದ್ದ ಘಟನೆ ಏನು ಅನ್ನೋದನ್ನ ಪೊಲೀಸ್ರು ಅವರಿಂದಲೇ ಕೇಳಿ ತಿಳಿದುಕೊಳ್ಳಬೇಕಿತ್ತು. ನಂತ್ರ ಪೊಲೀಸ್ರು ಆ ಬಾಡಿಯನ್ನ ಆಸ್ಪತ್ರೆಗೆ ಶಿಫ್ಟ್ ಮಾಡಿದ್ರು. ಅಲ್ಲದೆ ಘಟನೆಯ ಬಗ್ಗೆ ಮಾಹಿತಿಯನ್ನ ಪಡೆಯೋದಕ್ಕೆ ಆಸ್ಪತ್ರೆಗೆ ತೆರಳಿದ್ರು. ಸಣ್ಣ ಹಳ್ಳಿಯಲ್ಲಿ ನಡೆದ ಭೀಕರ ಕೊಲೆ ಅಲ್ಲಿನ ಜನರಿಗೆ ದಿಗಿಲು ಹುಟ್ಟಿಸಿತ್ತು. ಯಾಕಂದ್ರೆ ನಮ್ಮ ಹಳ್ಳಿಯಲ್ಲಿ ಇಂತಹ ಘಟನೆ ನಡೆಯುತ್ತೆ ಅಂದ್ರೆ ಸಾಮಾನ್ಯ ಜನರೆಲ್ಲ ಹೇಗೆ ಬದುಕೋದು ಅಂತ ಮಾತನಾಡಿಕೊಳ್ಳೋದಕ್ಕೆ ಶುರುಮಾಡಿದ್ರು. ಅಲ್ಲದೆ ಇಡೀ ಊರಿಗೆ ಊರಲ್ಲಿ ಅವತ್ತು ಇದೇ ವಿಷಯ ಮಾತನಾಡೋದಕ್ಕೆ ಶುರುಮಾಡಿದ್ರು. ಅಲ್ಲದೆ ಕೊಲೆ ಮಾಡಿದವರ ಕೈಗೆ ಕರಿ ನಾಗರ ಕಡಿಲಿ ಅಂತ ಶಾಪ ಹಾಕೋದಕ್ಕೂ ಶುರುಮಾಡಿದ್ರು.

ನಾಗರಾಜ್ ಅವ್ರು ತಮ್ಮ ಪತ್ನಿಯರು ಮತ್ತು ಮಗನ ಜೊತೆ ತಮ್ಮ ತೋಟದ ಮನೆಯಲ್ಲಿ ವಾಸ ಮಾಡ್ತಿದ್ದಾರೆ. ಅವ್ರು ಹಿಪ್ಪುನೇರಳೆ ಮತ್ತು ಜೋಳವನ್ನ ಬೆಳೆಯುತ್ತಿದ್ರು. ಮನೆಯ ಮುಂದೆಯೇ ಅವರ ಹೊಲವಿದೆ. ಅಲ್ಲದೆ ಅವರ ಸಂಬಂಧಿಯೊಬ್ಬರ ಹೊಲವನ್ನ ಕೂಡಾ ಇವರೇ ಉಳುಮೆ ಮಾಡ್ತಿದ್ದಾರೆ. ಭೂಮಿಯನ್ನ ಉತ್ತಿಬಿತ್ತಿ ಒಂದಷ್ಟು ಸಂಪಾದನೆ ಮಾಡ್ತಿದ್ರು. ಭೂಮಿ ತಾಯಿ ಅವರ ಕೈ ಬಿಟ್ಟಿರಲಿಲ್ಲ. ಹೊಟ್ಟೆಗೆ ಬಟ್ಟೆಗೆ ಆಗುವಷ್ಟು ಆದಾಯವನ್ನ ತಾಯಿ ನೀಡ್ತಿದ್ಲು. ಹೀಗೆ ಪ್ರತಿನಿತ್ಯ ಮನೆಮಂದಿಯೆಲ್ಲಾ ಹೋಗಿ ಹೊಲದಲ್ಲಿ ಕೆಲಸ ಮಾಡ್ತಿದ್ರು. ನಿನ್ನೆಯು ಕೂಡಾ ಇದೇ ಹೊಲಕ್ಕೆ ಹೋಗಿ ಅವ್ರು ಕೆಲಸ ಮಾಡ್ತಿದ್ರು.

ಗೋವಿಂದಪ್ಪ ಯಾವಾಗ್ಲೂ ಈ ರೀತಿಯಾಗಿಯೇ ಜಗಳ ಮಾಡ್ತಿದ್ದ. ಸುಮ್ಮಸುಮ್ಮನೆ ಕಾಲು ಕೆರ್ಕೊಂಡು ಜಗಳ ಮಾಡ್ತಾನೆ. ಇವನ ಮಾತು ಕೇಳುತ್ತಾ ಕೂತ್ಕೊಂಡ್ರೆ ನಮ್ಮ ಕೆಲಸ ಮುಗಿಯೋದಿಲ್ಲ ಅಂತ ಅವ್ರು ತಲೆ ಬಗ್ಗಿಸಿಕೊಂಡು ತಮ್ಮ ಕೆಲಸ ಮಾಡೋದಕ್ಕೆ ಶುರುಮಾಡಿದ್ರು. ಈ ಭೂಮಿ ವಿಚಾರ ಇವತ್ತು ನಾಳೆಗೆ ಮುಗಿಯೋದಿಲ್ಲ. ಅಲ್ಲದೆ ಅವನ ಜೊತೆ ಗಲಾಟೆ ಮಾಡಿಕೊಂಡ್ರೆ ನಮಗೇನು ಸಿಗುತ್ತೆ ಅಂತ ಸುಮ್ಮನಿದ್ರು. ಆದ್ರೆ ಅದ್ಯಾಕೋ ಗೋವಿಂದಪ್ಪ ಅದ್ಯಾವ ಮಗ್ಗುಲಲ್ಲಿ ಎದ್ದು ಬಂದಿದ್ನೋ ಗೊತ್ತಿಲ್ಲ. ಅವನಿಗೆ ಇವತ್ತು ಇವರ ಜೊತೆ ಕ್ಯಾತೆ ತೆಗೆಯಲೇ ಬೇಕು ಅಂತ ತೀರ್ಮಾನಿಸಿಬಿಟ್ಟಿದ್ದ. ಅವನಿಗೆ ನಾನೇನು ಮಾಡ್ತಿದ್ದೀನಿ ಅಂತಾನು ಗೊತ್ತಿರಲಿಲ್ಲ. ಯಾವಾಗಲೂ ಗಲಾಟೆಗಳು ಶುರುವಾಗೋದೆ ಚಿಕ್ಕದಾಗಿ. ಆ ಗಲಾಟೆ ಶುರುವಾದಾಗ ಅದನ್ನ ಮಾತಲ್ಲೇ ಬಗೆಹರಿಸಿಕೊಂಡು ಬಿಟ್ರೆ ಆಗೋ ಅನಾಹುತಗಳು ತಪ್ಪಿ ಹೋಗುತ್ತೆ.

ಹೊಲದಲ್ಲಿ ಎರಡು ಫ್ಯಾಮಿಲಿಗಳು ಜಿದ್ದಿಗೆ ಬಿದ್ದು ಹೊಡೆದಾಡಿಕೊಳ್ಳೋದಕ್ಕೆ ಶುರಾಮಾಡಿದ್ವು. ಅಲ್ಲಿಗೆ ಯಾರಾದ್ರು ಗೊತ್ತಿರೋರು ಬಂದಿದ್ರೆ ಜಗಳ ಬಿಡಿಸಬಹುದಿತ್ತೇನೋ ಆದ್ರ ಅಲ್ಲಿಗೆ ಇವರ ದುರಾದೃಷ್ಠಕ್ಕೆ ಯಾರು ಇರಲಿಲ್ಲ. ಯಾಕಂದ್ರೆ ಅವತ್ತು ಆ ಜಗಳ ಅಲ್ಲಿಗೆ ನಿಂತು ಹೋಗಿದ್ರೆ ಎರಡು ಫ್ಯಾಮಿಲಿಯ ಭವಿಷ್ಯ ಎಕ್ಕುಟ್ಟಿ ಹೋಗ್ತಿರಲಿಲ್ಲ. ಆದ್ರೆ ಇವರ ದುರಾದೃಷ್ಟಕ್ಕೆ ಯಾರು ಅಂದ್ರೆ ಯಾರು ಅತ್ತ ಸುಳಿಯಲೇ ಇಲ್ಲ. ಅದಾಗ್ಲೇ ಇವರೆಲ್ಲ ಕೈಯಲ್ಲಿ ಹೊಡೆದಾಡಿಕೊಳ್ಳೋದನ್ನ ಬಿಟ್ಚು ಕೈಗೆ ದೊಣ್ಣೆ ಎತ್ತಿಕೊಂಡಿದ್ರು. ಮೈ ಕೈ ರಕ್ತಸಿಕ್ತವಾದ್ರು ಗಲಾಟೆ ಮಾತ್ರ ಕಡಿಮೆಯಾಗಲಿಲ್ಲ. ಅಷ್ಟು ಹೊತ್ತಿಗೆ ಗೋವಿಂದಪ್ಪ ಕೆರಳಿ ನಿಂತಿದ್ದ. ಇವರನ್ನ ಸುಮ್ಮನೆ ಬಿಡಬಾರದು ಅನ್ನ ತೀರ್ಮಾನಕ್ಕೆ ಬಂದಿದ್ದ.

ಸೀದಾ ಹೋದವನೆ ತನ್ನ ಬೈಕ್ ನಲ್ಲಿದ್ದ ಚೂರಿಯನ್ನ ಎತ್ಕೊಂಡು ಬಂದಿದ್ದಾನೆ. ಹಾಗೆ ಬಂದವನೆ ಮೊದಲು ಚಂದ್ರಕಲಾ ಅವರಿಗೆ ಹಲವು ಬಾರಿ ಚುಚ್ಚಿದ್ದಾನೆ. ಅವ್ರು ರಕ್ತದ ಮಡುವಿನಲ್ಲಿ ಬೀಳ್ತಿದ್ದ ಹಾಗೆ ಗಿರಿಜಾ ಅವ್ರಿಗು ಚುಚ್ಚಿದ್ದಾನೆ. ಆಗ ನಾಗರಾಜ್ ಇಬ್ಬರನ್ನ ಆಸ್ಪತ್ರೆಗೆ ಕರ್ಕೊಂಡು ಹೋಗೋಣ ಅಂತ ಮಗನೊಂದಿಗೆ ಒದ್ದಾಡ್ತಿದ್ರೆ ಇವನು ಮಾತ್ರ ನಿಮ್ಮಲ್ಲಿ ಯಾರನ್ನು ಬಿಡೋದಿಲ್ಲ ಅಂತ ಹೇಳಿ ಅಲ್ಲಿಂದ ತನ್ನ ಪತ್ನಿ ಸಾವಿತ್ರಿಯನ್ನ ಕರ್ಕೊಂಡು ಪರಾರಿಯಾಗಿದ್ದ. ಇತ್ತ ರಕ್ತದ ಮಡುವಿನಲ್ಲಿ ಬಿದ್ದಿದ್ದ ಚಂದ್ರಕಲಾ ಅವ್ರು ಗಂಡನ ಕಣ್ಣೆದುರಿಗೆ ನರಳಿ ನರಳಿ ಒದ್ದಾಡಿ ಪ್ರಾಣ ಬಿಟ್ಟಿದ್ರು. ಇನ್ನೊಂದು ಕಡೆ ಗಿರಿಜಾ ಅವ್ರು ಕೂಡಾ ನೋವಿನಿಂದ ನೆಲದಲ್ಲಿ ಬಿದ್ದು ಒದ್ದಾಡ್ತಿದ್ರು. ಯಾರನ್ನ ರಕ್ಷಣೆ ಮಾಡೋದು, ಯಾರನ್ನ ಮೊದಲು ಆಸ್ಪತ್ರೆಗೆ ಕರ್ಕೊಂಡು ಹೋಗೋದು ಅನ್ನೋದು ಗೊತ್ತಾಗದೆ ಕೂಗಿಕೊಳ್ಳೋದಕ್ಕೆ ಶುರುಮಾಡಿದ್ರು.

ನಂತ್ರ ಮೊದಲ ಪತ್ನಿ ಸತ್ತು ಹೋಗಿರೋದು ಗೊತ್ತಾಗ್ತಿದ್ದ ಹಾಗೆ ಗಿರಿಜಾ ಅವ್ರನ್ನ ಬೈಕ್ ನಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಹೋಗಿದ್ರು. ಈಗ ಗಿರಿಜಾ ಸುಧಾರಿಸಿಕೊಳ್ತಿದ್ದಾರೆ. ಇತ್ತ ಪೊಲೀಸ್ರು ನಾಗರಾಜ್ ರಿಂದ ದೂರು ಪಡೆದು ಗೋವಿಂದಪ್ಪ ಮತ್ತು ಸಾವಿತ್ರಮ್ಮರನ್ನ ಬಂಧಿಸಿದ್ದಾರೆ. ಯಾಕಪ್ಪ ಕೊಲೆ ಮಾಡಿದೆ ಅಂದ್ರೆ ಸರ್ ನಾನು ಹೊಲದಲ್ಲಿ ಕೆಲಸ ಮಾಡುವಾಗ ನಾಗರಾಜನೇ ಬಂದು ನನ್ನ ಮೇಲೆ ಹಲ್ಲೆ ಮಾಡಿದ. ಅದಕ್ಕೆ ಇಬ್ಬರಿಗೂ ಗಲಾಟೆ ನಡೆಯಿತು ಆ ಸಿಟ್ಟಲ್ಲಿ ನಾನು ಇಬ್ಬರಿಗೂ ಚಾಕುವಿನಿಂದ ಚುಚ್ಚಿದೆ ಅಂತ ಹೇಳಿದ್ದ. ಅಲ್ಲದೆ ನಾಗರಾಜ್ ಮೇಲೆ ಒಂದು ದೂರನ್ನ ಕೂಡಾ ಕೊಟ್ಟಿದ್ದ. ಆದ್ರೆ ಅದಾಗ್ಲೇ ಟೈಂ ಆಗಿ ಹೋಗಿತ್ತು. ಆತ ಚಂದ್ರಕಲಾರ ಕೊಲೆ ಕೇಸ್ ನಲ್ಲಿ ಅರೆಸ್ಟ್ ಆಗಿ ಹೋಗಿದ್ದ. ಗಂಡ ಹೆಂಡ್ತಿ ಅವತ್ತು ಸುಮ್ಮನೆ ತಮ್ಮ ಪಾಡಿಗೆ ತಾವು ಕೆಲಸ ಮುಗಿಸಿಕೊಂಡು ಬಂದಿದ್ರೆ ಇವತ್ತು ಇಬ್ಬರು ಮನೆಯಲ್ಲಿರ್ತಿದ್ರು. ಆದ್ರೆ ಸಣ್ಣ  ಜಾಗದ ವಿಚಾರಕ್ಕೆ ಕಾಲು ಕೆರ್ಕೊಂಡು ಜಗಳ ಮಾಡಿ ಜೀವ ತೆಗೆದಿದ್ದಾರೆ.

ಹೆಚ್ಚು ಅಂದ್ರೆ ಆ ಜಗಳ ನಿಲ್ಲಿಸಿ ನಿನ್ನ ಜಾಗ ನೀನೇ ಇಟ್ಕೊ ಅಂತ ಹೇಳಿದ್ರೆ ಯಾವುದೇ ಗಲಾಟೆ ಇಲ್ಲದೆ ನೆಮ್ಮದಿಯಾಗಿ ಇರಬಹುದಿತ್ತು. ಆದ್ರೆ ಆಸೆ, ಅಸೂಹೆ, ದ್ವೇಷ ಇದೆಯಲ್ಲ ಅದು ಸುಮ್ಮನಿರೋದಕ್ಕೆ ಬಿಡಲಿಲ್ಲ. ಅದಕ್ಕೆ ಇನ್ನು ಜೈಲಲ್ಲಿ ಲೈಫ್ ಕಳೆಯೋ ಹಾಗೆ ಆಗಿದೆ. ಇಷ್ಟು ವರ್ಷ ಏನೇ ಹೆಸರು ಮಾಡಿದ್ರು ಇನ್ನು ಈ ಸಮಾಜ ಗೋವಿಂದಪ್ಪ ಮತ್ತು ಸಾವಿತ್ರಮ್ಮನನ್ನ ಕೊಲೆಗಾರರು ಅಂತಾನೆ ನೋಡ್ತಾರೆ. ಅವರಿಗೆ ಇನ್ನು ಜನ ಕೊಡೋ ಮರ್ಯಾದೆ ಕೂಡಾ ಬೇರೆಯದ್ದೇ ಆಗಿರುತ್ತೆ. ಇತ್ತ ನಾಗರಾಜ್ ಆದ್ರು ಅದೇನು ಜಾಗನೋ ನಿನಗೆ ಅದೆಷ್ಟು ಬೇಕೋ ಅಷ್ಟು ತಗೋ ಅಂತ ಹೇಳಿ ಸಮಸ್ಯೆ ಬಗೆಹರಿಸಿಕೊಂಡು ಬಿಟ್ಟಿದ್ರೆ ಇವತ್ತು ಇಂತಹ ಸ್ಥಿತಿ ನಿರ್ಮಾಣವಾಗ್ತಿರಲಿಲ್ಲ.

ಇವರ ಜೊತೆ ಇನ್ನಷ್ಟು ವರ್ಷ ಚಂದ್ರಕಲಾ ದಾಂಪತ್ಯ ಜೀವನ ನಡೆಸ್ತಿದ್ರು. ಆದ್ರೆ ಅವ್ರು ಕೂಡಾ ಅವತ್ತು ದ್ವೇಷ ಸಾಧಿಸಿದ್ರು. ಹೀಗಾಗಿ ಪತ್ನಿಯನ್ನ ಕಳ್ಕೊಂಡಿದ್ದಾರೆ. ಸಣ್ಣ ಜಾಗಕ್ಕಾಗಿಯೇ ಇವರು ಇಷ್ಟು ಹಠ ಸಾಧಿಸಿದ್ದಾರೆ ಅಂದ ಮೇಲೆ  ಈಗ ಒಂದು ಕೊಲೆಯೇ ನಡೆದು ಹೋಗಿದೆ ಇನ್ನು ಮೇಲೆ ಇನ್ನೆಂತಹ ದ್ವೇಷ ಹುಟ್ಟೋದಿಲ್ಲ ಹೇಳಿ ಒಬ್ಬರ ಮೇಲೆ ಇನ್ನೊಬ್ಬರಿಗೆ.ಯಾವತ್ತೇ ಯಾವುದೇ ವಿಷಯ ಆದ್ರು ಅದನ್ನ ಆದಷ್ಟು ಮಾತಿನಲ್ಲೇ ಬಗೆಹರಿಸಿಕೊಳ್ಳೋದಕ್ಕ ಪ್ರಯತ್ನಿಸಬೇಕು. ಎಲ್ಲಿವರೆಗೂ ಸಮಸ್ಯೆ ಬಗೆಹರಿಸಿಕೊಳ್ಳೋದಕ್ಕೆ ಸಾಧ್ಯವಿದೆಯೋ ಆ ದಿಕ್ಕಿನಲ್ಲಿ ಮಾತ್ರವೇ ಯೋಚಿಸಬೇಕು. ಸುಮ್ಮನೆ ಆತುರ ಮಾಡಿದ್ರೆ ಇಂತಹ ದುರಂತಗಳು ನಡೆಯುತ್ತವೆ. ಆಮೇಲೆ ಯೋಚನೆ ಮಾಡಿದ್ರೆ ಫಲವಿರೋದಿಲ್ಲ. ಎಲ್ಲಾ ಮುಗಿದ ಮೇಲೆ ಹೀಗಾಗಬಾರದಿತ್ತು ಅಂದ್ರೆ ಅದಕ್ಕೆ ಯಾರು ಹೊಣೆ  ಅಲ್ವಾ.

LEAVE A REPLY

Please enter your comment!
Please enter your name here