Home Crime ಇಬ್ಬರು ಹೆಂಡತಿಯರು “ಗಂಡ ನನಗೇ ಬೇಕು” ಅಂತಾ ರಣಚಂಡಿ ಅವತಾರ..?! 2ನೇ ಹೆಂಡತಿಗೆ ಮೊದಲ ಹೆಂಡತಿ...

ಇಬ್ಬರು ಹೆಂಡತಿಯರು “ಗಂಡ ನನಗೇ ಬೇಕು” ಅಂತಾ ರಣಚಂಡಿ ಅವತಾರ..?! 2ನೇ ಹೆಂಡತಿಗೆ ಮೊದಲ ಹೆಂಡತಿ ಹಿಗ್ಗಾಮುಗ್ಗಾ ಥಳಿತ..?! ಮನೆಯಲ್ಲೊಬ್ಬಳಿರಲಿ, ಹೊರಗೊಬ್ಬಳಿರಲಿ ಎಂದ ಈ ಭೂಪ..!

835
0
SHARE

ಒಂಭತ್ತು ವರ್ಷಗಳ ಹಿಂದೆಯೇ ಆತ ಪ್ರೀತಿಸಿ ಮದುವೆಯಾಗಿದ್ದ. ಏನಾಯ್ತೋ ಏನೋ ಎರಡು ಮಕ್ಕಳಾದ ಬಳಿಕ ಕೆಲಸಕ್ಕೆ ಬೆಂಗಳೂರಿಗೆ ಹೋಗ್ತೀನಿ ಅಂತ ಹೇಳಿ ಹೋಗಿದ್ದ. ಹೀಗೆ ಹೇಳಿ ಹೋದವನು ಹೆಂಡತಿಯನ್ನ ಕೇರ್ರೆ ಮಾಡ್ತಾ ಇರಲಿಲ್ಲ. ಹೀಗಾಗಿ, ಹೆಂಡತಿ ತೀವ್ರ ಆತಂಕಕ್ಕೊಳಗಾಗಿದ್ದಳು.

ಈಗ ಆತನ ನಿಜ ಬಣ್ಣ ಬಯಲಾಗಿದ್ದು, ತನ್ನ ಗಂಡನಿಗೆ ಮತ್ತು ಆತನ ಜೊತೆಗಿದ್ದ ಮಹಿಳೆಯೊಬ್ಬಳಿಗೆ ತಕ್ಕ ಪಾಠ ಕಳಿಸಿದ್ದಾಳೆ.ಯಾರಪ್ಪ ಇದು ಯಾಕೆ ಹಿಂಗೆ ಲೇಡಿ ರ್ಯಾಂಬೋಗಳ ತರಾ ಹೊಡೆದಾಡಿಕೊಳ್ಳುತ್ತಿದ್ದಾರೆ. ಏನ್ ವಿಷ್ಯಾ ಇರಬೇಕು ಎಂದು ಎಲ್ರೂ ಬಾಯ್ ಮೇಲೆ ಬೊಟ್ಟು ಇಟ್ಕೊಂಡು ಒಳ್ಳೆ ಇಂಟರೆಸ್ಟಿಂಗ್ ಆಗಿದೆ ಅಂತ ಜಗಳ ಬಿಡಿಸದೇ ನೋಡ್ತಾ ಸಕತ್ ಎಂಜಾಯ್ ಮಾಡ್ತಿದ್ದಾರೆ.,

ಇವರ ಹೊಡೆದಾಟ ನೋಡಿದರೆ ಎಂಥಹ ಗಂಡಸರೂ ಹೌ ಹಾರ ಬೇಕು. ಹಾಗೆ ಹೊಡೆದಾಡಿಕೊಳ್ಳುತ್ತಿರುವ ಮಹಿಳೆಯರು. ಇವರ ಆಕ್ರೋಶಕ್ಕೆ ಕೋಲು, ರಾಡು ಯಾವುದು ಸಾಕಾಗುತ್ತಿಲ್ಲ ಅಷ್ಟಕ್ಕೂ ಈ ಇಬ್ರು ಹೆಣ್ಮಕ್ಕಳು ಹೊಡೊದಾಡ್ತಿರೋದು ಯಾಕೆ ಅಂದ್ರೆ ಇಬ್ಬರ ಮುದ್ದಿನ ಗಂಡನಿಗಾಗಿ.ಇಲ್ನೋಡಿ ಇವನ ಹೆಸರು ವಸಂತಕುಮಾರ್ ಅಂತಾ, ಇಬ್ಬರು ಹೆಂಡಿರ ಮುದ್ದಿನ ಗಂಡ, ಇವನಿಗೆ ಇಬ್ಬರು ಹೆಂಡ್ತೀರು ಬೇಕು ಆದ್ರೆ ಇವರಿಗೆ ಅವಳಂದ್ರೆ ಇವಳಿಗಾಗಲ್ಲ,

ಇವಳಿಗೆ ಅವಳಂದ್ರೆ ಆಗಲ್ಲ, ಅದಕ್ಕಾಗಿ ನನ್ ಗಂಡ ನಂಗೇ ಬೇಕು ಎಂದು ಹಿಂಗ್ ಜಡೆ ಜಡೆ ಹಿಡ್ಕೊಂಡು ಕುಸ್ತಿ ಆಡ್ತಿದ್ದಾರೆ, ಇದು ನಡೆದಿದ್ದು ದಿ ಮ್ಯಾಂಚೆಸ್ಟರ್ ಸಿಟಿ ದಾವಣಗೆರೆಯಲ್ಲಿ, ಈ ಇಬ್ಬರ ಹೆಸರು ಭಾಗ್ಯ ಮತ್ತು ರೇಖಾ, ಭಾಗ್ಯ ಮೊದಲ ಹೆಂಡತಿ, ರೇಖಾ ಎರಡನೇ ಹೆಂಡತಿ. ಹೌದೂ ಹರಿಹರದಲ್ಲಿ ಸರ್ವೇಯರ್ ಆಗಿ ಕೆಲಸಮಾಡುತ್ತಿದ್ದ ವಸಂತ್ ಕುಮಾರ್ ಕಳೆದ 9 ವರ್ಷದ ಹಿಂದೆ ಭಾಗ್ಯ (ರೆಡ್ ಚುಡಿದಾರ್) ಎಂಬುವವಳನ್ನು ಮದುವೆಯಾಗಿದ್ದ.

ಇದರ ಸಾಕ್ಷಿಗೆ ಇಬ್ಬರು ಮಕ್ಕಳೂ ಸಹಾ ಇದ್ದಾರೆ. ಆದ್ರೆ ಏನ್ ಮಾಡೋದು ಎಷ್ಟೇ ತಿಂದ್ರೂ ಮನೆ ರುಚಿ ಅಷ್ಟಕ್ಕಷ್ಟೇ ಅಂತಾ ಹೊರಗಡೆ ಇನ್ನೊಂದು ಅಫೇರ್ ಇಟ್ಕೊಂಡಿದ್ದ, ಹಾಗಾಗಿ ಸೆಕೆಂಡ್ ಅಫೇರ್‌ನ ಹರಿಹರದಲ್ಲಿ ಇಟ್ಟಿದ್ದ, ಇದು ಮೊದಲ ಹೆಂಡತಿಗೆ ಗೊತ್ತಾಗಿದ್ದರಿಂದ ಈ ರೀತಿ ಬಂದು ಮಾಂಜಾ ನೀಡುತ್ತಿದ್ದಾಳೆ.

ಇನ್ನು ಮೊದಲ ಹೆಂಡತಿ ಹಿಂಗ್ ಏಟು ಕೊಡೋದನ್ನು ತಿಳಿದ ವಸಂತ್ ಕುಮಾರ್ ನಂಗೂ ಹೀಗೆ ಬೀಳಬಹುದು ಎಂದು ಪೋನ್ ಸ್ವಿಚ್ ಆಫ್ ಮಾಡಿಕೊಂಡು ನಿನ್ನೆಯಿಂದ ನಾಪತ್ತೆಯಾಗಿದ್ದಾನೆ. ಸದ್ಯ ದಾವಣಗೆರೆಯಲ್ಲಿರುವ ಭಾಗ್ಯ ಇದೀಗ ವಸಂತ್ ಕುಮಾರ್ ವಿರುದ್ಧ ದಾವಣಗೆರೆ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದು, ತನಗೆ ನ್ಯಾಯ ಕೊಡಿಸಬೇಕು ಎಂದು ಪೊಲೀಸರಲ್ಲಿ ಮನವಿ ಮಾಡಿಕೊಂಢಿದ್ದಾಳೆ.

ಇನ್ನು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಸಂತ್ ಕುಮಾರ್ ಜೊತೆಗಿರುವ ರೇಖಾಗೂ ಮೊದಲೇ ಮದುವೆಯಾಗಿದ್ದು, ಗಂಡ ಮೃತಪಟ್ಟಿದ್ದಾನೆ. ಆಕೆಗೂ ಎರಡು ಮಕ್ಕಳಿವೆ ಎನ್ನಲಾಗುತ್ತಿದೆ. ಇನ್ನು, ಭಾಗ್ಯಳಿಂದ ಏಟು ತಿಂದಿರುವ ರೇಖಾ ಹರಿಹರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಒಟ್ಟಿನಲ್ಲಿ, ಮೊದಲ ಪತ್ನಿಯನ್ನ ಬಿಟ್ಟು ಬೇರೊಬ್ಬಳೊಂದಿಗೆ ಸಂಸಾರ ನಡೆಸಿದ್ದ ವಸಂತ್ ನ ಗುಟ್ಟು ಇದೀಗ ರಟ್ಟಾಗಿದೆ. ಪತ್ನಿ ಎಂದು ಹೇಳಿಕೊಂಡು ತನ್ನ ಗಂಡನೊಂದಿಗೆ ಸಂಸಾರ ನಡೆಸುತ್ತಿದ್ದ ಮಹಿಳೆಗೆ ಭಾಗ್ಯ ತಕ್ಕ ಪಾಠ ಕಲಿಸಿದ್ದಾಳೆ.

LEAVE A REPLY

Please enter your comment!
Please enter your name here