Home Crime “ಇವತ್ತು ಅಮಾವಾಸ್ಯೆ” ಎಂದು ರೋಗಿಗೆ ಚಿಕಿತ್ಸೆ ನೀಡಲ್ಲ ಎಂದ ಸರ್ಕಾರಿ ವೈದ್ಯೆ..?! ರಜೆ ದಿನಾನು ಫ್ರೀಯಾಗಿರೋಕೆ...

“ಇವತ್ತು ಅಮಾವಾಸ್ಯೆ” ಎಂದು ರೋಗಿಗೆ ಚಿಕಿತ್ಸೆ ನೀಡಲ್ಲ ಎಂದ ಸರ್ಕಾರಿ ವೈದ್ಯೆ..?! ರಜೆ ದಿನಾನು ಫ್ರೀಯಾಗಿರೋಕೆ ಬಿಡಲ್ಲ ಎಂದು ತಾತ್ಸಾರ…

251
0
SHARE

ಕಣ್ಣಿಗೆ ಕಾಣುವ ದೇವರು ಅಂದರೆ ವೈದ್ಯರು ಅಂತಾರೆ. ಆದರೆ ಜಿಲ್ಲೆಯ ಕುಶಾಲನಗರದಲ್ಲಿರುವ ವೈದ್ಯರೊಬ್ಬರು ಅಮಾವಾಸ್ಯೆ ಎಂದು ರೋಗಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ ಆರೋಪ ಕೇಳಿಬಂದಿದೆ. ಅನಾರೋಗ್ಯದಿಂದ ಬಳಲುತ್ತಿರುವ ಈ ವೃದ್ಧೆಯ ಹೆಸರು ತಾಳಮ್ಮ, ಮೂಲತಃ ಕೊಡಗಿನ ಬೈಚನಳ್ಳಿ ಗ್ರಾಮದವರು.

ಇವರಿಗೆ ಗ್ಯಾಂಗ್ರಿನ್ ಕಾಯಿಲೆ ಇರುವುದರಿಂದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋಗಿದ್ದಾರೆ, ಈ ವೇಳೆ ಸರ್ಕಾರಿ ಆಸ್ಪತ್ರೆ ವೈದ್ಯೆ ಇಂದು ಅಮಾವಾಸ್ಯೆ ಇದೆ ಚಿಕಿತ್ಸೆ ನೀಡಲು ಆಗುವುದಿಲ್ಲ ಎಂದು ತಾತ್ಸಾರ ಮಾಡಿದ್ದಾರೆ. ಆದ್ರೆ ಇಂಜೆಕ್ಷನ್ ನೀಡಲೇ ಬೇಕು ಎಂದು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರಿಂದ ವೈದ್ಯೆ ವೃದ್ಧೆಯನ್ನು ಮುಟ್ಟಲು ಅಸಹ್ಯವಾಗುತ್ತದೆ,.

ಬೇಕಾದ್ರೆ ನರ್ಸ್‌ಗಳಿಗೆ ಹೇಳಿ ಚುಚ್ಚು ಮದ್ದು ಹಾಕಿಸಿಕೊಳ್ಳಿ ಎಂದು ಹೇಳಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇನ್ನೂ ವೃದ್ಧೆಯ ಕಷ್ಟ ಅರಿತು ವೈದ್ಯಾಧಿಕಾರಿ ಹೇಳುವ ಮುನ್ನವೇ ಇಂಜೆಕ್ಷನ್ ನೀಡಿದ ದಾದಿಯರನ್ನು ವೈದ್ಯೆ ತರಾಟೆಗೆ ತೆಗೆದುಕೊಂಡರು ಎಂದು ಆರೋಪಿಸಲಾಗಿದೆ.

LEAVE A REPLY

Please enter your comment!
Please enter your name here