Home Elections 2018 ಇವತ್ತು ಸೋಮವಾರ ಬೆಳಗ್ಗೆ 10:15ಕ್ಕೆ ಟೈಂ ನೋಡೇ ಅಲ್ತಾಫ್ ಕೈಗೆ ಬಾವುಟ ಕೊಟ್ಟಿದ್ದೇನೆ. ಈಶ್ವರ...

ಇವತ್ತು ಸೋಮವಾರ ಬೆಳಗ್ಗೆ 10:15ಕ್ಕೆ ಟೈಂ ನೋಡೇ ಅಲ್ತಾಫ್ ಕೈಗೆ ಬಾವುಟ ಕೊಟ್ಟಿದ್ದೇನೆ. ಈಶ್ವರ ಅಲ್ಲಾ ತೇರೆನಾಮ್- ಹೆಚ್.ಡಿ.ದೇವೇಗೌಡ

144
0
SHARE

ತಾಯಿಯಂತೆ ಇರುವ ನನ್ನ ಜೆಡಿಎಸ್ ಪಕ್ಷವನ್ನ ಮುಗಿಸಬೇಕು ಅಂತಾ ಸಂಚು ಮಾಡಿದ್ದಾರೆ. ಅವರಿಗೆ ಈಗ ನಮ್ಮ ಪಕ್ಷ ಬಿಟ್ಟು ಹೋದ 7 ಮಂದಿ ಸಾಥ್ ಕೊಟ್ಟಿದ್ದಾರೆ ಎಂದು ಸಿಎಂ ವಿರುದ್ಧ ಹೆಚ್.ಡಿ.ದೇವೇಗೌಡರು ವಾಗ್ದಾಳಿ ನಡೆಸಿದ್ದಾರೆ. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನಗೆ ದೈವದಲ್ಲಿ ನಂಬಿಕೆ ಇದೆ. ಈಶ್ವರ, ಅಲ್ಲಾ… ಇಬ್ಬರೂ ಒಂದೇ ಎಂದು ನಂಬಿದವ ನಾನು, ನಾನು ನಂಬಿದ ದೈವ ಕೈ ಬಿಡಲ್ಲ… ಅವರಿಗೆ ಜ್ಞಾನೋಯವಾಗಬೇಕು. ಏಪ್ರಿಲ್ 30ರೊಳಗೆ ಬಹಳ ಘಟನೆ ನಡೆಯುತ್ತದೆ ಕಾದು ನೋಡಿ ಎಂದು ಹೆಚ್ಡಿಡಿ ಕಿಡಿಕಾರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಲ್ಲಿದ್ದಾಗ, ಅವರಿಗೆ ಮುಖ್ಯಮಂತ್ರಿ ಆಗಬೇಕೆಂಬ ಕನಸು ಕಾಣ್ತಿದ್ರು.

ಒಂದು ಹಂತದವರೆಗೆ ನಾನು ಪ್ರಯತ್ನಪಟ್ಟೆ… ಈ ಮುಖ್ಯಮಂತ್ರಿಯಾಗಿ ನನ್ನ ಪಕ್ಷವನ್ನೇ ಮುಗಿಸಬೇಕು ಅಂತಾ ಸಂಚು ಹೂಡಿದ್ದಾರೆ ಎಂದ್ರು. ಇನ್ನು, ಯಾರ್ಯಾರ ಶಕ್ತಿ ಏನು ಅಂತಾ ಗೊತ್ತಿದೆ. ಎರಡು ವರ್ಷದಿಂದ ಚಾಮರಾಜಪೇಟೆಯಲ್ಲಿ ಸೂಕ್ತ ಅಭ್ಯರ್ಥಿ ಹುಡುಕಾಟ ನಡೆಸಿದ್ವು,ಇವತ್ತು ಅದು ಕೈಗೂಡಿದೆ.ಅಲ್ತಾಫ್ ಗೆಲ್ಲುವುದರಲ್ಲಿ ಸಂಶಯವಿಲ್ಲ. ಆದ್ರೆ, ಚುನಾವಣೆ ಮುಗಿಯುವುದರೊಳಗೆ ಚಾಮರಾಜಪೇಟೆಯಲ್ಲಿ ಏನ್ ಬೇಕಾದ್ರೂ ಆಗಬಹುದು. ಸರ್ಕಾರದ ಹಿಡಿತದಲ್ಲಿ ಚುನಾವಣೆ ನಡೆಯಬಾರದು. ಕೆಂಪಯ್ಯ ಆಡಳಿತ ಕೊನೆಯಾಗಬೇಕು. ಅಲ್ತಾಪ್ ಅವರಿಗೆ ದ್ವೇಷವಿದೆ. ಅಲ್ತಾಫ್‌ಗೆ ನಾವು ರಕ್ಷಣೆ ಕೊಡ್ತೇವೆ. ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇವೆ ಎಂದ್ರು.

 

LEAVE A REPLY

Please enter your comment!
Please enter your name here